ಅಂಕಣ 

ಕುರ್ಚಿಗಾಗಿ ಕಿತ್ತಾಟ…….

ಕುರ್ಚಿಗಾಗಿ ಕಿತ್ತಾಟ……. ಸಂಪುಟ ವಿಸ್ತರಣೆ ಮತ್ತು ಖಾತೆಗಳು ಎಂಬ ರೋಗ….. ಸಮಾಜದ ನಡೆ ದುರಂತದ ಕಡೆ……. ಸುಮಾರು ವರ್ಷಗಳಿಂದ ಕರ್ನಾಟಕದಲ್ಲಿ ವಿವಿಧ ಪಕ್ಷಗಳು ಅಧಿಕಾರಕ್ಕೆ ಬಂದಾಗ ಅವರು ಎದುರಿಸುವ ಬಹುದೊಡ್ಡ ಸಮಸ್ಯೆ ಜನರಿಗೆ ಹೇಗೆ ಅತ್ಯುತ್ತಮ ಸೇವೆ ಒದಗಿಸಬೇಕು ಎಂಬುದಲ್ಲ, ಬದಲಾಗಿ ಸಚಿವ ಸಂಪುಟದ ವಿಸ್ತರಣೆ ಮತ್ತು ಖಾತೆಗಳ ಹಂಚಿಕೆ…….. ಮುಖ್ಯಮಂತ್ರಿಯಾದವರು ತಮ್ಮ ಆಡಳಿತದ ಬಹುತೇಕ ಸಮಯವನ್ನು ಇದರ ಬಗ್ಗೆ ಯೋಚಿಸುವುದರಲ್ಲಿ ಮತ್ತು ಶಾಸಕರನ್ನು ಸಮಾಧಾನ ಮಾಡಿ ಹಿಡಿದಿಟ್ಟುಕೊಳ್ಳುವಲ್ಲಿಯೇ ಕಳೆದು ಬಿಡುತ್ತಾರೆ. ಜನರ ಬಗ್ಗೆ ಚಿಂತಿಸಲು ಅವರ ಬಳಿ ತುಂಬಾ ಕಡಿಮೆ ಸಮಯವಿರುತ್ತದೆ. ನಿಮಗೆ ತಿಳಿದಿರಬಹುದು,ಸರ್ಕಾರದ ಬಳಿ 34 ಮಂತ್ರಿಗಳ ಸ್ಥಾನ ಮತ್ತು ಮುಖ್ಯವಾಗಿ ಸುಮಾರು ‌75 ಇಲಾಖೆಗಳನ್ನು ಆಡಳಿತದ ಅನುಕೂಲಕ್ಕಾಗಿ ಮಾಡಿಕೊಳ್ಳಲಾಗಿದೆ. ಇದರಲ್ಲಿ ಯಾವುದೇ ಪಕ್ಷದ ಶಾಸಕರು ಅವರ ದೃಷ್ಟಿಯಲ್ಲಿ ಅತಿ ಮಹತ್ವದ ಇಲಾಖೆ ಎಂದು ಪರಿಗಣಿಸುವುದು ಯಾವುದು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಗೃಹ…

ಮುಂದೆ ಓದಿ..
ಸುದ್ದಿ 

ವಿಷಕಾರಿ ಕೆಮ್ಮಿನ ಸಿರಪ್ ದುರಂತಕ್ಕೆ ಕೇಂದ್ರದ ಕಠಿಣ ಹೊಡೆತ

ವಿಷಕಾರಿ ಕೆಮ್ಮಿನ ಸಿರಪ್ ದುರಂತಕ್ಕೆ ಕೇಂದ್ರದ ಕಠಿಣ ಹೊಡೆತ ವಿಷಕಾರಿ ಕೆಮ್ಮಿನ ಸಿರಪ್ ಸೇವನೆಯಿಂದ 20ಕ್ಕೂ ಹೆಚ್ಚು ನಿರಪರಾಧ ಮಕ್ಕಳ ಪ್ರಾಣ ಬಲಿಯಾದ ಹಿನ್ನೆಲೆ, ಕೇಂದ್ರ ಸರ್ಕಾರವು ಔಷಧ ಕಂಪನಿಗಳ ವಿರುದ್ಧ ಇತಿಹಾಸದಲ್ಲೇ ಅತಿ ಕಠಿಣ ಕ್ರಮ ಕೈಗೊಂಡಿದೆ. 🔹 ಕೇಂದ್ರ ಔಷಧ ನಿಯಂತ್ರಣ ಸಂಸ್ಥೆ (CDSCO) ತನಿಖೆ ನಡೆಸಿ, ಮೂರೂ ಕಂಪನಿಗಳ ಉತ್ಪನ್ನಗಳು ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದುದನ್ನು ದೃಢಪಡಿಸಿದೆ.🔹 ಪರಿಣಾಮವಾಗಿ ಸರ್ಕಾರವು ಕೆಳಗಿನ ಮೂರು ಸಿರಪ್‌ಗಳ ತಯಾರಿ ಹಾಗೂ ಮಾರಾಟವನ್ನು ನಿಷೇಧಿಸಿದೆ: 🧪 ಕೋಲ್ಡ್‌ರಿಫ್‌ (Coldriff) 🧪 ರೆಸ್ಪಿರ್‌ಫ್ರೆಶ್‌-ಟಿಆರ್‌ (Respirefresh-TR) 🧪 ರೀಲೈಫ್‌ (Relife) 🔹 ಈ ಸಿರಪ್‌ಗಳನ್ನು ತಕ್ಷಣ ಮಾರುಕಟ್ಟೆಯಿಂದ ಹಿಂಪಡೆಯುವಂತೆ ಹಾಗೂ ಉತ್ಪಾದನೆ ನಿಲ್ಲಿಸುವಂತೆ ಕಂಪನಿಗಳಿಗೆ ಸರ್ಕಾರ ಆದೇಶಿಸಿದೆ.🔹 ಕೇಂದ್ರ ಸರ್ಕಾರವು ಈ ಬೆಳವಣಿಗೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಗೆ ಅಧಿಕೃತ ವರದಿ ಸಲ್ಲಿಸಿದೆ.🔹 ಜೊತೆಗೆ, ಈ ಸಿರಪ್‌ಗಳು ಬೇರೆ…

ಮುಂದೆ ಓದಿ..
ಸುದ್ದಿ 

ತಪ್ಪಿಸಿಕೊಳ್ಳಲು ಯತ್ನಿಸಿದ ಶಂಕಿತನಿಗೆ ಮೈಸೂರು ಪೊಲೀಸರು ಗುಂಡೇಟು..

ತಪ್ಪಿಸಿಕೊಳ್ಳಲು ಯತ್ನಿಸಿದ ಶಂಕಿತನಿಗೆ ಮೈಸೂರು ಪೊಲೀಸರು ಗುಂಡೇಟು ಮೈಸೂರು: ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಶಂಕಿತನ ಕಾರ್ತಿಕ್ ಅವರನ್ನು ಪೊಲೀಸರ ವಶಕ್ಕೆ ಪಡೆಯುವ ವೇಳೆ, ಆತ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ. ಪ್ರಕರಣದ ಸಂಬಂಧದಲ್ಲಿ ಕಾರ್ತಿಕ್ ಅವರನ್ನು ಸಿದ್ದಲಿಂಗಪುರಕ್ಕೆ ಕರೆದುಕೊಂಡು ಹೋಗಿ ಮರುಬರುವಾಗ, ಮೇಟಗಳ್ಳಿ ಪ್ರದೇಶದಲ್ಲಿ ಅಧಿಕಾರಿಗಳು ಆತನ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯ ಸ್ಥಳದಲ್ಲಿ ನಿಂತಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಕಾರ್ತಿಕ್ ಅವರನ್ನು ಕೊಳ್ಳೇಗಾಲದಲ್ಲಿ ವಶಪಡಿಸಲಾಗಿತ್ತು. ಮೈಸೂರು ಪೊಲೀಸರು ವಿಚಾರಣೆ ನಡೆಸಿ ಅವನನ್ನು ಮನೆಗೆ ಕರೆದುಕೊಂಡು ಹೋಗಿದ್ದಾಗ, ಮರಳಿ ಬರುವ ಸಮಯದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಕಾರ್ತಿಕ್ ಮೇಲೆ ತಕ್ಷಣ ಕ್ರಮ ತೆಗೆದುಕೊಳ್ಳಲಾಗಿದೆ. ಕಾರ್ತಿಕ್ ಬಲಗಾಲದ ತೊಡೆಗೆ ಗುಂಡು ಹಾರಲಾಗಿದ್ದು, ಅವನನ್ನು ಕೆ.ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ವೇಳೆ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ ಮತ್ತು ಅವರಿಗೆ ಕೂಡ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಯಲಹಂಕದಲ್ಲಿ ಬೆಂಕಿ ಅವಘಡ – ಯುವಕ, ಯುವತಿ ಸಾವು

ಯಲಹಂಕದಲ್ಲಿ ಬೆಂಕಿ ಅವಘಡ – ಯುವಕ, ಯುವತಿ ಸಾವು ಬೆಂಗಳೂರು : ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಯುವಕ ಸಾವು ಕಂಡಿದ್ದಾನೆ. ಈ ವೇಳೆ ಹೊಗೆಯಿಂದ ಉಸಿರುಗಟ್ಟಿ ಯುವತಿಯೂ ಸಾವನ್ನಪ್ಪಿರುವ ಘಟನೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಲಾಡ್ಜ್‌ನಲ್ಲಿ ನಡೆದಿದೆ. ಪೊಲೀಸ್ ಮೂಲಗಳ ಪ್ರಕಾರ, ಲಾಡ್ಜ್‌ನ ಒಂದು ರೂಮಿನಲ್ಲಿ ಗದಗ ಮೂಲದ ಯುವಕ ಹಾಗೂ ಹುನಗುಂದ ಮೂಲದ ಕಾವೇರಿ ಬಡಿಗೇರ್ ಎಂಬ ಯುವತಿ ವಾಸಿಸುತ್ತಿದ್ದರು. ಯುವಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಯುವತಿ ಸಮೀಪದ ಬಿಲ್ಡಿಂಗ್ ಸ್ಪಾದಲ್ಲಿ ಉದ್ಯೋಗದಲ್ಲಿದ್ದರು. ಬೆಳಗಿನ ವೇಳೆ ರೂಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹೊಗೆ ತುಂಬಿಕೊಂಡಿತ್ತು. ಹೊಗೆಯಿಂದ ಉಸಿರುಗಟ್ಟುತ್ತಿದ್ದ ಯುವತಿಯು ತಕ್ಷಣ ಲಾಡ್ಜ್ ಸಿಬ್ಬಂದಿಗೆ ಕರೆಮಾಡಿದ್ದಾಳೆ ಎಂದು ತಿಳಿದುಬಂದಿದೆ. ಈ ವೇಳೆ ಬಾತ್‌ರೂಮ್‌ನೊಳಗಿದ್ದ ಯುವತಿ ಬಾಗಿಲು ಹಾಕಿಕೊಂಡಿದ್ದಳು. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬಾಗಿಲು ಒಡೆದು ಒಳ ಪ್ರವೇಶಿಸಿ ಇಬ್ಬರ ಮೃತದೇಹಗಳನ್ನು…

ಮುಂದೆ ಓದಿ..
ಸುದ್ದಿ 

ಸುದ್ದಿ-ಕಲೆಯ ನಡುವೆ ಭಕ್ತಿ ಮತ್ತು ವ್ಯವಹಾರದ ರೇಖೆ

ಸುದ್ದಿ-ಕಲೆಯ ನಡುವೆ ಭಕ್ತಿ ಮತ್ತು ವ್ಯವಹಾರದ ರೇಖೆ ಕಾಂತಾರ ವಿವಾದದ ನಂತರದ ಸಾಮಾಜಿಕ ಚಿಂತನೆ ದೈವಾರಾಧನೆಯ ಆವೇಶದಿಂದ ಪರದೆಯ ಹಾವಳಿ.. ತುಳುನಾಡಿನ ಜನಜೀವನದಲ್ಲಿ ದೈವವು ಕೇವಲ ಭಕ್ತಿ ಅಥವಾ ಪೂಜೆಗಷ್ಟೇ ಸೀಮಿತವಲ್ಲ; ಅದು ಸಂಸ್ಕೃತಿಯ ಶಿರೋಮಣಿಯಂತಿದೆ. ದೈವನರ್ತನ, ಆವೇಶ, ಬಲಿವೇಳೆ — ಇವು ತಲೆಮಾರಿನಿಂದ ತಲೆಮಾರಿಗೆ ಪಾರಂಪರ್ಯವಾಗಿ ಹರಿದು ಬಂದ ಪವಿತ್ರ ಆಚರಣೆಗಳು. ಆದರೆ, ‘ಕಾಂತಾರ’ ಚಿತ್ರದ ನಂತರ ದೈವದ ಈ ಪವಿತ್ರ ಭಾವನೆಗಳು ಪರದೆಯ ಕಲ್ಪನೆಗಳ ಭಾಗವಾಗಿವೆ. ಚಿತ್ರದಲ್ಲಿ ತೋರಿಸಲಾದ ದೃಶ್ಯಗಳು ಪ್ರೇಕ್ಷಕರ ಹೃದಯ ತಟ್ಟಿದರೂ, ಅದು ಕೆಲವರಿಗೆ ನೋವು ತಂದಿದೆ. ದೈವಾರಾಧಕರು ಹೇಳುವಂತೆ — “ದೈವದ ಆವೇಶ ಮನೋರಂಜನೆಗೆ ಅಲ್ಲ; ಅದು ನಂಬಿಕೆಯ ಆಳವಾದ ಪ್ರತ್ಯಕ್ಷತೆ”. ಭಕ್ತಿಯಿಂದ ವ್ಯವಹಾರಕ್ಕೆ — ರೇಖೆ ಎಲ್ಲಿ? ಕಲೆಯು ಭಾವನೆಗಳ ಪ್ರತಿಬಿಂಬ. ಆದರೆ ಆ ಭಾವನೆಗಳು ವ್ಯವಹಾರದ ಸಾಧನವಾಗುವ ಕ್ಷಣದಲ್ಲೇ ಅದರ ಪವಿತ್ರತೆ ಸವಾಲಿಗೆ ಒಳಗಾಗುತ್ತದೆ. ‘ಕಾಂತಾರ’ ಚಿತ್ರವು…

ಮುಂದೆ ಓದಿ..
ಅಂಕಣ 

ತಿನ್ನುವ ಹಕ್ಕಿದೆ,ಬಿಸಾಡುವ ಹಕ್ಕಿಲ್ಲ…….

ತಿನ್ನುವ ಹಕ್ಕಿದೆ,ಬಿಸಾಡುವ ಹಕ್ಕಿಲ್ಲ……. ಅಕ್ಟೋಬರ್ 16 – ಅನ್ನದ ಋಣ ತೀರಿಸುವ ಒಂದು ಸುವರ್ಣಾವಕಾಶ….. ಹಸಿವಿನಿಂದ ಪ್ರತಿ ದಿನ‌ ವಿಶ್ವದಲ್ಲಿ 19700 ಜನ ಸಾಯುತ್ತಿದ್ದಾರೆ ಅಂದರೆ ಪ್ರತಿ 4 ಸೆಕೆಂಡಿಗೆ ಒಬ್ಬರು ಎಂದು ಎರಡು ವರ್ಷಗಳ ಹಿಂದೆ ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೇರಿದ್ದ 75 ದೇಶಗಳ 250 ಸಂಘಟನೆಗಳು ವರದಿ ಮಂಡಿಸಿವೆ….. ಅಕ್ಟೋಬರ್ 16 ” ವಿಶ್ವ ಆಹಾರ ದಿನ “….. 1945 ರಲ್ಲಿ ವಿಶ್ವಸಂಸ್ಥೆಯ ” Food and agriculture organization ( FAO ) ಸ್ಥಾಪಿಸಿದ ದಿನವನ್ನು ಪ್ರತಿವರ್ಷ ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆ ಎಷ್ಟು ಎಂದು ನಿರ್ದಿಷ್ಟವಾಗಿ ತಿಳಿದಿಲ್ಲ. ಆದರೆ ಲಕ್ಷಾಂತರ ಜನ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಎಂದು ಅಧ್ಯಯನವೊಂದು ವರದಿ ಮಾಡಿದೆ. ಇತ್ತೀಚಿನ ಒಂದು ವರದಿಯ ಪ್ರಕಾರ ಭಾರತದ ಹಸಿವಿನ ಸೂಚ್ಯಂಕ 111 ಸ್ಥಾನಕ್ಕೆ…

ಮುಂದೆ ಓದಿ..
ಸುದ್ದಿ 

ಆಕಸ್ಮಿಕವಾದ ತಾಯಿಯ ಸಾವು . ಅನಾಥವಾದ ಮಕ್ಕಳು.

ಆಕಸ್ಮಿಕವಾದ ತಾಯಿಯ ಸಾವು . ಅನಾಥವಾದ ಮಕ್ಕಳು. ಸಮಾಜದಲ್ಲಿ ಸಾಕಷ್ಟು ರಕ್ಷಣಾ ವೇದಿಕೆಗಳು ಅನಾಥಾಶ್ರಮಗಳು ಹಾಗೆ ನಿರ್ಗತಿಕರ ಆಶ್ರಮಗಳು ಕೂಡ ಸಾಕಷ್ಟು ಇದ್ದರು ಇಂದಿನ ದಿನಮಾನದಲ್ಲೂ ಸಹಿತ ಸಾಕಷ್ಟು ಜನ ಟೆಂಟ್ ವ್ಯವಸ್ಥೆ. ಹಾಗೂ ಬಸ್ ಸ್ಟ್ಯಾಂಡ್ ಗಳಲ್ಲಿ ತಮ್ಮ ಜೀವನವನ್ನು ಸಾಗಿಸುವುದು . ಗುಡಿ ಗುಂಡಾರಗಳಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳುವುದು ಇವುಗಳನ್ನು ಸಾಕಷ್ಟು ಕಂಡು ಹಾಗೂ ಕೇಳುತ್ತಿದ್ದೇವೆ ಕೂಡ . ಸರ್ಕಾರ ಎಷ್ಟೇ ಯೋಚನೆಗಳನ್ನು ಕೊಟ್ಟರು ಕೂಡ ಕೆಲವೊಂದಿಷ್ಟು ಜನರಿಗೆ ಅವು ತಲುಪಲು ಆಗುತ್ತಿಲ್ಲ ಇಂದಿನವರೆಗೂ ತಲುಪಿಲ್ಲ ಕೂಡ. ಅದಕ್ಕೆ ಜೀವಂತ ಸಾಕ್ಷಿ ಎಂಬಂತೆ ಹುಬ್ಬಳ್ಳಿಯಲ್ಲಿ ನಡೆದ ಘಟನೆ ಉದಾಹರಣೆಯಾಗಿದೆ. ನಿಜಕ್ಕೂ ಇದು ಕರುಳು ಎನ್ನುವ ಘಟನೆ ಕೂಡ ಹೌದು. ಹುಬ್ಬಳ್ಳಿಯಲ್ಲಿ ಓರ್ವತಾಯಿ ಹಾಗೂ ಇಬ್ಬರು ಮಕ್ಕಳು ವಾಸಿಸಲು ಮನೆ ಇಲ್ಲದೆ ಕೇಶವಪುರದ ರಸ್ತೆಯಲ್ಲಿ ಬರುವ ಬಸ್ ಸ್ಟ್ಯಾಂಡ್ ನಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಿದ್ದು .…

ಮುಂದೆ ಓದಿ..
ಸುದ್ದಿ 

ನ್ಯಾಯದ ಅಂಗಳದಲ್ಲೇ ಮರಣ — ವ್ಯವಸ್ಥೆಯ ಮೌನದ ಆಕ್ರಂದನ..

ನ್ಯಾಯದ ಅಂಗಳದಲ್ಲೇ ಮರಣ — ವ್ಯವಸ್ಥೆಯ ಮೌನದ ಆಕ್ರಂದನ ಬೆಂಗಳೂರು ನಗರದಲ್ಲಿ ಇಂದು ನಡೆದ ದುರ್ಘಟನೆಯೊಂದು ಕಾನೂನು ವ್ಯವಸ್ಥೆಯ ಒಳಗಿನ ಮಾನವೀಯ ಪ್ರಶ್ನೆಗಳನ್ನು ಮತ್ತೊಮ್ಮೆ ಎಬ್ಬಿಸಿದೆ.ಸೆಷನ್ಸ್ ಕೋರ್ಟ್ ಕಟ್ಟಡದ ಐದನೇ ಮಹಡಿಯಿಂದ ಬಿದ್ದು ಪೋಕ್ಸೋ ಕೇಸ್‌ನ ಆರೋಪಿ ಗೌತಮ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪರಪ್ಪನ ಅಗ್ರಹಾರದಿಂದ ವಿಚಾರಣೆಗೆ ತರಲಾಗಿದ್ದ ಆರೋಪಿ, ಬೆಳಗ್ಗೆ ಕೋರ್ಟ್ ಅಂಗಳದಲ್ಲೇ ಜೀವ ಅಂತ್ಯಗೊಳಿಸಿದ ಈ ಘಟನೆ ಕೇವಲ ದುರಂತವಲ್ಲ — ಇದು ನ್ಯಾಯಾಂಗ ಮತ್ತು ಸಮಾಜ ಎರಡಕ್ಕೂ ಎಚ್ಚರಿಕೆಯ ಗಂಟೆಯಾಗಿದೆ. ನ್ಯಾಯದ ಹೆಸರಿನಲ್ಲಿ ಒತ್ತಡ? ಪೋಕ್ಸೋ ಕೇಸ್ ಎಂದರೆ ಸಾಮಾಜಿಕವಾಗಿ ಅತ್ಯಂತ ಗಂಭೀರ ಮತ್ತು ಕಲಂಕಿತ ಆರೋಪ.ಆರೋಪಿ ತಪ್ಪಿತನವನ್ನು ಸಾಬೀತುಪಡಿಸುವ ಮುನ್ನವೇ ಸಮಾಜದ ತೀರ್ಪು ಆರಂಭವಾಗುತ್ತದೆ. ಕುಟುಂಬ, ಸುತ್ತಮುತ್ತಲಿನ ಒತ್ತಡ ಮತ್ತು ಕಾನೂನು ಕ್ರಮದ ಅವಧಿಯ ತೀವ್ರತೆಯ ನಡುವೆ ಮಾನಸಿಕ ಒತ್ತಡದ ಕಾಟವು ಹಲವಾರು ಬಾರಿ ಅಸಹನೀಯ ಮಟ್ಟಕ್ಕೆ ಏರುತ್ತದೆ. ಗೌತಮ್‌ನ ಈ ಕೃತ್ಯ…

ಮುಂದೆ ಓದಿ..
ಸುದ್ದಿ 

ದಸರಾದಲ್ಲಿ ಬಲೂನ್ ಮಾರಲು ಬಂದಿದ್ದ ಬಾಲಕಿಯ ಶವ ಪತ್ತೆ? ಅತ್ಯಾಚಾರ ಶಂಕೆ..

ದಸರಾದಲ್ಲಿ ಬಲೂನ್ ಮಾರಲು ಬಂದಿದ್ದ ಬಾಲಕಿಯ ಶವ ಪತ್ತೆ? ಅತ್ಯಾಚಾರ ಶಂಕೆ.. ಮೈಸೂರು ದಸರಾ ಎಂದ ಕ್ಷಣ ಎಲ್ಲರಿಗೂ ನೆನಪಾಗುವುದು ನಾಡ ದೇವಿಯ ಹಬ್ಬ ಹಾಗೂ ಸಾಕಷ್ಟು ಮನೋರಂಜನಾ ಒಂದು ವಸ್ತು ಪ್ರದರ್ಶನ ಹಲವಾರು ವಿವಿಧ ಬಗೆಯ ವ್ಯಾಪಾರಿಗಳು. ಇವೆಲ್ಲವೂ ದಸರಾ ಹಬ್ಬದಲ್ಲೂ ಎಲ್ಲರಿಗೂ ಜೀವನವನ್ನು ರೂಪಿಸಿಕೊಡುವ ಕಾರ್ಯವನ್ನು ದಸರಾ ಹಬ್ಬ ಒದಗಿಸುತ್ತದೆ. ಹಾಗೆಯೇ ದಸರಾ ಹಬ್ಬದ ಬಲೂನ್ ಮಾರಲು ಬಂದಿದ್ದ ಬಾಲಕಿಯ ಶವ ಪತ್ತೆಯಾಗಿದ್ದು ಎಲ್ಲರನ್ನು ಗಾಬರಿ ಹಾಗೂ ಆತಂಕವನ್ನು ಉಂಟುಮಾಡುವ ಸ್ಥಿತಿ ತಂದು ಒಡ್ಡಿದೆ. ಮೈಸೂರು ವಸ್ತು ಪ್ರದರ್ಶನ ಮೈದಾನದಲ್ಲಿ ದಸರಾ ಹಬ್ಬದಲ್ಲಿ . ಬಲೂನ್ ಮಾರಲು ತಂದೆ ತಾಯಿ ಹಾಗೂ ಊರ್ವ ಬಾಲಕಿ ಬಂದಿದ್ದರು. ದೊಡ್ಡಕೆರೆ ಮೈದಾನದ ಸುತ್ತಲಿನ ರಸ್ತೆಯಲ್ಲಿ ದಸರಾದ ವ್ಯಾಪಾರಕ್ಕಾಗಿ ಬಂದ ವ್ಯಾಪಾರಿಗಳು ನೆಲೆಸಿದ್ದರು . ಬುಧವಾರ ಚಾಮುಂಡೇಶ್ವರಿ ದೇವಾಲಯದ ತಪೋತ್ಸವವನ್ನ ಮುಗಿಸಿ ಗುರುವಾರ ಬೇರೆ ಕಡೆ ತೆರಳಲು ಸಿದ್ಧರಿದ್ದರು.…

ಮುಂದೆ ಓದಿ..
ಸುದ್ದಿ 

ಅಂತ್ಯಸಂಸ್ಕಾರ ಪರಿಹಾರ ಯೋಜನೆ ಮೃತರ ಕುಟುಂಬಕ್ಕೆ ಸಿಗಲಿದೆ ಒಂದು ಲಕ್ಷ 50,000 ಪರಿಹಾರ..

ಅಂತ್ಯಸಂಸ್ಕಾರ ಪರಿಹಾರ ಯೋಜನೆ ಮೃತರ ಕುಟುಂಬಕ್ಕೆ ಸಿಗಲಿದೆ ಒಂದು ಲಕ್ಷ 50,000 ಪರಿಹಾರ.. ಯಾವುದು ಈ ಯೋಜನೆ ಅಂತೀರಾ ಅದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೊಂದಾಯಿತ ವಿಭಾಗ. ಈ ಇಲಾಖೆಯು ತನ್ನ ಅಡಿಯಲ್ಲಿ ಬರತಕ್ಕಂತಹ ಎಲ್ಲಾ ಉದ್ಯೋಗಸ್ಥರಿಗೆ ಗುಡ್ ನ್ಯೂಸ್ ಅನ್ನು ಕೊಟ್ಟಿದೆ ಅಂತ ಹೇಳಬಹುದು. ಇದು ಕಟ್ಟಡ ಕಾರ್ಮಿಕರಿಗೆ ಅಚಾನಕ್ಕಾಗಿ ಅವರು ಮೃತಪಟ್ಟರೆ . ಅವರ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ನೀಡುವ ಒಂದು ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸಲಿಕ್ಕೆ ಈ ಇಲಾಖೆ ಸಜ್ಜಾಗಿದೆ. ಹಾಗೆ ಕಾರ್ಮಿಕರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಅಂತ್ಯಕ್ರಿಯೆ ವೆಚ್ಚ ಮತ್ತು ಪರಿಹಾರ ಧನವನ್ನು ನೀಡಲು ಈ ಯೋಜನೆ ನೆರವಾಗುತ್ತದೆ. ಅಂತ್ಯಕ್ರಿಯೆಯ ಪರಿಹಾರ ಧನ ನಾಲ್ಕು ಸಾವಿರ ರೂಪಾಯಿಗಳಾಗಿದ್ದು. ಹಾಗೂ ಪರಿಹಾರ ಹಣ ರೂ.1, 46,000 ಎಂಬ ಮೊತ್ತವನ್ನು ಕುಟುಂಬಕ್ಕೆ ಇಲಾಖೆ ನೀಡಲು ಮುಂದಾಗಿದೆ ಹಾಗೆ…

ಮುಂದೆ ಓದಿ..