ವಿಶೇಷ ಸುದ್ದಿ 

ಅಕ್ಷರ ಕಲ್ಚರಲ್ ಅಕಾಡೆಮಿಯ ವತಿಯಿಂದ 3 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ..

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಅಕ್ಷರ ಕಲ್ಚರಲ್ ಅಕಾಡೆಮಿಯ ವತಿಯಿಂದ3ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ..ಸಂಸ್ಥೆಯು ಕಲೆ, ಸಂಸ್ಕೃತಿಯ ಪ್ರತೀಕವಾಗಿ ಹಾಗೂ ಸಮಾಜಿಕ ವಿಚಾರಗಳಲ್ಲಿ ಸೇವೆ ಸಲ್ಲಿಸುತ್ತಿದೆ,ಈ ಸುಂದರ ಕ್ಷಣದ ಸಂಭ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಹೃದಯಿಗಳಿಗೆ ಗುರುತಿಸಿ ಗೌರವಿಸುವ ಕಾರ್ಯ ಮಾಡುತ್ತಿದೆ… ಅಕ್ಷರ ಹೊಂಬೆಳಕು, ಅಕ್ಕರೆಯ ಅಕ್ಷರಗಳ ಪುಸ್ತಕ ಬಿಡುಗಡೆ…. ಹಾಗೂ ರಚನಕಾರರಿಗೆ ಗೌರವ ಸಲ್ಲಿಕೆ,*ಅಕ್ಷರ ಕಲಾಶ್ರೀ ಪ್ರಶಸ್ತಿ, ಕಲೆ ಹಾಗೂ ಸಮಾಜಿಕಸೇವೆ ಅಕ್ಷರ ಸುಂದರಿ, ಪ್ರತಿಭೆಗಳ ಪ್ರೋತ್ಸಾಹ,

Read More
ಸುದ್ದಿ 

ಕರ್ನಾಟಕ ಗ್ರಾಮಸ್ವರಾಜ್‌ ಮತ್ತು ಪಂಚಾಯತ್ ರಾಜ್‌ ಕಾಯ್ದೆಯ ಅನುಷ್ಠಾನ ಕುರಿತು. ಉಪನ್ಯಾಸ: ಶ್ರೀ ಕೆ.ಆರ್.‌ ರಮೇಶ್‌ ಕುಮಾರ್‌ ರವರು ಮಾಜಿ ಸಭಾಧ್ಯಕ್ಷರು, ವಿಧಾನ ಸಭೆ.

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. . ಇಂದು ಸಂಜೆ 6 ಗಂಟೆಗೆ.. ತಾಲ್ಲೂಕು ನ್ಯೂಸ್ ನ ONLINE ನಲ್ಲಿ ನೇರ ಪ್ರಸಾರ.. LIVE & Replay : https://taluknews.com/?p=5595 ಕರ್ನಾಟಕ ಗ್ರಾಮಸ್ವರಾಜ್‌ ಮತ್ತು ಪಂಚಾಯತ್ ರಾಜ್‌ ಕಾಯ್ದೆಯ ಅನುಷ್ಠಾನ ಕುರಿತು. ಉಪನ್ಯಾಸ: ಶ್ರೀ ಕೆ.ಆರ್.‌ ರಮೇಶ್‌ ಕುಮಾರ್‌ ರವರು, ಮಾಜಿ ಸಭಾಧ್ಯಕ್ಷರು, ವಿಧಾನ ಸಭೆ. ಆಸಕ್ತರು ನೇರ ಭಾಗವಹಿಸಲು : ZOOM ಐಡಿ :https://us02web.zoom.us/j/82087250434?pwd=YlNBeGZJSG1aR2I1R21nUnJVNktQQT09Passcode: 681552 LIVE & Replay : https://taluknews.com/?p=5595 ತಾಲ್ಲೂಕು ನ್ಯೂಸ್ ನ ONLINE ನಲ್ಲಿ ನೇರ ಪ್ರಸಾರ.. LOCAL ONLINE- PRINT- BROADCAST – TVNEWStaluknewsmedia.comtaluknews.comtalukpathrike.comhttp://taluknews.tvhttp://ivoter.tvtalukinformation.comcampaignkarnataka.com

Read More
ಸುದ್ದಿ 

ದೇಶದಲ್ಲಿ 1905 ರಿಂದ 2021 ಕ್ಕೆ 116 ವರ್ಷದ ಬೃಹತ್ ಪ್ರಪಂಚದಾದ್ಯಂತ ಶಾಖೆಗಳನ್ನು ಹರಡಿಕೊಂಡಿರುವ ರೋಟರಿ ಸಂಸ್ಥೆಯಲ್ಲಿ ಬೆಂಗಳೂರಿನ ರಾಜಾಜಿನಗರದಲ್ಲಿರುವ ರೋಟರಿ ಸಂಸ್ಥೆ 19 ನೇ ವರ್ಷಕ್ಕೆ ಹೆಜ್ಜೆಯಿಟ್ಟಿದೆ..

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. . ದೇಶದಲ್ಲಿ 1905 ರಿಂದ 2021 ಕ್ಕೆ 116 ವರ್ಷದ ಬೃಹತ್ ಪ್ರಪಂಚದಾದ್ಯಂತ ಶಾಖೆಗಳನ್ನು ಹರಡಿಕೊಂಡಿರುವ ರೋಟರಿ ಸಂಸ್ಥೆಯಲ್ಲಿ ಬೆಂಗಳೂರಿನ ರಾಜಾಜಿನಗರದಲ್ಲಿರುವ ರೋಟರಿ ಸಂಸ್ಥೆ 19 ನೇ ವರ್ಷಕ್ಕೆ ಹೆಜ್ಜೆಯಿಟ್ಟಿದೆ.. ಈ ಸಂದರ್ಭದಲ್ಲಿ ಹಿಂದಿನ ಅಧ್ಯಕ್ಷರ ಉಪಸ್ಥಿತಿಯಲ್ಲಿ ಅಧಿಕಾರ ಹಸ್ತಂತರಿಸಿದರು ಹಾಗೂ ಇದೇ ಸಂಧರ್ಬದಲ್ಲಿ ವಿಶೇಷ ಚೇತನರಿಗೆ ಉಪಕರಣಗಳನ್ನು ಹಾಗೂ ವಿಧ್ಯಾರ್ಥಿಗಳಿಗೆ ವಿಧ್ಯಾಭ್ಯಾಸಕ್ಕೆ ಧನ ಸಹಾಯ, ಸಂತ್ರಸ್ಥ ಹಿರಿಯರಿಗೆ ಪೋಷಕ ಧನ ನೀಡಲಾಯಿತು. ನೂತನ ಅಧ್ಯಕ್ಷರು ಮಾತನಾಡಿ ವ್ಯವಸ್ಥೆಯಲ್ಲಿ ಹೊಸ ಸೇವಾ ಯೋಜನೆಗಳನ್ನು ರಚಿಸಿ ಸ್ಥಳೀಯವಾಗಿ ಹಾಗೂ ರಾಜ್ಯ ವ್ಯಾಪ್ತಿ ಹಿರಿಯರ ಸಹಕಾರ ಪದಾಧಿಕಾರಿಗಳ ಬೆಂಬಲದಲ್ಲಿ ಕಾರ್ಯ ಮಾಡುತ್ತೇವೆ ಎಂಬ ಮಾತನ್ನು ತಿಳಿಸಿದರು.

Read More
ವಿಡಿಯೋ ವಿಶೇಷ ಸಿನೆಮಾ 

ಪ್ರತಿಭಾ ಚಿಂತನ ಮಂಥನದ ಕಾರ್ಯಕ್ರಮ.. ಚರ್ಚೆಯಲ್ಲಿ ಕಾರ್ಯಕಾರಿ ಸಂಪಾದಕ ನೆನಪು ಲೋಕೇಶ್ -ತಾಲ್ಲೂಕ್ ನ್ಯೂಸ್

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. . ಪ್ರತಿಭಾ ಚಿಂತನ ಮಂಥನದ ಕಾರ್ಯಕ್ರಮ.. ಪ್ರತಿಭೆಗಳ ಮನದಾಳದ ಮಾತುಗಳ ಅನಾವರಣ.. ಕಿರುಸಿನಿಮಾ ನಿರ್ದೇಶಕರು ಹಾಗೂ ಸಾಹಿತಿಗಳು ಸಂಭಾಷಣಾಕಾರರಾದ ಶ್ರೀಯುತ ಅಂಬೇರಾಯ (ಅಂಬರೀಶ್) ರವರ ಜೊತೆ ಚರ್ಚೆಯಲ್ಲಿ ಕಾರ್ಯಕಾರಿ ಸಂಪಾದಕ ನೆನಪು ಲೋಕೇಶ್ – ತಾಲ್ಲೂಕ್ ನ್ಯೂಸ್

Read More
ಸುದ್ದಿ 

ಅಗ್ನಿ ಅವಘಡ… ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್ ಬಸ್ಮ..

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. . ಬೆಳಗ್ಗೆ ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದ ಬಳಿ ಇರುವ ಪ್ರಸಿದ್ಧ ದಾವಣಗೆರೆ ಬೆಣ್ಣೆದೋಸೆ ಹೋಟೆಲ್‌ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ, ಯಾವುದೇ ಪ್ರಾಣಹಾನಿಯಾಗಿಲ್ಲ. ಎಂದಿನಂತೆ ಬೆಳಗ್ಗೆ ವ್ಯಾಪಾರ ವಹಿವಾಟನ್ನು ಹೋಟೆಲ್‌ನಲ್ಲಿ ಆರಂಭಿಸಲಾಗಿತ್ತು. ಈ ಹೋಟೆಲ್ ಪಕ್ಕದಲ್ಲಿಯೇ ಮೈಸೂರು ಬ್ರಾಹ್ಮಿನ್ಸ್‌ ಕೆಫೆ ಎಂಬ ಹೋಟೆಲ್ ಕೆಲವು ದಿನಗಳ ಹಿಂದೆ ಆರಂಭವಾಗಿತ್ತು. ಶಾರ್ಟ್ ಸರ್ಕ್ಯೂಟ್‌ ಅಥವಾ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿರಬಹುದು ಎಂದು ಅಂದಾಜಿಸಲಾಗಿದ್ದು ಸಂಪೂರ್ಣವಾಗಿ ಹೋಟೆಲ್ ಬೆಂಕಿಗೆ ಆಹುತಿಯಾಗಿದೆ. ಈ ವೇಳೆ ಹೋಟೆಲ್ನಲ್ಲಿದ್ದವರು ಹೊರಗೆ ಓಡಿ ಬಂದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ವಿಷಯ ಅರಿತು ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ. ಸ್ಥಳಕ್ಕೆ ಭೇಟಿ ನೀಡಿರುವ ಬಸವನಗುಡಿ ಪೋಲೀಸರು ಪರಿಶೀಲನೆ ನಡೆಸಿದ್ದಾರೆ.

Read More

ಚಾಲಕನ ನಿಯತ್ತು… ರಾಜ್ಯದ ಸಂಪತ್ತು…

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಆಟೋರಿಕ್ಷಾದಲ್ಲಿ ಮರೆತು ಬಿಟ್ಟು ಹೋಗಿದ್ದ ಕುರ್ಕಾಲಿನ ಮಹಿಳೆಯ 50ಸಾವಿರ ರೂಪಾಯಿ ಮರಳಿಸಿ ಮಾನವೀಯತೆ ಮೆರೆದ ಆಟೋರಿಕ್ಷಾ ಚಾಲಕಅಂಬಲಪಾಡಿ ಜಯ ಶೆಟ್ಟಿ ಬುಧವಾರ ಬೆಳಗ್ಗೆ ಕುರ್ಕಾಲಿನಿಂದ ಮಹಿಳೆಯೊಬ್ಬರು ಆಟೋರಿಕ್ಷಾದಲ್ಲಿ ಕಟಪಾಡಿ ಪೇಟೆಗೆ ಬಂದಿದ್ದು, ಇಳಿಯುವಾಗ ಗಡಿಬಿಡಿಯಲ್ಲಿ 50ಸಾವಿರ ರೂಪಾಯಿ ಹಣವನ್ನು ಮರೆತು ರಿಕ್ಷಾದಲ್ಲೇ ಬಿಟ್ಟುಹೋಗಿದ್ದರು. ಮಹಿಳೆಯನ್ನು ಬಸ್‍ಸ್ಟ್ಯಾಂಡಿನಲ್ಲಿ ಬಿಟ್ಟು ಉಡುಪಿಯ ಕಾರ್ತಿಕ್ ಎಸ್ಟೇಟ್ ಸಮೀಪದ ಆಟೋ ಸ್ಟ್ಯಾಂಡಿಗೆ ಮರಳಿದ್ದ ರಿಕ್ಷಾ ಚಾಲಕ ಜಯ ಶೆಟ್ಟಿ ಎಂಬವರು ಸೀಟ್‍ನಲ್ಲಿ ಪ್ಲಾಸ್ಟಿಕ್ ಇರುವುದನ್ನು ಗಮನಿಸಿದರು. ತೆರೆದಾಗ ಅದರಲ್ಲಿ 50ಸಾವಿರ ಹಣವಿತ್ತು. ಆ ಕೂಡಲೇ ಉಡುಪಿಯಿಂದ ಕಟಪಾಡಿಗೆ ಬಂದು ಕುರ್ಕಾಲಿನ ಮಹಿಳೆಯನ್ನು ಸಂಪರ್ಕಿಸಿ, 50ಸಾವಿರ ರೂಪಾಯಿ ಹಣವನ್ನು ಮರಳಿಸಿ ಮಾನವೀಯತೆ ಮೆರೆದರು. ಆಟೋ ರಿಕ್ಷಾ ಚಾಲಕರ ಮಾನವೀಯ ಗುಣವನ್ನು ಹಾಗೂ ಅವರು ಮಾಡಿದ ಉಪಕಾರವನ್ನು ಮಹಿಳೆ ಹಾಗೂ ಕಟಪಾಡಿಯ ಸಾರ್ವಜನಿಕರು ಮೆಚ್ಚಿಕೊಂಡಿದ್ದಾರೆ. ಆಟೋರಿಕ್ಷಾ ಚಾಲಕ ಜಯ ಶೆಟ್ಟಿ…

Read More