ಬೆಂಗಳೂರಿನಲ್ಲಿ ಆಸ್ತಿ ದಾಖಲೆ ವಂಚನೆ ಪ್ರಕರಣ: ಗೃಹ ಮಂಡಳಿಗೆ ಆರ್ಥಿಕ ನಷ್ಟ
ಬೆಂಗಳೂರು, ಆಗಸ್ಟ್ 2–2025ಯಲಹಂಕ ಉಪನಗರದ ಸಕ್ಸರ್-ಬಿ ಪ್ರದೇಶದಲ್ಲಿ ಆಸ್ತಿ ದಾಖಲೆಗಳ ಸಂಬಂಧ ಗಂಭೀರ ವಂಚನೆಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಮೂಲೆ ನಿವೇಶನ ಸಂಖ್ಯೆ 239ಕ್ಕೆ ಸಂಬಂಧಿಸಿದ ದಾಖಲೆಗಳು ಕಛೇರಿಯಲ್ಲಿ ಲಭ್ಯವಿಲ್ಲ ಎಂಬ ವಿಚಾರವನ್ನು ಆಧರಿಸಿ, ನ್ಯಾಯಾಲಯಕ್ಕೆ ಎಫ್‌ಐಆರ್ ಸಲ್ಲಿಸಲಾಗಿದೆ. ಪಿರ್ಯಾದಿ ದೂರಿನ ಪ್ರಕಾರ, ದಿನಾಂಕ 29-07-2009 ರಂದು ಶ್ರೀ ಎಸ್.ವಿ. ಹರಿಪ್ರಸಾದ್ ಅವರಿಂದ ಶ್ರೀ ಕೆ.ಜಿ. ಮಂಜು ಅವರಿಗೆ, ನಂತರ 09-04-2012 ರಂದು ಶ್ರೀ ಮಂಜು ಅವರಿಂದ ಶ್ರೀ ವೈ.ಸಿ. ಚಿದಾನಂದ ಅವರಿಗೆ ನೋಂದಣಿ ಮೂಲಕ ಆಸ್ತಿ ಬದಲಾವಣೆ ನಡೆದಿದೆ. ಆದರೆ ಈ ಸಂಪೂರ್ಣ ಪ್ರಕ್ರಿಯೆ ವಿರುದ್ಧವಾಗಿ ದಿನಾಂಕ 18-04-2022 ರಂದು ಉಪನೋಂದಣಾಧಿಕಾರಿಗಳಿಗೆ ದಾಖಲಾತಿ ಲಭ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಪ್ರಕ್ರಿಯೆಯಲ್ಲಿ ಕ್ರಯಪತ್ರ, ಋಣಭಾರ ಪತ್ರ ಹಾಗೂ ದಾಖಲೆಗಳ ದೃಢೀಕೃತ ನಕಲುಗಳು ಲಗತ್ತಿಸಲ್ಪಟ್ಟಿದ್ದರೂ, ಎಸ್.ವಿ. ಹರಿಪ್ರಸಾದ್ ಅವರಿಗೆ ಗೃಹ ಮಂಡಳಿಯಿಂದ ಹಂಚಿಕೆ ಅಥವಾ ಕ್ರಯಪತ್ರ…
ಮುಂದೆ ಓದಿ..
