ಜಾನುವಾರುಗಳ ಅಕ್ರಮ ಸಾಗಣೆ – ಇಬ್ಬರು ಆರೋಪಿ ಬಂಧನ
ಬೆಂಗಳೂರು 20 ಆಗಸ್ಟ್ 2025ಬೆಂಗಳೂರು ಗ್ರಾಮಾಂತರದಲ್ಲಿ ಪೊಲೀಸರು ಜಾನುವಾರುಗಳ ಅಕ್ರಮ ಸಾಗಾಣಿಕೆ ನಡೆಸುತ್ತಿದ್ದ ವಾಹನವನ್ನು ಪತ್ತೆಹಚ್ಚಿದ್ದಾಆಗಸ್ಟ್ 16ರಂದು ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದ ಹೊಯ್ಸಳ–184 ಸಿಬ್ಬಂದಿಗೆ ಬೆಳಿಗ್ಗೆ 6:30ರ ಸುಮಾರಿಗೆ ಮಾಹಿತಿ ಸಿಕ್ಕಿತು. ಚಪ್ಪರದಕಲು ರಸ್ತೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಬುಲೋರೋ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದು, ಅದರ ಹಿಂದೆ ಕೆಂಪು ಬಣ್ಣದ ಕಾರು ಹಿಂಬಾಲಿಸುತ್ತಿದೆ ಎಂಬ ಸುಳಿವು ದೊರಕಿತು. ತಕ್ಷಣ ಚಿಕ್ಕಜಾಲ ಪೊಲೀಸರು ನೆಕ್ಸ್ಟ್ ಚಾಪ್ಟರ್ ಹೋಟೆಲ್ ಬಳಿ ವಾಹನಗಳನ್ನು ತಡೆದಾಗ, ಬುಲೋರೋ ಡ್ರೈವರ್ ಮತ್ತು ಒಬ್ಬ ಅಸಾಮಿ ಓಡಿಹೋದರು. ವಾಹನ ಪರಿಶೀಲನೆ ಮಾಡಿದಾಗ ಅದರಲ್ಲಿ ಅನೇಕ ಜಾನುವಾರುಗಳು ಹಿಂಸೆ ಅನುಭವಿಸುತ್ತಿದ್ದವು. ನಂತರ ಸ್ಥಳಕ್ಕೆ ಹೆಚ್ಚುವರಿ ಸಿಬ್ಬಂದಿಯನ್ನು ಕರೆಸಿ ವಾಹನ ಹಾಗೂ ಜಾನುವಾರುಗಳನ್ನು ಚಿಕ್ಕಜಾಲ ಪೊಲೀಸ್ ಠಾಣೆಗೆ ಕಳುಹಿಸಲಾಯಿತು. ಇದಾದ ಬಳಿಕ ಹೋಟೆಲ್ ಹಿಂಭಾಗದಲ್ಲಿ ಕೆಂಪು ಕಾರನ್ನು ತಡೆದಾಗ ಅದರಲ್ಲಿ ಇದ್ದ 4–5 ಜನ ಆರೋಪಿ…
ಮುಂದೆ ಓದಿ..
