ಗ್ರಾಮ ಭಾರತಿ ಟ್ರಸ್ಟ್ ವತಿಯಿಂದ ವಿಶ್ವ ಆತ್ಮ ಹತ್ಯ ತಡೆ ದಿನ
ಗ್ರಾಮ ಭಾರತಿ ಟ್ರಸ್ಟ್ ವತಿಯಿಂದ ವಿಶ್ವ ಆತ್ಮ ಹತ್ಯ ತಡೆ ದಿನ ನಗರದ ಗುರುಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ತಾಲೂಕು ಆಡಳಿತ ಸಹಕಾರದೊಂದಿಗೆ ಗ್ರಾಮಭಾರತಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನ್ಯಾ. ಶ್ರೀ ನಟೇಶ್ ಜಿಲ್ಲಾ ಸದಸ್ಯ ಕಾರ್ಯದರ್ಶಿಗಳು ಕಾನೂನು ಸೇವೆಗಳ ಪ್ರಾಧಿಕಾರ ಕೋಲಾರ ಪ್ರತಿ ವರ್ಷ ಸುಮಾರು 9 ಲಕ್ಷ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿದ್ದು ಇದೊಂದು ಆತಂಕಕಾರಿ ವಿಷಯ ಇದನ್ನು ತಡೆಗಟ್ಟಲು ಪ್ರತಿಯೊಬ್ಬ ನಾಗರಿಕನು ಸಂವಿಧಾನ ಬದ್ಧ ಕರ್ತವ್ಯಗಳಲ್ಲೂ ಒಂದಾಗಿದ್ದು ಇದಕ್ಕೆ ಪ್ರತಿಯೊಬ್ಬನಾಗರಿಕನು ಕೈಜೋಡಿಸಬೇಕೆಂದು ತಿಳಿಸಿದರು. ತಮ್ಮ ಸುತ್ತು ಮುತ್ತಲ ಪ್ರದೇಶದಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಗಳು, ಮಾದಕ ವಸ್ತುಗಳು ಸಂಗ್ರಹಣೆ ಮತ್ತು ಮಾರಾಟ, ಪರಿಸರದ ಮೇಲೆ ಆಗುತ್ತಿರುವ ಅಕ್ರಮಗಳ ಬಗ್ಗೆ ಜಾಗೃತಿ ವಹಿಸಿ ಆರೋಗ್ಯವಂತ ಸಮಾಜ ನಿರ್ಮಾಣದ ರೂವಾರಿಗಳಾಗಬೇಕು ಆಗಲೇ ಸುಸಂಸ್ಕೃತ ಸಮಾಜ ತಲೆಯೆತ್ತಲು…
ಮುಂದೆ ಓದಿ..
