ಸುದ್ದಿ 

ಶಿಗ್ಗಾಂವ ನಗರ ಈಗ ಅಂದರ್ ಬಾಹರ್ ಜೂಜಾಟದ ಹಬ್

ಶಿಗ್ಗಾಂವ ನಗರ ಈಗ ಅಂದರ್ ಬಾಹರ್ ಜೂಜಾಟದ ಹಬ್ಹ ಹಾವರಿ ಜಿಲ್ಲೆ ಶಿಗ್ಗಾಂವ ತಾಲ್ಲೂಕಿನಲ್ಲಿ ಇತ್ತೀಚಿಗೆ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿವೆ ಅಂದರ್ ಬಾಹರ್ ಜೂಜಾಟ ಪ್ರಕರಣಗಳು ಹೆಚ್ಚಿವೆ ಇದರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಸಾರ್ವಜನಿಕರ ಒತ್ತಾಯ ದಿನಾಂಕಃ 13/09/2025 ರಂದು ಸಂಜೆ: 05-00 ಗಂಟೆಗೆ ಶಿಗ್ಗಾವಿ ಪೊಲೀಸ ಠಾಣೆ ಹದ್ದಿನಲ್ಲಿ ಬರುವ ಮೈಲಾರಲಿಂಗೇಶ್ವರ ದೇವಸ್ಥಾನದ ಹಿಂದೆ ಸಾರ್ವಜನಿಕ ಸ್ಥಳದಲ್ಲೇ ಕೆಲವು ಜನರು ಸೇರಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೀಟು,ಅಂದರ-ಬಾಹರ ಜೂಜಾಟವನ್ನು ಆಡುತ್ತಿರುವ ಬಗ್ಗೆ ಅಲ್ಲಿನ (ಲೋಕಲಿಟ್ಸ್) ಸಾರ್ವಜನಿಕರು ಸ್ವತಃ ಶಿಗ್ಗಾಂವಿ ನಗರ ಪೊಲೀಸ್ ಠಾಣೆಗೆ ಅಂದರ ಬಾಹರ್ ಚಟುವಟಿಕೆಯ ವಿರುದ್ಧ ಆದಷ್ಟು ಬೇಗೆ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಒತ್ತಾಯಿಸಿದ್ದಾರೆ. ಜನರು ಇದರಿಂದ ಆರ್ಥಿಕವಾಗಿ,ಸಾಮಾಜಿಕವಾಗಿ ಜೀವನವನ್ನು ನಷ್ಟಕ್ಕೆ ತಳ್ಳುತ್ತಿರುವುದು ದುರ್ವಿಧಿ! ಇದನ್ನು ಪೊಲೀಸರು ಖಂಡಿಸಿ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಸಾರ್ವಜನಿಕರ ಒತ್ತಾಯದ…

ಮುಂದೆ ಓದಿ..
ಸುದ್ದಿ 

ಡಿ ಜೇ ಪರ್ಮಿಶನ್ ಇಲ್ಲ, ಡಿ ಜೇ ಹಚ್ಚಿ ಗಲಾಟೆ ,ಎಫ್ಐಆರ್ ದಾಖಲು

ಡಿ ಜೇ ಪರ್ಮಿಶನ್ ಇಲ್ಲ, ಡಿ ಜೇ ಹಚ್ಚಿ ಗಲಾಟೆ ,ಎಫ್ಐಆರ್ ದಾಖಲು ದಿನಾಂಕ; 10/09/2025 ರಂದು ರಾತ್ರಿ:- 07-00 ಗಂಟೆಯಿಂದ ರಾತ್ರಿ:- 11-30 ಗಂಟೆಯ ನಡುವಿನ ಅವಧಿಯಲ್ಲಿ ಶಿಗ್ಗಾವಿ ಪೊಲೀಸ ಠಾಣಾ ವ್ಯಾಪ್ತಿಯ ವನಹಳ್ಳಿ ಪ್ಲಾಟ್ ನ ಶ್ರೀ ಮಾರುತಿ ಕ್ರೀಡಾ ಯುವಕ ಸಂಘ ಸಮಿತಿ ಸದಸ್ಯರು ದೊಡ್ಡ ಸೌಂಡ್ ಬಾಕ್ಸ ಗಳನ್ನೂ ಹಾಕಿ ಡಿ.ಜೆ, ಸೌಂಡ ಸಿಸ್ಟಮ ಹಚ್ಚಿ ವನಹಳ್ಳಿ ಪಾಟ ಶ್ರೀ ಮಾರುತಿ ಕ್ರೀಡಾ ಯುವಕ ಸಂಘ ಸಮಿತಿಯು ಗಣಪತಿ ವಿಸರ್ಜನೆ ಮಾಡುವ ಕಾಲಕ್ಕೆ ಉದ್ದೇಶಪೂರ್ವಕವಾಗಿ ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಹೆಚ್ಚಿನ ಧ್ವನಿ ಹೊರಡಿಸುವ ಡಿ.ಜೆ. ಸೌಂಡ್ ಬಾಕ್ಷಗಳನ್ನು ಬಳಸಿಕೊಂಡು ಹಾಡುಗಳನ್ನು ಹಚ್ಚಿ ಹೆಚ್ಚಿನ ಶಬ್ದವನ್ನುಂಟು ಮಾಡಿ ಸಾರ್ವಜನಿಕರಿಗೆ ತೊಂದರೆಯುಂಟು ಮಾಡಿದ್ದರ ವಿರುದ್ಧ ವನಹಳ್ಳಿ ಗಜಾನನ ಕಮಿಟಿ ವಿರುದ್ಧ ಶಿಗ್ಗಾಂವ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. : ವರದಿಪ್ರಮೋದ್ ಜನಗೇರಿಹಾನಗಲ್ ತಾಲೂಕ್…

ಮುಂದೆ ಓದಿ..
ಸುದ್ದಿ 

ಸವಣೂರು-ಲಕ್ಷ್ಮೇಶ್ವರ ರಸ್ತೆ ಲಾರಿ ಡಿಕ್ಕಿ ವ್ಯಕ್ತಿ ಸ್ಥಳದಲ್ಲೇ ದುರ್ಮರಣ

ಸವಣೂರು-ಲಕ್ಷ್ಮೇಶ್ವರ ರಸ್ತೆ ಲಾರಿ ಡಿಕ್ಕಿ ವ್ಯಕ್ತಿ ಸ್ಥಳದಲ್ಲೇ ದುರ್ಮರಣ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಮುಖ್ಯರಸ್ತೆ ಮುಂಜಾನೆ ವಾಕಿಂಗ್ ಹೋಗುತ್ತಿರುವ ವ್ಯಕ್ತಿ ಮೇಲೆ ಲಾರಿ ಹಾಯಿಸಿದ ಕೊಲೆ ಆರೋಪ ದಿನಾಂಕಃ 14-09-2025 ರಂದು ಮುಂಜಾನೆ 5-30 ಗಂಟೆಯ ಸುಮಾರಿಗೆ ಇದರಲ್ಲಿ ಪೊಲೀಸ್ ಎಫ್ಐಆರ್ ದಾಖಲು ಮಾಡಿದ ವ್ಯಕ್ತಿಯಾದ ಫಕ್ಕೀರಪ್ಪ ಬಸವರಾಜ ಕೆಮ್ಮಣಕೇರಿ ಮತ್ತು ಅವರ ಸಹೋದರರಾದ ರಾಜೇಶ ಬಸಪ್ಪ ಕೆಮ್ಮಣಕೇರಿ ಇಬ್ಬರು ಸೇರಿ ಪ್ರತಿ ದಿನದಂತೆ ಸವಣೂರ-ಲಕ್ಷ್ಮೀಶ್ವರ ಮುಖ್ಯರಸ್ತೆಯ ಸವಣೂರ ಬಸ್ ನಿಲ್ದಾಣದ ಮುಂದೆ ವಾಕಿಂಗ್ ಹೊರಟಿದ್ದಾಗ ಲಕ್ಷ್ಮೀಶ್ವರ ಕಡೆಯಿಂದ ಒಂದು ಟಿಪ್ಪರ ಲಾರಿ ನಂಬರ ಕೆಎ-26 ಬಿ-4628 ನೇದ್ದನ್ನು ಜೋರಾಗಿ ಮತ್ತು ನಿರ್ಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ರಾಜೇಶ ಇವರಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಲಾರಿಯನ್ನು ಅವರ ಮೇಲೆ ಹತ್ತಿಸಿ ಅವರು ಸ್ಥಳದಲ್ಲಿಯೇ ಮರಣ…

ಮುಂದೆ ಓದಿ..
ಅಂಕಣ 

ಬದುಕಿನ ಸವಿಯುಣ್ಣಲು ಅನುಭಾವದ ಅಣಿಮುತ್ತುಗಳು…..

ಬದುಕಿನ ಸವಿಯುಣ್ಣಲು ಅನುಭಾವದ ಅಣಿಮುತ್ತುಗಳು….. ಸಂಕೀರ್ಣ ಜೀವನವನ್ನು ಸರಳಗೊಳಿಸಿಕೊಳ್ಳುವ ಅತ್ಯಂತ ಸಹಜ ಮತ್ತು ಸುಲಭ ವಿಧಾನಗಳು.( ರುಚಿಕರವಾದ ಅಡುಗೆ ಮಾಡುವ ಪಾಕ ಪ್ರಾವಿಣ್ಯ ವಿದ್ಯೆಯಂತೆ. ದಯವಿಟ್ಟು ಪ್ರಯತ್ನಿಸಿ ) ವಿಷಯ ಯಾವುದೇ ಇರಲಿ ಕನಿಷ್ಠ ಒಳ್ಳೆಯ ಮಾತನ್ನಾದರು ಆಡಿದರೆ ಎಷ್ಟೋ ಸಮಸ್ಯೆಗಳ ದುಷ್ಪರಿಣಾಮಗಳು ಕಡಿಮೆಯಾಗುತ್ತದೆ…… ದ್ವೇಷವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ ,ಪ್ರೀತಿಯನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ . ಕೋಪವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ ,ತಾಳ್ಮೆಯನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ . ಸ್ವಾರ್ಥವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ ,ತ್ಯಾಗವನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ. ಗಲಾಟೆಗಳನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ ,ಸ್ನೇಹಿತರನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ . ಭ್ರಮೆಗಳನ್ನು ಸ್ವಲ್ಪ ದೂರ ಮಾಡೋಣ,ವಾಸ್ತವಕ್ಕೆ ಸ್ವಲ್ಪ ಹತ್ತಿರವಾಗೋಣ. ಬೂಟಾಟಿಕೆ ಸ್ವಲ್ಪ ಕಡಿಮೆ ಮಾಡೋಣ,ನ್ಯೆಜತೆಗೆ ಸ್ವಲ್ಪ ಹೆಚ್ಚು ಒತ್ತು ಕೊಡೋಣ. ಎಲ್ಲವನ್ನೂ ನಿಮ್ಮ ಕುಟುಂಬಕ್ಕಾಗಿ ಮಾಡಿ,ಆದರೆ ಸಮಾಜಕ್ಕಾಗಿ ಸ್ವಲ್ಪವಾದರೂ ಕೊಡಿ. ಎಲ್ಲವೂ ನಿಮಗಾಗಿ,ನೀವು…

ಮುಂದೆ ಓದಿ..
ಸುದ್ದಿ 

ಅಕ್ರಮ ಮಾರಾಟಕ್ಕಾಗಿ ಗೋವು ಸಾಗಣೆ ಮಾಡುತ್ತಿದ್ದ ವೆಹಿಕಲ್, ದೂರು ದಾಖಲು

ಅಕ್ರಮ ಮಾರಾಟಕ್ಕಾಗಿ ಗೋವು ಸಾಗಣೆ ಮಾಡುತ್ತಿದ್ದ ವೆಹಿಕಲ್, ದೂರು ದಾಖಲುಹಾವೇರಿ ಜಿಲ್ಲೆ ಹಾನಗಲ್ ತಾಲುಕು ಆಡುರು ಪೊಲೀಸ ಠಾಣಾ ವ್ಯಾಪ್ತಿಯ ನರೇಗಲ್ ನಿಂದಾ ಸವಣೂರಿನ ಕಡೆ ಅಕ್ರಮ ಗೋವುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದದ್ದು ಕಂಡುಬಂದಿದೆ.ದಿನಾಂಕ:-09-09-2025 ರಂದು ಮದ್ಯಾಹ್ನ 02-00 ಘಂಟೆಯ ಸುಮಾರಿಗೆ ಒಬ್ಬ ಅಶೋಕ ಲೇಲ್ಯಾಂಡ್ ಮಿನಿ ಗೂಡ್ಸ್ ಗಾಡಿಯ ಚಾಲಕ ತನ್ನ ಗೂಡ್ಸ್ ಗಾಡಿಯಲ್ಲಿ ಮಿತಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳನ್ನು ತುಂಬಿಕೊಂಡಿದ್ದು ಅವುಗಳಿಗೆ ಹಿಂಸೆ ಆಗುವ ರೀತಿಯಲ್ಲಿ ಗಾಡಿಯಲ್ಲಿ ತಿನ್ನಲು ಅವುಗಳಿಗೆ ಮೇವನ್ನು ಹಾಕದೆ ಒಂದರ ಮೇಲೆ ಒಂದರಂತೆ ಹೇರಿ ಅವುಗಳ ಉಸಿರಾಟಕ್ಕೂ ಸಹ ತೊಂದರೆಯಾಗುವಂತೆ ಹಿಂಸಾತ್ಮಕವಾಗಿ ಹೇರಿಕೊಂಡು ಅವುಗಳನ್ನು ಕಡಿದು ಮಾಂಸದ ವ್ಯಾಪಾರ ಮಾಡುವದಕ್ಕಾಗಿ ಅನಧೀಕೃತವಾಗಿ ನರೇಗಲ್ಲ ಮುಖಾಂತರ ಸವಣೂರ ಕಡೆಗೆ ಸಾಗಣೆ ಮಾಡುತ್ತಿದ್ದರು ಇದನ್ನು ನೋಡಿದ ಕೆಲವು ಗ್ರಾಮಸ್ಥರು ಈ ವಾಹನದ ಮೇಲೆ ದಾಳಿ ಮಾಡಿ ಜಾನುವಾರು ಗಳನ್ನು ಸಾಗಾಟ ಮಾಡುತ್ತಿರುವವರ ಮೇಲೆ ಸೂಕ್ತ…

ಮುಂದೆ ಓದಿ..
ಅಂಕಣ 

ಮೊಸಳೆ ಹೊಸಹಳ್ಳಿಯ ಭೀಕರ ಅಪಘಾತ……..

ಮೊಸಳೆ ಹೊಸಹಳ್ಳಿಯ ಭೀಕರ ಅಪಘಾತ…….. ಭಾರತ ದೇಶದಲ್ಲಿ ಅತ್ಯಂತ ತುರ್ತಾಗಿ ಆಗಬೇಕಾಗಿರುವ ಕೆಲಸಗಳಲ್ಲಿ ಈ ಕ್ಷಣದ ಪ್ರಮುಖ ವಿಷಯವೆಂದರೆ ವಾಹನ ಚಾಲನಾ ಪರವಾನಗಿ ನೀಡುವ ರೀತಿ ನೀತಿ ನಿಯಮಗಳನ್ನು ಪುನರ್ ಪರಿಶೀಲಿಸಬೇಕಾಗಿದೆ. ಅದನ್ನು ಕೇವಲ ಆರ್ ಟಿ ಓ ಅಧಿಕಾರಿಗಳು ಮಾತ್ರ ನಿರ್ಧರಿಸುವ ಹಂತ ಮೀರಿ ಹೋಗಿದೆ. ಭಾರತದಲ್ಲಿ ಸರಾಸರಿ ಪ್ರತಿ ಮೂರು ನಿಮಿಷಕ್ಕೆ ಒಬ್ಬರು ಅಪಘಾತದಿಂದ ಸಾಯುತ್ತಿದ್ದಾರೆ. ಇನ್ನೆಷ್ಟೋ ಜನ ಪ್ರತಿ ಕ್ಷಣ ಗಾಯಾಳುವಾಗಿ ಬದುಕನ್ನೇ ದುರಂತಮಯವಾಗಿಸಿಕೊಳ್ಳುತ್ತಿದ್ದಾರೆ. ಇದರ ಪರೋಕ್ಷ ಪರಿಣಾಮ ಅನೇಕ ಕುಟುಂಬಗಳು ತೊಂದರೆಗೆ ಸಿಲುಕಿವೆ. ಹಾಗೆಯೇ ದೇಶದ ಸಾಮಾಜಿಕ ಮತ್ತು ಆರ್ಥಿಕತೆಯ ಮೇಲೆ ಬಹಳ ದೊಡ್ಡ ದುಷ್ಪರಿಣಾಮ ಬೀರುತ್ತಿದೆ. ಜೊತೆಗೆ ರಸ್ತೆಯಲ್ಲಿ ಪ್ರಯಾಣಿಸುವ ವ್ಯಕ್ತಿಯ ಮಾನಸಿಕತೆಯೂ ಕುಸಿಯುತ್ತಿದೆ. ಏಕೆಂದರೆ ಮನೆಯಿಂದ ಆಚೆ ಹೋದ ವ್ಯಕ್ತಿ ಮತ್ತೆ ಮನೆಗೆ ವಾಪಸ್ ಬರುವವರೆಗೆ, ಅದರಲ್ಲೂ ಮುಖ್ಯವಾಗಿ ದೂರದ ಪ್ರಯಾಣವಿದ್ದಾಗ ಮನೆಯವರಿಗೆ ಎದೆ ಡವ ಡವ ಬಡಿದುಕೊಳ್ಳುತ್ತಿರುತ್ತದೆ.…

ಮುಂದೆ ಓದಿ..
ಸುದ್ದಿ 

ಟ್ರ್ಯಾಕ್ಟರ್ ಗೆ ಲಾರಿ ಡಿಕ್ಕಿ ಓರ್ವ ವ್ಯಕ್ತಿ ಸಾವು

ಟ್ರ್ಯಾಕ್ಟರ್ ಗೆ ಲಾರಿ ಡಿಕ್ಕಿ ಓರ್ವ ವ್ಯಕ್ತಿ ಸಾವು ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಏನ್ ಹೆಚ್ ಹೈವೆ ಬಿಸನಹಳ್ಳಿ ಲ್ಲಿ ಹೋಗುತ್ತಿರುವ ಟ್ರ್ಯಾಕ್ಟರ್ ಗೆ ಲಾರಿ ಡಿಕ್ಕಿ ಹೊಡೆದ ದುರಂತ ಘಟನೆ ನಡೆದಿದೆ ಇದರಲ್ಲಿಯ ದೂರುದಾರ ವ್ಯಕ್ತಿಆದ ಗಂಗಾಧರ ಮಲ್ಲಪ್ಪ ಕೋರಿ ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ತಾನು ಚಲಾಯಿಸುತ್ತಿದ್ದ ಟ್ರಾಕ್ಟರ್ ಇಂಜಿನ ನಂ: ಕೆಎ-35/ಟಿಬಿ-2995 ನೇದಕ್ಕೆ ಒಂದು ಟ್ರೈಲರ್ ಜೋಡಿಸಿಕೊಂಡು ಟ್ರಾಕ್ಟ‌ರ್ ಇಂಜಿನದ ಮಟಗಡ್ ಮೇಲೆ ಇದರಲ್ಲಿಯ ಮೃತನಾದ ಹಾಲೇಶ ಮತ್ತು ಗಾಯಾಳು ಆದ ಕುಂಬಳ ಚಂದ್ರಪ್ಪ ಗುಮ್ಮಗೊಳ್ ಇವರಿಗೆ ಕೂಡ್ರಿಸಿಕೊಂಡು ದಿನಾಂಕ: 25-08-2025 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ಎನ್.ಎಚ್-48 ರಸ್ತೆಯ ಬಿಸನಹಳ್ಳಿ, ಬ್ರಿಡ್ಜ್ ಮೇಲೆ ಹೋಗುತ್ತಿದ್ದಾಗ ಇದರಲ್ಲಿಯ ಆರೋಪಿಆದ ಸುರೇಶ್ ಬಿಮಣ್ಣ ತಾನು ಚಲಾಯಿಸುತ್ತಿದ್ದ ಟಾಟಾ ಇಂಟ್ರಾ ಕಂಪನಿಯ ಗುಡ್ಸ್ ಟ್ರಕ್ ವಾಹನವನ್ನಾ ಅತೀ…

ಮುಂದೆ ಓದಿ..
ಸುದ್ದಿ 

ಸವಣೂರಿನ, ಹೆಸರೂರು ಗ್ರಾಮದಲ್ಲಿ ವ್ಯಕ್ತಿ ಮೇಲೆ ಕೊಲೆ ಬೆದರಿಕೆ ಏಫ್ ಐ ಆರ್ ದಾಖಲು

ಸವಣೂರಿನ, ಹೆಸರೂರು ಗ್ರಾಮದಲ್ಲಿ ವ್ಯಕ್ತಿ ಮೇಲೆ ಕೊಲೆ ಬೆದರಿಕೆ ಏಫ್ ಐ ಆರ್ ದಾಖಲು ಹಾವೇರಿ ಜಿಲ್ಲೆ ಸವಣೂರು ತಾಲೂಕ್ ಹೆಸರು ಗ್ರಾಮದಲ್ಲಿ ಎರಡು ಗುಂಪುಗಳ ಮದ್ಯ ಜಗಳವಾಗಿ ಕೊಲೆ ಬೆದರಿಕೆ ಹಾಕಿರುವ ಘಟನೆ ಸಂಭವಿಸಿದೆ. ಪೊಲೀಸರಿಗೆ ಕಂಪ್ಲೇಂಟ್ ನೀಡಿದ ಸಿದ್ದಾರೂಢ ಅಯ್ಯಪ್ಪ ಸುಣಗಾರ ಎನ್ನುವ ವ್ಯಕ್ತಿಯೂ ದಿನಾಂಕ 07-09-2025 ರಂದು ಹೆಸರೂರ ಗ್ರಾಮದ ಗೋಮಾಳ(ಖಾಲಿ) ಜಮೀನಿನಲ್ಲಿ ಇರುವ ಮಣ್ಣನ್ನು ಹೇರಲು ಹೋದಾಗ ಆ ಸಮಯದಲ್ಲಿ ಅದೇ ಊರಿನ ಇನ್ನೊಂದು ಗ್ಯಾಂಗ್ ಜೊತೆ ಜಗಳವಾಗಿದ್ದು ನಂತರ ಅದೇ ವಿಷಯಕ್ಕೆ ಸಂಬಂದಪಟ್ಟಂತೆ ದಿನಾಂಕಃ 07-09-2025 ರಂದು ಬೆಳಿಗೆ 9-40 ಗಂಟೆಯ ಸುಮಾರಿಗೆ ಹೆಸರೂರ ಗ್ರಾಮದ ಅರಳಿಮರದ ಚಹ ಅಂಗಡಿ ಹತ್ತಿರ ಇದರಲ್ಲಿ ನಮೂದ ಮಾಡಿದ ಆರೋಪಿತರಾದ ಪ್ರಕಾಶ್ ಲಮಾಣಿ,ಚಂದ್ರ ಲಮಾಣಿ,ಲಾಚಪ್ಪ ಲಮಾಣಿ ಇವರು ಸಿದ್ದಾರೂಢ ಅಯ್ಯಪ್ಪ ಸುಣಗಾರ ಹಾಗೂ ಅವರ ಕೆಲ ಸಹೋದರರಿಗೆ ಅವಾಚ್ಯವಾಗಿ ಲೆ ಬೊಸಡಿಮಕ್ಕಳ ನಿಮ್ಮ…

ಮುಂದೆ ಓದಿ..
ಅಂಕಣ 

ಕಲ್ಯಾಣ ಕರ್ನಾಟಕ ( ಹೈದರಾಬಾದ್ ಕರ್ನಾಟಕ ) ವಿಮೋಚನಾ ದಿನ ಸೆಪ್ಟೆಂಬರ್ 17………

ಕಲ್ಯಾಣ ಕರ್ನಾಟಕ ( ಹೈದರಾಬಾದ್ ಕರ್ನಾಟಕ ) ವಿಮೋಚನಾ ದಿನ ಸೆಪ್ಟೆಂಬರ್ 17……… ನನ್ನ ದೃಷ್ಟಿಯಲ್ಲಿ ವೈಯಕ್ತಿಕವಾಗಿ ಕಲ್ಯಾಣ ಕರ್ನಾಟಕ ಇನ್ನೂ ಶಾಪಗ್ರಸ್ತವಾಗೇ ಇದೆ. ಸ್ವಾತಂತ್ರ್ಯ ಹೊರತುಪಡಿಸಿ ಜೀವನಮಟ್ಟ ಸುಧಾರಣೆಯ ವಿಮೋಚನೆ ತೃಪ್ತಿಕರವಾಗಿಲ್ಲ….. ಇದನ್ನು ಅರ್ಥಮಾಡಿಕೊಳ್ಳಲು ಕರ್ನಾಟಕದ ಭೌಗೋಳಿಕ ಪ್ರದೇಶಗಳ ಚಿತ್ರಣದ ಮಾಹಿತಿ ಬೇಕಾಗುತ್ತದೆ….. ಭಾರತದ ಶ್ರೀಮಂತ ರಾಜ್ಯಗಳಲ್ಲಿ ಕರ್ನಾಟಕ ಅತ್ಯಂತ ಪ್ರಮುಖವಾದದ್ದು. GST ಸಂಗ್ರಹದಲ್ಲಿ ದೇಶದ ಎರಡನೇ ಅತಿದೊಡ್ಡ ಕೊಡುಗೆ ನೀಡುತ್ತಿದೆ. ಇಲ್ಲಿನ ಶಾಸಕರ ಸರಾಸರಿ ಆದಾಯ ದೇಶದಲ್ಲೇ ಅತಿ ಹೆಚ್ಚು. ಕರ್ನಾಟಕದ ರಾಜಧಾನಿ ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದೆ. ಕರ್ನಾಟಕವನ್ನು ಸರಳವಾಗಿ ಇಲ್ಲಿನ ಭೌಗೋಳಿಕತೆಯ ಆಧಾರದ ಮೇಲೆ ಐದು ವಿಭಾಗಗಳಾಗಿ ವಿಂಗಡಿಸಬಹುದು….1) ಮಲೆನಾಡು ಕರ್ನಾಟಕ2) ಮೈಸೂರು ಕರ್ನಾಟಕ3) ಕರಾವಳಿ ಕರ್ನಾಟಕ4) ಕಿತ್ತೂರು (ಮುಂಬಯಿ) ಕರ್ನಾಟಕ5) ಕಲ್ಯಾಣ (ಹೈದರಾಬಾದ್) ಕರ್ನಾಟಕ. ಗಾಳಿ ನೀರು ಆಹಾರ ಶಿಕ್ಷಣ ಆರೋಗ್ಯ ಸಾರಿಗೆ ಸಂಪರ್ಕ ರಸ್ತೆ ಮನೆ ಪ್ರಾಕೃತಿಕ ವಾತಾವರಣ…

ಮುಂದೆ ಓದಿ..
ಸುದ್ದಿ 

ಸವಣೂರೂ-ಯಲವಗಿ ಮಾರ್ಗ ಮಧ್ಯ ಬೈಕ್ ಕಾರ್ ಆಕ್ಸಿಡೆಂಟ್

ಸವಣೂರೂ-ಯಲವಗಿ ಮಾರ್ಗ ಮಧ್ಯ ಬೈಕ್ ಕಾರ್ ಆಕ್ಸಿಡೆಂಟ್ ಹಾವೇರಿ ಜಿಲ್ಲೆ ಸವಣೂರು ತಾಲುಕು ಯಲವಿಗಿ ಬೈಕ್ ಕಾರ್ ಗೆ ಆಕ್ಸಿಡೆಂಟ್ ಘಟನೆ ಸಂಭವಿಸಿದೆ ದಿನಾಂಕ: 10-09-2025 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಯಲವಿಗಿ ಗ್ರಾಮದ ಪೆಟ್ರೋಲ ಬಂಕ ಕಡೆಯಿಂದ ಯಲವಿಗಿಯಿಂದ ಸವಣೂರ ಕಡೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಯಲವಾಗಿ ಗ್ರಾಮದ ಕಾರ್ತಿಕ್ ಪರಮೇಶಪ್ಪ ಹುಲಗೂರ ಇತನು ತನ್ನ ಬೈಕ್ ನಂಬರ ಕೆಎ-27/ಇಎಮ್-6324 ನೇದ್ದನ್ನು ಪೆಟ್ರೋಲ ಬಂಕ ಕಡೆಯಿಂದ ಅತೀ ಜೋರಾಗಿ, ನಿರ್ಲಕ್ಷ್ಯ, ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಮುಖ್ಯ ರಸ್ತೆಯಲ್ಲಿ ವಾಹನಗಳು ಬರುವದನ್ನು ಗಮನಿಸದೇ ಯಲವಿಗಿಯಿಂದ ಸವಣೂರ ಕಡೆಗೆ ಹೋಗುತ್ತಿದ್ದ ಕಾರ ನಂಬರ ಕೆಎ-04/ಎಮ್.ಯು-7365 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತ ಪಡಿಸಿ, ತಾನು ಗಾಯ, ನೋವು ಹೊಂದಿದ್ದಲ್ಲದೇ ಕಾರಿನಲ್ಲಿದ್ದ, ವ್ಯಕ್ತಿಗಳಾದ ಸಿದ್ದರಾಮಪ್ಪ ಈಶ್ವರಪ್ಪ ಸಂಶಿ, ಮೆಹಬೂಬ ಬಾಬುಸಾಬ ಸಿದ್ಧಿ, ರಾಜೇಸಾಬ ಸಾಬೀರ ಖಾದರಸಾಬ ವಾಲೀಕಾರ ಇವರಿಗೂ ತೀವ್ರ…

ಮುಂದೆ ಓದಿ..