ಸುದ್ದಿ 

ಬೈಲಹೊಂಗಲ : ಕೆ. ಎಲ್. ಇ. ಡಿಪ್ಲೋಮಾ ಕಾಲೇಜಿನಲ್ಲಿ ರಕ್ತದಾನ ಶಿಬಿರ ಆಯೋಜನೆ.

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. . ಪಟ್ಟಣದ ಕೆ. ಎಲ್. ಇ. ಸಂಸ್ಥೆಯ ಪಾಲಿಟೆಕ್ನಿಕ (ಡಿಪ್ಲೋಮಾ), ಐ.ಟಿ.ಐ, ಪದವಿಪೂರ್ವ ಮಹಾವಿದ್ಯಾಲಯ ಬೈಲಹೊಂಗಲ ಮತ್ತು ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ತರಬೇತಿ ಮತ್ತು ಸಂಶೋಧನಾ ವಿದ್ಯಾಲಯ ಮತ್ತಿಕೊಪ್ಪ ಇವರುಗಳ ಸಂಯುಕ್ತಾಶ್ರಯದಲ್ಲಿ ಕೆ. ಎಲ್. ಇ. ಸಂಸ್ಥೆಯ 106ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮವನ್ನು ಡಾ|| ವಿ. ಆಯ್. ಪಾಟೀಲ ನಿರ್ದೇಶಕರು ಕೆ.ಎಲ್.ಇ ಸಂಸ್ಥೆ ಹಾಗೂ ಕಾಡಾ ಅಧ್ಯಕ್ಷರು ಬೆಳಗಾವಿ ಉದ್ಘಾಟಿಸಿ ದಾನಗಳಲ್ಲಿಯೇ ಸರ್ವಶ್ರೇಷ್ಟ ದಾನ ರಕ್ತದಾನ, ರಕ್ತದಾನ ಮಾಡುವುದರ ಮೂಲಕ ಜೀವ ಉಳಿಸಿ ಎಂದು ಉದ್ಘಾಟನಾ ಪರಭಾಷಣ ಮಾಡಿದರು.ಕಾರ್ಯಕ್ರಮದ ಮುಖ್ಯತಿಥಿಗಳಾದ ಹಿರಿಯ ಪತ್ರಕರ್ತರು ಹಾಗೂ ಗೌರವ ಅಧ್ಯಕ್ಷರು ಕಾರ್ಯನಿರತ ಪತ್ರಕರ್ತರ ಸಂಘ ಬೈಲಹೊಂಗಲದ ಶ್ರೀ ಈಶ್ವರ ಹೋಟಿ ಇವರು ರಕ್ತದಾನದ ಮಹತ್ವವನ್ನು ತಿಳಿಸಿದರು ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳು ಡಾ|| ಎಸ್. ಎಸ್. ಸಿದ್ದನ್ನವರರು…

Read More
ಕ್ರೈಂ ಸುದ್ದಿ 

ಬೈಲಹೊಂಗಲ : ನ.9 ರಂದು ಚಿಕ್ಕಪ್ಪನಿಂದಲೇ ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು ಮಲ್ಲಮ್ಮನ ಬೆಳವಡಿಯಲ್ಲಿ ಘಟನೆ.

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. . ಬೈಲಹೊಂಗಲ ತಾಲೂಕಿನಲ್ಲಿ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ನ.9 ರಂದು ಕ್ಷುಲ್ಲಕ ಕಾರಣಕ್ಕಾಗಿ ಚಿಕ್ಕಪ್ಪ ಹಾಗೂ ಮಗನ ನಡೆದ ಜಗಳದಲ್ಲಿ ಚಿಕ್ಕಪ್ಪನಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ವ್ಯಕ್ತಿ ನ.15 ರಂದು ಮೃತನಾಗಿದ್ದಾನೆ. ಯಶವಂತ ಬಂಡಿವಡ್ಡರ (35) ಹಲ್ಲೆಗೊಳಗಾಗಿ ಮೃತಪಟ್ಟ ವ್ಯಕ್ತಿ ಎನ್ನಲಾಗಿದೆ.ಕಳೆದ ನ.9 ರಂದು ರಾತ್ರಿ ಇಬ್ಬರು ಕುಡಿದ ಅಮಲಿನಲ್ಲಿದ್ದಾಗ ಮಲಗುವ ಜಾಗಕ್ಕಾಗಿ ಇಬ್ಬರ ನಡುವೆ ದೊಡ್ಡ ಗಲಾಟೆ ನಡೆದು ವಿಕೋಪಕ್ಕೆ ತಿರುಗಿ ಯಶವಂತನ ಮೇಲೆ ಇತನ ಚಿಕ್ಕಪ್ಪ ಹನಮಂತ ಬಂಡಿವಡ್ಡರ (47) ತೀವೃ ಹಲ್ಲೆ ಮಾಡಿದ್ದರಿಂದ ಹುಬ್ಬಳ್ಳಿಯ ಕೀಮ್ಸ್‍ಗೆ ದಾಖಲಿಸಲಾಗಿತ್ತು ಆದರೆ ಅಲ್ಲಿ ವೈದ್ಯರು ತಲೆಗೆ ಗಂಭೀರ ಗಾಯವಾಗಿದ್ದು ಆಪರೇಶನ್ ಮಾಡಬೇಕಾಗುವುದು ಎಂದಿದ್ದಾರೆ. ಇದಕ್ಕೆ ಯಶವಂತ ವಿರೋಧ ವ್ಯಕ್ತಿಪಡಿಸಿ ವೈದ್ಯರೊಂದಿಗೆ ವಾಗ್ವಾದ ನಡೆಸಿದ್ದರಿಂದ ವೈದ್ಯರು ಆಸ್ಪತ್ರೆಯಿಂದ ಕಳಿಸಿದ್ದಾರೆ. ಹಳಿಯಾಳ ತಾಲೂಕಿನ ಗ್ರಾಮದಲ್ಲಿದ್ದ ತನ್ನ ತಂಗಿಯ ಮನೆಗೆ ಹೋಗಿದ್ದಾನೆ. ತಲೆ ಮತ್ತು ಮುಖಕ್ಕೆ…

Read More
ಸುದ್ದಿ 

ಬೈಲಹೊಂಗಲ : ಉಡಿಕೇರಿಯಲ್ಲಿ ರಾಜ್ಯಮಟ್ಟದ ಮುಕ್ತ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಉಚಿತ ಕಾರ್ಯಾಗಾರ ಆಯೋಜನೆ.

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. . ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವ ಮತ್ತು ನಟ ಪುನೀತರಾಜಕುಮಾರವರ ಸ್ಮರಣಾರ್ಥ ಇಲ್ಲಿನ ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆಯಲ್ಲಿ ರಾಜ್ಯ ಮಟ್ಟದ ಮುಕ್ತ ಕ್ವಿಜ್ ಪರೀಕ್ಷೆ ಮತ್ತು ಉಚಿತ ಕಾರ್ಯಾಗಾರವನ್ನು ಭಾನುವಾರ ಆಯೋಜಿಸಲಾಗಿತ್ತು. ಬೆಳಗ್ಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸುಮಾರು 343 ಸ್ಪರ್ಧಾರ್ಥಿಗಳು ಪರೀಕ್ಷೆ ಬರೆದರು. ಬಳಿಕ ನಡೆದ ಕಾರ್ಯಾಗಾರದಲ್ಲಿ ಗಣಿತ ಮತ್ತು ಮಾನಸಿಕ ಸಾಮಥ್ರ್ಯ ಉಪನ್ಯಾಸಕ ಬಿ.ಎಸ್.ದೇಮನಗೌಡರ, ಪ್ರೌಢಶಾಲೆ ಮುಖ್ಯ ಶಿಕ್ಷಕ ಎಸ್.ಡಿ.ಪಾಟೀಲ ಮಾರ್ಗದರ್ಶನ ಮಾಡಿದರು.  ನಂತರ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ವಿಜಯಪುರ ಜಿಲ್ಲೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಉಪನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇಂಚಲ ಗ್ರಾಮದವರಾದ ವೈ.ಎಸ್.ಮಾರಿಹಾಳ ಸರಕಾರದ ಉನ್ನತ ಹುದೆಗಳಲ್ಲಿ ಸೇವೆ ಸಲ್ಲಿಸುವ ಆಕಾಂಕ್ಷೆಯುಳ್ಳ ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಗುರಿ ಮತ್ತು ಅವಿರತ ಪರಿಶ್ರಮ ಪಡಬೇಕು. ಎಷ್ಟೇ ಸವಾಲು, ಕಷ್ಟಗಳು ಎದುರಾದರು…

Read More
ಕ್ರೈಂ ಸುದ್ದಿ 

ಬೈಲಹೊಂಗಲ : ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್ ಮೂವರು ಪ್ರಯಾಣಿಕರಿಗೆ ಗಾಯ/ ದೊಡವಾಡ-ಬೆಳವಡಿ ಮಾರ್ಗ ಮಧ್ಯೆ ಘಟನೆ.

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. . ಬೈಲಹೊಂಗಲದಿಂದ ದೊಡವಾಡ-ನನಗುಂಡಿಕೊಪ್ಪ ಗ್ರಾಮಗಳಿಗೆ ತೆರಳುತ್ತಿದ್ದ ಬೈಲಹೊಂಗಲ ಸಾರಿಗೆ ಘಟಕದ ಬಸ್ ಗುರುವಾರ ಬೆಳಗ್ಗೆ ಬ್ರೇಕ್ ವಿಫಲವಾಗಿ ಚಾಲಕನ ನಿಯಂತ್ರಣ ತಪ್ಪಿ ದೊಡವಾಡ ಗ್ರಾಮದ ತರಗಾರ ಗಚ್ಚಿನ ಬಳಿ ಹಾದು ಹೋಗಿರುವ ಮುಖ್ಯ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ.ಬಸ್ಸಿನಲ್ಲಿ ಮೂವರು ಕಾಲೇಜು ವಿದ್ಯಾರ್ಥಿಗಳು ಹಾಗೂ ಕೇವಲ ಮೂರು ಜನ ಸಾರ್ವಜನಿಕ ಪ್ರಯಾಣಿಕರು ಮಾತಯ್ರ ಸಂಚರಿಸುತ್ತಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ ಎನ್ನಲಾಗಿದೆ. ದೊಡವಾಡ ಗ್ರಾಮದ ವೆಂಕಪ್ಪ ಯರಿಕಿತ್ತೂರ, ಮಲ್ಲಪ್ಪ ಯರಿಕಿತ್ತೂರ, ಹಾಗೂ ಮಂಜುನಾಥ ಯರಿಕಿತ್ತೂರ ಬಸ್ ಡಿಕ್ಕಿ ರಭಸಕ್ಕೆ ಗಾಯಗೊಂಡಿದ್ದಾರೆ. ವೆಂಕಪ್ಪ ಯರಿಕಿತ್ತೂರವರಿಗೆ ಭುಜ ಮತ್ತು ಕೈಗೆ ತೀವೃ ಸ್ವರೂಪದ ಪೆಟ್ಟಾಗಿದ್ದು ಬೈಲಹೊಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಸ್ಸಿನಲ್ಲಿ ಹೆಚ್ಚಿನ ಸಂಖ್ಯೆ ಪ್ರಯಾಣಿಕರಿದ್ದರೆ ಮತ್ತಷ್ಟು ಜನ ಗಾಯಗೊಳ್ಳುತ್ತಿದ್ದರು ಎಂದು ಮಲ್ಲಪ್ಪ ಯರಿಕಿತ್ತೂರ…

Read More
ಸುದ್ದಿ 

ಬೈಲಹೊಂಗಲ :ಉಡಿಕೇರಿಯಲ್ಲಿ ನ.14 ರಂದು ರಾಜ್ಯಮಟ್ಟದ ಮುಕ್ತ ಸ್ಪರ್ಧಾತ್ಮಕ ಪರೀಕ್ಷೆ ಆಯೋಜನೆ.

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. . ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ಇಲ್ಲಿನ ಹಿರಿಯ ಶಿಕ್ಷಣ ಪ್ರೇಮಿಗಳು ಹಾಗೂ ಗೆಳೆಯರ ಬಳಗದ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಇತ್ತೀಚೆಗೆ ವಿಧಿವಶರಾದ ನಟ ಪುನೀತ ರಾಜಕುಮಾರ ಸ್ಮರಣಾರ್ಥ ನ.14 ರಂದು ಗ್ರಾಮದ ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆಯಲ್ಲಿ ರಾಜ್ಯಮಟ್ಟದ ಮುಕ್ತ ಸ್ಪರ್ಧಾತ್ಮ ಪರೀಕ್ಷೆ ಹಾಗೂ ಉಚಿತ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ.ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆ ಅಧ್ಯಕ್ಷ ರಾಜು ಬೋಳಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು. ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಗೂಳಪ್ಪನವರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೈಲಹೊಂಗಲ ಡಿವೈಎಸ್‍ಪಿ ಶಿವಾನಂದ ಕಟಗಿ, ವಿಜಯಪುರ ಆಹಾರ ಮತ್ತು ನಾಗರೀಕ ಪೂರೈಕೆ ಉಪನಿರ್ದೇಶಕ ಎಸ್.ವಾಯ್.ಮಾರಿಹಾಳ, ರಾಮದುರ್ಗ ತಹಶೀಲದಾರ ಎಮ್.ಎನ್.ಹೆಗ್ಗನವರ, ಧಾರವಾಡ ಗುರುಕುಲ ಕರೀಯರ್ ಅಕಾಡೆಮಿ ಎನ್.ಎಮ್.ಪಾಟೀಲ ಭಾಗವಹಿಸಲಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸಿ.ಸಿ.ತಿಪ್ಪನಗೌಡರ, ಸುತಗಟ್ಟಿ ಶಾಲೆ ನಿವೃತ್ತ…

Read More
ಸುದ್ದಿ 

ಬೈಲಹೊಂಗಲ: ಸಿದ್ಧಸಮುದ್ರದಲ್ಲಿ ಕಾನೂನು ಅರಿವು, ನೆರವು ಕಾರ್ಯಕ್ರಮ.

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. . ಬೈಲಹೊಂಗಲ ತಾಲೂಕು ಕಾನೂನು ಸಲಹಾ ಸಮೀತಿ ಮತ್ತು ಗ್ರಾಮ ಪಂಚಾಯತ್ ಬೆಳವಡಿಯವರ ಸಹಯೋಗದಲ್ಲಿ ಕಾನೂನು ಅರಿವು, ನೆರವು ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ 10 ಗಂಟೆ 30 ನಿಮಿಷಕ್ಕೆ ತಾಲೂಕಿನ ಸಿದ್ಧಸಮುದ್ರ ಗ್ರಾಮದ ವಿಠ್ಠಲ ದೇವರ ಮಂದಿರದಲ್ಲಿ ಆಯೋಜಿಸಲಾಗಿತ್ತು. ನ್ಯಾಯವಾದಿ ಎಸ್.ವಿ. ಸಿದ್ಧಮನಿ ಮಾತನಾಡಿ ಕಾನೂನಿನ ಬಗ್ಗೆ ಹಳ್ಳಿಯ ಜನರಲ್ಲಿ ಅರಿವು ಮೂಡಿಸಿ ನೆರವು ನೀಡುವುದರ ಸಲುವಾಗಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನಿರ್ದೇಶನ ನೀಡಿದ್ದು,ಆದ್ದರಿಂದ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಕಾನೂನಿನ ಅರಿವು ನೆರವು ಕಾರ್ಯಕ್ರಮವನ್ನು ಮಾಡಲಾಗುತ್ತಿದೆ, ಗ್ರಾಮದ ಜನರು ಕಾನೂನಿನ ಬಗ್ಗೆ ಯಾವುದೇ ರೀತಿಯ ಸಲಹೆ ಮತ್ತು ನೆರವು ಬೇಕಾಗಿದ್ದಲ್ಲಿ ತಾಲೂಕು ಕಾನೂನು ಸಲಹಾ ಸಮೀತಿಯನ್ನು ಸಂಪರ್ಕಿಸಿ ತಮ್ಮ ಸಮಸ್ಯೆಗಳಿಗೆ ಉಚಿತವಾಗಿ ಸಲಹೆ ಮತ್ತು ನೆರವು ಪಡೆದುಕೊಳ್ಳಬಹುದು ಎಂದರು. ನಂತರ ಮಾತನಾಡಿದ ನ್ಯಾಯವಾದಿ ಎಸ್.ಜಿ.ಭಾವಿ. ಪ್ರತಿಯೊಬ್ಬ ಪ್ರಜೆಗೂ ಹುಟ್ಟಿನಿಂದ ಸಾಯುವವರೆಗೂ…

Read More
ಸುದ್ದಿ 

ಬೈಲಹೊಂಗಲ : ಬೇಜವಾಬ್ದರಿ ತೋರಿದ ಬೆಳವಡಿ ವಿದ್ಯುತ್ ನಿಯಂತ್ರಣ ಕೊಠಡಿಯ ಸಿಬ್ಬಂದಿಗಳು.

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. . ಲೈನ್‍ಮನ್ ಗಳ ಸಮಯ ಪ್ರಜ್ಞೆಯಿಂದ ತಪ್ಪಿದ ವಿದ್ಯುತ್ ಅವಘಡನಿಯಂತ್ರಣ ಕೊಠಡಿಗೆ ಎಲ್.ಸಿ ಕೇಳಿದ್ದರೂ ವಿದ್ಯತ್ ಸರಬರಾಜು ಶುರುವಿಟ್ಟಿದ್ದ ಸಿಬ್ಬಂದಿಸ್ವಲ್ಪದರಲ್ಲೇ ಪಾರಾದ ಲೈನ್‍ಮನ್‍ಗಳ ಆರೋಪ. ಸಮೀಪದ ತುರುಕರ ಶೀಗಿಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ವಿದ್ಯತ್ ಲೈನ್ ದುರಸ್ತಿಗೆ ತೆರಳಿದ್ದ ಲೈನ್‍ಮನ್‍ಗಳಿಬ್ಬರ ಸಮಯ ಪ್ರಜ್ಞೆಯಿಂದ ಸ್ವಲ್ಪದರಲ್ಲೇ ದೊಡ್ಡ ಅವಘಡದಿಂದ ಪಾರಾದ ಘಟನೆ ಶನಿವಾರ ನಡೆದಿದೆ. ದುರಸ್ತಿಗೂ ಮುನ್ನ ಬೆಳವಡಿ ಉಪವಿಭಾಗ ವಿದ್ಯುತ್ ಸರಬರಾಜು ನಿಯಂತ್ರಣ ಕಛೇರಿ ಒನ್ ಟೆನ್‍ನ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕರೆ ಮಾಡಿ ಎಫ್ 5 ಬುಡರಕಟ್ಟಿ ಲೈನ್ ಎಲ್.ಸಿ. ತೆಗೆದುಕೊಂಡಿದ್ದರೂ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯತನದಿಂದ ಎಫ್ 5 ಬುಡರಕಟ್ಟಿ ಲೈನ್ ವಿದ್ಯುತ್ ಪೂರೈಕೆ ನಿಲ್ಲಿಸದೆ ಬೆಳವಡಿ ಒನ್ ಟೆನ್ ಕಛೇರಿ ಸಿಬ್ಬಂದಿ ಕರ್ತವ್ಯಲೋಪವೆಸಗಿದ್ದಾರೆ ಎಂದು ಅವಘಢದಿಂದ ಪಾರಾದ ಲೈನ್ ಮನ್ ಗಳಾದ ಸಂಜೀವ ಬೈಲವಾಡ, ಶಿವರಾಜ ರಾಯನಾಯ್ಕರ ಸಿಬ್ಬಂದಿ ಮೇಲೆ…

Read More
ಸಿನೆಮಾ 

ಒಂದು ಪ್ರೀತಿ -ಎರಡು ಕನಸು_ ಕಿರು ಚಿತ್ರ ತೆರೆಗೆ ಸಿದ್ಧತೆ.

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. . ಲಾಕ್ಡೌನ್ ಸಮಯದಲ್ಲಿ ನಡೆದ ಒಂದು ಘಟನೆಯನ್ನು ಇಟ್ಟುಕೊಂಡು ಒಂದು ಕಿರುಚಿತ್ರ ಸಿದ್ಧವಾಗುತ್ತಿದೆ,ನಿರ್ಮಾಪಕಿ ಮಂಜುಳಾ ಪವರ್,ಮಸ್ಕಿ ಛಾಯಾಗ್ರಹಣ ಮೋಹನ್ ರಾಜು ಬೆಂಗಳೂರು, ನಿರ್ದೇಶಕ ಅಭಿಲಾಷ್ ಹಾಸನ ರವರು ಈ ಚಿತ್ರವನ್ನು ಒಂದು ಪ್ರೀತಿ ಎರಡು ಕನಸು ಎಂದು ಹೆಸರಿಡಲಾಗಿದೆ, ನಿರ್ದೇಶಕ ಅಭಿಲಾಷ್ ಹಾಸನ ಅವರು ತಾವು ಕಂಡ ಪ್ರೇಮಕಥೆಯನ್ನು ಕಿರುಚಿತ್ರ ಮೂಲಕ ತೋರಿಸಲು ಹೊರಟಿರುವ ಅಭಿಲಾಷ್ ಹಾಸನ ಅವರು ಈ ಚಿತ್ರದ ಕಥೆ ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅವರೇ ಬರೆದಿದ್ದಾರೆ ಕೆಲ ದಿನಗಳ ಹಿಂದೆ ಅಷ್ಟೇ ದೇವನಹಳ್ಳಿಯಲ್ಲಿ ಚಿತ್ರೀಕರಿಸುವ ಮೂಲಕ ಚಿತ್ರೀಕರಣ ಆರಂಭವಾಗಿದೆ, ಈ ಚಿತ್ರದಲ್ಲಿ ನಾಯಕನಟನಾಗಿ ಮೌನೇಶ ರಾಥೋಡ್ ಮಸ್ಕಿ ಮತ್ತು ನಾಯಕಿನಟಿ ಯಾಗಿ ಪಲ್ಲವಿ, ದಾವಣಗೆರೆ.ಮೌನೇಶ ರಾಥೋಡ್ ಮಸ್ಕಿ ಅವರು ಈ ಹಿಂದೆ ಸುಮಾರು ಧಾರವಾಹಿಯಲ್ಲಿ, ನಟಿಸಿದ್ದು, ಅಳಿಗುಳಿಮನೆ. ಸಿಲ್ಲಿ ಲಲ್ಲಿ ಕಾದಂಬರಿ ಕಣಜ ರೋಬೋ ಫ್ಯಾಮಿಲಿ.ಚಿಕ್ಕ ಚಿಕ್ಕ…

Read More
ಸುದ್ದಿ 

ಬೈಲಹೊಂಗಲ : ಕಬ್ಬಿನ ಬಾಕಿ ಬಿಲ್ ನೀಡಲು ನೇಗಿಲ ಯೋಗಿ ರೈತ ಸಂಘಟನೆಯಿಂದ ಒತ್ತಾಯ ಶ್ರೀ ಸೋಮೆಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿದೇಶಕರಿಗೆ ಮನವಿ.

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. . ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ರಥರಿಂದ ಖರೀದಿಸಿರುವ ಕಬ್ಬಿನ ಬಿಲ್ ನ ಬಾಕಿ ಹಣ ಮತ್ತು ಈ ಸಾಲಿಗೆ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ಖರೀದಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ನೇಗಿಲ ಯೋಗಿ ರೈತ ಸಂಘದ ಕಾರ್ಯಕರ್ತರು ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಿಗೆ ಶನಿವಾರ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ರವಿ ಪಾಟೀಲ, ಜಿಲ್ಲಾ ಕಾರ್ಯಾಧ್ಯಕ್ಷ ಮಲ್ಲಯ್ಯ ಪೂಜಾರ ಅವರುಗಳು 2020-21 ನೇ ಸಾಲಿನ ಹಂಗಾಮಿ ಕಬ್ಬನ್ನು 2700 ರೂ ದರ ನಿಗದಿ ಪಡಿಸಿ ಖರೀದಿಸಿದ್ದರೂ ಕೂಡ ಕೇವಲ 2400 ರೂ ಮಾತ್ರ ರೈತರ ಖಾತೆಗಳಿಗೆ ಜಮೆ ಮಾಡಿದ್ದು ಬಾಕಿ ಇರುವ 300 ರೂ. ಹಣ ರೈತರ ಖಾತೆಗಳಿಗೆ ಶೀಘ್ರ ಜಮೆ ಮಾಡಬೇಕು. ಮತ್ತು 21-22 ನೇ…

Read More
ಸುದ್ದಿ 

ಬೈಲಹೊಂಗಲ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ.

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. . ಸೋಯಾಬಿನ್ ಬೆಳೆಗೆ ಬೆಂಬಲ ಬೆಲೆಯಾಗಿ 10000 ರೂ. ಘೋಷಿಸುವದು, ಕಳಪೆ ಕಂಪನಿಯ ಕ್ಯಾರೇಟ್ ಬೀಜಗಳನ್ನು ವಿತರಿಸಿದ ಕಂಪನಿ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳು ಉಪವಿಭಾಗಾಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ರವಿ ಸಿದ್ದಮ್ಮನವನರ ಮಾತನಾಡಿ,ಸೋಯಾಬಿನ್ ಉತ್ತರ ಕರ್ನಾಟಕದ ವಾಣಿಜ್ಯ ಬೆಳೆಯಾಗಿದ್ದು ಈ ಬಾರಿ ತುಕ್ಕುರೋಗದಿಂದ ಇಳುವರಿಕುಂಟಿತವಾಗಿದ್ದು, ಸೋಯಾಬಿನ್ ದರವನ್ನು ಸರಕಾರ ದೀಡಿರ ಎಂದು ಇಳಿಕೆ ಮಾಡಿದ್ದು, ಬೆಂಬಲ ಬೆಲೆಯಾಗಿ 10000 ರೂ. ಘೋಷಿಸಬೇಕೆಂದರು.ತಾಲೂಕಿನ ನೇಸರಗಿ, ಮದನಬಾವಿ, ಮುರಕೀಬಾವಿ ಹಣಬರಹಟ್ಟಿ ,ಮಲ್ಲಾಪೂರ, ಮೇಕಲಮರಡಿ, ಸೋಮನಟ್ಟಿಯಲ್ಲಿ ಟಾಕಿ ಎನ್ನುವ ಕಂಪನಿ ಕಳಪೆ ಬೀಜ ಪೂರೈಸಿದ್ದು ಫಸಲು ಸರಿಯಾಗಿ ಬಾರದೆ ರೈತರಿಗೆ ನಷ್ಟವಾಗಿದೆ. ಕೂಡಲೇ ಕಂಪನಿ ವಿರುದ್ದ ಕ್ರಮ ಕೈಗೊಂಡು ಏಕರೆಗೆ 80ಸಾವಿರ ರೂ.…

Read More