ಸುದ್ದಿ 

ನಾಗಮಂಗಲ ಪಟ್ಟಣ ಹಾಗೂ ತಾಲ್ಲೂಕು ವ್ಯಾಪ್ತಿಯ ಪೆಟ್ರೋಲ್ ಬಂಕುಗಳಲ್ಲಿ ರೈತರಿಗೆ ಮೋಸ..

ನಾಗಮಂಗಲ ಪಟ್ಟಣ ಹಾಗೂ ತಾಲ್ಲೂಕು ವ್ಯಾಪ್ತಿಯ ಪೆಟ್ರೋಲ್ ಬಂಕುಗಳಲ್ಲಿ ರೈತರಿಗೆ ಮೋಸ.. ತೆರೆದ ಪ್ಲಾಸ್ಟಿಕ್ ಪೆಟ್ಟಿಗೆಗಳಲ್ಲಿ ನೀಡುವ ಆಯಿಲ್ ನಂಬದಿರಿ.. ಕಳಪೆ ಆಯಿಲ್ – ರೈತನ ಶ್ರಮಕ್ಕೆ ಕಲ್ಲು ಹಾಕುವಂತದ್ದು! ನಿಮ್ಮ ಮುಂದೆ ಪ್ಯಾಕ್ ಓಪನ್ ಮಾಡಿಸಿ.. ಇಂದನ ತುಂಬಿಸಿ. ಈಗಾಗಲೇ ತಪ್ಪು ಮಾಡುತ್ತೀರುವ ಪೆಟ್ರೋಲ್ ಬಂಕುನವರಿಗೆ ರೈತರೂ ನೇರವಾಗಿ ಹೇಳಿದರೂ ಕೇಳುತ್ತಿಲ್ಲ.. ಇಂದಿನ ದಿನಗಳಲ್ಲಿ ನಗರದಲ್ಲೋ, ಹಳ್ಳಿಯಲ್ಲೋ, ಸ್ಕೂಟರ್, ಬೈಕ್, ಟ್ರ್ಯಾಕ್ಟರ್, ಪಂಪುಮೆಷಿನ್, ಅಥವಾ ಥ್ರೆಷರ್‌ಗಳ ಉಪಯೋಗ ಪ್ರತಿದಿನವೂ ಹೆಚ್ಚುತ್ತಿದೆ. ಇವುಗಳೆಲ್ಲವೂ ಸರಿಯಾಗಿ ಕೆಲಸಮಾಡಬೇಕಾದರೆ, ಅವುಗಳಿಗೆ ಬಳಸುವ ಎಂಜಿನ್ ಆಯಿಲ್ ಅತ್ಯಂತ ಮುಖ್ಯ. ಆದರೆ ಈಗ ಕಳಪೆ ಆಯಿಲ್ (Adulterated/Low Grade Oil) ಗಳ ಬಳಕೆ ಮುಕ್ತಿ ಕೊಡುವಂತೆ ಆಗಿದೆ. ಇದು ಗಾಡಿಯನ್ನಷ್ಟೇ ಅಲ್ಲ, ರೈತನ ದುಡಿಮೆಯನ್ನೂ ನಾಶಪಡಿಸುತ್ತದೆ. ಕಳಪೆ ಆಯಿಲ್ ಎಂದರೇನು? : ಕಳಪೆ ಆಯಿಲ್ ಎಂದರೆ: ಶುದ್ಧ ಎಂಜಿನ್ ಆಯಿಲ್‌ಗೆ ಬೇರೆ ಕಿಮಿಕಲ್…

ಮುಂದೆ ಓದಿ..
ಅಂಕಣ 

ಮಳೆ ಬಂತು, ರಸ್ತೆ ಹೋಯಿತು – ಸರ್ಕಾರದ ಬಗೆಹರಿವಿನ ಮಾರ್ಗ ಯಾವುದು?

ಮಳೆ ಬಂತು, ರಸ್ತೆ ಹೋಯಿತು – ಸರ್ಕಾರದ ಬಗೆಹರಿವಿನ ಮಾರ್ಗ ಯಾವುದು? ಬೆಂಗಳೂರು – ಮಳೆ ಬಂತು ಅಂದರೆ ತಂಪಾದ ಹವಾಮಾನ, ತಾಜಾ ವಾತಾವರಣ, ಹಸಿರು ಚೆಲುವು ಎಂಬ ಸುಂದರ ಚಿತ್ರಣವೇ ತಲೆಗೆ ಬರುವುದು. ಆದರೆ, ಬೆಂಗಳೂರಿನ ನಾಗರಿಕರಿಗೆ ಮಳೆ ಅಂದರೆ ಗುಂಡಿಗಳ ಹಬ್ಬ, ನೀರು ತುಂಬಿದ ರಸ್ತೆಗಳು, ಸಂಚಾರ ಕಷ್ಟ ಹಾಗೂ ಅಪಘಾತದ ಭೀತಿ. ವರ್ಷಾವರ್ಷ ಇದೇ ದೃಶ್ಯ ಮರುಕಳಿಸುತ್ತಿದ್ದರೂ, ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕೇವಲ “ತಾತ್ಕಾಲಿಕ ಪ್ಯಾಚ್ ವರ್ಕ್” ಮಾಡುತ್ತಲೇ ಕಾಲಹರಣ ಮಾಡುತ್ತಿದೆ. ಸರ್ಕಾರದ ಮಾತು – ನೆಲದ ಸತ್ಯ ಪ್ರತಿ ಬಾರಿ ಮಳೆ ಬಂತು ಅಂದರೆ, “ನಾವು ರಸ್ತೆಗಳ ನವೀಕರಣ ಮಾಡುತ್ತೇವೆ”, “ಶಾಶ್ವತ ಪರಿಹಾರ ತರುತ್ತೇವೆ” ಎಂಬ ಸರ್ಕಾರದ ಘೋಷಣೆಗಳನ್ನು ಜನ ಕೇಳಿದ್ದಾರೆ. ಆದರೆ ನೆಲದ ಸತ್ಯ ಏನು? – ಮಳೆ ಬಂದ ತಕ್ಷಣವೇ ಹೊಸಾಗಿ ಹಾಕಿದ…

ಮುಂದೆ ಓದಿ..
ಅಂಕಣ 

ಆ ನೆನಪು…….

ಆ ನೆನಪು……. ನೆನಪಿನ ರಣಹದ್ದೊಂದುಬಸವಳಿದ ಹೃದಯವನ್ನುಮತ್ತೆ ಮತ್ತೆ ಕುಕ್ಕುತ್ತಲಿದೆ, ಮುಂಜಾವಿನ ಅರೆ ನಿದ್ದೆಯ ಮಂಪರಿನಲ್ಲಿ,ಶೌಚದ ಐಕಾಂತದಲ್ಲಿ,ಬೆಳಗಿನ ವಾಯು ವಿಹಾರದಲ್ಲಿ,ಉಪಹಾರದ ಎಲೆಯಲ್ಲಿ, ಚೂಪಾದ ಉದ್ದನೆಯ ಕೊಕ್ಕಿನಲ್ಲಿ ಕುಟುಕುತ್ತಾ ಮನಸ್ಸು ಹಿಂಡುತ್ತಿದೆ, ಸೂಜಿ ಮಲ್ಲಿಗೆಯ ಚೆಲುವಿನ,ಸಾಸಿವೆಯಷ್ಟು ಸಣ್ಣದಾದ,ಬೆಣ್ಣೆಯಷ್ಟು ಮೃದುವಾದ,ಹೃದಯಯನ್ನು ನೆನಪೆಂಬ ರಣಹದ್ದು ಗಟ್ಟಿಯಾದ ತೀಕ್ಷ್ಣವಾದ ಕೊಕ್ಕಿನಿಂದ ಇರಿಯುತ್ತಿದೆ, ಘಾಸಿಗೊಂಡ ಹೃದಯವೆಂದು ಪಾಪ ಅದಕ್ಕೇನು ಗೊತ್ತು.ಬಗೆದು ತಿನ್ನುವುದು ಅದರ ಸಹಜ ಧರ್ಮ, ಇಡೀ ದಿನದ ಕೆಲಸದಲ್ಲಿ,ಇಳಿ ಸಂಜೆಯ ನೋಟದಲ್ಲಿ,ಹಾಸಿಗೆಯ ಅನಾಥ ಪ್ರಜ್ಞೆಯಲ್ಲಿ,ಚುಚ್ಚುತ್ತಿದೆ ನೆನಪಿನ ರಣಹದ್ದು, ಹೇಳಲಾಗದು,ಹೇಳದಿರಲಾಗದು,ಸಹಿಸಲಾಗದು,ಎದುರಿಸಲಾಗದ,ಅಮಾಯಕ ಅಸಹಾಯಕ ಹೃದಯವದು, ವಿರಹದ ವೇದನೆಯೋ,ಪ್ರೀತಿಯ ವಂಚನೆಯೋ,ನಂಬಿಕೆಯ ದ್ರೋಹವೋ,ಆಂತರ್ಯದ ಬೇಗುದಿಯೋ,ಒಡಲಾಳದ ಸಂಕಟವೋ,ನೆನಪಿನ ರಣಹದ್ದಾಗಿ ಮತ್ತೆ ಮತ್ತೆ ಕುಕ್ಕುತ್ತಲಿದೆ. ಹೊರಬರದ ದಾರಿ ಕಾಣದೆ,ಒಳಗಿರುವ ಜಾಗ ಅರಿಯದೆ,ಸಂಕಟದಿಂದ ವಿಲ ವಿಲನೆ ಒದ್ದಾಡುತ್ತಾ, ಕೆಲವೊಮ್ಮೆ ಕಣ್ಣೀರಾಗಿ,ಒಮ್ಮೊಮ್ಮೆ ಆಕ್ರೋಶವಾಗಿ,ಆಗೊಮ್ಮೆ ಸಮಾಧಾನವಾಗಿಮತ್ತೊಮ್ಮೆ ಹುಚ್ಚುಚ್ಚಾಗಿ,ಅಕ್ಷರ ರೂಪದಲ್ಲಿ ನಿಮ್ಮ ಮುಂದೆ ಹರಿದಾಡುತ್ತಿದೆ. ನೆನಪಿನ ರಣಹದ್ದನ್ನು ಓಡಿಸಲಾಗದೆ ,ನೋವನ್ನು ಅನುಭವಿಸುತ್ತಾ,ನಿಮ್ಮೊಂದಿಗೆ ಸದಾ ಹಂಚಿಕೊಳ್ಳುತ್ತಿರುವ,ಅನಾಥ – ಅಜ್ಞಾತ,ಹೃದಯ –…

ಮುಂದೆ ಓದಿ..
ಅಂಕಣ 

ಐ ಲವ್ ಮಹಮ್ಮದ್,ವರ್ಸಸ್ಐ ಲವ್ ಮಹದೇವ್/ ಜೈ ಶ್ರೀರಾಮ್……

ಐ ಲವ್ ಮಹಮ್ಮದ್,ವರ್ಸಸ್ಐ ಲವ್ ಮಹದೇವ್/ ಜೈ ಶ್ರೀರಾಮ್…… ಬಹುಶಃ ಕೆಲವು ಜನರಿಗೆ ನೆಮ್ಮದಿಯೇ ಬೇಕಿಲ್ಲವೆನಿಸುತ್ತದೆ. ಜೊತೆಗೆ ಇತರರೂ ನೆಮ್ಮದಿಯಾಗಿರಬಾರದು ಎಂಬ ಮನೋಭಾವ. ಅತೃಪ್ತ ಆತ್ಮಗಳೇ ಅವರೊಳಗೆ ತುಂಬಿ ತುಳುಕುತ್ತಿರಬೇಕು ಎಂದೆನಿಸುತ್ತಿದೆ…… ಉಕ್ರೇನಿಯನ್ ಜನರು ಅನುಭವಿಸುತ್ತಿರುವ ನರಕಯಾತನೆಯಾಗಲಿ, ಗಾಜಾ ಪಟ್ಟಿಯಲ್ಲಿ ವಾಸಿಸುತ್ತಿರುವ ಜನರಾಗಲಿ, ಆಫ್ರಿಕಾದ ಆಂತರಿಕ ಸಂಘರ್ಷದಿಂದ ಬಳಲುತ್ತಿರುವ ದೇಶಗಳಾಗಲಿ, ದಕ್ಷಿಣ ಅಮೆರಿಕ, ದಕ್ಷಿಣ ಏಷ್ಯಾದ ಕೆಲವು ದೇಶಗಳ ಹಿಂಸಾತ್ಮಕ ಘಟನೆಗಳಾಗಲಿ ಇನ್ನೂ ಜನರಿಗೆ ಬುದ್ಧಿ ಕಲಿಸಿದಂತೆ ಕಾಣುತ್ತಿಲ್ಲ.ಕೊರೋನ ಎಂಬ ವೈರಸ್ ಇಡೀ ಜಗತ್ತನ್ನು ಅಲುಗಾಡಿಸಿತು. ಆ ಸಮಯದಲ್ಲಿ ಬಹಳಷ್ಟು ಜನರಿಗೆ ಸನ್ಯಾಸ ವೈರಾಗ್ಯ ಉಂಟಾಯಿತು. ಜೀವನ ನಶ್ವರ, ಯಾವಾಗ ಬೇಕಾದರೂ, ಯಾವ ರೂಪದಲ್ಲಾದರೂ ಸಾವು ಬರಬಹುದು. ಆದ್ದರಿಂದ ಒಂದಷ್ಟು ತಾಳ್ಮೆಯಿಂದ, ಪ್ರೀತಿಯಿಂದ ದುರಾಸೆಗಳಿಲ್ಲದೆ ಬದುಕಬೇಕು ಎಂದು ಅಂದುಕೊಂಡರು. ಆದರೆ ಸಮಕಾಲಿನ ಜಗತ್ತು ಕೋವಿಡ್ ನಂತರ ಹೆಚ್ಚು ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ. ಸಾವೋ, ಬದುಕೋ ಒಟ್ಟಿನಲ್ಲಿ ಸಮಾಜಗಳು,…

ಮುಂದೆ ಓದಿ..
ಅಂಕಣ 

ಅಡುಗೆ…….

ಅಡುಗೆ……. ರುಚಿ – ತೃಪ್ತಿ – ಸಮಾನತೆ….. ಅಡುಗೆ ಅನುಭವದ ಮೂಸೆಯೊಳಗೆ ಬೆಳೆದು ಬರುವ ವಿಜ್ಞಾನವೆಂಬ ಕಲೆ…. ಮನುಷ್ಯ ಬದುಕಿನ ಜೀವದ್ರವ್ಯಗಳಲ್ಲಿ ಗಾಳಿ ಮತ್ತು ನೀರಿನ ನಂತರ ಆಹಾರವೇ ಅತ್ಯಂತ ಪ್ರಮುಖವಾದದ್ದು. ಹಿಂದೆ ಅನಾಗರಿಕ ಮಾನವ ಗೆಡ್ಡೆ, ಗೆಣಸು, ಹಣ್ಣು, ಹಂಪಲು, ಪ್ರಾಣಿ, ಪಕ್ಷಿ, ಕೀಟಗಳನ್ನು ತಿಂದು ಬದುಕುತ್ತಿದ್ದ. ದಿನಗಳೆದಂತೆ ಮನುಷ್ಯನ ಅನಿವಾರ್ಯತೆಗಳು, ಅಗತ್ಯಗಳು, ಆಸೆಗಳು, ದುರಾಸೆಗಳುಜೊತೆಗೆ ಆತನ ನಾಲಿಗೆ ರುಚಿಬಯಸತೊಡಗಿತು ಮತ್ತು ಅದಕ್ಕೆ ತಕ್ಕಂತೆ ಅವಕಾಶಗಳು ಒದಗಿ ಬಂದವು. ನಿರ್ದಿಷ್ಟವಾಗಿ ಹಣ್ಣು, ತರಕಾರಿ, ಪ್ರಾಣಿ, ಪಕ್ಷಿಗಳನ್ನು ಅನುಭವದ ಆಧಾರದ ಮೇಲೆಯೇ ಗುರುತಿಸಿ ಆಹಾರವನ್ನಾಗಿ ಉಪಯೋಗಿಸ ತೊಡಗಿದ. ಕೊನೆಗೆ ಈ 2025 ರಲ್ಲಿ ನಿಂತು ಹಿಂತಿರುಗಿ ನೋಡಿದಾಗ ಆಹಾರಗಳ ವೈವಿಧ್ಯತೆ ಕಲ್ಪನೆಗೂ ಮೀರಿ ಬೆಳೆದಿದೆ. ದಕ್ಷಿಣದಿಂದ ಉತ್ತರದವರೆಗೂ, ಪೂರ್ವದಿಂದ ಪಶ್ಚಿಮದವರೆಗೂ ಇಡೀ ದೇಶದ ಆಹಾರ ವಿಭಿನ್ನತೆ ಚಕಿತಗೊಳಿಸುತ್ತದೆ. ನಮ್ಮ ದೇಶದಲ್ಲಿ ಹಳ್ಳಿ, ಪಟ್ಟಣ, ನಗರ,ಮೆಟ್ರೋಪಾಲಿಟಿನ್ ಸಿಟಿ ಸೇರಿ…

ಮುಂದೆ ಓದಿ..
ಅಂಕಣ 

ಸಹಾಯ ಮತ್ತು ಆತ್ಮಸಾಕ್ಷಿ……

ಸಹಾಯ ಮತ್ತು ಆತ್ಮಸಾಕ್ಷಿ…… ಸಹಾಯ – ಸೇವೆ – ನೆರವು – ಒಳ್ಳೆಯದನ್ನು ಮಾಡುವುದು ಇತ್ಯಾದಿ ಇತ್ಯಾದಿ……… ಮತ್ತು ಇದರಲ್ಲಿನ ವೈವಿಧ್ಯತೆ…………… ಹುಟ್ಟಿರುವುದೇ ಇನ್ನೊಬ್ಬರ ನೋವಿಗೆ, ಸಂಕಷ್ಟಕ್ಕೆ ಸ್ಪಂದಿಸಲು ಎಂಬ ನಿಸ್ವಾರ್ಥ ಮನೋಭಾವದ ಕೆಲವರು ಸಹಾಯವನ್ನೇ ಬದುಕಾಗಿಸಿಕೊಂಡಿರುತ್ತಾರೆ…. ಸಹಾಯ ಮಾಡಿಯೂ ಅದನ್ನು ಹೇಳಿಕೊಳ್ಳದೆ ತಮ್ಮ ಪಾಡಿಗೆ ತಾವಿರುವವರು ಇರುತ್ತಾರೆ… ಬೇರೆಯವರಿಗೆ ಸಹಾಯ ಮಾಡುವುದರಿಂದ ನಮಗೆ ಒಳ್ಳೆಯದಾಗುತ್ತದೆ ಎಂಬ ಕಾರಣದಿಂದ ಸಹಾಯ ಮಾಡುವವರು ಇದ್ದಾರೆ…. ಈಗ ಸಹಾಯ ಮಾಡುವುದರಿಂದ ಮುಂದೆ ನಮ್ಮ ಕಷ್ಟದ ಸಮಯದಲ್ಲಿ ಬೇರೆಯವರು ನಮಗೆ ಸಹಾಯ ಮಾಡಬಹುದು ಎಂಬ ಮುಂದಾಲೋಚನೆಯಿಂದ ಸಹಾಯ ಮಾಡುವವರು ಇರುವರು……. ಪಾಪ, ಪುಣ್ಯ – ಸ್ವರ್ಗ, ನರಕದ ನಂಬಿಕೆಯಿಂದ ಸಹಾಯ ಮಾಡುವವರು ಕೆಲವರು….. ತಮ್ಮ ವಂಶದ ಅಥವಾ ಮನೆತನದ ಹೆಸರಿನ ಪ್ರತಿಷ್ಠೆಗಾಗಿ ಸಹಾಯ ಮಾಡುವವರು ಹಲವರು….. ಸಮಾಜದಲ್ಲಿ ದಾನಿಗಳು ಎಂಬ ಹೆಸರು ಪಡೆಯಲು ಸಹಾಯ ಮಾಡುವವರು ಇದ್ದಾರೆ….. ಪ್ರಚಾರ,ಪ್ರಶಸ್ತಿ ಮತ್ತು ಜನಪ್ರಿಯತೆಯ…

ಮುಂದೆ ಓದಿ..
ಅಂಕಣ 

ಆರೆಸ್ಸೆಸ್ ( RSS ) 100…..

ಆರೆಸ್ಸೆಸ್ ( RSS ) 100….. ಈ ಶತಮಾನೋತ್ಸವದ ಸಂದರ್ಭದಲ್ಲಿ……… ವಿಶ್ವದ ಅತ್ಯಂತ ದೊಡ್ಡ ಸ್ವಯಂ ಸೇವಾ ಸಂಘಟನೆ ಎಂದು ಹೆಸರಾಗಿರುವ, ಭಾರತದಲ್ಲಿ ವ್ಯಾಪಕವಾಗಿ ತನ್ನ ಸೈದ್ಧಾಂತಿಕ ನಿಲುವುಗಳು ಕಾರಣಕ್ಕಾಗಿ ಸದಾ ಸುದ್ದಿಯಲ್ಲಿರುವ ಆರೆಸ್ಸೆಸ್ ಸಂಘಟನೆ ಸ್ಥಾಪನೆಯಾಗಿ 100 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಒಂದು ಅನಿಸಿಕೆ………. ಎಲ್ಲಾ ವಿಷಯಗಳಿಗೂ ಇರುವಂತೆ ಈ ವಿಷಯಕ್ಕೂ ಸಹಜವಾಗಿಯೇ ಎರಡು ಮುಖಗಳಿರುತ್ತದೆ. ಆರ್ ಎಸ್ ಎಸ್ ಅನ್ನು ಬೆಂಬಲಿಸುವವರು ಅದಕ್ಕೆ ಪೂರಕ ಅಂಶಗಳನ್ನು ಹೇಳಿದರೆ, ಅದನ್ನು ವಿರೋಧಿಸುವವರು ಅದರ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಸುತ್ತಾರೆ. ಆ ಹಿನ್ನೆಲೆಯಲ್ಲಿ ಆರ್ ಎಸ್ ಎಸ್ ಸಂಘಟನೆಯ ಬಗ್ಗೆ ಒಂದು ಸರಳ ವಿವರಣೆ……. ರಾಷ್ಟ್ರೀಯ ಸ್ವಯಂ ಸೇವಕ ಸಂಘ ( RSS ) ಇಂದಿನ ಭಾರತದ ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಅತಿಹೆಚ್ಚು ಪರ ವಿರೋಧಗಳ ಚರ್ಚೆಗೆ ಒಳಪಡುತ್ತಿರುವ ಮತ್ತು ವಿಶ್ವದ ಅತಿಹೆಚ್ಚು ಸದಸ್ಯರನ್ನು ಹೊಂದಿರುವ ಸಂಘಟನೆ.…

ಮುಂದೆ ಓದಿ..
ಅಂಕಣ 

ಸಾಮಾನ್ಯ ಗಾಂಧಿ…….

ಸಾಮಾನ್ಯ ಗಾಂಧಿ……. ನಾಳೆ ಅಕ್ಟೋಬರ್ 2,ಮೋಹನದಾಸ್ ಕರಮಚಂದ್ ಗಾಂಧಿ ಅವರ 156ನೇ ಹುಟ್ಟುಹಬ್ಬ. ಈಗ ಬಹುಶಃ ಅವರನ್ನು ಮಹಾತ್ಮ ಪಟ್ಟದಿಂದ ಇಳಿಸುವ ಸಂದರ್ಭ ಬಂದಿದೆ ಅಥವಾ ಈಗಾಗಲೇ ಇಳಿಸಿಯಾಗಿದೆ ಅಥವಾ ಅವರು ಆ ಸ್ಥಾನದಲ್ಲಿ ಕುಳಿತುಕೊಳ್ಳಲು ಅನರ್ಹರಾಗಿದ್ದಾರೆ ಅಥವಾ ಅವರನ್ನು ಮಹಾತ್ಮ ಎಂದು ಕರೆಯುವ ಅರ್ಹತೆಯನ್ನು ಜನಸಾಮಾನ್ಯರು ಕಳೆದುಕೊಂಡಿದ್ದಾರೆ. ಸತ್ಯ – ಅಹಿಂಸೆ – ಸರಳತೆ – ಪ್ರಾಮಾಣಿಕತೆ – ಪಾರದರ್ಶಕತೆ ಯಾರಿಗೆ ಬೇಕಾಗಿದೆ. ಎಲ್ಲವೂ ಎಲ್ಲರೂ ಹಣ – ಅಧಿಕಾರ – ಪ್ರಶಸ್ತಿ – ಜನಪ್ರಿಯತೆ – ಸುಖಲೋಲುಪತೆಯ ಹಿಂದೆ ಬಿದ್ದಿದ್ದಾರೆ. ಸಾಮಾಜಿಕ ಮೌಲ್ಯಗಳು, ಪ್ರಾಕೃತಿಕ ಮೌಲ್ಯಗಳು, ಮಾನವೀಯ ಮೌಲ್ಯಗಳು, ನೈತಿಕ ಮೌಲ್ಯಗಳು ಕುಸಿದಿರುವುದು ಮಾತ್ರವಲ್ಲ ವಿರುದ್ಧ ಮೌಲ್ಯಗಳು ಮಾನ್ಯತೆ ಪಡೆದಿರುವ ಸಂದರ್ಭದಲ್ಲಿ ಈ ದೇಶದ ಸದ್ಯದ ಮಹಾತ್ಮರ ಪಟ್ಟಿ ಬದಲಾಗಿದೆ. ಆ ಸ್ಥಾನದಲ್ಲಿ ಬೇರೆಯವರು ಕುಳಿತಿದ್ದಾರೆ. ಮಹಾತ್ಮ ನರೇಂದ್ರ ಮೋದಿ,ಮಹಾತ್ಮ ರಾಹುಲ್ ಗಾಂಧಿ,ಮಹಾತ್ಮ ಸಿದ್ದರಾಮಯ್ಯ,ಮಹಾತ್ಮ…

ಮುಂದೆ ಓದಿ..
ಅಂಕಣ 

ಅಂತರರಾಷ್ಟ್ರೀಯ ಕಾಫಿ ದಿನ ಅಕ್ಟೋಬರ್ 1…

ಕಾಫಿ…….. ಅಂತರರಾಷ್ಟ್ರೀಯ ಕಾಫಿ ದಿನಅಕ್ಟೋಬರ್ 1… ಬೆಳಗಿನ ಘಮ ಘಮ ಪರಿಮಳದ ಬಿಸಿ ಬಿಸಿ ಟೀ ಅಥವಾ ಕಾಫಿಯೊಂದಿಗೆ ದಿನ ಪ್ರಾರಂಭಿಸುವುದು ಬಹಳಷ್ಟು ಜನರ ದಿನಚರಿ. ಅದರಲ್ಲೂ ದಕ್ಷಿಣ ಭಾರತದ ಕನ್ನಡ ನಾಡಿನ ಬಹುತೇಕರು ಕಾಫಿ ಪ್ರಿಯರು…… ಕಾಫಿ ಇಲ್ಲದೆ ಹಾಸಿಗೆಯಿಂದ ಏಳದ ಎಷ್ಟೋ ಜನರಿದ್ದಾರೆ.” ಕಾಫಿ ” ಎಂಬ ವಿಷಯವನ್ನು ಇಟ್ಟುಕೊಂಡು ಬರೆದ ಎಷ್ಟೋ ಲಲಿತ ಪ್ರಬಂಧಗಳು ನಗುವಿನ ಅಲೆಯನ್ನೇ ಉಕ್ಕಿಸುತ್ತದೆ. ಆತಿಥ್ಯದ ಆಪ್ತಮಿತ್ರ ಕಾಫಿ. ಬಾಂಧವ್ಯದ ಬೆಸುಗೆ ಕಾಫಿ, ಸ್ನೇಹ, ಪ್ರೀತಿ ಪ್ರೇಮದ ಕೊಂಡಿ ಕಾಫಿ, ವ್ಯವಹಾರದ ಸೇತುವೆ ಕಾಫಿ, ಮನೋಲ್ಲಾಸದ ಔಷಧಿ ಕಾಫಿ, ಬೇಸರ ಕಳೆಯುವ ಸಾಧನ ಕಾಫಿ, ಕಾಲ ಹರಟೆಯ ಖುಷಿ ಕಾಫಿ…. ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಜೊತೆಗಾರ ಕಾಫಿ…. ಯಾರಾದರೂ ಪ್ರಬಂಧ ಬರೆಯುವ ಕಲೆಯನ್ನು ಮೈಗೂಡಿಸಿಕೊಳ್ಳುವ ಆಸಕ್ತಿ ಇದ್ದರೆ ಕಾಫಿ ಎಂಬುದು ಹೇಗೆ ನಮ್ಮೆಲ್ಲರ ಬದುಕಿನ ಭಾಗ ಎಂಬ…

ಮುಂದೆ ಓದಿ..
ಅಂಕಣ 

ಕಾಲ್ತುಳಿತ ಎಂಬ ಮಾಸ್ ಸಿಂಡ್ರೋಮ್……

ಕಾಲ್ತುಳಿತ ಎಂಬ ಮಾಸ್ ಸಿಂಡ್ರೋಮ್…… ಕಾಲ್ತುಳಿತ ಎಂಬ ಸಾಮಾಜಿಕ – ಸಾಂಕ್ರಾಮಿಕ ರೋಗ ಮತ್ತು ಈ ವರ್ಷದ ದಸರಾ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆ…….. ಇತ್ತೀಚಿನ ವರ್ಷಗಳಲ್ಲಿ ಮತ್ತೊಂದು ಸಾಮಾಜಿಕ ಸಾಂಕ್ರಾಮಿಕ ರೋಗ ಪ್ರಾಕೃತಿಕ ವಿಕೋಪದಂತೆ ದಿಢೀರನೆತೊಂದರೆ ಕೊಡುತ್ತಿದೆ. ಅದುವೇ ಕಾಲ್ತುಳಿತಗಳು ಎಂಬ ಭಯಂಕರ ದುರ್ಘಟನೆಗಳು….. ಈ ಕಾಲ್ತುಳಿತ ಪ್ರಕರಣಗಳು ಭಾರತಕ್ಕೆ ಹೊಸದೇನು ಅಲ್ಲ. ಆಗಾಗ ನಡೆಯುತ್ತಲೇ ಇರುತ್ತವೆ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ತುಂಬಾ ಹೆಚ್ಚು ಹೆಚ್ಚು ಈ ರೀತಿಯ ಘಟನೆಗಳು ನಡೆಯುತ್ತಿವೆ. ಆಗೆಲ್ಲಾ ಸಿನಿಮಾ ಮಂದಿರಗಳಲ್ಲಿ ಸಿನಿಮಾ ಟಿಕೆಟ್ ಪಡೆಯುವ ಕ್ಯೂನಲ್ಲಿ ಕಾಲ್ತುಳಿತಗಳಾಗುತ್ತಿದ್ದವು. ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳು ಹಂಚುವ ಸೀರೆ, ಪಂಚೆ, ಹಣ ಮುಂತಾದ ಸಮಯದಲ್ಲಿ, ಇನ್ನು ಕೆಲವು ಸಲ ಆಹಾರ ಪದಾರ್ಥಗಳ ಹಂಚಿಕೆಯ ಸಂದರ್ಭದಲ್ಲಿ ಅದನ್ನು ಪಡೆಯಲು ಕಾಲ್ತುಳಿತ ಉಂಟಾಗುತ್ತಿತ್ತು. ಪ್ರಖ್ಯಾತ ದೇವಸ್ಥಾನದ ಪ್ರವೇಶಕ್ಕಾಗಿ ಅಥವಾ ವಿಶೇಷ ಸಂದರ್ಭದಲ್ಲಿಯೂ ಕಾಲ್ತುಳಿತಗಳು ಉಂಟಾಗುತ್ತಿದೆ. ತಿರುಪತಿ, ಶಬರಿಮಲೆ,…

ಮುಂದೆ ಓದಿ..