ಭಾರತೀಯ ಸೇನೆ ಸೇರಬಯಸುವ ಆಕಾಂಕ್ಷಿಗಳಿಗೆ ಪ್ರಣವಸ್ಯ ಅಕಾಡೆಮಿ ಸೂಕ್ತ ವೇದಿಕೆ: ಮೇಜರ್ ಜನರಲ್ (ನಿ) ವಿ.ಪಿ.ಎಸ್ ಭಾಕುನಿ
Taluknewsmedia.comಬೆಂಗಳೂರು: ಭಾರತೀಯ ಸೇನೆಯಲ್ಲಿನ ಹುದ್ದೆಗಳು ಅತ್ಯಂತ ರೋಮಾಂಚನಕಾರಿ, ಗೌರವಪೂರ್ಣ ಹಾಗೂ ನೈತಿಕತೆಯ ಅವಕಾಶಗಳಾಗಿದ್ದು ಅವುಗಳನ್ನು ರಾಜ್ಯದ ಯುವಕರಿಗೆ ಸೂಕ್ತ ತರಬೇತಿಯ ಮೂಲಕ ದೊರಕಿಸಿಕೊಡುವ ಪ್ರಣವಸ್ಯ ಅಕಾಡಮಿಯ ಸಂಕಲ್ಪ ಅಭಿನಂದನೀಯ ಎಂದು ಮೇಜರ್ ಜನರಲ್ (ನಿ) ವಿ.ಪಿ.ಎಸ್ ಭಾಕುನಿ ಅಭಿಪ್ರಾಯಪಟ್ಟರು. ಬೆಂಗಳೂರಿನಲ್ಲಿ ನಡೆದ ಪ್ರಣವಸ್ಯ ಹಾಗೂ ಎಸ್ಎಸ್ಬಿ ಶೂಟ್ ಅಕಾಡೆಮಿ ಜಂಟಿ ಆಶ್ರಯದಲ್ಲಿ ಸೇನಾಧಿಕಾರಿಗಳ ಹಾಗೂ ಸೈನಿಕ ತರಬೇತಿ ಯೋಜನೆ ಪ್ರಣಾಳಿಕೆ ಸಹಿ ಸಮಾರಂಭದಲ್ಲಿ ಭಾಗವಹಿಸಿ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಪ್ರಣವಸ್ಯ ಸಂಸ್ಥೆ ಯುವಕರಿಗೆ ಅಗತ್ಯ ಮಾಹಿತಿ ನೀಡುವುದರ ಜೊತೆಗೆ, ತರಬೇತಿಯನ್ನೂ ಆಯೋಜಿಸುತ್ತಿರುವುದು ರಾಷ್ಟ್ರನಿರ್ಮಾಣದ ಮಹಾತ್ಕಾರ್ಯ ಎಂದರು. ಪ್ರಣವಸ್ಯ ಸಂಸ್ಥೆಯಲ್ಲಿ ಸೈನ್ಯದ ಸೇವೆಗೆ ಅಗತ್ಯವಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಆಸಕ್ತರಿಗೆ ತರಬೇತಿ ನೀಡುವ ಉತ್ತಮ ಶಿಕ್ಷಕರ ತಂಡ ಕಾರ್ಯನಿರ್ವಹಿಸುತ್ತಿದ್ದು ಅದಕ್ಕೆ ಪೂರಕವಾಗಿ ಅವಶ್ಯವಿರುವ ದೈಹಿಕ ಕ್ಷಮತೆ, ಪ್ರಾಯೋಗಿಕ ಕೌಶಲ್ಯಗಳು, ತಾಂತ್ರಿಕ ಸಲಹೆಗಳು, ಅಡಚಣೆ ತೆರವು ನಿರ್ವಹಣೆ, ನಾಯಕತ್ವ ಗುಣಗಳು ಹಾಗೂ…
ಮುಂದೆ ಓದಿ..