ಸುದ್ದಿ 

ಚಾಲಕನಾಗಿ ಕೆಲಸ ಮಾಡುತ್ತಿದ್ದ 20 ವರ್ಷದ ಯುವಕ ನಾಪತ್ತೆ: ಕುಟುಂಬಸ್ಥರಿಂದ ಆತಂಕ

ಕೆಜಿ ಹಳ್ಳಿ ನಿವಾಸಿ, 20 ವರ್ಷದ ವಿನಯ್ ಕುಮಾರ್ ಎಂಬ ಯುವಕ ಕಳೆದ 13 ದಿನಗಳಿಂದ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತಂತೆ ಅವರ ಸೋದರಿಯವರುಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಂಜಲಿಯವರ ಪ್ರಕಾರ, ವಿನಯ್ ಕುಮಾರ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ದಿನಾಂಕ 18-07-2025 ರಂದು ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಆದರೆ ಆ ದಿನದ ನಂತರದಿಂದ ಇವತ್ತಿನವರೆಗೆ ಅವರು ಮನೆಗೆ ಮರಳಿಲ್ಲ. ಅದೇ ದಿನ ರಾತ್ರಿ ಅವರ ಮೊಬೈಲ್ ಸಂಖ್ಯೆಗಳಿಗೂ ಕರೆ ಮಾಡಿದಾಗ ಫೋನುಗಳು ಸ್ವಿಚ್ ಆಫ್ ಆಗಿವೆ. ವಿನಯ್ ಕುಟುಂಬದವರೊಂದಿಗೆ ಸಂಪರ್ಕ ಕೂಡ ಸಾಧಿಸಿಲ್ಲ. ಅಂಜಲಿ ಅವರು ನೀಡಿದ ಮಾಹಿತಿಯಂತೆ, ವಿನಯ್‌ಗೆ ಕನ್ನಡ ಸ್ವಲ್ಪ ಬರುವುದು ಹಾಗೂ ಹಿಂದಿಯಲ್ಲಿ ಚೆನ್ನಾಗಿ ಮಾತನಾಡುತ್ತಾರೆ. ಅವರಿಗೆ ಯಾವುದೇ ಸ್ನೇಹಿತರು ಇಲ್ಲ, ಮತ್ತು ಎಲ್ಲೆಡೆ ಹುಡುಕಿದರೂ ಯಾವುದೇ ಮಾಹಿತಿ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ತಮ್ಮನನ್ನು ಪತ್ತೆ ಹಚ್ಚುವಂತೆ ಅವರು…

ಮುಂದೆ ಓದಿ..
ಸುದ್ದಿ 

ಮನೆ ಬೀಗ ಹಾಕಿ ಚಿನ್ನದ ಚೈನ್ ಕಳವು – ಕಳ್ಳತನ ಪ್ರಕರಣ ದಾಖಲು

ಬೆಂಗಳೂರು, ಜುಲೈ 30 – ಆನೇಕಲ್ ಪ್ರದೇಶದಲ್ಲಿ ಮನೆ ಬೀಗ ಹಾಕಿ ಒಳನುಗ್ಗಿದ ದುಷ್ಕರ್ಮಿಗಳು, ಗಾದ್ರೇಜ್ ಬೀರುವಿನಲ್ಲಿ ಇಡಲಾಗಿದ್ದ ಚಿನ್ನದ ಸರವನ್ನು ಕಳವು ಮಾಡಿರುವ ಘಟನೆ ವರದಿಯಾಗಿದೆ. ಪ್ರಕರಣ ಸಂಬಂಧ ಸ್ಥಳೀಯ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆ ಶ್ರೀಮತಿ ರಮಾ ಕೊಂ ರಾಮು ಅವರು, ತಾವು ಗಂಡ ಹಾಗೂ ಮಕ್ಕಳೊಂದಿಗೆ ವಾಸವಿದ್ದು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅವರು ನೀಡಿದ ಮಾಹಿತಿಯಂತೆ, ದಿನಾಂಕ 30-07-2025 ರಂದು ಬೆಳಗ್ಗೆ 7:30 ಗಂಟೆಗೆ ಅವರ ಮಕ್ಕಳು ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿದ್ದು, ನಂತರ ಬೆಳಗ್ಗೆ 9:00 ಗಂಟೆಗೆ ರಮಾ ದೆಯೂ ಸಹ ತನ್ನ ಕೆಲಸಕ್ಕೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಗಂಡನು ಮನೆಯಲ್ಲೇ ಇದ್ದನು. ಸಂಜೆ 6:30ರ ಸುಮಾರಿಗೆ ಮನೆಗೆ ಹಿಂತಿರುಗಿದಾಗ ಬಾಗಿಲಿಗೆ ಬೀಗ ಹಾಕಿರುವುದನ್ನು ಅವರು ಗಮನಿಸಿದರು. ತಕ್ಷಣ ಮನೆ ಮಾಲೀಕರ ಸಹಾಯದಿಂದ ಬೀಗ ತೆಗೆಯಲಾಯಿತು. ಮನೆಯೊಳಗೆ ಪ್ರವೇಶಿಸಿದಾಗ…

ಮುಂದೆ ಓದಿ..
ಸುದ್ದಿ 

ಸೋಂಪುರ ಗೇಟ್ ಬಳಿ ಶಶಿಕಲಾ ಮತ್ತು ಮಗ ಕಾಣೆಯಾಗಿದೆ – ಪತ್ತೆಹಚ್ಚುವಂತೆ ಕುಟುಂಬದ ಮನವಿ

ಸರ್ಜಾಪುರ, ಜುಲೈ1, 2025 ಆನೇಕಲ್ ತಾಲ್ಲೂಕು ಸರ್ಜಾಪುರ ಹೋಬಳಿಯ ಸೋಂಪುರ ಗೇಟ್ ನಲ್ಲಿ ವಾಸವಾಗಿದ್ದ ಶಶಿಕಲಾ ಮತ್ತು ಅವರ ಮಗ ವಿನಯ್ ಕುಮಾರ್ ಕಳೆದ ನಾಲ್ಕು ದಿನಗಳಿಂದ ಕಾಣೆಯಾಗಿದ್ದು, ಈ ಕುರಿತು ಅವರ ಪತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ರಾಯಚೂರು ಜಿಲ್ಲೆಯ ಉಟಕನೂರು ಗ್ರಾಮ ಮೂಲದ ಕುಟುಂಬವು ಕಳೆದ 18 ವರ್ಷಗಳಿಂದ ಬೆಂಗಳೂರು ನಗರದಲ್ಲಿ ವಾಸವಿದ್ದು, ಬಸವಲಿಂಗಪ್ಪ ರವರು ವಿದ್ಯುತ್ ತಜ್ಞನಾಗಿ ಕೆಲಸ ಮಾಡುತ್ತಿದ್ದಾರೆ. ದಿನಾಂಕ 26-07-2025 ರಂದು ಬೆಳಿಗ್ಗೆ ಸುಮಾರು 11 ಗಂಟೆಗೆ ಶಶಿಕಲಾ ಅವರು ತಮ್ಮ ಮಗನೊಂದಿಗೆ ಮನೆಯಿಂದ ಹೊರಟ್ಟಿದ ಬಳಿಕ ವಾಪಸ್ ಬಂದಿಲ್ಲ. ಸಂಬಂಧಿಕರು ಹಾಗೂ ಆತ್ಮೀಯರ ಮನೆಗಳಲ್ಲಿ ಹುಡುಕಿದರೂ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಯಾವುದೇ ವಿಳಾಸ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರು 30-07-2025 ರಂದು ಸಂಜೆ 7 ಗಂಟೆಗೆ ಠಾಣೆಗೆ ಹಾಜರಾಗಿ ದೂರು ದಾಖಲಿಸಿದ್ದಾರೆ. ಸ್ಥಳೀಯ ಪೊಲೀಸರು…

ಮುಂದೆ ಓದಿ..
ಸುದ್ದಿ 

ಮಟನ್ ಅಂಗಡಿಗೆ ಕಳ್ಳರು ನುಗ್ಗಿ ₹20,000 ನಗದು ಹಾಗೂ ಸ್ಟವ್ ಕಳ್ಳತನ

ಆನೇಕಲ್, ಜುಲೈ 31:ಆನೇಕಲ್ ಚಂದಾಪುರ ಮುಖ್ಯರಸ್ತೆಯ ಜೈಭೀಮ್ ಪೆಟ್ರೋಲ್ ಬಂಕ್ ಪಕ್ಕದಲ್ಲಿರುವ ಮಟನ್ ಅಂಗಡಿಗೆ ಕಳ್ಳರು ನುಗ್ಗಿ ₹20,000 ನಗದು ಹಾಗೂ ಒಂದು ಗ್ಯಾಸ್ ಸ್ಟವ್ ಸ್ಟವ್ ಅನ್ನು ಕದ್ದಿಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಅಂಗಡಿಯ ಮಾಲೀಕರಾದ ಕೆ. ಸಾದೀಕ್ ಪಾಷ್ ಅವರು ದಿನಾಂಕ 31/07/2025 ರಂದು ಬೆಳಿಗ್ಗೆ 11 ಗಂಟೆಗೆ ಠಾಣೆಗೆ ಹಾಜರಾಗಿ ದೂರು ನೀಡಿದವರಾಗಿದ್ದು, ಅವರು ತಮ್ಮ ಅಂಗಡಿಯನ್ನು 30ನೇ ತಾರೀಕಿನ ರಾತ್ರಿ ಸುಮಾರು 8.30ಕ್ಕೆ ಮುಚ್ಚಿ ಮನೆಗೆ ತೆರಳಿದ್ದರು. ಆದರ ದಿನ ಬೆಳಗ್ಗೆ 5.40ರ ಸುಮಾರಿಗೆ ಅಂಗಡಿ ತೆರೆಯಲು ಬಂದಾಗ ಮುಂಭಾಗದ ಬಾಗಿಲು ಒಡೆದು ಹಾಕಿರುವುದು ಗಮನಕ್ಕೆ ಬಂತು. ಅಂಗಡಿಯಲ್ಲಿ ಪರಿಶೀಲನೆ ನಡೆಸಿದಾಗ ಕ್ಯಾಶ್ ಬಾಕ್ಸ್‌ನಲ್ಲಿಟ್ಟಿದ್ದ ₹20,000 ನಗದು ಹಾಗೂ ಗ್ಯಾಸ್ ಸ್ಟವ್ ಕಳ್ಳತನವಾಗಿರುವುದು ತಿಳಿದುಬಂದಿದೆ. ಅನಾಮಿಕ ಕಿಡಿಗೇಡಿಗಳು ಅಂಗಡಿಯೊಳಗೆ ನುಗ್ಗಿ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಸಂದರ್ಭಕ್ಕೆ ಸಂಬಂಧಿಸಿದಂತೆ ಆನೇಕಲ್…

ಮುಂದೆ ಓದಿ..
ಸುದ್ದಿ 

” ಆದರ್ಶವೊಂದನ್ನು ಬೆನ್ನು ಹತ್ತುವುದು ಮನುಷ್ಯನಿಗೆ ಕ್ರಿಯಾಶೀಲತೆಯನ್ನು ಮತ್ತು ಸೊಗಸಾದ ನೈತಿಕ ಧೈರ್ಯವನ್ನು ನೀಡುತ್ತದೆ “

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್…… ಆದ್ದರಿಂದ…… ಸಾವಿನ ಭಯದಿಂದ ತಪ್ಪು ಮಾಡುವುದು ಬಿಡಿ….. ಸೋಲಿನ ಭಯದಿಂದ ಚಿಂತಿಸುವುದನ್ನು ಬಿಡಿ……. ವಿಫಲತೆಯ ಭಯದಿಂದ ಕೊರಗುವುದನ್ನು ಬಿಡಿ…… ಸಾವು – ಸೋಲು – ವಿಫಲತೆಯ ಭಯ ನಮ್ಮನ್ನು ಜೀವನ ಪೂರ್ತಿ ಹಿಂಡುತ್ತಲೇ ಇರುತ್ತದೆ. ನಾವು ಮಾಡುವ ಬಹುತೇಕ ತಪ್ಪುಗಳು ಇವುಗಳ ಕಾರಣಕ್ಕಾಗಿಯೇ ಆಗಿರುತ್ತದೆ.ಆಸ್ಪತ್ರೆ, ಪೋಲೀಸ್, ನ್ಯಾಯಾಲಯ, ದೇವರು, ಧರ್ಮ, ಸ್ವಾಮಿಗಳು ಎಲ್ಲವುಗಳ ಸುತ್ತ ನಾವು ಸುತ್ತುವುದು ಮತ್ತು ಅನೇಕ ಭ್ರಮಾತ್ಮಕ ಮೌಢ್ಯಗಳಿಗೆ ಒಳಗಾಗುವುದು ಸಹ ಈ ಮೂರರ ಕಾರಣಕ್ಕಾಗಿ.ಇವುಗಳನ್ನು ಘನತೆಯಿಂದ ಸ್ವೀಕರಿಸುವ, ವಾಸ್ತವವಾಗಿ ಎದುರಿಸುವ, ಸಹಜವಾದ ಕ್ರಿಯೆ ಎನ್ನುವ ಸಾಮಾಜಿಕ ವಾತಾವರಣ ನಮ್ಮ ವ್ಯವಸ್ಥೆಯಲ್ಲಿ ಇಲ್ಲ.ಮನುಷ್ಯ ಸಂಘ ಜೀವಿ. ಒಂದು ವೇಳೆ ವೈಯಕ್ತಿಕ ನೆಲೆಯಲ್ಲಿ ಇವುಗಳನ್ನು ಸ್ವಾಭಾವಿಕವಾಗಿ ಒಪ್ಪಿಕೊಂಡರು ನಮ್ಮ ಸುತ್ತಮುತ್ತಲಿನ ಜನರ ಪ್ರತಿಕ್ರಿಯೆ ಅತ್ಯಂತ ನಕಾರಾತ್ಮಕವಾಗಿ ಇರುತ್ತದೆ. ಅದನ್ನು ಎದುರಿಸುವುದೇ ಒಂದು ದೊಡ್ಡ ಸವಾಲು.ಇದು ಹೇಳುವಷ್ಟು ಸುಲಭವಲ್ಲ. ಆದರೆ…

ಮುಂದೆ ಓದಿ..
ಸುದ್ದಿ 

ಬಾಲಕನ ಅಪಹರಿಸಿ ಬರ್ಬರ ಹತ್ಯೆಗೈದ ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು..

ಬೆಂಗಳೂರು: ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ ಬಾಲಕ ನಿಶ್ಚಿತ್‌ನನ್ನು ಅಪಹರಿಸಿ, ಬರ್ಬರವಾಗಿ ಹತ್ಯೆಗೈದ ಇಬ್ಬರು ಆರೋಪಿಗಳ ಕಾಲಿಗೆ ಹುಳಿಮಾವು ಠಾಣೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿಗಳಾಗಿ ಗುರುಮೂರ್ತಿ ಮತ್ತು ಗೋಪಾಲಕೃಷ್ಣ ಎಂಬ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.ಗುರುವಾರ ತಡರಾತ್ರಿ ಕಗ್ಗಲೀಪುರ ರಸ್ತೆಯ ಬಳಿಯಿದ್ದ ಆರೋಪಿಗಳನ್ನು ವಶಕ್ಕೆ ಪಡೆಯಲು ಹುಳಿಮಾವು ಠಾಣೆ ಪೊಲೀಸರು ತೆರಳಿದ್ದರು. ಈ ವೇಳೆ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಪೊಲೀಸರ ಮೇಲೆ ದಾಳಿ ಮಾಡಲು ಯತ್ನಿಸಿದಾಗ, ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಮತ್ತು ಪಿಎಸ್ಐ ಅರವಿಂದ್ ಕುಮಾರ್ ಅವರ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.ಘಟನೆಯಲ್ಲಿ ಗುರುಮೂರ್ತಿಯ ಎರಡೂ ಕಾಲುಗಳು ಮತ್ತು ಗೋಪಾಲಕೃಷ್ಣನ ಒಂದು ಕಾಲಿಗೆ ಗುಂಡು ತಗುಲಿದ್ದು, ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಹಿನ್ನೆಲೆ: ಬೆಂಗಳೂರು ಅರಕೆರೆಯ ಶಾಂತಿನಿಕೇತನ ಲೇಔಟ್‌ನಲ್ಲಿ ನಿಶ್ಚಿತ್ ಮತ್ತು ಅವನ ಪೋಷಕರು ವಾಸಿಸುತ್ತಿದ್ದರು. ನಿಶ್ಚಿತ್‌ನ ತಂದೆ ನಗರದ ಪ್ರತಿಷ್ಠಿತ…

ಮುಂದೆ ಓದಿ..
ಸುದ್ದಿ 

ಜಮೀನಿಗೆ ಅಕ್ರಮ ಪ್ರವೇಶ, ಹಲ್ಲೆ – ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ಪ್ರಕರಣ ದಾಖಲು

ಬೆಂಗಳೂರು, ಜುಲೈ 29:ಸರ್ಜಾಪುರ ಹೋಬಳಿ, ಹಲಹಳ್ಳಿ ಗ್ರಾಮದಲ್ಲಿ ಜಮೀನಿನ ಮಾಲೀಕತ್ವದ ವಿಚಾರಕ್ಕೆ ಸಂಬಂಧಿಸಿ ಉಂಟಾದ ಜಗಳವು ಹಲ್ಲೆಗೆ reason ಆಗಿ, ಪೋಲೀಸ್ ಠಾಣೆಗೆ ದೂರು ನೀಡಿದ ಘಟನೆ ಬೆಳಕಿಗೆ ಬಂದಿದೆ. ಬಾಬು ಅವರ ಹೇಳಿಕೆಯಂತೆ, ಅವರು ಸರ್ವೆ ನಂ.71 ರಲ್ಲಿ ಇರುವ 29 ಗುಂಟೆ ಜಮೀನನ್ನು ದಿನಾಂಕ 03/06/2024 ರಂದು ಕುಸುಮಾ ಆರ್ ಶೆಟ್ಟಿ ಎಂಬುವವರಿಂದ ಖರೀದಿಸಿದ್ದರು. ಈ ಜಮೀನಿಗೆ ಭೂ ಪರಿವರ್ತನೆಯನ್ನೂ ಮಾನ ಜಿಲ್ಲಾಧಿಕಾರಿಗಳಿಂದ 24/05/2024 ರಂದು ಪಡೆದು, ಸುತ್ತಲೂ ಕಾಂಪೌಂಡ್ ಗೋಡೆಯನ್ನೂ ಕಟ್ಟಿಸಿದ್ದಾಗಿ ತಿಳಿಸಿದ್ದಾರೆ. ಆದರೆ ದಿನಾಂಕ 26/07/2025 ರಂದು ಮಧ್ಯಾಹ್ನ 2:30 ಗಂಟೆ ಸುಮಾರಿಗೆ, ಬಾಬು ಅವರ ಅಣ್ಣನ ಮಗ ವಿನೋದ್ ಅವರಿಂದ ಫೋನ್ ಕರೆ ಬಂದಿದ್ದು, “ಯಾರೋ 5-6 ಜನರು ಜಮೀನಿಗೆ ಬಂದು ಕಾಂಪೌಂಡ್ ಗೋಡೆಯನ್ನು ಒಡೆಯುತ್ತಿದ್ದಾರೆ” ಎಂಬ ಮಾಹಿತಿ ನೀಡಿದ್ದಾನೆ. ಬಾಬು ಅವರು ಸ್ಥಳಕ್ಕೆ ತಕ್ಷಣ ತೆರಳಿದಾಗ, ಗೌರಮ್ಮ, ಆಕೆಯ…

ಮುಂದೆ ಓದಿ..
ಸುದ್ದಿ 

ಜಮೀನು ವಿವಾದ ಹಿನ್ನೆಲೆ ಗಲಾಟೆ: ನ್ಯಾಯಾಲಯದ ತಡೆಯಾಜ್ಞೆ ಇರುವ ಜಾಗದಲ್ಲಿ ಜೆ.ಸಿ.ಬಿ. ಕೆಲಸ – ವ್ಯಕ್ತಿಗೆ ಹಲ್ಲೆ, ಜೀವ ಬೆದರಿಕೆ

ತಿಪ್ಪಸಂದ್ರ, ಜುಲೈ 29:ಆನೇಕಲ್ ತಾಲೂಕು, ಸರ್ಜಾಪುರ ಹೋಬಳಿ, ತಿಪ್ಪಸಂದ್ರ ಗ್ರಾಮದ ಸರ್ವೆ ನಂಬರ್ 71 ರಲ್ಲಿನ 3.24 ಎಕರೆ ಜಮೀನಿಗೆ ಸಂಬಂಧಿಸಿದ ಖಾತೆಯ ವಿವಾದ ಪ್ರಕರಣ ಮತ್ತೊಮ್ಮೆ ಗಂಭೀರ ತಿರುವು ಪಡೆದಿದೆ. ಈ ಜಾಗಕ್ಕೆ ಸಂಬಂಧಪಟ್ಟಂತೆ ಭಾಗಹಕ್ಕಿಗಾಗಿ ರತ್ನಮ್ಮನವರ ಕುಟುಂಬ ಆನೇಕಲ್ ಸಿವಿಲ್ ನ್ಯಾಯಾಲಯದಲ್ಲಿ OS ನಂ. 498/2025 ಮೂಲಕ ದಾವೆ ಹೂಡಿದ್ದು, ತಡೆಯಾಜ್ಞೆ ಪಡೆಯಲಾಗಿತ್ತು. ರತ್ನಮ್ಮನವರು ನೀಡಿದ ಮಾಹಿತಿಯಂತೆ, ಈ ಜಮೀನಿಗೆ ಸಂಬಂಧಿಸಿದಂತೆ ತಿಗಳಚೌಡದೇನಹಳ್ಳಿಯ ಟಿ.ವಿ. ಬಾಬು, ತಿಪ್ಪಸಂದ್ರದ ಸುರೇಶ್ ಹಾಗೂ ಇತರರು, ಬಿಲ್ವರ್ ವಿವೇಕ್ ಗಾರ್ಗ್ ಪರವಾಗಿ ತಕರಾರು ತಂದು, ದಿನಾಂಕ 26-07-2025 ರಂದು ಮಧ್ಯಾಹ್ನ 3.30 ಗಂಟೆ ಸುಮಾರಿಗೆ ಜಮೀನಿಗೆ ಜೆ.ಸಿ.ಬಿ. ಯಂತ್ರಗಳನ್ನು ತಂದು ಜಮೀನನ್ನು ಸಮಕರಿಸುತ್ತಿದ್ದರು. ಈ ದೃಶ್ಯವನ್ನು ನೋಡಿ ಪ್ರಶ್ನಿಸಿದಾಗ ಟಿ.ವಿ. ಬಾಬು ಅವರು ಬಾಯಿಗೆ ಬಂದಂತೆ ನಿಂದಿಸಿ, ಕೈಗಳಿಂದ ಹಲ್ಲೆ ಮಾಡಿ, ಎಳೆದಾಡಿದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ,…

ಮುಂದೆ ಓದಿ..
ಸುದ್ದಿ 

ಮದುವೆ ರದ್ದಾದ ನಿರಾಶೆಯಲ್ಲಿ ಯುವತಿ ಕಾಣೆಯಾದ ಪ್ರಕರಣ

ಆನೇಕಲ್, ಜುಲೈ 30:ಮದುವೆ ರದ್ದಾದ ಘಟನೆಗೆ ಮನನೊಂದು ಯುವತಿ ಮನೆ ಬಿಟ್ಟು ಕಾಣೆಯಾಗಿರುವ ಘಟನೆ ಆನೇಕಲ್ ಟೌನ್‌ನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆನೇಕಲ್ ಟೌನ್‌ ಪೊಲೀಸ್ ಠಾಣೆಯಲ್ಲಿ ಪತ್ತೆಹಚ್ಚುವಿಕೆಗೆ ದೂರು ದಾಖಲಾಗಿದೆ. ಕೆ.ಎಸ್.ಆರ್.ಟಿ.ಸಿ ಕಾಲೋನಿಯ ಸ್ವಪ್ನ ಮಾರ್ಕೆಟ್ ಬಳಿಯ ನಿವಾಸಿಯಾದ ಮಹದೇವ ಬಿನ್ ನಾಗರಾಜು ಅವರು ನೀಡಿದ ದೂರಿನ ಪ್ರಕಾರ, ತನ್ನ ಅಕ್ಕ ಮಹಾದೇವಿ (ವಯಸ್ಸು: 29) ಕಳೆದ ನಾಲ್ಕು ತಿಂಗಳ ಹಿಂದೆ ತಮ್ಮ ಪೋಷಕರ ಸಮ್ಮುಖದಲ್ಲಿ ಆನೇಕಲ್ ನಿವಾಸಿಯೊಬ್ಬರೊಂದಿಗೆ ನಿಶ್ಚಿತಾರ್ಥಗೊಂಡಿದ್ದರು. ಆದರೆ ಹಲವಾರು ಕಾರಣಗಳಿಂದಾಗಿ ದಿನಾಂಕ 25-07-2025 ರಂದು ಮದುವೆ ರದ್ದಾಗಿತ್ತು. ಈ ವಿಚಾರದಿಂದ ಮಾನಸಿಕವಾಗಿ ಬೇಸತ್ತಿದ್ದ ಅವರು 27-07-2025 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮನೆಯವರಿಲ್ಲದ ಸಮಯದಲ್ಲಿ ತನ್ನ ಬಟ್ಟೆಗಳನ್ನು ಬ್ಯಾಗಿನಲ್ಲಿ ಹಾಕಿಕೊಂಡು, ಮನೆ ಬಿಟ್ಟು ಹೊರಟಿದ್ದಾರೆ. ಆಕೆ ಕೆಎ-51 ಹೆಚ್ ಕೆ-8915 ಸಂಖ್ಯೆಯ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋಗಿದ್ದು, ಒಂದು…

ಮುಂದೆ ಓದಿ..
ಸುದ್ದಿ 

ಪೀಣ್ಯದಲ್ಲಿ BMTC ಬಸ್ ಡಿಕ್ಕಿ: 21 ವರ್ಷದ ಯುವಕ ಸ್ಥಳದಲ್ಲೇ ದುರ್ಮರಣ

ಬೆಂಗಳೂರು, ಜುಲೈ 29 (ಮಂಗಳವಾರ): ಪೀಣ್ಯ ಎನ್.ಟಿ.ಟಿ.ಎಫ್ ರಸ್ತೆ ಬಳಿ ಮಂಗಳವಾರ ಬೆಳಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದೇವಿಂದ್ರಪ್ಪ (21) ಎಂಬ ಯುವಕ ಬೈಕ್ ಸಮೇತ ಬಿದ್ದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಮೃತ ದೇವಿಂದ್ರಪ್ಪ, ಪೀಣ್ಯ ಪ್ರದೇಶದ ನಿವಾಸಿಯಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದ. ಅವನು ದಿನಾಂಕ 29-07-2025 ರಂದು ಬೆಳಗ್ಗೆ 8.00 ಗಂಟೆಗೆ ತನ್ನ ಬೈಕ್ (ಸೈಂಡರ್ ಬೈಕ್ ನಂ: KA-33-EA-8498) ಮೂಲಕ ಗಾರೆ ಕೆಲಸಕ್ಕೆ ಹೋಗಿದ್ದನು. ಆದರೆ ಕೆಲವೇ ಹೊತ್ತಿನಲ್ಲಿ ಪೀಣ್ಯ ಸಂಚಾರ ಪೊಲೀಸರು ಫೋನ್ ಮೂಲಕ ಅಪಘಾತದ ಮಾಹಿತಿ ನೀಡಿ ಪೋಷಕರನ್ನು ಘಟನಾ ಸ್ಥಳಕ್ಕೆ ಕರೆಯಿದರು. ತಂದೆ ಮೈಲಾರಿ ಅವರು ಸ್ಥಳಕ್ಕೆ ಧಾವಿಸಿ ನೋಡಿದಾಗ, ದೇವಿಂದ್ರಪ್ಪನು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿರುವುದು ದೃಢಪಟ್ಟಿತು. ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ, ಪೀಣ್ಯ ಎನ್.ಟಿ.ಟಿ.ಎಫ್ ರಸ್ತೆ ಮೇಲೆ ಟಿ.ವಿ.ಎಸ್ ಕ್ರಾಸ್ ಕಡೆಗೆ ಸಾಗುತ್ತಿದ್ದ ದೇವಿಂದ್ರಪ್ಪನ ಬೈಕಿಗೆ BMTC…

ಮುಂದೆ ಓದಿ..