ಸುದ್ದಿ 

ಕೆರೆ ಸ್ವಚ್ಛತೆಮಾಡಿದ ದುರ್ಗದಹಳ್ಳಿ ಗ್ರಾಮಸ್ಥರು.

Taluknewsmedia.com

Taluknewsmedia.comತುಮಕೂರು ತಾಲ್ಲೂಕಿನ ದೇವರಾಯನದುರ್ಗ ಸಮೀಪದ ದುರ್ಗದಹಳ್ಳಿಯ ಐತಿಹಾಸಿಕ ಕುಂಬಾರಹಳ್ಳಿ ಕೆರೆ ಕಾಡಿನ ಮಧ್ಯೆ ಇದ್ದು ಯಾರ ಗಮನಕ್ಕೂ ಬಾರಂದಂತಿತ್ತು. ಸುಮಾರು ಮೂವತ್ತೆರಡು ವರ್ಷಗಳಿಂದ ನೀರಿಲ್ಲದೆ ಕೆರೆ ಪಾಳುಬಿದ್ದಿತ್ತು. ಕಳೆದ ಒಂದೂವರೆ ವರ್ಷದಿಂದ ಗ್ರಾಮಕ್ಕೆ ಸುಭಿಕ್ಷೆಯ ಮಳೆಯಾಗಿ ದೇವರಾಯನದುರ್ಗದ ಜಯಮಂಗಲಿ ನದಿ  ಯಿಂದ , ನಾಮದ ಚಿಲುಮೆ, ಚಿನಗದ ಬೆಟ್ಟ, ಸತ್ತಿಗಲ್ಲು, ಪಿರಂಗಿ ಬೆಟ್ಟ ದಿಂದ ಬರುತ್ತಿದ್ದ ನೀರಿನಿಂದ ಕೆರೆ ತುಂಬಿ ದ್ದು ಕೋಡಿ ಬೀಳುವ ಹಿನ್ನೆಲೆಯಲ್ಲಿ ಕೆರೆ ಸ್ವಚ್ಛತೆಮಾಡಲಾಗುತ್ತಿದೆ.ಕೃಷ್ಣ ದೇವರಾಯನ ಕಾಲದಲ್ಲಿ ನಿರ್ಮಾಣ ಗೋಂಡಿದ್ದ ಕೆರೆ ಇದಾಗಿದ್ದು ಈ ಕೆರೆಗೆ ಐತಿಹಾಸಿಕ ಹಿನ್ನೆಲೆ ಇದೆ. ಈ ಕಾರಣದಿಂದ ಗ್ರಾಮದ ಇತಿಹಾಸ ಪ್ರಸಿದ್ದ ಕೆರೆಯ ರಕ್ಷಣೆಗೆ ಇಡೀ ಗ್ರಾಮಸ್ಥರು ನಿಂತಿದ್ದಾರೆ. ಕಾಡಿನ ಮಧ್ಯೆ ಇದ್ದ ಈ ಕೆರೆಯಲ್ಲಿ ನೀರಿಲ್ಲದೆ ಮುಳ್ಳಿನ ಗಿಡಗಳು ಬೆಳೆದು ಪಾಳು ಬಿದ್ದ ಸ್ಥಿತಿಗೆ ತಲುಪಿತ್ತು. ಈಗ ಕೆರೆಗೆ ನೀರು ಬಂದು ದುರ್ಗದಹಳ್ಳಿ  ಗ್ರಾಮಸ್ಥರಲ್ಲಿ ಸಂತಸತಂದಿದೆ.…

ಮುಂದೆ ಓದಿ..
ಕ್ರೈಂ ಸುದ್ದಿ 

ಇಬ್ಬರು ಯುವಕರ ಅನುಮಾನಾಸ್ಪದ ಸಾವು: ತನಿಖೆ ಚುರುಕುಗೋಳಿಸಿದ ಪೋಲಿಸ್

Taluknewsmedia.com

Taluknewsmedia.comತುಮಕೂರು: ಇಬ್ಬರು ಯುವಕರನ್ನು ಅಮಾನುಷವಾಗಿ ಥಳಿಸಿ ಹತ್ಯೆ ಮಾಡಿರುವ ಘಟನೆ ತುಮಕೂರಿನ ಪೆದ್ದನಹಳ್ಳಿಯಲ್ಲಿ ನಡೆದಿದೆ.ಕೃಷಿ ಪಂಪ್ ಸೆಟ್ ನ ಕೇಬಲ್ ಕಳವು ಮಾಡಲು ಹೋಗಿದ್ದ ಸಂದರ್ಭದಲ್ಲಿ ಜನರ ಕೈಗೆ ಸಿಕ್ಕಿ ಬಿದ್ದು ಹತ್ಯೆ ಮಾಡಲಾಗಿದೆ  ಎನ್ನುವ ಗುಸುಗುಸು ಮಾತುಗಳು ಕೂಡ ಕೇಳಿ ಬಂದಿದೆ. ಘಟನೆಯ ಸಂದರ್ಭದಲ್ಲಿ ಮೃತದ ಜೊತೆಗಿದ್ದ ಇನ್ನಿಬ್ಬರು ಓಡಿಹೋಗಿದ್ದರು ಎಂದೂ ಹೇಳಲಾಗುತ್ತಿದೆ. ಪೆದ್ದನಹಳ್ಳಿಯ ಗಿರೀಶ್ ಸಹೋದರ ಪಿ.ಎಂ.ಶ್ರೀಧರ್‌ ಘಟನೆಗೆ ಸಂಬಂಧಿಸಿದಂತೆ ದೂರು ನೀಡಿದ್ದು, ನಂದೀಶ್‌ ಹಾಗೂ ಇತರರು ಸೇರಿಕೊಂಡು ಈ ಇಬ್ಬರನ್ನೂ ಕೊಂದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಯುವಕರ ಹತ್ಯೆ ತುಮಕೂರು ತಾಲೂಕಿನ  ಪೆದ್ದನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಘಟನೆಯ ನಂತರ ಗ್ರಾಮದಲ್ಲಿ ಇದೀಗ ಮೌನ ಆವರಿಸಿದ್ದು,  ಸ್ಥಳೀಯ ಜನರು ಭೀತಿಗೊಂಡಿದ್ದಾರೆ. ಪೆದ್ದನಹಳ್ಳಿಯ ಪರಿಶಿಷ್ಟ ಜಾತಿಗೆ ಸೇರಿದ ಪಿ.ಎಂ.ಗಿರೀಶ್‌ (32), ಮಂಚಲದೊರೆ ಗ್ರಾಮದ ಪರಿಶಿಷ್ಟ ಪಂಗಡಕ್ಕೆ ಸೇರಿದ ಗಿರೀಶ್‌ (33) ಕೊಲೆಯಾದವರು. ಇದೇ ಗ್ರಾಮದ…

ಮುಂದೆ ಓದಿ..
ರಾಜಕೀಯ 

ಕಾಂಗ್ರೆಸ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

Taluknewsmedia.com

Taluknewsmedia.com ಪಾವಗಡ ತಾಲ್ಲೂಕಿನ ಗುಮ್ಮಘಟ್ಟ ಗ್ರಾಮದ ಚೌಡೇಶ್ವರಿ ಸಭಾಂಗಣದಲ್ಲಿ ಪ್ರಭಾವಿ ಯುವ ಮುಖಂಡ ಕೆ.ಶ್ರೀನಿವಾಸಲು ಅವರು ಕಾಂಗ್ರೆಸ್ ಸದಸ್ಯತ್ವ ನೋಂದಣೆ ಅಭಿಯಾನಕ್ಕೆ ಚಾಲನೆ ನೀಡದರು.ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ವಿಶ್ವೇಶ್ವರಯ್ಯ, ಕಾಂಗ್ರೆಸ್ ಮುಖಂಡರಾದ ಸದಾಶಿವಪ್ಪ, ಜಿ.ಎಚ್.ಈಶ್ವರ್, ಲಕ್ಷ್ಮಿನಾರಯಣಪ್ಪ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಮುಂದೆ ಓದಿ..
ಸುದ್ದಿ 

ಊರ್ಡಿಗೆರೆ ಸಮೀಪ ಬಸ್ ಅಪಘಾತ: ಓರ್ವ ದುರ್ಮರಣ

Taluknewsmedia.com

Taluknewsmedia.comಗೋಲ್ಡನ್ ಸೀಮ್ಸ್ ಫ್ಯಾಕ್ಟರಿಗೆ ಸೇರಿದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾಗಿದ್ದು ಓರ್ವ ಸಾವನ್ನಪ್ಪಿರುವ ಘಟನೆ ಮಂಗಳವಾರ ಸಂಜೆ ತುಮಕೂರು ತಾಲೂಕು ಊರ್ಡಿಗೆರೆ ಬಳಿಯ ವದೇಕಲ್ಲು ಹಾಗೂ ಪೆಮ್ಮನಹಳ್ಳಿ ಗ್ರಾಮದ ಬಳಿ ನಡೆದಿದೆ. ಈ ಅಪಘಾತದಲ್ಲಿ ಗಾರ್ಮೆಂಟ್ಸ್ ನೌಕರನೊಬ್ಬ ಸಾವನಪ್ಪಿದ್ದಾನೆ.ಗೋಲ್ಡನ್ ಸೀಮ್ಸ್ ಫ್ಯಾಕ್ಟರಿಗೆ ಸೇರಿದ ಖಾಸಗಿ ಬಸ್ಸಿನಲ್ಲಿ ೩೫ ಕ್ಕೂ ಹೆಚ್ಚು ಮಂದಿ ಪ್ರಾಯಾಣಿಸುತ್ತಿದ್ದರು. ಚಾಲಕನ ಅತಿವೇಗ ಅಪಘಾತಕ್ಕೆ ಕಾರಣವಾಗಿದೆ ಎಂದು ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ತಿಳಿಸಿದ್ದಾರೆ.ಈ ಬಸ್ಸಿನಲ್ಲಿ ಪ್ರತಿನಿತ್ಯ ತುಮಕೂರು ತಾಲೂಕಿನ ಪೆಮ್ಮನಹಳ್ಳಿ ಗ್ರಾಮದಿಂದ ಮಾಕಳಿ ಹಾಗೂ ಹೊಸ ಕೋಟೆ ಭಾಗಕ್ಕೆ ನೌಕರರು ಪ್ರಯಾಣಿಸುತ್ತಿದ್ದರು. ಆದರೆ ಮಂಗಳವಾರ ಸಂಜೆ ಪೆಮ್ಮನಹಳಿ ಬಳಿ ಚಾಲಕನ ಅತಿ ವೇಗದಿಂದ ನಿಯಂತ್ರಣಕ್ಕೆ ಸಿಗದೆ ಅಪಘಾತ ಸಂಭವಿಸಿದೆ. ಘಟನೆ ನಡೆದ ಕೂಡಲೇ ಗಾಯಳುಗಳನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ೮ ಮಂದಿಗೆ ತೀವ್ರ…

ಮುಂದೆ ಓದಿ..
ಸುದ್ದಿ 

ತ್ಯಾಜ್ಯ ವಿಲೇವಾರಿಯ ತಾಣವಾಯಿತಾ ದೇವರಾಯನದುರ್ಗ ರಸ್ತೆ.

Taluknewsmedia.com

Taluknewsmedia.comದೇವರಾಯನದುರ್ಗದ ರಸ್ತೆಯಲ್ಲಿ ಮಾಸ್ಕ್ ಗಳ ತ್ಯಾಜ್ಯ ಸುರಿಯಲಾಗಿದೆ.ತ್ಯಾಜ್ಯ ವು #INCAP ಕೈಗಾರಿಕೆಗೆ ಸಂಬಂಧಿಸಿದ್ದು ಎನ್ನಲಾಗಿದ್ದು, ಸಂಸ್ಥೆಯ ಮ್ಯಾನೇಜರ್ ಅವರ ವಿಸಿಟಿಂಗ್ ಕಾರ್ಡ್ ಗಳು ಪತ್ತೆಯಾಗಿವೆ. ಪರಿಸರವನ್ನು ಪದೇ ಪದೆ ಕಲುಷಿತ ಮಾಡುತ್ತಿರುವವರ ವಿರುದ್ದವಾಗಿ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೋಳ್ಳದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. taluknews.com

ಮುಂದೆ ಓದಿ..
ಸುದ್ದಿ 

ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು : ಪರಮೇಶ್ವರ್

Taluknewsmedia.com

Taluknewsmedia.comಕಾಂಗ್ರೆಸ್ ನಲ್ಲಿ ಸಾಕಷ್ಟು ನಾಯಕರು ಮುಖ್ಯ ಮಂತ್ರಿ ಆಗಬೇಕು ಎಂದು ಸಾಕಷ್ಟು ನಾಯಕರು ಬಯಸುತ್ತಿದ್ದಾರೆ ಅದರಲ್ಲಿ ಮುಚ್ಚು ಮರೆ ಏನೂ ಇಲ್ಲಾ ಎಂದು ತುಮಕೂರಿನಲ್ಲಿ ಶಾಸಕ ಜಿ ಪರಮೇಶ್ವರ್ ಹೇಳಿದ್ದಾರೆ.ನಗರದ ಪತ್ರಿಕಾ ಘೊಷ್ಟಿಯಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿ ವಿಚಾರ ಸಹಜವಾಗಿಯೇ ಇದೆ ಆದರೆ ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು ನಂತರ ೧೧೩ ಸ್ಥಾನ ಕಾಂಗ್ರೆಸ್‌ಗೆ ಬರಬೇಕು ಬಂದ ನಂತರ ಶಾಸಕಾಂಗ ಸಭೆಕರೆಯುತ್ತಾರೆ. ಅಲ್ಲಿ ಯಾರು ಸಿಎಂ ಆಗಬೇಕು ಎಂದು ನಿರ್ಧರಿಸುತ್ತಾರೆ ಸಿದ್ದಾರಾಮಯ್ಯ ಅವರನ್ನು ಹೀಗೆಯೇ ಆರಿಸಿದ್ದು ಎಂದರು.ತುಮಕೂರಿನ ಕುಣಿಗಲ್‌ನಲ್ಲಿ ಮುದ್ದಹನುಮೇ ಗೌಡರ ಸ್ಫರ್ಧೆಯ ಬಗ್ಗೆ ಮಾತನಾಡಿದ ಅವರು ಇದು ನಮ್ಮ ತೀರ್ಮಾನ ಆಗಿರಲಿಲ್ಲಾ ಈ ಮುಂಚೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೋಳ್ಳ ಬೇಕು ಎಂದು ಹೈಕಮಾಂಡ್ ವರಿಷ್ಟರು ಸೂಚನೆ ನೀಡಿದ್ದರು. ಅದರಂತೆ ದೆವೇಗೌಡರು ತುಮಕೂರಿನಲ್ಲಿ ಸ್ಪರ್ಧೆ ಮಾಡುತ್ತಾರೆ ನಮಗೆ ಬಿಟ್ಟುಕೊಡಿ ಎಂದು ಹೇಳಿದ್ದರು ನಾನು…

ಮುಂದೆ ಓದಿ..
ಸುದ್ದಿ 

ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸಿದ್ದಲಿಂಗಪ್ಪ ಆಯ್ಕೆ

Taluknewsmedia.com

Taluknewsmedia.comತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾಗಿ ಸಿದ್ದಲಿಂಗಪ್ಪ ಆಯ್ಕೆಯಾಗಿದ್ದಾರೆ. ತುಮಕೂರು ಜಿಲ್ಲಾಕ್ನನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆದಿದ್ದು ಚುನಾವಣೆಯ ಮತ ಎಣಿಕೆಯಲ್ಲಿ 1613 ಮತಗಳನ್ನು ಕೆ ಎಸ್ ಸಿದ್ದಲಿಂಗಪ್ಪ ಪಡೆದು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಪಾವಗಡ ಕುಣಿಗಲ್ ಮತ್ತು ಚಿಕ್ಕನಾಯಕ ಹಳ್ಳಿ ಗುಬ್ಬಿ ಕೊರಟಗೆರೆ, ಮಧುಗಿರಿ ತಾಲ್ಲೂಕುಗಳಲ್ಲಿ ಸಿದ್ದಲಿಂಗಪ್ಪ ಅಧಿಕ ಮತ ಪಡೆದಿದ್ದಾರೆ ಹೀಗಾಗಿ ಪ್ರತಿಸ್ಪರ್ಧಿ ಶೈಲಾ ನಾಗರಾಜ್ 1344 ಮತಪಡೆದರೆ ಅವರಿಗಿಂತ ಸಿದ್ದಲಿಂಗಪ್ಪ 700 ಮತಗಳನ್ನು ಪಡೆದು ಜಯಗಳಿಸಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾದ್ಯಕ್ಷ ಸ್ಥಾನಕ್ಕೆ ಮತದನ ನಡೆದಿದ್ದು ತುಮಕೂರು ಜಿಲ್ಲೆಯಲ್ಲಿ 4978 ಮತಗಳು ಚಲಾವಣೆಯಲ್ಲಿ ಗೊಂಡಿದ್ದು ಶೇಖಡಾ 46 ಷ್ಟು ಮತದಾನ ದಾಖಲಾಗಿದೆ.ತುಮಕೂರು ತಾಲ್ಲೂಕಿನಲ್ಲಿ 1811 ಮಂದಿ ಮತದಾನ ಮಡಿದರೆ, ತಿಪಟೂರು 537, ಮಧುಗಿರಿ 431, ನಿಟ್ಟೂರಿನಲ್ಲಿ 365, ಚಿಕ್ಕನಾಯಕನಹಳ್ಳಿ 200, ಪಾವಗಡ 289, ಗುಬ್ಬಿ 480,ಶಿರಾದಲ್ಲಿ 625 ಮಂದಿ ತುರುವೇಕೆರೆಯಲ್ಲಿ 549,ಕುಣಿಗಳ್…

ಮುಂದೆ ಓದಿ..
ಸುದ್ದಿ 

ದೇಶೀಯ ಸೊಗಡಿನ ಶಿಕ್ಷಣ ಪದ್ದತಿಯೇ ರಾಷ್ಟ್ರೀಯ ಶಿಕ್ಷಣ ನೀತಿ.

Taluknewsmedia.com

Taluknewsmedia.comನಮ್ಮ ದೇಶದ ಇತಿಹಾಸ, ಪರಂಪರೆ, ದಾರ್ಶನಿಕರ ಬದುಕನ್ನು ಗೌರವಿಸುವಂತಹ ಒಟ್ಟಾರೆ ದೇಶೀಯ ಸೊಗಡಿನ ಶಿಕ್ಷಣ ಪದ್ದತಿಯೇ ರಾಷ್ಟ್ರೀಯ ಶಿಕ್ಷಣ ನೀತಿ ಯ ಉದ್ದೇಶವಾಗಿದೆ ಎಂದು ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಶ್ರೀನಿವಾಸ ಎಸ್ ಬಳ್ಳಿ ಅಭಿಪ್ರಾಯ ಪಟ್ಟರು. ತುಮಕೂರು ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಷ್ಠಾನದ ಎರಡನೇ ದಿನದ ಕಾರ್ಯಗಾರದಲ್ಲಿ ಮಾತನಾಡಿದ ಅವರು ನಮ್ಮ ದೇಶದ ಧೀಮಂತ ನಾಯಕರ ಮೇಲೆ ಅಭಿಮಾನ ಮೂಡಿ ನೆಲ ಮೂಲ ಸಂಸ್ಕೃತಿಯನ್ನು ಎತ್ತಿಹಿಡಿಯುವಲ್ಲಿ ಈ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಮುಖ ಪಾತ್ರ ವಹಿಸುತ್ತದೆ. ನಳಂದ ತಕ್ಷಶಿಲಾ ದಂತಹ ವಿಶ್ವವಿದ್ಯಾಲಯಗಳನ್ನು ಈ ರಾಷ್ಟ್ರೀಯ ಶಿಕ್ಷಣ ನೀತಿಯ ಮುಖಾಂತರ ಮರು ಸೃಷ್ಟಿಮಾಡಲಾಗುತ್ತಿದೆ. ಸ್ವಾತಂತ್ರ್ಯ ನಂತರ ಶಿಕ್ಷಣದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದು ಶಿಕ್ಷಣವನ್ನು ಸಾರ್ವತ್ರೀಕರಿಸಲು ಬಹಳ ಪ್ರಯತ್ನಗಳು ಜರುಗಿದವುಆದರೆ ಮೆಕಾಲೆ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸುವಲ್ಲಿ ಎನ್ ಇ ಪಿ ಯ ಗುರಿಯಾಗಿದೆ.…

ಮುಂದೆ ಓದಿ..
ಕ್ರೈಂ ಸುದ್ದಿ 

ಗುಬ್ಬಿ ಪೊಲೀಸ್ ಠಾಣೆ ಪಿಎಸ್ಐ ಜ್ಞಾನಮೂರ್ತಿ ಲಂಚಾವತಾರಕ್ಕೆ ಅಮಾನತು ಶಿಕ್ಷೆ

Taluknewsmedia.com

Taluknewsmedia.comತುಮಕೂರು : ಮೃತ ದೇಹ ಸಾಗಿಸಲು ಆಗಲ್ಲ ಎಂದ ಮ್ಯಾಕ್ಸಿ ಕ್ಯಾಬ್ ಚಾಲಕನ ಮೇಲೆ ಇಲ್ಲಸಲ್ಲದ ಕೇಸ್ ದಾಖಲಿಸಿದ ಪಿಎಸ್ಐ ಕೊನೆಗೆ ಅವನ ಬಳಿಯೇ ತನ್ನ ಜೀಪ್ ಡ್ರೈವರ್ ಖಾತೆಗೆ ಲಂಚದ ಹಣವನ್ನ ಫೋನ್ ಪೇ ಮಾಡಿಸಿಕೊಂಡಿದ್ದ ತುಮಕೂರು ಜಿಲ್ಲೆ ಗುಬ್ಬಿ ಪಿ.ಎಸ್.ಐ ಜ್ಞಾನಮೂರ್ತಿ ಯನ್ನ ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಗುಬ್ಬಿ ಬಳಿಯ ಎಂ.ಹೆಚ್.ಪಟ್ಟಣ ಬಳಿ ಸೆಪ್ಟೆಂಬರ್ 2 ನೇ ಗುರುವಾರದಂದು ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಅಪಘಾತವಾಗಿ ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದ, ಬಳಿಕ ಸ್ಥಳಕ್ಕೆ ತೆರಳಿದ್ದ ಗುಬ್ಬಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಜ್ಞಾನಮೂರ್ತಿ ಪ್ರಕರಣವನ್ನು ದಾಖಲಿಸಿಕೊಂಡಿದ್ರು. ಬಳಿಕ ಮೃತದೇಹವನ್ನ ಸಾಗಿಸಲು ಮುಂದಾದ ಪಿಎಸ್ ಐ ಬೆಂಗಳೂರಿನಿಂದ ಚಿಕ್ಕಮಗಳೂರು ಜಿಲ್ಲೆ ತರೀಕೆರೆಗೆ ಹೋಗುತ್ತಿದ್ದ ತರಕಾರಿ ಸಾಗಿಸುವ ಮ್ಯಾಕ್ಸಿ ಕ್ಯಾಬ್ ನ ಚಾಲಕ ಶಕೀಲ್ ನನ್ನು ತಡೆದು ಶವವನ್ನು ಸಾಗಿಸುವಂತೆ ಗುಬ್ಬಿ ಪಿ.ಎಸ್.ಐ ಜ್ಞಾನಮೂರ್ತಿ ಹೇಳಿದ್ದರು ಇದಕ್ಕೆ…

ಮುಂದೆ ಓದಿ..
ಸುದ್ದಿ 

ಕಿಲೋಮಿಟರ್ ಗಟ್ಟಲೆ ಕಾಂಡೋಮ್ ಕಂಡು ಬೆಚ್ಚಿದ ವಾಹನ ಸವಾರರು.

Taluknewsmedia.com

Taluknewsmedia.comತುಮಕೂರಿನ ಪ್ರಮುಖವಾದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬರುವ ತುಮಕೂರಿನ ಕ್ಯಾತ್ಸಂದ್ರ ದಿಂದ ಬಟವಾಡಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಕಾಂಡೋಮ್ಗಳು ರಸ್ತೆ ಪಕ್ಕದಲ್ಲಿ ಬಿದ್ದಿದ್ದು ಇದನ್ನು ಕಂಡ ವಾಹನ ಸವಾರರು ಬೆಚ್ಚಿಬಿದ್ದಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಶ್ರೀರಾಜ್ ಚಿತ್ರಮಂದಿರದ ಎದುರು ಇರುವ ಫ್ಲೈಓವರ್ ಮೇಲೆ ಕಿಲೋಮೀಟರ್ ಗಟ್ಟಲೆ ಕಾಂಡೋಂಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಇದನ್ನು ಕಂಡ ವಾಹನ ಸವಾರರ ಚರ್ಚಗೆ ಎಡೆ ಮಾಡಿ ಕೊಟ್ಟಿದೆ. ಇನ್ನು ರಸ್ತೆಯಮೇಲೆ ಕಿಲೋಮೀಟರ್ ಗಟ್ಟಲೆ ಕಾಂಡೋಂಗಳು ಏತಕ್ಕಾಗಿ ಬಿದ್ದಿವೆ ಎಂದು ಯಾರಿಗೂ ಮಾಹಿತಿ ಇಲ್ಲ ಇನ್ನು ಹೈವೇ ರಸ್ತೆ ಆಗಿರುವುದರಿಂದ ಸಹಜವಾಗಿ ವಾಹನಗಳು ಸಂಚರಿಸುವ ವೇಳೆ ಅಚಾನಕ್ಕಾಗಿ ಬಿದ್ದಿವೆ ಯೋ….? ಅಥವಾ ಬೇಕಂತಲೇ ಯಾರಾದರೂ ರಸ್ತೆ ಪಕ್ಕದಲ್ಲಿ ಹಾಕಿದ್ದಾರೋ ಎಂದು ಯಾರಿಗೂ ಮಾಹಿತಿಯಲ್ಲ. ಇನ್ನದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಇದರ ಬಗ್ಗೆ ತನಿಖೆ ಕೈಗೊಳ್ಳಬೇಕು ಎಂದು ವಾಹನ ಸವಾರರು…

ಮುಂದೆ ಓದಿ..