ಅಂಕಣ 

ಅಲೆಮಾರಿ ಬುಡಕಟ್ಟು ಜನಾಂಗ ಮತ್ತು ಒಳ ಮೀಸಲಾತಿ……..

ಅಲೆಮಾರಿ ಬುಡಕಟ್ಟು ಜನಾಂಗ ಮತ್ತು ಒಳ ಮೀಸಲಾತಿ…….. ಅಲೆಮಾರಿಗಳ ಅಲೆದಾಟಕ್ಕೆ ಪೂರ್ಣವಿರಾಮ ನೀಡಬೇಕಾದ ಸಮಯ ಬಂದಿದೆ. ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಊಟ, ಬಟ್ಟೆ ಮತ್ತು ವಸತಿ ಬಹಳ ಮುಖ್ಯವಾದದ್ದು. ಆಧುನಿಕ ನಾಗರಿಕ ಸಮಾಜ ಅಭಿವೃದ್ಧಿ ಹೊಂದಿದಂತೆ ಊಟ, ಬಟ್ಟೆಗಿಂತ ಮನೆ ಎಂಬ ವಾಸ ಸ್ಥಳವೇ ಬಹುಮುಖ್ಯವಾಯಿತು. ಪ್ರತಿಯೊಬ್ಬರೂ ಮುಖ್ಯವಾಗಿ ಮಧ್ಯಮ ವರ್ಗದವರು ಮತ್ತು ಬಡವರ ಜೀವನದ ಬಹುದೊಡ್ಡ ಆಸೆ ಸ್ವಂತ ಮನೆ ಹೊಂದುವುದು. ಆದರೆ ಇಲ್ಲಿ ನೆಲೆಯೇ ಇಲ್ಲದ ಅಲೆಮಾರಿ ಬುಡಕಟ್ಟು ಜನಾಂಗದ ಈಗ ಮುಖ್ಯ ವಾಹಿನಿಯ ಗಮನ ಸೆಳೆಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಒಳ ಮೀಸಲಾತಿಯ ವಿಷಯ ವಿವಾದವಾಗಿ, ಕೊನೆಗೆ ಪರಿಹಾರ ರೂಪದಲ್ಲಿ ಒಂದು ಸೂತ್ರ ಸಿದ್ಧವಾಗಿದೆ. ಆ ಸೂತ್ರದ ಪ್ರಕಾರ ಅಲೆಮಾರಿ ಜನಾಂಗವನ್ನು ಮೂರನೇ ವರ್ಗಕ್ಕೆ ಸೇರಿಸಿ ಅಲ್ಲಿಯ ಬಲಿಷ್ಠರೊಂದಿಗೆ ಸ್ಪರ್ಧಿಸಲು ಹೇಳಿರುವುದರಿಂದ ಅಲೆಮಾರಿ ಸಮುದಾಯದ ಹಿತಾಸಕ್ತಿಗೆ ಧಕ್ಕೆಯಾಗಿದೆ ಎಂಬ ಕೂಗು ಎಲ್ಲೆಡೆಯೂ ಕೇಳಿ ಬರುತ್ತಿದೆ…

ಮುಂದೆ ಓದಿ..
ಅಂಕಣ 

ಭತ್ತದ ರಾಶಿಯ ರೈತ,ಚಿನ್ನದ ಅಂಬಾರಿಯ ರಾಜ,ದಸರಾ ಉದ್ಘಾಟನೆಯ ರಾಜಕೀಯ……..

ಭತ್ತದ ರಾಶಿಯ ರೈತ,ಚಿನ್ನದ ಅಂಬಾರಿಯ ರಾಜ,ದಸರಾ ಉದ್ಘಾಟನೆಯ ರಾಜಕೀಯ…….. ದಸರಾ ಉದ್ಘಾಟನೆ ಮಾಡುವವರ ಬಗ್ಗೆ ವಾದ ವಿವಾದಗಳು ಸಾಕಷ್ಟು ಕಾವೇರಿ ಇರುವಾಗ,ಕಾವೇರಿಯ ತಟದ ಕಾಯಕ ಜೀವಿ, ಉಳುವ ಯೋಗಿ ಮಣ್ಣಿನ ಮಗನೊಬ್ಬನ ಸ್ವಗತ……. ನಾನು ರಾಜನಲ್ಲ,ನಾನೊಬ್ಬ ಸಾಮಾನ್ಯ ಕೃಷಿಕ, ನನಗೆ ಅರಮನೆ ಇಲ್ಲ,ನನಗಿರುವುದು ಹೆಂಚಿನ ಮನೆ, ನಾನು ಆನೆಯ ಮೇಲೆ ಕುಳಿತು ಓಡಾಡುವವನಲ್ಲ,ಎತ್ತಿನ ಗಾಡಿಯಲ್ಲಿ ಕಬ್ಬು ಸಾಗಿಸುವವನು ನಾನು, ಸಿಂಹಾಸನ ಮೇಲೆ ಕುಳಿತುಕೊಳ್ಳುವವ ನಾನಲ್ಲ,ಹುಲ್ಲು ಹಾಸಿನ ಮೇಲೆ ಮಲಗುವವ ನಾನು, ಛತ್ರ ಚಾಮರ ಬೀಸಣಿಕೆಯ ತಂಪು ಗಾಳಿ ನನಗಿಲ್ಲ,ಬಿಸಿಲಿನ ಝಳದಲ್ಲಿ, ಗಾಳಿಯ ರಭಸಕ್ಕೆ ಭತ್ತದ ರಾಶಿಯ ಹೊಟ್ಟು ತೂರುವವನು ನಾನು, ಭಕ್ಷ್ಯ ಭೋಜನ ತಿನ್ನುವವನಲ್ಲ,ರಾಗಿ, ರೊಟ್ಟಿ, ಜೋಳ, ಮೆಣಸಿನಕಾಯಿ, ಸೊಪ್ಪು, ಗೊಜ್ಜು ತಿನ್ನುವವನು ನಾನು, ಆಳು ಕಾಳು, ಸೇವಕ, ಸೈನಿಕರು ನನಗಿಲ್ಲ,ನನಗೆ ನಾನೇ ಕಾಲಾಳು, ಮೈತುಂಬ ವೈಭವೋಪೇತ ಬಟ್ಟೆ ತೊಡಲು ನಾನು ಅರಸನಲ್ಲ,ಪಂಚೆ, ಜುಬ್ಬ ಕೆಲವೊಮ್ಮೆ ಬರಿಮೈ…

ಮುಂದೆ ಓದಿ..
ಕ್ರೈಂ ಸುದ್ದಿ 

ತಿಳವಳ್ಳಿಯಲ್ಲಿ ಮಹಿಳೆಯ ಮೇಲೆ ಲೈಂಗಿಕ ಹಲ್ಲೆ ಅಕ್ರಮ ಸಂಬಂಧ ಹೊಂದುವಂತೆ ಒತ್ತಾಯ

ತಿಳವಳ್ಳಿಯಲ್ಲಿ ಮಹಿಳೆಯ ಮೇಲೆ ಲೈಂಗಿಕ ಹಲ್ಲೆ ಅಕ್ರಮ ಸಂಬಂಧ ಹೊಂದುವಂತೆ ಒತ್ತಾಯಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿ ಜೂಲೈ 31ನೆ ತಾರಿಕಿನಂದು ಮುಂಜಾನೆ 11 ಗಂಟೆಯ ಸುಮಾರಿಗೆ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆದೂರುದಾರ ಮಹಿಳೆ ಮಂಗಳಾ ಮಾದರ ಇವರು ಅವಿವಾಹಿತರಾಗಿದ್ದು ಇವರು ಸುಮಾರು 1 ವರ್ಷ 6ತಿಂಗಳುಗಳಿಂದ ತಿಳವಲ್ಲಿ ಗ್ರಾಮದ ಕೃಷ್ಣಮೂರ್ತಿ ಲಕ್ಷ್ಮಪ್ಪ ಉಡುಗಣಿ ಇವರ ವಿಜಯ ಟೆಕ್ಸಸ್ಟೈಲ್ ಹೆಸರಿನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿರುತ್ತಾರೆ ಹೀಗಿದ್ದಾಗ ಈ ಬಟ್ಟೆ ಅಂಗಡಿಯ ಮಾಲೀಕರ ಸ್ವಂತ ಅಣ್ಣನಾದ ಮಹಾಬಲೇಶ್ವರ ಲಕ್ಷ್ಮಪ್ಪ ಉಡುಗಣಿ ಎಂಬಾತನು ಹಿಂದಿನಿಂದಲೂ ಅವರ ಅಣ್ಣನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಂಗಳಾ ಮಾದರ ಅನ್ನುವ ಮಹಿಳೆಗೆ ಪದೇ ಪದೇ ನೀನು ನನ್ನ ಜೊತೆ ಅಕ್ರಮ ಸಂಬಂಧ ಇಟ್ಟುಕೋ ಎಂದು ಪೀಡಿಸುತ್ತ ಬಂದಿರುತ್ತಾನೆ ಅವಳು ಅದಕ್ಕೆ ಒಪ್ಪದೇ ಇದ್ದಾಗ ನಿನ್ನನ್ನಾ ರೇಪ್ ಮಾಡಿ…

ಮುಂದೆ ಓದಿ..
ಸುದ್ದಿ 

ಸವಣೂರಿನಲ್ಲಿ ಹೆಚ್ಚಿದ ಜೂಜಾಟ ಅಂದರ್ ಬಾಹರ್

ಸವಣೂರಿನಲ್ಲಿ ಹೆಚ್ಚಿದ ಜೂಜಾಟ ಅಂದರ್ ಬಾಹರ್ ಸವಣೂರಿನಲ್ಲಿ ಹೆಚ್ಚಿದ ಜೂಜಾಟ ಅಂದರ್ ಬಾಹರ್ ದಿನಾಂಕ: 24-08-2025 ರಂದು 13-00 ಗಂಟೆ ಸುಮಾರಿಗೆ ಸವಣೂರ ಶಹರದ ಕಲಿವಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸುಮಾರು 6-7 ಜನರು ಗುಂಪಾಗಿ ಕುಳಿತುಕೊಂಡು ಇಸ್ಪೆಟ್ ಎಲೆಗಳ ಆಟ ಆಡಿಸಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಮತ್ತು ನೀವು ಬಂದು ರೇಡ ಮಾಡಿದರೆ ಸಿಗುತ್ತಾರೆ ಅಂತಾ ಆ ಊರಿನ ಒಬ್ಬ ಗ್ರಾಮಸ್ಥ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ತಕ್ಷಣ ರೇಡ್ ಮಾಡಿದಾಗ ತಪ್ಪಿಸಿಕೊಂಡಿದ್ದಾರೆ ಸದರಿ ವ್ಯಕ್ತಿಗಳ ಮೇಲೆ ಕಲಂ: 87 ಕೆ. ಪಿ. ಯಾಕ್ಟ್ ಅಡಿಯಲ್ಲಿ ಸವಣೂರು ಪೊಲೀಸ ಠಾಣೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ: ವರದಿಪ್ರಮೋದ್ ಜನಗೇರಿಹಾನಗಲ್ ತಾಲೂಕ್ ಆಲದಕಟ್ಟಿತಾಲೂಕ್ ನ್ಯೂಸ್ .ಹಾವೇರಿ6360821691https://taluknewsmedia.com/PRAMODJANAGERI.html

ಮುಂದೆ ಓದಿ..
ಅಂಕಣ 

ಪಂಥಗಳಾಚೆಯ ಬದುಕು,ಇಸಂ ಮುಕ್ತ ಜೀವನ..

ಪಂಥಗಳಾಚೆಯ ಬದುಕು, ಇಸಂ ಮುಕ್ತ ಜೀವನ, ದೀರ್ಘವಾದರೂ ಗಂಭೀರ ವಿಷಯ, ದಯವಿಟ್ಟು ಗೌರಿ ಹಬ್ಬದ ವಿರಾಮದಲ್ಲಿ ಸ್ವಲ್ಪ ಸಮಯ ನೀಡಿ… ಸಮಾಜ ಮಾನಸಿಕ ವಿಭಜನೆ ಆಗುವ ಮುನ್ನ ಎಚ್ಚರವಿರಲಿ, ನಾವೆಲ್ಲರೂ ಒಂದೇ ಬಳ್ಳಿಯ ಹೂಗಳು, ಒಂದೇ ದೋಣಿಯ ಪಯಣಿಗರು, ನಮ್ಮ ಅಜ್ಞಾನದಿಂದ ದೋಣಿ ಮುಳುಗದಿರಲಿ……. ಎಡಪಂಥೀಯರು, ಎಡಚರರು, ಅರ್ಬನ್ ನಕ್ಸಲರು ಇತ್ಯಾದಿ ಮಾತುಗಳು ಇತ್ತೀಚಿನ ವರ್ಷಗಳಲ್ಲಿ ಪದೇ ಪದೇ ಕೇಳಿ ಬರುತ್ತಿವೆ. ಇವರು ಧರ್ಮ ವಿರೋಧಿಗಳು, ದೇಶದ್ರೋಹಿಗಳು, ಹಿಂಸಾವಾದಿಗಳು ಎಂಬ ಅರ್ಥದಲ್ಲಿ ಇದರ ವಿರುದ್ಧ ಚಿಂತನೆಯವರು ಮಾತನಾಡುತ್ತಿದ್ದಾರೆ. ಹಾಗೆಯೇ, ಬಲಪಂಥೀಯರು, ರೈಟ್ ವಿಂಗ್ ನವರು, ರಾಷ್ಟ್ರೀಯ ವಾದಿಗಳು, ಧರ್ಮ ರಕ್ಷಕರು ಮುಂತಾದ ಹೆಸರುಗಳಿಂದ ಕೆಲವರನ್ನು ಕರೆಯಲಾಗುತ್ತದೆ. ಇವರು ಕೋಮುವಾದಿಗಳು, ಗಲಭೆಕೋರರು, ವಿಭಜಕ ಮನಸ್ಥಿತಿಯವರು, ಮಾನವ ವಿರೋಧಿಗಳು, ಅಸಮಾನತೆಯ ಜನಕರು ಎಂದು ಅವರ ವಿರೋಧಿಗಳು ಹೇಳುತ್ತಾರೆ. ಇದು ಖಂಡಿತ ತಪ್ಪು ಮತ್ತು ವಿಭಜನಾತ್ಮಕ ಮನಸ್ಥಿತಿ. ಈ ರೀತಿ ಯಾವುದೋ…

ಮುಂದೆ ಓದಿ..
ಸುದ್ದಿ 

ಬೆಂಗಳೂರಿನಲ್ಲಿ ಆಸ್ತಿ ಹಗರಣ – ಸ್ನೇಹಿತನ ವಿಶ್ವಾಸಕ್ಕೆ ಮೋಸ

ಬೆಂಗಳೂರು:ನಗರದ ಜಾಲಹಳ್ಳಿ ಪ್ರದೇಶದಲ್ಲಿ ಮನೆ ಹೊಂದಿದ್ದ ಮಹಿಳೆ, ಆರ್ಥಿಕ ತೊಂದರೆಯಿಂದ ಸಾಲ ಪಡೆದು ತೀರಿಸಲಾಗದೆ ಸಂಕಷ್ಟಕ್ಕೀಡಾದ ವೇಳೆ, ಸಹಾಯ ಮಾಡುವ ನೆಪದಲ್ಲಿ ಸ್ನೇಹಿತ ಹಾಗೂ ಇತರರು ಸೇರಿ ಲಕ್ಷಾಂತರ ರೂಪಾಯಿಗಳ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅರುಣ್ ರವರ ಪ್ರಕಾರ, ಅವರು 2018ರಲ್ಲಿ ಶೇಷಾದ್ರಿಪುರಂನ ಎನ್.ಕೆ.ಜಿ.ಎಸ್.ಬಿ ಕೋ-ಆಪರೇಟಿವ್ ಸೊಸೈಟಿ ಬ್ಯಾಂಕ್ನಿಂದ ರೂ.40 ಲಕ್ಷ ಸಾಲ ಪಡೆದಿದ್ದರು. ಆದರೆ ಬಡ್ಡಿ ಸೇರಿ ರೂ.68 ಲಕ್ಷ ತೀರಿಸಲಾಗದೆ ಮನೆಯು ಹರಾಜಿಗೆ ಬಂದಿತ್ತು. ಈ ಸಂದರ್ಭದಲ್ಲಿ ಸ್ನೇಹಿತರ ಮೂಲಕ ಪರಿಚಯವಾದ ಆನಂದ್ ಹೆಚ್.ಆರ್ ಸಹಾಯ ಮಾಡುವುದಾಗಿ ಹೇಳಿ, “ಸ್ವತ್ತು ನನ್ನ ಹೆಸರಿಗೆ ಮಾಡಿಕೊಡಿ” ಎಂದು ನಂಬಿಸಿ, ಅರುಣ್ ರವರಿಂದ ಒಟ್ಟಾರೆ ರೂ.68 ಲಕ್ಷ ಪಡೆದುಕೊಂಡಿದ್ದಾನೆ. ಆದರೆ, ಆ ಹಣವನ್ನು ಆರೋಪಿಗಳು (ಎ1 ರಿಂದ ಎ6) ತಮ್ಮಲ್ಲಿ ಹಂಚಿಕೊಂಡು, ಅರುಣ್ ರವರಿಗೆ ತಿಳಿವಳಿಕೆ ಇಲ್ಲದೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, 2019ರ ಜುಲೈ…

ಮುಂದೆ ಓದಿ..
ಅಂಕಣ 

ಘರ್ಷಣೆ ಮತ್ತು ಸೌಹಾರ್ದತೆ,ಆಯ್ಕೆ ನಿಮ್ಮದು, ನಮ್ಮದು……

ಘರ್ಷಣೆ ಮತ್ತು ಸೌಹಾರ್ದತೆ,ಆಯ್ಕೆ ನಿಮ್ಮದು, ನಮ್ಮದು…… ಗೌರಿ ಗಣೇಶ ಹಬ್ಬ ಸಂಭ್ರಮದ ‌ಸಾಂಸ್ಕೃತಿಕ ಉತ್ಸವವಾಗಲಿ – ಅದು ಕೋಮು ದ್ವೇಷದ ಗಲಭೆಕೋರ ಮನಸ್ಥಿತಿ ಆಗದಿರಲಿ…… ಇದು ಹಿಂದು – ಮುಸ್ಲಿಮ್ ಎಂದಾಗದೆ ಭಾರತೀಯ ಹಬ್ಬವಾಗಲಿ ಎಂದು ಮನವಿ ಮಾಡಿಕೊಳ್ಳುತ್ತಾ…… ಸಾಮಾನ್ಯವಾಗಿ ಗಣೇಶ ಹಬ್ಬವು ವೈಯಕ್ತಿಕತೆಯ ಜೊತೆಗೆ ಅನೇಕ ಸಂಘ ಸಂಸ್ಥೆಗಳು ಗುಂಪು ಗುಂಪಾಗಿ ಸಾರ್ವಜನಿಕ ಸ್ಥಳಗಳಲ್ಲಿ ಒಂದು ಉತ್ಸವವಾಗಿ ಆಚರಿಸಲ್ಪಡುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ರಾಜಕೀಯ ಕಾರಣದಿಂದಾಗಿ ಒಂದು ಪ್ರಕ್ಷುಬ್ಧ ವಾತಾವರಣ ನಿರ್ಮಾಣ ಮಾಡಿದೆ. ಎರಡು ಬಹುಮುಖ್ಯ ಕಾರಣಗಳಿಗಾಗಿ ಈ ಸಂದರ್ಭದಲ್ಲಿ ಘರ್ಷಣೆ ಉಂಟಾಗುವ ಸಾಧ್ಯತೆ ಇದೆ. ಗಣೇಶನನ್ನು ಪ್ರತಿಷ್ಠಾಪಿಸುವ ಜಾಗ ಮತ್ತು ಮೆರವಣಿಗೆಯ ಹಾದಿ ಇಲ್ಲಿ ಪರಿಸ್ಥಿತಿಯನ್ನು ಉದ್ವಿಗ್ನ ಗೊಳಿಸುತ್ತದೆ. ಮುಖ್ಯವಾಗಿ ಹಿಂದೂ ಮುಸ್ಲಿಮರ ನಡುವೆ…. ವಿಶ್ವದ ಬೃಹತ್ ಭೌಗೋಳಿಕ ಪ್ರದೇಶ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ಬಹುಶಃ ಏಳನೆಯ ಸ್ಥಾನ ಇರಬೇಕು. ಒಂದು…

ಮುಂದೆ ಓದಿ..
ವಿಶೇಷ ಸುದ್ದಿ 

ಗ್ರಾಮೀಣಾಭಿವೃದ್ದಿ ಯೋಜನೆಯ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಅಪರಾಧ ನಡೆದಿರುವುದು, ಮೈಕ್ರೊ ಫೈನಾನ್ಸ್ ನಡೆಸಿರುವ ಆರೋಪಗಳು ವ್ಯಾಪಕವಾಗಿದೆ.

ಧರ್ಮಸ್ಥಳ ಅಪರಾಧ ಪ್ರಕರಣಗಳ ಕುರಿತಾದ ಹೋರಾಟಗಳ ವಿಷಯದಲ್ಲಿ ತಪ್ಪು ಮಾಹಿತಿ ಹರಡುತ್ತಿರುವ ಸಂದರ್ಭದಲ್ಲಿ .. ಮುಸುಕುದಾರಿ ಚಿನ್ನಯ್ಯ ಕೊಟ್ಟ ದೂರಿನ ಬಳಿಕ ಧರ್ಮಸ್ಥಳ ದೌರ್ಜನ್ಯದ ವಿರುದ್ಧದ ಹೋರಾಟ ಪ್ರಾರಂಭವಾಗಿದ್ದಲ್ಲ. ಧರ್ಮಸ್ಥಳದ ಅಸಹಜ ಸಾವುಗಳು, ಕೊಲೆ, ಅತ್ಯಾಚಾರ, ಭೂ ಅಕ್ರಮ, ಮೈಕ್ರೋ ಫೈನಾನ್ಸ್ ದೌರ್ಜನ್ಯಗಳನ್ನು ತನಿಖೆ ನಡೆಸಲು ನೆಲ ಅಗೆಯಬೇಕಿಲ್ಲ. ಚಿನ್ನಯ್ಯ ಅನಾಮಿಕರಾಗಿ ಬಂದು ದೂರು ನೀಡಿದ ಬಳಿಕ ಅಸಹಜ ಸಾವುಗಳಾದ ಶವಗಳನ್ನು ಹೂತ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಯಿತೇ ವಿನಹ, ಅದು ಹೋರಾಟದ ಪ್ರಾರಂಭವಲ್ಲ. ಚಿನ್ನಯ್ಯರ ದೂರೇ ಹೋರಾಟದ ಮುಖ್ಯವಸ್ತುವಲ್ಲ. ಎಡಪಂಥೀಯ, ದಲಿತ, ಸಮಾನತಾವಾದಿ, ಮಹಿಳಾ ಹೋರಾಟಗಾರರು, ಚಿಂತಕರು ಯಾವತ್ತೂ ಕೂಡಾ ಹೋರಾಟಕ್ಕೆ ಅಪರಿಚಿತವಾಗಿದ್ದ ಚಿನ್ನಯ್ಯ, ಸುಜಾತ ಭಟ್ ರವರ ಹಿಂದೆ ಹೋಗಿದ್ದಿಲ್ಲ. ‘ಅವರ ದೂರಿಗೂ ನ್ಯಾಯ ಒದಗಿಸಿ’ ಎಂಬುದಷ್ಟೇ ನಮ್ಮೆಲ್ಲರ ಹೇಳಿಕೆಯಾಗಿತ್ತು. ಹಾಗಾಗಿ, ಚಿನ್ನಯ್ಯ, ಸುಜಾತ ಭಟ್ ರವರುಗಳು ಯೂಟರ್ನ್ ಹೊಡೆದ್ರು ಎಂಬುದೆಲ್ಲಾ ಸಾವು, ದೌರ್ಜನ್ಯ,…

ಮುಂದೆ ಓದಿ..
ಅಂಕಣ 

ಅಂತರಂಗದ ಗೆಳೆಯ ಗಣೇಶನಿಗೆ ಆತ್ಮೀಯ ಪತ್ರ………

ಅಂತರಂಗದ ಗೆಳೆಯ ಗಣೇಶನಿಗೆ ಆತ್ಮೀಯ ಪತ್ರ……… ಗೆಳೆಯ ಗಣೇಶ ನಿನಗೆ ಹಬ್ಬದ ಶುಭಾಶಯಗಳು……….‌‌ ಹೃದಯದ ಸ್ನೇಹಿತ ಗಣೇಶ, ಹೇಗಿದ್ದೀಯಾ ?ನಿನ್ನ ಹೊಟ್ಟೆ ನೋಡಿದರೆ ತುಂಬಾ ಆರಾಮವಾಗಿ ಇರಲೇಬೇಕು ಅನಿಸುತ್ತಿದೆ. ನಿನಗೇನು ಕಡಿಮೆ ಗೆಳೆಯ,100 ಕೋಟಿಗೂ ಹೆಚ್ಚು ಜನ ಪ್ರತಿನಿತ್ಯ ಭಕ್ಷ್ಯಬೋಜನಗಳನ್ನು ಉಣಬಡಿಸುತ್ತಾರೆ. ವರ್ಷಕ್ಕೊಮ್ಮೆ ನಿನ್ನನ್ನು ಹಾಡಿ ಹೊಗಳಿ ಬೀದಿಬೀದಿಗಳಲ್ಲಿ ಕುಣಿದು ಕುಪ್ಪಳಿಸುತ್ತಾರೆ.ನೀನು ಅದರಲ್ಲಿ ಮೈಮರೆತು ನಮ್ಮನ್ನು ಮರೆತಿರಬಹುದು. ಅದನ್ನು ನೆನಪಿಸುವ ಸಲುವಾಗಿಯೇ ಮತ್ತು ಇಲ್ಲಿನ ನಿಜ ಸ್ಥಿತಿ ನಿನಗೆ ತಿಳಿಸಲು ಈ ಪತ್ರ ಬರೆಯುತ್ತಿದ್ದೇನೆ. ಗೆಳೆಯ,ನಮ್ಮ ಜನ ನಿನ್ನನ್ನು ತುಂಬಾ ಪ್ರೀತಿಸುತ್ತಾರೆ. ನಿನ್ನನ್ನು ಕಂಡರೆ ಅವರಿಗೆ ಅಪಾರ ಅಭಿಮಾನ – ಬಹಳ ಭಕ್ತಿ. ನಮ್ಮ ಗಣೇಶ ನಮ್ಮೆಲ್ಲಾ ಕಷ್ಟ ಪರಿಹರಿಸುವ ವಿಘ್ನ ವಿನಾಯಕ ಎಂದು ನಂಬಿದ್ದಾರೆ.ಅನೇಕ ಹೆಸರುಗಳಿಂದ ನಿನ್ನನ್ನು ಕರೆಯುತ್ತಾರೆ. ಎಲ್ಲಾ ಶುಭ ಕಾರ್ಯಗಳಲ್ಲಿ ನಿನಗೇ ಅಗ್ರ ಪೂಜೆ. ಒಂಥರಾ ಎಲ್ಲರಿಗೂ ನೀನೇ ಬಾಸ್. ಆದರೆ ಗೆಳೆಯ,ನನ್ನ…

ಮುಂದೆ ಓದಿ..
ಸುದ್ದಿ 

ಎಂ.ಎಸ್ ಪಾಳ್ಯ ಮುಖ್ಯರಸ್ತೆಯಲ್ಲಿ ಗೂಡ್ಸ್ ವಾಹನ ಚಾಲಕನ ಮೇಲೆ ಹಲ್ಲೆ

ಬೆಂಗಳೂರು 23 ಆಗಸ್ಟ್ 2025ಯಲಹಂಕ ಎಂ.ಎಸ್ ಪಾಳ್ಯ ಮುಖ್ಯರಸ್ತೆಯ ಆಯೇಶಾ ಹೋಟೆಲ್ ಹತ್ತಿರ ಅಮೆಜಾನ್ ಗೂಡ್ಸ್ ವಾಹನದ ಚಾಲಕನ ಮೇಲೆ ಬೈಕ್ ಸವಾರ ಮತ್ತು ಅವನ ಸ್ನೇಹಿತರಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಪೊಲೀಸರ ಮಾಹಿತಿಯ ಪ್ರಕಾರ, ಸಂಜಯ್ ತನ್ನ ಕುಟುಂಬದೊಂದಿಗೆ ವಾಸವಾಗಿದ್ದು ಟಾಟಾ ವಿನೋ ವಾಹನ (ನಂ. KA 04 S 1990) ಚಾಲನೆ ಮಾಡುತ್ತಾನೆ. ಬೆಳಿಗ್ಗೆ ಸುಮಾರು 8.45ಕ್ಕೆ ಯಲಹಂಕದ ಕಡೆಗೆ ತೆರಳುತ್ತಿದ್ದಾಗ, ಸುಮಾರು 9.10ರ ಸುಮಾರಿಗೆ ಆಯೇಶಾ ಹೋಟೆಲ್ ಹತ್ತಿರ ಕೆಎ 01 ಎಸ್ 7128 ನಂಬರಿನ ಬೈಕ್ ಸವಾರ ಏಕಾಏಕಿ ರಸ್ತೆ ಮಧ್ಯಕ್ಕೆ ಬಂದಿದ್ದಾನೆ. ಸಂಜಯ್ ಅವರು ತಕ್ಷಣ ಬ್ರೇಕ್ ಹಾಕಿ ಹಾರ್ನ್ ಹಾಕಿದ ಹಿನ್ನೆಲೆಯಲ್ಲಿ ಬೈಕ್ ಸವಾರ ಕೋಪಗೊಂಡು ಅವಾಚ್ಯ ಪದಗಳಿಂದ ನಿಂದಿಸಿ, ಶರ್ಟ್ ಕಾಲರ್ ಹಿಡಿದು ಮೂಗಿಗೆ ಹೊಡೆದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿ, ಸ್ಥಳಕ್ಕೆ…

ಮುಂದೆ ಓದಿ..