ಸುದ್ದಿ 

ಹಾನಗಲ್ ನಲ್ಲಿ ಅಕ್ರಮ ಗಾಂಜಾ ಮಾರಾಟ.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಾದ್ಯಂತ ಇತ್ತೀಚಿಗೆ ಗಾಂಜಾ ಹಾವಳಿ ಹೆಚ್ಚಾಗಿದ್ದು ಆಗಸ್ಟ್ 17ನೆ ತಾರಿಕಿನಂದು ಹಾನಗಲ್ ತಾಲೂಕಿನ ಅಕ್ಕಿಆಲೂರಿನ ಬಳಿ ದೊಡ್ಡ ಪ್ರಮಾಣದ ಅಕ್ರಮ ಗಾಂಜಾ ಪತ್ತೆಯಾಗಿದೆ 17/08/2025 ರಂದು ಹಾನಗಲ್ ತಾಲೂಕಿನ ಅಕ್ಕಿಆಲೂರು ಗ್ರಾಮದ ದನದ ಮಾರುಕಟ್ಟೆಯ ಹತ್ತಿರದ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಸಾಯಂಕಾಲ 7ಗಂಟೆಯ ಸುಮಾರಿಗೆ ಓಪನ್ ಮಾರ್ಕೆಟ್ ಗಾಂಜಾ ದಂದೆ ಬಯಲಿಗೆ ಬಂದಿದೆ ಅದರಲ್ಲಿ ಮುಖ್ಯವಾಗಿ ಇದ್ದವರು ಮುಬಾರಕ್ ಗೌಸ್ಮುದ್ದಿನ ಮಕಂದ್ ರ್,ಮುಕ್ತಿಯಾರ್ ಮೊಹಮದಜಾಫರ್ ಮಕಂದರ್, ಮೊಹಮದ್ಫ್ಜಲ್ ನಿಜಾಮುದ್ದೀನ್ ಪೆಂಡಾರಿ, ಮೊಹಮದ್ ಸಾದಿಕ್ ಅನ್ವರಸಾಬ್ ಸುಂಕದಈ ಮೇಲೆ ಕಾಣಿಸುವ 4 ಆರೋಪಿಗಳು ಪ್ರಮುಖವಾಗಿ ಅಕ್ರಮವಾಗಿ ಓಪನ್ ಮಾರ್ಕೆಟ್ ರೀತಿ ಗಾಂಜಾ ಮಾರಾಟ ಮಾಡುತ್ತಿದ್ದದ್ದು ಇವರು 3ಕೆಜಿ 78ಗ್ರಾಂ ಅಂದರೆ 1 ಲಕ್ಷ 20 ಸಾವಿರ ರೂಪಾಯಿ ಗಾಂಜಾ ಮಾಲು ಮಾರಾಟ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ ಇದರ ಮುಂದಾಲೋಚನೆ ತಿಳಿದ ಹಾನಗಲ್ ನಗರದ ಪೊಲೀಸರು ತಕ್ಷಣ…

ಮುಂದೆ ಓದಿ..
ಸುದ್ದಿ 

ಹಾನಗಲ್ಲಿನ ಇಂದಿರಾನಗರದಲ್ಲಿ ₹5.90 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಹಾನಗಲ್ಲ: ನಗರದ ಇಂದಿರಾನಗರದಲ್ಲಿ ಕಳ್ಳತನದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮನೆಯೊಂದರ ಬೀಗ ಮುರಿದು ಸುಮಾರು ₹5.90 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕಳ್ಳರು ದೋಚಿದ್ದಾರೆ. ಈ ಘಟನೆಯು ಆಗಸ್ಟ್ 10 ರ ಮಧ್ಯಾಹ್ನ 3:30 ರಿಂದ ಆಗಸ್ಟ್ 11 ರ ಮುಂಜಾನೆ 11:00 ಗಂಟೆಯ ನಡುವೆ ನಡೆದಿದೆ ಎಂದು ವರದಿಯಾಗಿದೆ. ಮನೆ ಮಾಲೀಕರು ಮನೆಯಲ್ಲಿ ಇಲ್ಲದ ಸಮಯವನ್ನು ಬಳಸಿಕೊಂಡು ಕಳ್ಳರು ಈ ಕೃತ್ಯ ಎಸಗಿದ್ದಾರೆ. ಕಳ್ಳರು ಮನೆಯೊಳಗೆ ನುಗ್ಗಿ, ಕೋಣೆಯಲ್ಲಿದ್ದ ಬೀರು ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ಅದರಲ್ಲಿ ಇರಿಸಿದ್ದ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಕಳುವಾದ ವಸ್ತುಗಳಲ್ಲಿ ವಿವಿಧ ತೂಕದ ಚಿನ್ನದ ನೆಕ್ಲೇಸ್, ಕಿವಿಯೋಲೆಗಳು, ಉಂಗುರಗಳು, ಮಾಂಗಲ್ಯ ಸೂತ್ರ ಮತ್ತು ಚೈನ್‌ಗಳು ಸೇರಿವೆ. ಒಟ್ಟು 105 ಗ್ರಾಂ ಚಿನ್ನದ ಆಭರಣಗಳ ಮೌಲ್ಯ ₹5.65 ಲಕ್ಷ ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ, ಸುಮಾರು 350…

ಮುಂದೆ ಓದಿ..
ಸುದ್ದಿ 

ಆಸ್ತಿ ವಿಷಯದಲ್ಲಿ ಹೆಂಡತಿಯ ಮೇಲೆ ಅನುಮಾನ ಮತ್ತು ಲೈಂಗಿಕ ಹಲ್ಲೆ ಯತ್ನ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಪುಟ್ಟರಾಜ ಗವಾಯಿಗಳ ನಗರದಲ್ಲಿ ಸುಮಾರು ವರ್ಷದಿಂದ ಪುಷ್ಪಾ ಅಶೋಕ್ ಅಂಗಡಿ ಎನ್ನುವ ಮಹಿಳೆ ಅಲ್ಲೇ ಹಲವು ವರ್ಷದಿಂದ ಶಿಕ್ಷಕಿ ವೃತಿ ಮಾಡಿಕೊಂಡಿರುತ್ತಾಳೆ ಅವಳ ಗಂಡನಾದ ಅಶೋಕ್ ಕೊಟ್ರಪ್ಪ ಅಂಗಡಿ ಅವಳನ್ನು ಬಿಟ್ಟು ದೂರ ಇರುತ್ತಾನೆ ಆದ್ರೆ ದಿಡಿರ ಅಂತ ಆಗಸ್ಟ್ 15 ರ ರಾತ್ರಿ 8 ಗಂಟೆಗೆ ಬಂದು ಆಸ್ತಿ ವಿಷಯದ ಹಂಚಿಕೆಯಲ್ಲಿ ಆ ಮಹಿಳೆ ರಾಣೆಬೆನ್ನೂರು ಕೋರ್ಟ್ ನಲ್ಲಿ ಕೇಸ್ ಮಾಡಿರುತ್ತಾಳೆ ಅವನು ಅದೇ ಕಾರಣ ಮುಂದಿಟ್ಟುಕೊಂಡು ಅವಳನ್ನು ಹೊಡೆದು ನೀನು ಜಾತಿಗೆಟ್ಟವಳು ನಿನಗೂ ನನ್ನ ಜಾತಿಗೂ ಸರಿ ಹೋಗಲ್ಲ ನೀನು ನಿನ್ನ ಮತ್ತೆ ನಿನ್ನ ಊರಿಗೆ ಬೆಂಕಿ ಹಚ್ಚುತ್ತೇನೆ ಅಂತ ಬೆದರಿಕೆ ಹಾಕಿ ಬಂದಿದ್ದಾನೆ ಇದರ ಬಗ್ಗೆ ಪುಷ್ಪಾ ಅಂಗಡಿ ಎನ್ನುವ ಅವನ ಹೆಂಡತಿಯೂ ಪೊಲೀಸರಿಗೆ ಮಾಹಿತಿ ತಿಳಿಸಿ ದೂರು ನೀಡಿರುತ್ತಾಳೆ ಇದರ ಬಗ್ಗೆ ಹಾನಗಲ್ ನಗರದ ಪೊಲೀಸರು…

ಮುಂದೆ ಓದಿ..
ಸುದ್ದಿ 

ಸವಣೂರಿನಲ್ಲಿ ಎರಡು ಬೈಕ್‌ಗಳ ನಡುವೆ ಡಿಕ್ಕಿ : ಒಬ್ಬರಿಗೆ ಗಾಯ

ಆಗಸ್ಟ್ 9 ನೆಯ ತಾರಿಕಿನಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸವಣೂರ ಪಟ್ಟಣದ ಹಳೆ ಪುರಸಭೆ ಕಾರ್ಯಾಲಯದ ಎದುರು ಎರಡು ಮೋಟಾರ್‌ಸೈಕಲ್‌ಗಳ ನಡುವೆ ಮಾರಾ ಮಾರಿ ಡಿಕ್ಕಿ ಸಂಭವಿಸಿದೆ. ಮಾಹಿತಿಯ ಪ್ರಕಾರ, ಮೊದಲನೆ ಬೈಕ್ ಸವಾರನಾದ ಮಂಜು ಕಲ್ಲಪ್ಪ ಸದರ್ ತನ್ನ ಕೆಎ-27/ಇಟಿ-6384 ನಂಬರಿನ ಬೈಕ್‌ನ್ನು ಸವಣೂರ ಮಾರುಕಟ್ಟೆಯಿಂದ ಪೊಲೀಸ್ ಠಾಣೆ ಕಡೆಗೆ ನಿರ್ಲಕ್ಷ್ಯವಾಗಿ ಹಾಗೂ ವೇಗವಾಗಿ ಚಲಾಯಿಸುತ್ತಿದ್ದಾನೆ. ಇದೇ ವೇಳೆ, ಎರಡನೇ ಬೈಕ್ ಸವಾರನಾದ ಸಿದ್ದಯ್ಯ ಹಬ್ಬುರ್ಮಟ್ ತನ್ನ ಕೆಎ-27/ವೈ-3811 ನಂಬರಿನ ಬೈಕ್‌ನ್ನು ಹಳೆ ಪುರಸಭೆ ಕಚೇರಿಯಿಂದ ರಸ್ತೆಯತ್ತ ನಿರ್ಲಕ್ಷ್ಯವಾಗಿ ಹಾಗೂ ವೇಗವಾಗಿ ಚಲಾಯಿಸಿಕೊಂಡು ಬಂದಿದ್ದಾನೆ ಇಬ್ಬರು ನಿರ್ಲಕ್ಷ್ಯದಿಂದ ವಾಹನ ಚಲಾಯಿಸುತ್ತಿದ್ದರಿಂದ ರಸ್ತೆಯಲ್ಲಿ ಎರಡೂ ಬೈಕ್‌ಗಳ ನಡುವೆ ಮಾರ ಮಾರಿ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಸಿದ್ದಯ್ಯ ರಾಚಯ್ಯ ಗಬ್ಬರ್ಮಟ್ ಎನ್ನುವ ವ್ಯಕ್ತಿಗೆ ಗಾಡಿಡಿಕ್ಕಿ ಹೊಡೆದ ರಭಸಕ್ಕೆ ಪೆಟ್ಟುಗಳಾಗಿವೆಈ ಕುರಿತು ಅದನ್ನು ಪ್ರತ್ಯಕ್ಷವಾಗಿ ನೋಡಿದ್ದ ಶಿವಯ್ಯ…

ಮುಂದೆ ಓದಿ..
ಸುದ್ದಿ 

ಸವಣೂರಿನ ಬಳಿ ಬಿಕರ ಲಾರಿ ಡಿಕ್ಕಿ ಗಂಭೀರ ಅಪಘಾತ

ಹಾವೇರಿ ಜಿಲ್ಲೆ ಸವಣೂರಿನ ರಾಷ್ಟ್ರೀಯ ಹೆದ್ದಾರಿ (NH 48)ನಲ್ಲಿ ಆಗಸ್ಟ್ 13ರಂದು ಬೆಳಿಗ್ಗೆ ಸುಮಾರು 6.30 ಗಂಟೆಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಪೊಲೀಸರ ವರದಿ ಪ್ರಕಾರ ಲಾರಿ ಓಡಿಸುತ್ತಿದ್ದವರು ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹೊಸರು ಗ್ರಾಮದ ಮೂಲದ ಮುತ್ತಪ್ಪ ಹನುಮಂತಪ್ಪ ಹುಲ್ಯಾಳ ಎಂಬ ಲಾರಿ ಚಾಲಕ (KA 19 ED 9396, ಟಾಟಾ ಇಂಟಾ ಲಾರಿ) ಮತ್ತು ಇನ್ನಿತರ ಇಬ್ಬರೂ ಕಿನ್ನರಗಳು ಇದ್ದರು ಹಾವೇರಿಯಿಂದ ಹುಬ್ಬಳ್ಳಿಯ ದಿಕ್ಕಿನಲ್ಲಿ ಈ ವಾಹನ ಬರುತ್ತಿದ್ದಾಗ ಸವಣೂರಿನ ಸಮೀಪದಲ್ಲಿ ನಿರ್ಲಕ್ಷ್ಯದಿಂದ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಸಿಮೆಂಟ್ ಬ್ಲಾಕ್ ಗಳ ಸಾಲಿಗೆ ತುಂಬಾ ವೇಗವಾಗಿ ಡಿಕ್ಕಿ ಹೊಡೆದಿದ್ದಾರೆ ಡಿಕ್ಕಿ ಹೊಡೆದ ರಭಸಕ್ಕೆ ಲಾರಿ ಚಾಲಕನ ಕಿವಿಗೆ ಹೊಡೆತ ಬಿದ್ದು ಅಸ್ತವೆಸ್ತವಾಗಿದ್ದಾನೆ ಜೊತೆಗೆ ಅವನ ಜೊತೆಗೆ ಕಿರಣ ಹಾಗು ಸಿದ್ದರಾಮ ಎಂಬ ಇಬ್ಬರು…

ಮುಂದೆ ಓದಿ..
ಸುದ್ದಿ 

ಶಿಗ್ಗಾಂವಿಯಲ್ಲಿ ಕಾರ್ ಗೆ ಬೈಕ್ ಡಿಕ್ಕಿ

ಆಗಸ್ಟ್ 12 ನೆ ತಾರಿಕಿನಂದು ಶಿಗ್ಗಾಂವಿಯ ಜೆಎಂಜೆ ಕಾಲೇಜಿನ ಹತ್ತಿರ ಸಲೀಂ ನರೇಗಲ್ ಇವರ ಮನೆಯ ಹತ್ತಿರ ಶಿಗ್ಗಾಂವಿ ಸವಣೂರು ರಸ್ತೆಯಲ್ಲಿ ಘಟನೆಯೊಂದು ಬೆಳಕಿಗೆ ಬಂದಿದೆನಾಗರಾಜ್ ಪುಟ್ಟಪ್ಪ ವನಹಳ್ಳಿ ಎಂಬುವವರು ಶಿಗ್ಗಾಂವಿ ಸವಣೂರು ರಸ್ತೆಯಲ್ಲಿ ಸಂಜೆ 7 ಗಂಟೆ ಸುಮಾರಿಗೆ ಸವಣೂರು ಕಡೆಯಿಂದ ಶಿಗ್ಗಾಂವಿ ಕಡೆ ಹೋಗುತ್ತಿರುವಾಗ ನಿರ್ಲಕ್ಷ್ಯದಿಂದ ಗಾಡಿ ಚಲಾಯಿಸುತ್ತಿದ್ದನು ಅದೇ ಸಮಯದಲ್ಲಿ ರಾಂಗ್ ರೋಡ್ ನಲ್ಲಿ ಗಾಡಿ ಚಲಾಯಿಸುತ್ತಿದ್ದನು ಅದೇ ರೋಡ್ ನ ಎಡಬದಿಯಲ್ಲಿ ಶಿಗ್ಗಾಂವಿ ನಿಂದಾ ಸವಣೂರು ಕಡೆಗೆ ಹೋಗುತ್ತಿದ್ದ ಅಶೋಕ್ ಲೇಲ್ಯಾಂಡ್ ಗೂಡ್ಸ್ ಲಾರಿಗೆ ಎಡಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದ್ದಾನೆ ಡಿಕ್ಕಿ ಹೊಡೆದ ಪರಿಣಾಮ ಡ್ರೈವರ್ ನಾಗರಾಜ್ ವನಹಲ್ಲಿ ಅವರ ಕೈ ಕಾಲು ಕೆತ್ತಿಹೋಗಿವೆ ಎಡಗೈ ಭುಜಕ್ಕೆ ಎಡಗಾಲು ಮೊಣಕಾಲಿಗೆ ತುಂಬಾ ಪೆಟ್ಟು ಬಿದ್ದಿವೆ ಅವನು ಕುಡಿದು ವಾಹನ ಚಲಾಯಿಸುತ್ತಿದ್ದ ಅನ್ನೋ ಸಂಶಯವೂ ಮೂಡಿವೆ ಇದನ್ನು ಪಕ್ಕಿರೇಶ್ ರಾಧಾಯಿ ಎನ್ನುವವರು ತಕ್ಷಣ…

ಮುಂದೆ ಓದಿ..
ಸುದ್ದಿ 

ಉದ್ಯೋಗದ ಹೆಸರಿನಲ್ಲಿ ಸೈಬರ್ ವಂಚನೆ – 1.37 ಲಕ್ಷ ರೂ. ಸುಲಿಗೆ

ಬೆಂಗಳೂರು 20 ಆಗಸ್ಟ್ 2025ಬೆಂಗಳೂರು, ಜುಲೈ 21: ಉದ್ಯೋಗ ಕೊಡಿಸುತ್ತೇವೆ ಎಂದು ನಂಬಿಸಿ ಸೈಬರ್ ವಂಚಕರು ಮತ್ತೊಮ್ಮೆ ತಮ್ಮ ಬಲೆ ಬೀಸಿರುವ ಘಟನೆ ಬೆಳಕಿಗೆ ಬಂದಿದೆ. ತಿಲಕ್ ರೆಡ್ಡಿ ಅವರಿಗೆ ಕಂಪನಿಯಲ್ಲಿ ವರ್ಷಕ್ಕೆ 14 ಲಕ್ಷ ರೂ. ಪ್ಯಾಕೇಜ್ ಇರುವ ಹುದ್ದೆ ಕೊಡುತ್ತೇವೆ ಎಂದು ಭರವಸೆ ನೀಡಿದ ವಂಚಕರು, ಮೊದಲು ಹಣ ಪಾವತಿಸಬೇಕೆಂದು ಒತ್ತಾಯಿಸಿದ್ದಾರೆ. ಇದನ್ನು ನಂಬಿದ ದೂರುದಾರರು ಹಂತ ಹಂತವಾಗಿ ₹1,37,000/- ಮೊತ್ತವನ್ನು PhonePe ಮತ್ತು ಬ್ಯಾಂಕ್ ಖಾತೆಗಳ ಮೂಲಕ ಕಳುಹಿಸಿದ್ದಾರೆ. ಆದರೆ ಉದ್ಯೋಗ ನೀಡುವುದಾಗಿ ಹೇಳಿ ವಂಚಕರು ದಿನಾಂಕವನ್ನು ಮುಂದೂಡುತ್ತಾ ಬಂದಿದ್ದಾರೆ. ಬಳಿಕ ಅವರ ಹಿನ್ನಲೆ ಪರಿಶೀಲಿಸಿದಾಗ, ಇವರು ಇದೇ ರೀತಿಯಲ್ಲಿ ಅನೇಕ ಮಂದಿಗೆ ಮೋಸ ಮಾಡಿರುವುದು ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ, ದೂರುದಾರರು “ಉದ್ಯೋಗ ಕೊಡಿಸುವ ಹೆಸರಿನಲ್ಲಿ ನನ್ನಿಂದ ಹಣ ಪಡೆದು ಸೈಬರ್ ವಂಚನೆ ನಡೆಸಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಂಡು ನನ್ನ…

ಮುಂದೆ ಓದಿ..
ಸುದ್ದಿ 

ಬೆಂಗಳೂರು ಜಕ್ಕೂರು ಫ್ಲೈಓವರ್‌ನಲ್ಲಿ ಟ್ರಾಫಿಕ್ ಅಡಚಣೆ

ಬೆಂಗಳೂರು ಜಕ್ಕೂರು ಫ್ಲೈಓವರ್‌ನಲ್ಲಿ ಟ್ರಾಫಿಕ್ ಅಡಚಣೆ ಬೆಂಗಳೂರು, 20 ಆಗಸ್ಟ್ 2025:ನಗರದಲ್ಲಿ ಭಾನುವಾರ ಸಂಜೆ ಜಕ್ಕೂರು ಫ್ಲೈಓವರ್ ಬಳಿ ವಾಹನ ಸಂಚಾರ ದಟ್ಟಣೆ ಉಂಟಾದ ಘಟನೆ ನಡೆದಿದೆ. ಬಿಬಿ ಮುಖ್ಯರಸ್ತೆಯಲ್ಲಿ ಸಂಚಾರ ನಿಯಂತ್ರಣ ಕಾರ್ಯದಲ್ಲಿ ತೊಡಗಿದ್ದ ಯಲಹಂಕ ಸಂಚಾರ ಪೊಲೀಸ್ ಸಿಬ್ಬಂದಿ ನೀಡಿದ ಮಾಹಿತಿಯ ಪ್ರಕಾರ, ಒಂದು ಮಾರುತಿ ವ್ಯಾಗನ್‌ಆರ್ (KA-05-M-9406) ಕಾರು ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೇ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಈ ಕಾರಣದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ರಸ್ತೆಯಲ್ಲಿ ವಾಹನಗಳ ಉದ್ದ ಸಾಲು ನಿರ್ಮಾಣಗೊಂಡಿತ್ತು. ಸ್ಥಳೀಯ ಸಾರ್ವಜನಿಕರ ಪ್ರಕಾರ, ಕಾರು ಸುಮಾರು 45 ನಿಮಿಷಗಳ ಕಾಲ ಅಲ್ಲೇ ನಿಂತಿತ್ತು. ಪೊಲೀಸರು ತಕ್ಷಣವೇ ಹಸ್ತಕ್ಷೇಪಿಸಿ ಕಾರಿನ ಹಿಂಭಾಗದಲ್ಲಿ ಎಚ್ಚರಿಕೆ ಬೋರ್ಡ್ ಇಟ್ಟು ಸಂಚಾರವನ್ನು ಸುಗಮಗೊಳಿಸಿದರು. ಸುಮಾರು 40 ನಿಮಿಷಗಳ ಬಳಿಕ ಕಾರಿನ ಚಾಲಕ ಸ್ಥಳಕ್ಕೆ ಆಗಮಿಸಿದನು. ಆತನು ಅಶ್ರಫ್ ಅಲೇ ವಿ ಕೆ ಬಿನ್ ಅಬ್ದುಲ್ (30…

ಮುಂದೆ ಓದಿ..
ಸುದ್ದಿ 

ಯಲಹಂಕ ಅಲಾಳಸಂದ್ರದಲ್ಲಿ ಖಾಸಗಿ ಬಸ್ ಸಂಚಾರಕ್ಕೆ ಅಡಚಣೆ

ಯಲಹಂಕ ಅಲಾಳಸಂದ್ರದಲ್ಲಿ ಖಾಸಗಿ ಬಸ್ ಸಂಚಾರಕ್ಕೆ ಅಡಚಣೆಯಲಹಂಕ 20 ಆಗಸ್ಟ್ 2025ಯಲಹಂಕ ಅಲಾಳಸಂದ್ರ ಕೆರೆ ಪಕ್ಕದ ಮುಖ್ಯರಸ್ತೆಯಲ್ಲಿ 17-08-2025ರಂದು ಬೆಳಗಿನ 2:54 ಗಂಟೆಗೆ ಗಸ್ತು ಕರ್ತವ್ಯದಲ್ಲಿದ್ದ ಯಲಹಂಕ ಸಂಚಾರಿ ಪೊಲೀಸ್ ಸಿಬ್ಬಂದಿ ಒಬ್ಬರು, ಕಎವಿ.50.ಬಿ.6739 ನಂಬರ್‌ನ ಖಾಸಗಿ ಬಸ್‌ನ್ನು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆಯಾಗುವ ರೀತಿಯಲ್ಲಿ ನಿಲ್ಲಿಸಿರುವುದನ್ನು ಗಮನಿಸಿದರು. ಸದರಿ ಬಸ್ ಚಾಲಕರನ್ನು ವಿಚಾರಿಸಿದಾಗ, ಆತನು ತನ್ನನ್ನು ಜಗದೀಶ ಜಿ.ಸಿ. (ವಿಳಾಸ: 2013, 28, 5, 15 ..-561211, ಮೊಬೈಲ್: 9945449632) ಎಂದು ಪರಿಚಯಿಸಿಕೊಂಡಿದ್ದಾನೆ. ಸಾರ್ವಜನಿಕರ ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡಿದ ಕಾರಣ, ಯಲಹಂಕ ಸಂಚಾರಿ ಪೊಲೀಸರು ಬಸ್‌ನ್ನು ಠಾಣೆಗೆ ಕರೆದುಕೊಂಡು ಬಂದು, ಚಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವರದಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸಂಚಾರ ಅಡಚಣೆ ಉಂಟಾಗುವಂತ ವಿಧವಾಗಿ ವಾಹನ ನಿಲುವಿಕೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ…

ಮುಂದೆ ಓದಿ..
ಸುದ್ದಿ 

ಯಲಹಂಕ: ಐಟಿ ಉದ್ಯೋಗಿ ಕಾಣೆಯಾದ ಪ್ರಕರಣ

ಯಲಹಂಕ 20 ಆಗಸ್ಟ್ 2025ಯಲಹಂಕ ಪೊಲೀಸರು ದಾಖಲಿಸಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, 33 ವರ್ಷದ ಐಟಿ ಉದ್ಯೋಗಿ ರಾಮ್ ಮೋಹನ್ ರೆಡ್ಡಿ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಉಮಾ ಮಹೇಶ್ವರಿ ಅವರ ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿರುವುದೇನೆಂದರೆ, ಅವರು ತಮ್ಮ ಗಂಡ ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ಸ್ವಂತ ಮನೆಯಲ್ಲಿ ವಾಸವಾಗಿದ್ದು, ಗಂಡನಾದ ರಾಮ್ ಮೋಹನ್ ರೆಡ್ಡಿ ಅವರು ಕಳೆದ 3 ತಿಂಗಳುಗಳಿಂದ ವೈಟೀಲ್‌ನ ಕ್ಯಾಪೆಮಿನಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಆಗಸ್ಟ್ 17ರಂದು ಮಧ್ಯಾಹ್ನ 12 ಗಂಟೆಗೆ ಕೆಲಸಕ್ಕಾಗಿ ಮನೆಯಿಂದ ಹೊರಟ ಅವರು ಇದುವರೆಗೆ ಮನೆಗೆ ಹಿಂದಿರುಗದೆ ಕಾಣೆಯಾಗಿದ್ದಾರೆ. ಮೊಬೈಲ್‌ ಫೋನ್ ಕೂಡ ಸ್ವಿಚ್ ಆಫ್ ಆಗಿರುವುದರಿಂದ ಸಂಪರ್ಕ ಸಾಧ್ಯವಾಗಿಲ್ಲ. ಸಂಬಂಧಿಕರು, ಸ್ನೇಹಿತರು ಹಾಗೂ ಅಕ್ಕಪಕ್ಕದವರಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗದ ಕಾರಣ ಯಲಹಂಕ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ. ಈ ಪ್ರಕರಣವನ್ನು ಪೊಲೀಸರು ತನಿಖೆ…

ಮುಂದೆ ಓದಿ..