ಸುದ್ದಿ 

ಜಾನುವಾರುಗಳ ಅಕ್ರಮ ಸಾಗಣೆ – ಇಬ್ಬರು ಆರೋಪಿ ಬಂಧನ

ಬೆಂಗಳೂರು 20 ಆಗಸ್ಟ್ 2025ಬೆಂಗಳೂರು ಗ್ರಾಮಾಂತರದಲ್ಲಿ ಪೊಲೀಸರು ಜಾನುವಾರುಗಳ ಅಕ್ರಮ ಸಾಗಾಣಿಕೆ ನಡೆಸುತ್ತಿದ್ದ ವಾಹನವನ್ನು ಪತ್ತೆಹಚ್ಚಿದ್ದಾಆಗಸ್ಟ್ 16ರಂದು ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದ ಹೊಯ್ಸಳ–184 ಸಿಬ್ಬಂದಿಗೆ ಬೆಳಿಗ್ಗೆ 6:30ರ ಸುಮಾರಿಗೆ ಮಾಹಿತಿ ಸಿಕ್ಕಿತು. ಚಪ್ಪರದಕಲು ರಸ್ತೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಬುಲೋರೋ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದು, ಅದರ ಹಿಂದೆ ಕೆಂಪು ಬಣ್ಣದ ಕಾರು ಹಿಂಬಾಲಿಸುತ್ತಿದೆ ಎಂಬ ಸುಳಿವು ದೊರಕಿತು. ತಕ್ಷಣ ಚಿಕ್ಕಜಾಲ ಪೊಲೀಸರು ನೆಕ್ಸ್ಟ್ ಚಾಪ್ಟರ್ ಹೋಟೆಲ್ ಬಳಿ ವಾಹನಗಳನ್ನು ತಡೆದಾಗ, ಬುಲೋರೋ ಡ್ರೈವರ್ ಮತ್ತು ಒಬ್ಬ ಅಸಾಮಿ ಓಡಿಹೋದರು. ವಾಹನ ಪರಿಶೀಲನೆ ಮಾಡಿದಾಗ ಅದರಲ್ಲಿ ಅನೇಕ ಜಾನುವಾರುಗಳು ಹಿಂಸೆ ಅನುಭವಿಸುತ್ತಿದ್ದವು. ನಂತರ ಸ್ಥಳಕ್ಕೆ ಹೆಚ್ಚುವರಿ ಸಿಬ್ಬಂದಿಯನ್ನು ಕರೆಸಿ ವಾಹನ ಹಾಗೂ ಜಾನುವಾರುಗಳನ್ನು ಚಿಕ್ಕಜಾಲ ಪೊಲೀಸ್ ಠಾಣೆಗೆ ಕಳುಹಿಸಲಾಯಿತು. ಇದಾದ ಬಳಿಕ ಹೋಟೆಲ್ ಹಿಂಭಾಗದಲ್ಲಿ ಕೆಂಪು ಕಾರನ್ನು ತಡೆದಾಗ ಅದರಲ್ಲಿ ಇದ್ದ 4–5 ಜನ ಆರೋಪಿ…

ಮುಂದೆ ಓದಿ..
ಸುದ್ದಿ 

ವಾಟ್ಸಪ್ ವಂಚನೆ – ಸ್ನೇಹಿತನ ಫೋಟೋ ಬಳಸಿಕೊಂಡು 42,500 ರೂ. ಮೋಸ!

ವಾಟ್ಸಪ್ ವಂಚನೆ – ಸ್ನೇಹಿತನ ಫೋಟೋ ಬಳಸಿಕೊಂಡು 42,500 ರೂ. ಮೋಸ!ಬೆಂಗಳೂರು 20 ಆಗಸ್ಟ್ 2025ಬೆಂಗಳೂರು ಹೆಬ್ಬಾಳದ ಕೆಂಪಾಪುರದಲ್ಲಿ ಸ್ನೇಹಿತನ ಫೋಟೋ ಬೆಳೆಸಿ ವಾಟ್ಸಪ್‌ನಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಮಾಹಿತಿಯ ಪ್ರಕಾರ, ದೂರುದಾರರು ಫೆಡರಲ್ ಬ್ಯಾಂಕ್ ಖಾತೆ ಸಂಖ್ಯೆ 15820100064397 ಹೊಂದಿದ್ದು, ದಿನಾಂಕ 30/06/2025 ರಂದು ಅಪರಿಚಿತ ವ್ಯಕ್ತಿಯೊಬ್ಬನು ಅವರ ಸ್ನೇಹಿತನ ಫೋಟೋವನ್ನು ತನ್ನ ವಾಟ್ಸಪ್ ಡಿ.ಪಿ.ಯಾಗಿ ಇಟ್ಟುಕೊಂಡು ಮೊಬೈಲ್ ಸಂಖ್ಯೆ 9389659802ರಿಂದ ಸಂದೇಶ ಕಳುಹಿಸಿದ್ದಾನೆ. ಆ ಸಂದೇಶದಲ್ಲಿ ತುರ್ತು ಹಣದ ಅವಶ್ಯಕತೆ ಇದೆ ಎಂದು ಹೇಳಿದ್ದರಿಂದ, ದೂರುದಾರರು ನಿಜವಾಗಿಯೂ ತಮ್ಮ ಸ್ನೇಹಿತನೇ ಎಂದು ಭಾವಿಸಿ, ಆ ವ್ಯಕ್ತಿಗೆ ಒಟ್ಟು ₹42,500 ಹಣವನ್ನು ವರ್ಗಾಯಿಸಿದ್ದಾರೆ. ನಂತರ ವಂಚನೆ ನಡೆದಿರುವುದು ಗೊತ್ತಾಗಿ, ಅವರು ಅಮೃತಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆ ಅಪರಿಚಿತ ಆರೋಪಿಯನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವ ಕಾರ್ಯ ಆರಂಭಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಬ್ರಿಗೇಡ್ ಎಲ್ಲೋರಾಡೋ ಪಾರ್ಕ್‌ನಲ್ಲಿ ಗೃಹ ಹಿಂಸೆ ಪ್ರಕರಣ

ಬ್ರಿಗೇಡ್ ಎಲ್ಲೋರಾಡೋ ಪಾರ್ಕ್‌ನಲ್ಲಿ ಗೃಹ ಹಿಂಸೆ ಪ್ರಕರಣ ಬೆಂಗಳೂರು:20 ಆಗಸ್ಟ್ 2025ನಗರದ ಬ್ರಿಗೇಡ್ ಎಲ್ಲೋರಾಡೋ ಇರೋ ಸ್ಪೇಸ್ ಪಾರ್ಕ್‌ನಲ್ಲಿ ವಾಸಿಸುತ್ತಿರುವ ಮಹಿಳೆ ತಮ್ಮ ಗಂಡ ಹಾಗೂ ಅತ್ತೆ-ಮಾವನ ವಿರುದ್ಧ ಗೃಹ ಹಿಂಸೆ ಮತ್ತು ಮಾನಸಿಕ ಕಿರುಕುಳದ ಪ್ರಕರಣ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೀಡಿತ ಮಹಿಳೆಯ ಹೇಳಿಕೆಯ ಪ್ರಕಾರ, ಅವರು 2019ರಲ್ಲಿ ಕುಮಾರಸೌರಭ ಎಂಬವರೊಂದಿಗೆ ವಿವಾಹವಾಗಿದ್ದು, ಮದುವೆಯಾದ ನಂತರದಿಂದಲೇ ಅತ್ತೆ-ಮಾವ ಹಾಗೂ ಗಂಡನಿಂದ ನಿರಂತರವಾಗಿ ಕಿರುಕುಳ ಅನುಭವಿಸುತ್ತಿದ್ದಾರೆ. ಮಕ್ಕಳಿಲ್ಲದ ಕಾರಣದಿಂದ ಪೋಷಕರ ಆರೈಕೆಗಾಗಿ ತಮ್ಮ ಗಂಡ ಒಪ್ಪಿಕೊಂಡಿದ್ದರೂ, ನಂತರ ಅತ್ತೆ-ಮಾವರು ಅದನ್ನು ವಿರೋಧಿಸಿ, ಗಂಡನಿಗೆ ತನ್ನ ವಿರುದ್ಧ ಪ್ರಚೋದನೆ ನೀಡುತ್ತಿದ್ದರೆಂದು ದೂರಿನಲ್ಲಿ ಹೇಳಲಾಗಿದೆ. 2025ರ ಆಗಸ್ಟ್ 17ರಂದು ಬೆಳಗ್ಗೆ ಸುಮಾರು 8.30ಕ್ಕೆ ನಡೆದ ಜಗಳದ ವೇಳೆ ಗಂಡನು ಪತ್ನಿಯ ಕೂದಲು ಎಳೆದು ತಲೆಗೆ ಹಾಗೂ ಮುಖಕ್ಕೆ ಕೈಯಿಂದ ಹೊಡೆದಿದ್ದಾನೆ. ಮಧ್ಯಾಹ್ನ 2 ಗಂಟೆಯವರೆಗೂ ಜಗಳ ಮುಂದುವರಿದ…

ಮುಂದೆ ಓದಿ..
ಸುದ್ದಿ 

15 ವರ್ಷದ ಬಾಲಕಿ ಕಾಣೆಯಾದ ಪ್ರಕರಣ

ಬೆಂಗಳೂರು 20 ಆಗಸ್ಟ್ 2025ಬೆಂಗಳೂರು: ಜಡಿಗೇನಹಳ್ಳಿಯ ನಿವಾಸಿ ಮಹಿಳೆಯೊಬ್ಬರು ತಮ್ಮ 15 ವರ್ಷದ ಮಗಳು ಕಾಣೆಯಾದ ಬಗ್ಗೆ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರಿಗೆ ನೀಡಿದ ಮಾಹಿತಿಯ ಪ್ರಕಾರ, ಅರುಣಾ ಅವರ ಗಂಡ ರವಿಕುಮಾರ್ ಹಾಗೂ ಇಬ್ಬರು ಮಕ್ಕಳಾದ ಪ್ರೀತಿ ಆರ್ (15 ವರ್ಷ), ಆಕಾಶ್ (12 ವರ್ಷ) ಅವರೊಂದಿಗೆ ವಾಸವಾಗಿದ್ದಾರೆ. ಮಗಳು ಪ್ರೀತಿ ರವರು ಆಗಾಗ ಅತ್ತೆ ಚೆನ್ನಮ್ಮ ಅವರ ಹೂವಿನಾಯಕನಹಳ್ಳಿಯ ಮನೆಯಲ್ಲಿ ತಂಗಿ ಅವರ ಚಿಲ್ಲರೆ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದಳು. ಆಗಸ್ಟ್ 14ರಂದು ರಾತ್ರಿ ಸುಮಾರು 8:45ಕ್ಕೆ ಮಗಳು ಮನೆವರ ಜೊತೆ ವಿಡಿಯೋ ಕಾಲ್ ಮಾಡಿ, ನಂತರ 9:15ರ ವೇಳೆಗೆ ಹೊರಗಿನ ವಾಷ್ ರೂಮ್‌ಗೆ ಹೋಗುವುದಾಗಿ ಹೇಳಿ ಹೊರಟು ಹೋಗಿದ್ದಳು. ಆದರೆ ಬಳಿಕ ಮನೆಗೆ ಮರಳದೆ ಕಾಣೆಯಾಗಿದ್ದಾಳೆ. ಕುಟುಂಬದವರು ಹುಡುಕಾಟ ನಡೆಸಿದರೂ ಪತ್ತೆಯಾಗದ ಕಾರಣ ಮೊಬೈಲ್ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿದ್ದು, ಆತ್ರೆಯಿಂದ…

ಮುಂದೆ ಓದಿ..
ಸುದ್ದಿ 

ಬೆಂಗಳೂರು: ಆಂಜನೇಯ ದೇವಸ್ಥಾನ ಹುಂಡಿ ಕಳ್ಳತನ

ಬೆಂಗಳೂರು 20 ಆಗಸ್ಟ್ 2025 ಬೆಂಗಳೂರು: ಆಂಜನೇಯ ದೇವಸ್ಥಾನ ಹುಂಡಿ ಕಳ್ಳತನ ಬೆಂಗಳೂರು 20 ಆಗಸ್ಟ್ 2025ನಗರ ಅಗ್ರಹಾರ ಗ್ರಾಮದಲ್ಲಿ ಇರುವ ಆಂಜನೇಯ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಅಶ್ವಥ್ ಎ ಪಿ ಅವರ ಹೇಳಿಕೆ ಪ್ರಕಾರ, ಅವರು ಪ್ರತಿದಿನ ದೇವಸ್ಥಾನದ ಸ್ವಚ್ಛತೆ ಮಾಡುವುದರ ಜೊತೆಗೆ ಲೈಟ್ ಹಚ್ಚುವ ಕೆಲಸ ಮಾಡುತ್ತಿದ್ದರು. 17 ಆಗಸ್ಟ್ 2025 ಸಂಜೆ 6:30ಕ್ಕೆ ದೇವಸ್ಥಾನ ಪರಿಶೀಲನೆ ಮಾಡಿದಾಗ ಎಲ್ಲವೂ ಸರಿಯಾಗಿತ್ತು. ಆದರೆ 18 ಆಗಸ್ಟ್ 2025 ಬೆಳಿಗ್ಗೆ 8:00ಕ್ಕೆ ದೇವಸ್ಥಾನದ ಲೈಟ್ ಆಫ್ ಮಾಡಲು ಹೋದಾಗ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಹುಂಡಿಯನ್ನು ಒಡೆದು ಅದರೊಳಗಿದ್ದ ರೂ. 20,000 ನಗದು ಹಣವನ್ನು ಕದ್ದೊಯ್ದಿರುವುದು ಪತ್ತೆಯಾಗಿದೆ. ಈ ಬಗ್ಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕಳ್ಳರನ್ನು ಶೀಘ್ರವೇ ಪತ್ತೆ ಮಾಡಿ ದೇವಸ್ಥಾನದ ಹಣವನ್ನು ವಾಪಸು ಪಡೆಯಲು…

ಮುಂದೆ ಓದಿ..
ಸುದ್ದಿ 

ಟೆಲಿಗ್ರಾಂ ವಂಚನೆ – ಲಕ್ಷಾಂತರ ರೂಪಾಯಿ ಕಳೆದುಕೊಂಡ ಬಲಿಯಾದ ದೂರು

ಟೆಲಿಗ್ರಾಂ ವಂಚನೆ – ಲಕ್ಷಾಂತರ ರೂಪಾಯಿ ಕಳೆದುಕೊಂಡ ಬಲಿಯಾದ ದೂರು ಬೆಂಗಳೂರು:20 ಆಗಸ್ಟ್ 2025ನಗರದಲ್ಲಿ ಬಿಇಎಲ್ ಲೇಔಟ್ ವಿದ್ಯಾರಣ್ಯಪುರ ದಲಿ ಮತ್ತೊಮ್ಮೆ ಟೆಲಿಗ್ರಾಂ ಮೂಲಕ ಹಣ ಗಳಿಸುವ ಕೆಲಸದ ಹೆಸರಿನಲ್ಲಿ ವಂಚನೆ ನಡೆದಿದೆ. ಶ್ರೀನಿವಾಸ್ ಅವರು ಪೊಲೀಸರಿಗೆ ನೀಡಿರುವ ಮಾಹಿತಿಯ ಪ್ರಕಾರ, ಅಪರಿಚಿತ ವ್ಯಕ್ತಿ “Athira” (Telegram ID: @Athira582) ಎಂಬ ಹೆಸರಿನಲ್ಲಿ ಸಂಪರ್ಕಿಸಿಕೊಂಡು, Godrej Properties Promotional Job ಎನ್ನುವ ಸುಳ್ಳು ಕೆಲಸ ನೀಡುವ ಮೂಲಕ ಬಲಿತೆಗೆದುಕೊಂಡಿದ್ದಾರೆ. ಅವರ ಮಾತಿಗೆ ನಂಬಿಕೊಂಡ ದೂರುದಾರರು ಹಂತ ಹಂತವಾಗಿ ಹಣವನ್ನು ಹೂಡಿಕೆ ಮಾಡಿದ ಪರಿಣಾಮವಾಗಿ ಒಟ್ಟು ₹2,11,635 ಹಣ ಕಳೆದುಕೊಂಡಿದ್ದಾರೆ. ಪಾವತಿಗಳು ವಿವಿಧ ಬ್ಯಾಂಕ್ ಖಾತೆಗಳು ಹಾಗೂ UPI ಐಡಿಗಳಿಗೆ ಮಾಡಲಾಗಿದೆ: ಇಂಡಿಯನ್ ಬ್ಯಾಂಕ್ ಖಾತೆ ಸಂಖ್ಯೆ: 8092829124 – ₹25,000/- & ₹50,000/- ಸಿಟಿ ಯೂನಿಯನ್ ಬ್ಯಾಂಕ್ ಖಾತೆ ಸಂಖ್ಯೆ: 500101014308390 UPI ID: rahul1005prasad@okhdfcbank UPI…

ಮುಂದೆ ಓದಿ..
ಸುದ್ದಿ 

ಬೆಂಗಳೂರು: ಕಾರು ಖರೀದಿ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ ನಡೆದಿದೆ

.ಬೆಂಗಳೂರು 20 ಆಗಸ್ಟ್ 2025ಶಿವಕುಮಾರ್ ಅವರ ದೂರಿನ ಪ್ರಕಾರ KA03 NB 5558 ನಂಬರಿನ ಕಾರು ಖರೀದಿಸಲು 30-05-2025 ರಂದು ಮಾರಾಟಗಾರ ಶ್ರೀಕಾಂತ್ ಅವರಿಗೆ ₹2.5 ಲಕ್ಷ ಮೊತ್ತವನ್ನು ಪಾವತಿಸಿದ್ದರು. ಉಳಿದ ₹9 ಲಕ್ಷ ನೀಡಿದ ಬಳಿಕ ವಾಹನ ಕೊಡುತ್ತೇನೆ ಎಂದು ಭರವಸೆ ನೀಡಿದರೂ, ಕಾರು ನೀಡದೇ ಹಣವನ್ನೂ ಮರಳಿಸದೇ ಸುಮ್ಮನಾಗಿದ್ದಾರೆ. ವಿಚಾರಿಸಲು ಕರೆ ಮಾಡಿದಾಗ, ಶ್ರೀಕಾಂತ್ ಅವರು “ಹಣ ಕೊಡೋದಿಲ್ಲ, ಕಾರೂ ಸಿಗೋದಿಲ್ಲ” ಎಂದು ಬೆದರಿಕೆ ಹಾಕಿರುವುದು ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರುದಲ್ಲಿ ಉಲ್ಲೇಖವಾಗಿದೆ. ಈ ಪ್ರಕರಣದ ಕೊಡುಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆಅಪರಿಚಿತರ ಮಾತಿಗೆ ನಂಬಿಕೆ ಇಟ್ಟು ದೊಡ್ಡ ಮೊತ್ತವನ್ನು ಆನ್‌ಲೈನ್ ಮೂಲಕ ಪಾವತಿಸುವ ಮುನ್ನ ದಾಖಲೆಗಳ ಪರಿಶೀಲನೆ ಮಾಡಬೇಕು.

ಮುಂದೆ ಓದಿ..
ಸುದ್ದಿ 

ಅಫೀಮ್ ಸಾಗಾಟ ಬಯಲು – ಬೈಕ್‌ ಸಹಿತ ಆರೋಪಿಯ ಬಂಧನ

ಬೆಂಗಳೂರು: 20 ಆಗಸ್ಟ್ 2025ನಗರದಲ ಬಾಲಾಜಿ ಲೆಹೌಟ್ ಕೊಡಿಗೆಹಳ್ಳಿಲಿ ಮತ್ತೊಂದು ಮಾದಕ ವಸ್ತು ಪ್ರಕರಣ ಬೆಳಕಿಗೆ ಬಂದಿದೆ. ಖಚಿತ ಮಾಹಿತಿಯ ಆಧಾರದ ಮೇಲೆ 18 ಆಗಸ್ಟ್‌ 2025ರಂದು ಬೆಳಿಗ್ಗೆ 8 ರಿಂದ 9 ಗಂಟೆಯೊಳಗೆ ದಾಳಿ ನಡೆಸಿದ ಕೊಡುಗೆಹಳ್ಳಿ ಪೊಲೀಸರು, ಜಿಜೆ-05 ಎನ್‌ಡಬ್ಲ್ಯೂ-8254 ನಂಬರ್‌ದ ಸೈಂಡರ್ ಪ್ಲಸ್ ಬೈಕ್‌ನಲ್ಲಿ ಅಫೀಮ್ ಸಾಗಿಸುತ್ತಿದ್ದ ಅಪರಿಚಿತ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯ ಬಳಿ ಪತ್ತೆಯಾದ ಅಫೀಮ್ ಸಾರ್ವಜನಿಕರಿಗೆ ಮಾರಾಟ ಮಾಡಲು ತಂದು ಇಟ್ಟಿದ್ದಾನೆ ಎಂದು ಕೊಡುಗೆಹಳ್ಳಿ ಪೊಲೀಸರು ತಿಳಿಸಿದ್ದಾರೆ.ಬೈಕ್ ಹಾಗೂ ಮಾದಕ ವಸ್ತುಗಳನ್ನು ವಶಕ್ಕೆ ಪಡೆದು, ಆರೋಪಿಯ ವಿರುದ್ಧ NDPS ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಮಾದಕ ವಸ್ತು ಪೂರೈಕೆ ಜಾಲದ ಬಗ್ಗೆ ತನಿಖೆ ಮುಂದುವರಿದಿದೆ.“ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸಿದರೆ ಯಾರನ್ನೂ ಬಿಡುವುದಿಲ್ಲ. ನಗರವನ್ನು ಡ್ರಗ್ ಮುಕ್ತಗೊಳಿಸಲು ಗಟ್ಟಿಯಾದ ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಮುಂದೆ ಓದಿ..
ಸುದ್ದಿ 

ಬೆಂಗಳೂರು: ಯಲಹಂಕದಲ್ಲಿ ವ್ಯಾಪಾರಿಯ ಮೇಲೆ ಗುಂಪು ದಾಳಿ – ಜೀವ ಬೆದರಿಕೆ ಆರೋಪ

ಬೆಂಗಳೂರು 20 ಆಗಸ್ಟ್ 2025 ಯಲಹಂಕದ ಭದ್ರಪ್ಪ ಲೇಔಟ್‌ನಲ್ಲಿ ಗುಂಪು ದಾಳಿಯ ಪ್ರಕರಣ ಬೆಳಕಿಗೆ ಬಂದಿದೆ. ಮಟನ್ ಶಾಪ್ ನಡೆಸುತ್ತಿದ್ದ ವ್ಯಾಪಾರಿಯೊಬ್ಬರು ಕೊಡುಗೆಹಳ್ಳಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಪ್ರಕಾರ, ಆಗಸ್ಟ್ 17ರಂದು ರಾತ್ರಿ ಸುಮಾರು 7 ಗಂಟೆಯ ಸಮಯದಲ್ಲಿ ಶೋಭಾ ತುಲೀಪ್ ಹೋಟೆಲ್ ಎದುರು ನವೀದ್ ಮಟನ್ ಕಾಪ್ ಅಂಗಡಿಯನ್ನು ಮುಚ್ಚಿ ಹತ್ತಿರದ ಎನ್‌ಟಿಐ ಮೈದಾನಕ್ಕೆ ತೆರಳಿದ್ದ ವೇಳೆ, ಸುಮಾರು 10–12 ಜನರ ಗುಂಪು ತಡೆದಿದ್ದು, ಮೂವರು ಅಪರಿಚಿತ ಯುವಕರು ಹಠಾತ್ ವಾಗ್ವಾದ ಆರಂಭಿಸಿದ್ದಾರೆ. ನವೀದ್ ಪಾಷಾ ಅವರ ಪ್ರಕಾರ, ಆ ಯುವಕರು ವಿಳಾಸ ಕೇಳಿ ಕಿರಿಕಿರಿ ಮಾಡಿದ್ದು, ಬಳಿಕ ದೈಹಿಕ ದಾಳಿ ನಡೆಸಿದ್ದಾರೆ. ಮುಖ ಹಾಗೂ ಮೈಮೇಲೆ ಕೈಗಳಿಂದ ಹೊಡೆದು ಬೈಯುತ್ತಿರುವ ಸಂದರ್ಭದಲ್ಲಿ, ದೂರುದಾರರ ತಮ್ಮ ಶಾಹುಲ್ ನವಾಜ್ ಜಗಳ ಬಿಡಿಸಲು ಬಂದಾಗ, ಅವನ ಮೇಲೆಯೂ ಹಲ್ಲೆ ನಡೆಸಲಾಗಿದೆ. ಇದರ ನಂತರ ಆರೋಪಿಗಳು “ಇವತ್ತು…

ಮುಂದೆ ಓದಿ..
ಸುದ್ದಿ 

ಬೆಂಗಳೂರು: ವಿದೇಶಿ ಪ್ರಜೆಗೆ ಮನೆ ಬಾಡಿಗೆ – ಮಹಿಳೆ ವಿರುದ್ಧ ಪ್ರಕರಣ

ಬೆಂಗಳೂರು: ವಿದೇಶಿ ಪ್ರಜೆಗೆ ಮನೆ ಬಾಡಿಗೆ – ಮಹಿಳೆ ವಿರುದ್ಧ ಪ್ರಕರಣ ಬೆಂಗಳೂರು 20 ಆಗಸ್ಟ್ 2025ನಗರದ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಭದ್ರಪ್ಪ ಲೇಔಟ್, ಮಾರುತಿನಗರದಲ್ಲಿ ವಿದೇಶಿ ಪ್ರಜೆಗೆ ಅನಧಿಕೃತವಾಗಿ ಮನೆ ಬಾಡಿಗೆಗೆ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಆಗಸ್ಟ್ 17 ರಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಕೊಡಿಗೆಹಳ್ಳಿಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ, ಮಾರುತಿನಗರ 1ನೇ ಮುಖ್ಯರಸ್ತೆಯ ಮನೆ ನಂ.218, 1ನೇ ಮಹಡಿಯಲ್ಲಿ ವಾಸಿಸುತ್ತಿದ್ದ ವಿದೇಶಿ ಪ್ರಜೆಯ ಬಗ್ಗೆ ಮಾಹಿತಿ ದೊರಕಿತು. ಮನೆಯನ್ನು ಮಾಲೀಕರಾದ ಶ್ರೀಮತಿ ಗಂಗಾರಾಣಿ, ಸಂಜಯ್ ನಗರದ ನಿವಾಸಿ, ವಿದೇಶಿ ಪ್ರಜೆ ಡುಮೊ ಎಲ್.ಪಿ. ಫ್ರೆಡರಿಕ್ (39 ವರ್ಷ, ನೈಜೀರಿಯಾ ಮೂಲದವರು) ಅವರಿಗೆ ಬಾಡಿಗೆಗೆ ನೀಡಿರುವುದು ಪತ್ತೆಯಾಯಿತು. ಮನೆಯಿಂದ ದೊರೆತ ಮಾಹಿತಿಯ ಪ್ರಕಾರ, ಕಳೆದ 2 ತಿಂಗಳಿಂದ ಫ್ರೆಡರಿಕ್ ವಾಸವಾಗಿದ್ದು, ಪ್ರತಿ ತಿಂಗಳು ರೂ.9,450 ಬಾಡಿಗೆ ನೀಡುತ್ತಿದ್ದಾರೆ. ಆದರೆ, ಸಂಬಂಧಪಟ್ಟ…

ಮುಂದೆ ಓದಿ..