ಸುದ್ದಿ 

ಬಿಜೆನಗರ ರೈಲ್ವೇ ಸ್ಟೇಷನ್ ಹತ್ತಿರ ಗಾಂಜಾ ಸೇದುತ್ತಿದ್ದ ಯುವಕನ ಬಂಧನ..

ಬಿಜೆನಗರ ರೈಲ್ವೇ ಸ್ಟೇಷನ್ ಹತ್ತಿರ ಗಾಂಜಾ ಸೇದುತ್ತಿದ್ದ ಯುವಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಪೊಲೀಸ್ ಇಲಾಖೆಯ ಮಾಹಿತಿಯ ಪ್ರಕಾರ, ಸಂಜೆ ಸುಮಾರು 5 ಗಂಟೆಯ ಸಮಯದಲ್ಲಿ ಇಲಾಖೆ ಸ್ಕೂಟರ್ (ನಂ: ಕೆಎ02ಜಿ3606) ನಲ್ಲಿ ಪೆಟ್ರೋಲ್ ಮಾಡುತ್ತಿದ್ದ ಅಧಿಕಾರಿಗೆ ರೈಲ್ವೇ ಸ್ಟೇಷನ್ ಹತ್ತಿರ ಮರದ ಕೆಳಗೆ ಒಬ್ಬ ಯುವಕ ಅಮಲಿನಲ್ಲಿರುವಂತೆ ಕಾಣಿಸಿಕೊಂಡಿದ್ದನು. ಅವನನ್ನು ನೋಡಿ ಹತ್ತಿರ ಹೋಗುತ್ತಿದ್ದಂತೆಯೇ ಆತ ಓಡಿಹೋಗಲು ಯತ್ನಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅವನನ್ನು ಬೆನ್ನಟ್ಟಿ ಹಿಡಿದು ವಶಕ್ಕೆ ಪಡೆದರು. ಆತನನ್ನು ವಿಚಾರಿಸಿದಾಗ ಅವನು ಪೇಪರ್ ಅನ್ನು ಕೊಳವೆ (ಸಿಗರೆಟ್) ರೀತಿಯಲ್ಲಿ ಮಾಡಿಕೊಂಡು ಅದರೊಳಗೆ ಗಾಂಜಾ ತುಂಬಿ ಸೇದುತ್ತಿದ್ದೆನೆಂದು ಒಪ್ಪಿಕೊಂಡಿದ್ದಾನೆ. ತನಿಖೆಯಲ್ಲಿ ಆತನ ಹೆಸರು ನವೀನ್ ಎನ್. ಬಿನ್ ನರಸಿಂಹಮೂರ್ತಿ (24 ವರ್ಷ) ಎಂದು ತಿಳಿದುಬಂದಿದ್ದು, ಆತ ಬೆಳ್ಳೂರು ಟೌನ್, ಕೊಟ್ಟಣಗೇರಿ ಬೀದಿ, ನಾಗಮಂಗಲ ತಾಲೂಕು ನಿವಾಸಿ ಎನ್ನಲಾಗಿದೆ. ನಂತರ ಸದರಿ…

ಮುಂದೆ ಓದಿ..
ಸುದ್ದಿ 

ನಾಗಮಂಗಲದಲ್ಲಿ ಜಮೀನು ವಿವಾದದಿಂದ ಹಲ್ಲೆ – ವ್ಯಕ್ತಿಗೆ ಪ್ರಾಣ ಬೆದರಿಕೆ..

ನಾಗಮಂಗಲದಲ್ಲಿ ಜಮೀನು ವಿವಾದದಿಂದ ಹಲ್ಲೆ – ವ್ಯಕ್ತಿಗೆ ಪ್ರಾಣ ಬೆದರಿಕೆ ಜಮೀನು ಉಳುಮೆ ವಿಷಯದಲ್ಲಿ ಉಂಟಾದ ವಿವಾದದಿಂದ ಮೂವರು ಸೇರಿ ಒಬ್ಬ ವ್ಯಕ್ತಿಗೆ ಹಲ್ಲೆ ಮಾಡಿ, ಪ್ರಾಣ ಬೆದರಿಕೆ ಹಾಕಿದ ಘಟನೆ ನಾಗಮಂಗಲ ತಾಲೂಕಿನಲ್ಲಿ ನಡೆದಿದೆ. ಪೊಲೀಸರ ಮಾಹಿತಿ ಪ್ರಕಾರ, ಶಂಕರಪ್ಪ ಅವರು ತಮ್ಮ ಊರಿನಲ್ಲಿ ವಾಸವಾಗಿದ್ದು, ಅಕ್ಟೋಬರ್ 1ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಬೋರಪ್ಪನ ನಿಂಗಪ್ಪಣರವರ ಮನೆಯ ಮುಂಭಾಗದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆ ಸಮಯದಲ್ಲಿ ಗ್ರಾಮಸ್ಥರಾದ ಡಿ.ಬಿ. ಕುಮಾರ್ ಬಿನ್ ಬೋರೇಗೌಡ, ಅವರ ಮಗ ದಿನೇಶ್ ಕೆ., ಮತ್ತು ಪತ್ನಿ ಜಯಮ್ಮ ಎಂಬವರು ಶಂಕರಪ್ಪರೊಂದಿಗೆ ಜಮೀನು ಉಳುಮೆ ಕುರಿತಾಗಿ ಜಗಳಕ್ಕೆ ಇಳಿದಿದ್ದಾರೆ. ವಾಗ್ವಾದದ ವೇಳೆ ದಿನೇಶ್ ಶಂಕರಪ್ಪ ಅವರ ಮುಖ ಮತ್ತು ಕತ್ತಿನ ಮೇಲೆ ಕೈಯಿಂದ ಹೊಡೆದರೆ, ಕುಮಾರ್ ದೊಣ್ಣೆಯಿಂದ ಅವರ ಬೆನ್ನಿಗೆ ಹಾಗೂ ಕಾಲಿಗೆ ಹೊಡೆದಿದ್ದಾರೆ.…

ಮುಂದೆ ಓದಿ..
ಸುದ್ದಿ 

ದೇವರಮಾದಹಳ್ಳಿಯಲ್ಲಿ ಮೂವರಿಂದ ವ್ಯಕ್ತಿಗೆ ಹಲ್ಲೆ – ಪ್ರಕರಣ ದಾಖಲಾದ ಹಿನ್ನೆಲೆ..

ನಾಗಮಂಗಲ ತಾಲೂಕಿನ ದೇವರಮಾದಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬನ ಮೇಲೆ ಮೂವರು ಸೇರಿಕೊಂಡು ಹಲ್ಲೆ ನಡೆಸಿದ ಘಟನೆ ಸಂಭವಿಸಿದ್ದು, ಈ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಿರೀಶ್ ಅವರ ಪ್ರಕಾರ, ಗಿರೀಶ್ ಟಿಟಿ ತಮ್ಮ ಪತ್ನಿ ದಿವ್ಯರಾಣಿ ಅವರು ತಮ್ಮ ತಂದೆಯ ಊರಾದ ದೇವರಮಾದಹಳ್ಳಿ ಗ್ರಾಮಕ್ಕೆ ತೆರಳಿದ್ದ ಹಿನ್ನೆಲೆಯಲ್ಲಿ ದಿನಾಂಕ 29-09-2025 ರಂದು ರಾತ್ರಿ 8.15 ಗಂಟೆಯ ಸಮಯದಲ್ಲಿ ಬೈಕಿನಲ್ಲಿ ಅಲ್ಲಿಗೆ ಹೋಗುತ್ತಿದ್ದಾಗ, ದೇವರಮಾದಹಳ್ಳಿ ಗ್ರಾಮದ ಹತ್ತಿರ ದೊಡ್ಡಶೆಟ್ಟಿ ಮಗ ದೊಡ್ಡಶೆಟ್ಟಿ (ದಲಾಳಿ), ಧನಂಜಯ ಬಿನ್ ದೊಡ್ಡಶೆಟ್ಟಿ, ಹಾಗೂ ಶೆಟ್ಟಿಹಳ್ಳಿಕೊಪ್ಪಲು ಗ್ರಾಮದ ನಾಗರಾಜು ಬಿನ್ ಬೋರಪ್ಪ ಎಂಬ ಮೂವರು ಸೇರಿಕೊಂಡು ಬೈಕನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆ ಬಳಿಕ ಆರೋಪಿತರು ಗಿರೀಶ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಧನಂಜಯ ತನ್ನ ಕೈಯಲ್ಲಿದ್ದ ಕುಡುಗೋಲಿನಿಂದ ಗಿರೀಶ್ ಅವರ ಹಣೆ, ಮೂಗು ಹಾಗೂ ಎಡಕೈ…

ಮುಂದೆ ಓದಿ..
ಸುದ್ದಿ 

ನಾಗಮಂಗಲದಲ್ಲಿ ಮನೆ ಕಳ್ಳತನ – ₹1.35 ಲಕ್ಷ ಮೌಲ್ಯದ ಚಿನ್ನ ಹಾಗೂ ನಗದು ಕಳವು.

ನಾಗಮಂಗಲದಲ್ಲಿ ಮನೆ ಕಳ್ಳತನ – ₹1.35 ಲಕ್ಷ ಮೌಲ್ಯದ ಚಿನ್ನ ಹಾಗೂ ನಗದು ಕಳವು ನಗರದ ಪಡುವಲಪಟ್ಟಣ ರಸ್ತೆಯ ಯಲಮ್ಮ ದೇವಸ್ಥಾನ ಹತ್ತಿರದ ವಸತಿ ಏರಿಯಾದ ಮನೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಸುಮಾರು ₹1.35 ಲಕ್ಷ ಮೌಲ್ಯದ ಚಿನ್ನಾಭರಣಗಳು ಹಾಗೂ ನಗದು ಹಣ ಕಳ್ಳತನವಾಗಿರುವ ಘಟನೆ ಬೆಳಗಿನ ಜಾವ ಸಂಭವಿಸಿದೆ. ದೂರು ನೀಡಿದವರು ಶ್ರೀಮತಿ ಸಾಯಿರಾಬಾನು (44 ವರ್ಷ), ಪತಿ ಲೇಟ್ ಸೈಯದ್ ಇಲಿಯಾಸ್. ಅವರು ನೀಡಿದ ಮಾಹಿತಿಯ ಪ್ರಕಾರ, ದಿನಾಂಕ 04-10-2025ರಂದು ಮಧ್ಯಾಹ್ನ 12 ಗಂಟೆ ವೇಳೆಗೆ ತಾವು ಹಾಗೂ ಮಗಳು ನಾಜಿಯಾಬಾನು ಮೈಸೂರಿಗೆ ಕೆಲಸದ ನಿಮಿತ್ತ ತೆರಳಿದ್ದರು. ಮನೆಗೆ ಬೀಗ ಹಾಕಿಕೊಂಡು ಹೋಗಿದ್ದ ಅವರು ರಾತ್ರಿ ವಾಪಸ್ ಬಂದು ಬೆಳಗಿನ ಜಾವ ಸುಮಾರು 1:45ಕ್ಕೆ ಮನೆ ತಲುಪಿದಾಗ ಕಳ್ಳತನವಾಗಿರುವುದು ಪತ್ತೆಯಾಗಿದೆ. ಮನೆಯ ಮುಂಭಾಗದ ಬಾಗಿಲಿನ ಚಿಲಕವನ್ನು ಯಾವುದೋ ಆಯುಧದಿಂದ ಒಡೆದು ಹಾಕಲಾಗಿದ್ದು, ಮಲಗುವ…

ಮುಂದೆ ಓದಿ..
ಸುದ್ದಿ 

ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 18,500ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ: ಮಧು ಬಂಗಾರಪ್ಪ..

ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 18,500ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ: ಮಧು ಬಂಗಾರಪ್ಪ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಈ ವರ್ಷ 18,500ಕ್ಕೂ ಅಧಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಮುಂದಿನ ಶೈಕ್ಷಣಿಕ ವರ್ಷದ ಆರಂಭದೊಳಗೆ ಎಲ್ಲಾ ಹಂತಗಳೂ ಪೂರ್ಣಗೊಳ್ಳಲಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್‌. ಮಧು ಬಂಗಾರಪ್ಪ ತಿಳಿಸಿದ್ದಾರೆ. ಸೋಮವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯದ ಸರ್ಕಾರಿ ಶಾಲೆಗಳಿಗೆ ಸುಮಾರು 13 ಸಾವಿರ ಶಿಕ್ಷಕರ ಹಾಗೂ ಅನುದಾನಿತ ಶಾಲೆಗಳಿಗೆ 5,800ಕ್ಕೂ ಅಧಿಕ ಶಿಕ್ಷಕರ ನೇಮಕಾತಿ ನಡೆಯಲಿದೆ. ನ್ಯಾ. ನಾಗಮೋಹನ್‌ದಾಸ್ ಅವರ ವರದಿಯ ಶಿಫಾರಸುಗಳನ್ನು ಅನುಸರಿಸುವ ಪ್ರಕ್ರಿಯೆಯಲ್ಲಿ ತಾಂತ್ರಿಕ ಅಡಚಣೆಗಳಿದ್ದ ಕಾರಣ ಸ್ವಲ್ಪ ವಿಳಂಬವಾಗಿತ್ತು. ಈಗ ಎಲ್ಲ ಹಂತದ ತಾಂತ್ರಿಕ ಹಾಗೂ ಕಾನೂನು ವಿಚಾರಗಳು ಸರಿಯಾಗಿ ಪೂರ್ಣಗೊಂಡಿವೆ,” ಎಂದು ಹೇಳಿದರು. “ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೇವಲ 4,700…

ಮುಂದೆ ಓದಿ..
ಸುದ್ದಿ 

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕುರಿತು ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ವ್ಯಾಪ್ತಿಯಲ್ಲೂ ತೀವ್ರ ಚರ್ಚೆ ನಡೆಯುತ್ತಿದೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕುರಿತು ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ವ್ಯಾಪ್ತಿಯಲ್ಲೂ ತೀವ್ರ ಚರ್ಚೆ ನಡೆಯುತ್ತಿದೆ. ಈ ಕುರಿತು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾತನಾಡಿದ್ದು, ಸಮೀಕ್ಷೆ ಒಂದು ರಾಜ್ಯಮಟ್ಟದ ಮಹತ್ವದ ಕಾರ್ಯವಾಗಿದ್ದು, ಅದು ಪ್ರತಿ ಪ್ರದೇಶದ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳನ್ನು ಅಳೆಯಲು ನೆರವಾಗಲಿದೆ ಎಂದು ಹೇಳಿದರು. ಅವರು ಮತ್ತಷ್ಟು ವಿವರಿಸಿ —“ಸಮೀಕ್ಷೆ ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ಪ್ರತಿ ಮನೆ, ಪ್ರತಿ ಕುಟುಂಬದ ಸಾಮಾಜಿಕ ಹಾಗೂ ಶೈಕ್ಷಣಿಕ ಹಿನ್ನಲೆಯನ್ನು ಸರಿಯಾಗಿ ದಾಖಲಿಸುವುದೇ ಇದರ ಉದ್ದೇಶ. ಸಮೀಕ್ಷೆಯ ಅಂಕಿಅಂಶಗಳು ಭವಿಷ್ಯದಲ್ಲಿ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ನಿರ್ಧಾರಕ್ಕೆ ಆಧಾರವಾಗುತ್ತವೆ. ಆದ್ದರಿಂದ ಈ ಕಾರ್ಯದಲ್ಲಿ ಎಲ್ಲರೂ ಸಹಕಾರ ನೀಡಬೇಕು,” ಎಂದು ಮಹೇಶ್ವರ್ ರಾವ್ ವಿನಂತಿಸಿದರು. ಅವರು ಮುಂದುವರಿಸಿ ಹೇಳಿದರು:“ಕೆಲವು ಪ್ರದೇಶಗಳಲ್ಲಿ ಜಿಯೋ ಟ್ಯಾಗಿಂಗ್, ಡೇಟಾ ಅಪ್‌ಲೋಡ್ ಸೇರಿದಂತೆ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ಈ…

ಮುಂದೆ ಓದಿ..
ಸುದ್ದಿ 

ಈ ವರ್ಷದ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವ ಅಕ್ಟೋಬರ್‌ 9ರಿಂದ 23ರವರೆಗೆ ಅದ್ಧೂರಿಯಾಗಿ..

ಹಾಸನಾಂಬೆ ಜಾತ್ರೆ : ನಂಬಿಕೆಯ ನವರಂಗದಲ್ಲಿ ಶೃಂಗಾರಗೊಂಡ ಹಾಸನ ಹಾಸನ ನಗರ ಇಂದು ಭಕ್ತಿ, ಸಂಪ್ರದಾಯ ಮತ್ತು ಸಂಸ್ಕೃತಿಯ ಸಂಗಮವಾಗಿ ಪರಿವರ್ತಿತವಾಗಿದೆ. ಮಲಯಮಾರುತ್ತದ ತಂಪಿನ ಮಧ್ಯೆ ನವರಾತ್ರಿಯ ನಾದ ಪ್ರತಿಧ್ವನಿಸುತ್ತಿರುವಾಗ, ಹಾಸನಾಂಬೆ ದೇವಿಯ ದೈವೀ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಕಾದಿದ್ದಾರೆ. ಈ ವರ್ಷದ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವ ಅಕ್ಟೋಬರ್‌ 9ರಿಂದ 23ರವರೆಗೆ ಅದ್ಧೂರಿಯಾಗಿ ನಡೆಯಲಿದ್ದು, ಈಗಾಗಲೇ ನಗರದ ಪ್ರತಿಯೊಂದು ಬೀದಿ ದೇವಿಯ ಆರಾಧನೆಯ ಆಲೋಚನೆಯಲ್ಲಿದೆ. 🌺 ಒಡವೆಗಳ ಮೆರವಣಿಗೆ – ಭಕ್ತಿಭಾವದ ಆಭರಣ ಸೋಮವಾರ ಬೆಳಿಗ್ಗೆ ನಗರದ ಸಾಲಗಾಮೆ ರಸ್ತೆಯ ಬಳಿ ಇರುವ ಜಿಲ್ಲಾ ಖಜಾನೆಯಿಂದ ದೇವಿಯ ಅಮೂಲ್ಯ ಆಭರಣಗಳನ್ನು ಮೆರವಣಿಗೆಯ ರೂಪದಲ್ಲಿ ದೇವಾಲಯಕ್ಕೆ ಸಾಗಿಸಲಾಯಿತು. ಹಾಸನ ತಹಸೀಲ್ದಾರ್ ಗೀತಾ ಅವರ ಪೂಜೆ ನಂತರ ಬೆಳ್ಳಿ ರಥದಲ್ಲಿ ಮಂಗಳವಾದ್ಯಗಳ ನಾದದ ನಡುವೆ ಮೆರವಣಿಗೆ ಪ್ರಾರಂಭವಾಯಿತು. ಪೌರಾಣಿಕ ಸಂಪ್ರದಾಯದಂತೆ ಹಾಸನಾಂಬೆಯ ಆಭರಣಗಳು ದೇವಾಲಯದತ್ತ ಸಾಗುತ್ತಿದ್ದಂತೆ, ಮಾರ್ಗದಲ್ಲಿದ್ದ ಭಕ್ತರು…

ಮುಂದೆ ಓದಿ..
ಸುದ್ದಿ 

ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವೇಳೆ ಲಿಂಗಾಯತ ಕ್ರಿಶ್ಚಿಯನ್‌, ಒಕ್ಕಲಿಗ ಕ್ರಿಶ್ಚಿಯನ್‌ ಹೀಗೆ 46 ಜಾತಿಗಳನ್ನು ಕ್ರಿಶ್ಚಿಯನ್‌..

ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವೇಳೆ ಲಿಂಗಾಯತ ಕ್ರಿಶ್ಚಿಯನ್‌, ಒಕ್ಕಲಿಗ ಕ್ರಿಶ್ಚಿಯನ್‌ ಹೀಗೆ 46 ಜಾತಿಗಳನ್ನು ಕ್ರಿಶ್ಚಿಯನ್‌ ಜತೆ ತಳಕುಹಾಕಿ ಸಿದ್ಧಪಡಿಸಿದ್ದ ಜಾತಿಗಳ ಪಟ್ಟಿಯನ್ನು ಕೈಬಿಡಬೇಕೇ ಅಥವಾ ಮುಂದುವರೆಸಬೇಕೇ ಎಂಬ ಕುರಿತು ಸರ್ಕಾರ ಹಾಗೂ ಹಿಂದುಳಿದ ವರ್ಗಗಳ ಆಯೋಗದ ನಡುವೆ ಒಮ್ಮತ ಅಭಿಪ್ರಾಯ ಮೂಡಿಲ್ಲ. ಲಿಂಗಾಯತ ಕ್ರಿಶ್ಚಿಯನ್‌, ಒಕ್ಕಲಿಗ ಕ್ರಿಶ್ಚಿಯನ್‌, ಕುರುಬ ಕ್ರಿಶ್ಚಿಯನ್‌, ವಿಶ್ವಕರ್ಮ ಕ್ರಿಶ್ಚಿಯನ್‌, ಈಡಿಗ ಕ್ರಿಶ್ಚಿಯನ್‌, ವ್ಯಾಸ ಬ್ರಾಹ್ಮಣ ಕ್ರಿಶ್ಚಿಯನ್‌, ವಾಲ್ಮೀಕಿ ಕ್ರಿಶ್ಚಿಯನ್‌, ಆದಿ ಆಂಧ್ರ ಕ್ರಿಶ್ಚಿಯನ್‌, ಆದಿ ದ್ರಾವಿಡ ಕ್ರಿಶ್ಚಿಯನ್‌, ಆದಿ ಕರ್ನಾಟಕ ಕ್ರಿಶ್ಚಿಯನ್‌, ಅಕ್ಕಸಾಲಿಗ ಕ್ರಿಶ್ಚಿಯನ್‌, ಬಣಜಿಗ ಕ್ರಿಶ್ಚಿಯನ್‌, ಬಂಜಾರ ಕ್ರಿಶ್ಚಿಯನ್‌, ಬಾರಿಕಾರ್‌ ಕ್ರಿಶ್ಚಿಯನ್‌, ಬೆಸ್ತರು ಕ್ರಿಶ್ಚಿಯನ್‌, ಬಿಲ್ಲವ ಕ್ರಿಶ್ಚಿಯನ್‌, ಬುಡುಗ ಜಂಗಮ ಕ್ರಿಶ್ಚಿಯನ್‌, ಚರೋಡಿ ಕ್ರಿಶ್ಚಿಯನ್‌, ದೇವಾಂಗ ಕ್ರಿಶ್ಚಿಯನ್‌, ಗೊಲ್ಲ ಕ್ರಿಶ್ಚಿಯನ್‌, ಗೌಡಿ ಕ್ರಿಶ್ಚಿಯನ್‌, ಹೊಲೆಯ ಕ್ರಿಶ್ಚಿಯನ್‌, ಜಲಗಾರ ಕ್ರಿಶ್ಚಿಯನ್‌, ಜಾಡರ್‌ ಕ್ರಿಶ್ಚಿಯನ್‌, ಜಂಗಮ ಕ್ರಿಶ್ಚಿಯನ್‌, ಕಮ್ಮ ಕ್ರಿಶ್ಚಿಯನ್‌, ಕಮ್ಮ…

ಮುಂದೆ ಓದಿ..
ಸುದ್ದಿ 

ಈ ಹೆಚ್ಚಳದ ದರಗಳು 2025ರ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

ಕರ್ನಾಟಕದ ಮುಜರಾಯಿ ಇಲಾಖೆ ನಿಯಂತ್ರಣದಲ್ಲಿರುವ 14 ಪ್ರಮುಖ ದೇವಸ್ಥಾನಗಳಲ್ಲಿ ಸೇವಾ ಶುಲ್ಕ (seva / ritual charges) ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ಈ ಹೆಚ್ಚಳದ ದರಗಳು 2025ರ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ. ಈ ಸೇವಾ ಶುಲ್ಕದ ಆದೇಶವು “ದೇವಾಲಯಗಳ ಆಡಳಿತ ಮಂಡಳಿಗಳ ತೀರ್ಮಾನದ ಅನುಸಾರವಾಗಿದೆ, ಸರ್ಕಾರದ ಸ್ವಯಂ ನಿರ್ಧಾರವಲ್ಲ” ಎಂಬಂತೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಈ ಕೆಳಗಿನ ಕೆಲವು ದೇವಾಲಯಗಳು ಸೇವಾ ಶುಲ್ಕ ಏರಿಕೆಗೆ ಒಳಗೊಂಡಿವೆ:

ಮುಂದೆ ಓದಿ..
ಅಂಕಣ 

ಮಹರ್ಷಿ ವಾಲ್ಮೀಕಿ…..

ಮಹರ್ಷಿ ವಾಲ್ಮೀಕಿ….. ರಾಮಾಯಣದ ಸೃಷ್ಟಿಕರ್ತರ ಜಯಂತಿಯ ಸಂದರ್ಭದಲ್ಲಿ……… ಈ ದಿನ ಯಾರನ್ನು ಸ್ಮರಿಸೋಣ…………, ರಾಮ – ಲಕ್ಷ್ಮಣ – ಭರತ – ಶತ್ರುಜ್ಞ – ರಾವಣ – ಸೀತೆ – ಆಂಜನೇಯ – ವಾಲಿ – ಸುಗ್ರೀವ – ವಿಭೀಷಣ – ದಶರಥ – ಶಬರಿ – ಶ್ರವಣ ಕುಮಾರ……. ಹೀಗೆ ಸಾಗುವ ಪಾತ್ರಗಳೋ…. ಅಥವಾ, ರಾಮಾಯಣವೆಂಬ ಬೃಹತ್ ಗ್ರಂಥವನ್ನೋ, ಅಥವಾ, ಅದರ ಕರ್ತೃ ವಾಲ್ಮೀಕಿಯನ್ನೋ, ಅಥವಾ, ವಾಲ್ಮೀಕಿಯ ನಾಯಕ ಜನಾಂಗವನ್ನೋ, ಅಥವಾ, ಈಗಿನ ಆ ಜಾತಿಯ ರಾಜಕೀಯ ನಾಯಕರನ್ನೋ…….. ಐತಿಹಾಸಿಕ ದಾಖಲೆಗಳ ಪ್ರಕಾರ ವಾಲ್ಮೀಕಿ ಎಂಬ ಹೆಸರಿನ, ಬೇಟೆಯಾಡಿ ಜೀವನ ನಡೆಸುತ್ತಿದ್ದ ವ್ಯಕ್ತಿ ರಾಮಾಯಣ ಎಂಬ ಗ್ರಂಥವನ್ನು ರಚಿಸುತ್ತಾರೆ…. ರಾಮ ಎಂಬ ಪಾತ್ರವನ್ನು ಆದರ್ಶ ಪುರುಷನಂತೆ ಕೇಂದ್ರ ಸ್ಥಾನದಲ್ಲಿ ನಿಲ್ಲಿಸಿ, ಸೀತೆ ಎಂಬ ಹೆಣ್ಣನ್ನು ಮಹಿಳೆಯರ ಆದರ್ಶದ ಪ್ರತೀಕವಾಗಿ ಚಿತ್ರಿಸಿ, ಲಕ್ಷ್ಮಣ, ಭರತ, ಶತೃಘ್ಞರಂತ ಆದರ್ಶ…

ಮುಂದೆ ಓದಿ..