ಆಧ್ಯಾತ್ಮ ವಿಶೇಷ ಸುದ್ದಿ 

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿoದ ನೆರವೇರಿದ ಶ್ರೀ ಚೌಡೇಶ್ವರಿ ಅಮ್ಮನವರ ದಸರಾ ಮಹೋತ್ಸವ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಆನೇಕಲ್, ಅ15 : ದುಷ್ಟ ಶಕ್ತಿಗಳ ಸಂಹಾರಕ್ಕಾಗಿ ನವರಾತ್ರಿಯ ಆಚರಣೆ ಮಾಡುತ್ತಾ ಬಂದಿರುವ ಆನೇಕಲ್ ಪಟ್ಟಣದಲ್ಲಿ ಅದ್ದೂರಿ ಜಂಬೂ ಸವಾರಿ ಉತ್ಸವ ಮಾಡುತ್ತಿರುವುದು ಶೋಭೆ ತಂದಿದೆ. ಇದು ಮನೆ ಮನೆಯ ಹಬ್ಬವಾಗಬೇಕು ಪ್ರಭಾಕರ್ ರೆಡ್ಡಿ ರವರು ಮಾತನಾಡಿದರು.ಆನೇಕಲ್ ಪಟ್ಟಣದಲ್ಲಿ ಶ್ರೀ ಚೌಡೇಶ್ವರಿ ಅಮ್ಮನವರ ವಿಜಯದಶಮಿ ಅಂಬಾರಿ ಉತ್ಸವ ಸಮಾರಂಭದ ಅಧ್ಯಕ್ಷತೆವಹಸಿ ಮಾತನಾಡಿದರು, ಎಲ್ಲರ ಕಷ್ಟಗಳನ್ನು ಹೋಗಲಾಡಿಸಿ ಪ್ರತಿಯೊಬ್ಬರೂ ಸುಖ, ಶಾಂತಿ, ನೆಮ್ಮದಿಯಿಂದ ಬಾಳುವಂತೆ ಚೌಡೇಶ್ವರಿ ತಾಯಿ ಕರುಣಿಸಲಿ, ಎಲ್ಲರ ಜೀವನದಲ್ಲು ದುಷ್ಟ ಶಕ್ತಿಗಳ ಆಹ್ವಾನವಾಗದಂತೆ ಆ ತಾಯಿ ಕಾಪಾಡಲಿ ಎಂದು ಹೇಳಿದರು. ತೊಗಟ ವೀರ ಪುಷ್ಪಾಂಜಲಿ ಮುನಿ ಗುರು ಪೀಠದ ಶ್ರೀ ದಿವ್ಯ ಜ್ಞಾನಾನಂದ ಗಿರಿ ಶ್ರೀಗಳು ಮಾತನಾಡಿ, ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯ ಬೇಕಾದರೆ ಶಾಂತಿ ಸಂಯಮವನ್ನು ಕಾಪಾಡಿಕೊಳ್ಳ ಬೇಕು. ದುಷ್ಟಚಟಗಳನ್ನು ಮೆಟ್ಟಿನಿಲ್ಲುವ ಅವಶ್ಯಕತೆ ಇದ್ದು, ಅಂತಹ ಸಂಕಲ್ಪವನ್ನು ಮಾಡಬೇಕು. ಬದುಕು…

Read More
ಆಧ್ಯಾತ್ಮ ವಿಶೇಷ ಸುದ್ದಿ 

ಆನೇಕಲ್ ನಲ್ಲಿ ವೈಭವದಿಂದ ಚೌಡೇಶ್ವರಿ ದೇವಿಯ ದಸರಾ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಆನೇಕಲ್: ಆನೇಕಲ್ ಪಟ್ಟಣದಲ್ಲಿ ಚೌಡೇಶ್ವರಿ ದೇವಿ ವಿಜಯದಶಮಿ. ದಸರಾ ಉತ್ಸವವು ಮೈಸೂರು ದಸರೆ ಆನೇಕಲ್‌ನಲ್ಲಿ ನಡೆಯುತ್ತಿದ್ದು ಇದಕ್ಕಾಗಿ ಪಟ್ಟಣವು ನವವಧುವಿನಂತೆ ಸಿಂಗಾರಗೊಂಡಿದೆ. ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರ, ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ ಸೇರಿದಂತೆ ಹಾಗೂ ನವರಾತ್ರಿಯ ಅಂಗವಾಗಿ ಪ್ರತಿದಿನ ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತಿದೆ. ಪ್ರತಿನಿತ್ಯ ಜನರ ದಂಡು ದೇವಿಯ ದರ್ಶನಕ್ಕಾಗಿ ಸೇರುತ್ತಿದೆ.ಪಟ್ಟಣದ ಹೃದಯಭಾಗದ ತಿಲಕ್ ವೃತ್ತದಲ್ಲಿರುವ ಶ್ರೀ ಚೌಡೇಶ್ವರಿ ದೇವಿ ದೇವಾಲಯವು ಪಟ್ಟಣದ ಪ್ರಮುಖ ಆಕರ್ಷಣೆ. ಈ ಶಕ್ತಿ ದೇವತೆಯು ಸುತ್ತಲಿನ ಗ್ರಾಮಗಳು ಸೇರಿದಂತೆ ಪಟ್ಟಣದ ಸಹಸ್ರಾರು ಜನರ ಆರಾಧ್ಯ ದೈವವಾಗಿದೆ. ಶರನ್ನವರಾತ್ರಿ ಪ್ರಯುಕ್ತ ಅಕ್ಟೋಬರ್‌ 07ರಿಂದಲೂ ದೇವಾಲಯದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಚೌಡೇಶ್ವರಿ ದೇವಿಗೆ ಶರನ್ನವರಾತ್ರಿಯ ಪ್ರಯುಕ್ತ ಶೈಲ ಪುತ್ರಿ, ಚಂದ್ರಗಂಟ, ಕುಷ್ಮಾಂಡ, ಸ್ಕಂದ ಮಾತ, ಕಾತ್ಯಾಯಿನಿ, ಸರಸ್ವತಿ, ಕಾಳರಾತ್ರಿ (ದುರ್ಗಾ), ಮಹಾ ಗೌರಿ, ಶ್ರೀ ಚೌಡೇಶ್ವರಿ ಅಮ್ಮ…

Read More
ಆಧ್ಯಾತ್ಮ ಸುದ್ದಿ 

ರಾಜಲಾಂಛನ ಸಂಸ್ಥೆಯ ವತಿಯಿಂದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಆನೇಕಲ್ :- ರಾಜಲಾಂಛನ ಸಂಸ್ಥೆಯ ವತಿಯಿಂದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಪ್ರಯುಕ್ತ ಹೆಬ್ಬಗೋಡಿ ತಿರುಪಾಳ್ಯ ದಲ್ಲಿರುವ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆದ ಶ್ರೀಯುತ ಎಲ್ ವೈ ರಾಜೇಶ್ ರವರ ಮಾರ್ಗದರ್ಶನದಲ್ಲಿ ಸ್ವಚ್ಛತೆ ಕಾರ್ಯಕ್ರಮವನ್ನು ಮಾಡಲಾಯಿತು. ಗಾಂಧೀಜಿ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಶೇಖರ್.ಎಚ್.ಎ ಹಾಗೂ ಗಣೇಶ್ ತೆಲಗರಹಳ್ಳಿ ರವರು ಮಹಾತ್ಮಾ ಗಾಂಧೀಜಿಯವರನ್ನು‌ ಭಾರತೀಯರು ಮಾತ್ರವಲ್ಲ ವಿಶ್ವಾದ್ಯಂತ ಎಲ್ಲರೂ ಸ್ಮರಿಸುತ್ತಾರೆ, ಗೌರವಿಸುತ್ತಾರೆ. ಕೇವಲ ಮಾತಿನಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಮಹಾತ್ಮಾ ಗಾಂಧೀಜಿಯವರಂತೆ ನಿರ್ದಿಷ್ಟ ಗುರಿ ಹಾಕಿಕೊಂಡರೆ ಮಾತ್ರ ಉದ್ದೇಶ ಈಡೇರಿಸಲು ಸಾಧ್ಯವಿದೆ ಎಂದರು‌.ಗಾಂಧೀಜಿಯ ಆಚಾರ, ವಿಚಾರವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಗಾಂಧಿ ಜಯಂತಿಯ ಆಚರಣೆಗೆ ಅರ್ಥ ಬರಲಿದೆ‌ ಎಂದು ಅವರು ಅಭಿಪ್ರಾಯಿಸಿದರು. ಈ ಕಾರ್ಯ ಕಮಕ್ಕೆ ಮುಖ್ಯ ಅತಿಥಿಗಳಾಗಿ ಕೇಂದ್ರ ಘಟಕದ ಉಪಾಧ್ಯಕ್ಷರಾದ…

Read More
ಆಧ್ಯಾತ್ಮ ಆರೋಗ್ಯ ಸುದ್ದಿ 

ವಿಶ್ವ ಯೋಗ ದಿನಾಚರಣೆ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಆನೇಕಲ್ :- ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಾರಂಭವಾದ ನಂತರ 2015 ರಿಂದ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಯೋಗವು ಭಾರತದಲ್ಲಿ ಹುಟ್ಟಿದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ತಮ್ಮ ಯುಎನ್ ಭಾಷಣದಲ್ಲಿ ಜೂನ್ 21 ರ ದಿನಾಂಕವನ್ನು ಸೂಚಿಸಿದ್ದಾರೆ, ಏಕೆಂದರೆ ಇದು ಉತ್ತರ ಗೋಳಾರ್ಧದಲ್ಲಿ ವರ್ಷದ ಅತಿ ಉದ್ದದ ದಿನವಾಗಿದೆ ಮತ್ತು ವಿಶ್ವದ ಅನೇಕ ಭಾಗಗಳಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ.ಸೆಪ್ಟೆಂಬರ್ 27, 2014 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್‌ಜಿಎ) ಭಾಷಣ ಮಾಡುವಾಗ, ಪ್ರಸ್ತುತ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಲ್ಪನೆಯನ್ನು ಪ್ರಸ್ತಾಪಿಸಿದರು. ಅವರು ಹೀಗೆ ಹೇಳಿದರು:ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಇದು ಮನಸ್ಸು ಮತ್ತು ದೇಹದ ಏಕತೆಯನ್ನು ಸಾರುತ್ತದೆ; ಚಿಂತನೆ…

Read More
ಆಧ್ಯಾತ್ಮ ಸುದ್ದಿ 

ಬುದ್ಧನ ಚಿಂತನೆ ಸಾರ್ವಕಾಲಿಕ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಆನೇಕಲ್: ಶಾಂತಿ ಮತ್ತು ತ್ಯಾಗದ ಸಂಕೇತವಾದ ಬುದ್ಧನ ತತ್ವಗಳನ್ನು ಪ್ರಪಂಚದ 60 ದೇಶಗಳಲ್ಲಿ ಪಾಲನೆ ಮಾಡುತ್ತಿದ್ದಾರೆ. ಬುದ್ಧನ ಪಂಚಶೀಲ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಶಾಂತಿ, ನೆಮ್ಮದಿ, ಸಮೃದ್ಧಿ ತರಬೇಕು ಎಂದು ವಿಶ್ವ ಶಾಂತಿ ಮಹಾ ಬೋಧಿ ಆಶ್ರಮದ ಅನಿರುದ್ಧ ಬಂತೇಜಿ ತಿಳಿಸಿದರು.ಅವರು ತಾಲ್ಲೂಕಿನ ತ್ಯಾವಕನಹಳ್ಳಿಯ ಬುದ್ಧ ವಿಹಾರ ಕೇಂದ್ರದಲ್ಲಿ ಬುದ್ಧ ಪೂರ್ಣಿಮೆ ಅಂಗವಾಗಿ ಪಂಚಶೀಲ ಬೋಧನೆ ಮಾಡಿ ಮಾತನಾಡಿದರು. ಸಮಾಜದಲ್ಲಿ ಅಶಾಂತಿ, ಹಿಂಸೆಯೇ ಹೆಚ್ಚಾಗಿದೆ. ಇಂದಿನ ದಿನಗಳಲ್ಲಿ ಬುದ್ಧನ ತತ್ವ ಚಿಂತನೆಗಳು ಅವಶ್ಯಕವಾಗಿವೆ. ಹಾಗಾಗಿಯೇ ಎರಡು ಸಾವಿರ ವರ್ಷಗಳಿಗೂ ಹೆಚ್ಚು ಕಾಲದಿಂದ ಬುದ್ಧನ ಚಿಂತನೆಗಳು ಸಾಗಿ ಬಂದಿವೆ ಎಂದರು.ಕೊರೊನಾ ಹಿನ್ನೆಲೆಯಲ್ಲಿ ಬುದ್ಧ ಪೂರ್ಣಿಮೆಯನ್ನು ಸರಳವಾಗಿ ಆಚರಿಸಲಾಯಿತು. ಆಶಾ ಕಾರ್ಯಕರ್ತೆಯರಿಗೆ ಆಹಾರದ ಕಿಟ್‌ ವಿತರಿಸಲಾಯಿತು. ವಕೀಲ ಆನಂದ ಚಕ್ರವರ್ತಿ, ವಿಶ್ವಶಾಂತಿ ಮಹಾಬೋಧಿ ಬುದ್ಧ ವಿಹಾರದ ಅಧ್ಯಕ್ಷ ಡಾ.ಶ್ರೀನಿವಾಸ್‌, ಉಪಾಧ್ಯಕ್ಷ ಎಂ. ಮುನಿಯಲ್ಲಪ್ಪ,…

Read More
ಆಧ್ಯಾತ್ಮ ವಿಶೇಷ 

ಶ್ರೀ ಚೆನ್ನಕೇಶ್ವಸ್ವಾಮಿ ಬ್ರಾಹ್ಮ ರಥೋತ್ಸವ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಶ್ರೀ ಚೆನ್ನಕೇಶ್ವಸ್ವಾಮಿ ಬ್ರಾಹ್ಮ ರಥೋತ್ಸವ ಆನೇಕಲ್ ಟೌನ್ ದಿನಾಂಕ 14-03-2021 ರಿಂದ 20-03-2021 ವರೆಗೂ ಶ್ರೀ ಸ್ವಾಮಿಯವರಿಗೆ ಉತ್ಸವಗಳು ಜರುಗಲಿದ್ದು ಹಾಗೂ ಪಂಚಮಿ ದಿನಾಂಕ 18-03-2021ನೇ ಗುರುವಾರದಂದು ಆನೇಕಲ್ ಟೌನ್ ನಲ್ಲಿ ಪುರಾತನವಾಗಿ ನೆಲೆಸಿರುವ ಶ್ರೀ ಚೆನ್ನಕೇಶ್ವಸ್ವಾಮಿಯವರಿಗೆ ಶ್ರೀಮತ್ಪಾಂಚರಾತ್ರಾಗ ಮೋಕ್ತ ಬ್ರಾಹ್ಮರಥೋತ್ಸವವು ಜರುಗಲಿದ್ದು ಭಾಗವತ್ಪಾದಕ್ಕೆ ಆಗಮಿಸಿ ತೀರ್ಥಪ್ರಸಾದವನ್ನು ಸ್ವೀಕರಿಸಿ ಭಗವಂತನ ಕೃಪೆಗೆ ಪಾತ್ರರಾಗಲು ಪ್ರಾರ್ಥನೆ…

Read More
ಆಧ್ಯಾತ್ಮ 

ಗವಿಸಿದ್ದೇಶ್ವರ ರಥೋತ್ಸವ ಸಂಪನ್ನ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಕೊಪ್ಪಳ: ದಕ್ಷಿಣ ಭಾರತದ ಕುಂಭ ಮೇಳ ಎಂಬ ಖ್ಯಾತಿಯ ಕೊಪ್ಪಳದ ಗವಿಸಿದ್ದೇಶ್ವರ ಮಹಾರಥೋತ್ಸವ ಈ ಬಾರಿ ಸರಳವಾಗಿ ನಡೆಯಿತು. ಹೆಚ್ಚು ಭಕ್ತರು ಸೇರದಿರಲಿ ಎಂಬ ಕಾರಣಕ್ಕೆ ಬೆಳಗ್ಗೆಯೇ ರಥೋತ್ಸವ ನಡೆಸಿದರೂ ಸಾವಿರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು. ಕೋವಿಡ್ 19‌ ಭಯವನ್ನೂ ಲೆಕ್ಕಿಸದೇ ಭಕ್ತರು ರಥ ಬೀದಿಯತ್ತ ಹರಿದು ಬಂದರು… ಮಹಾರಥ ಎಳೆಯುತ್ತಿರುವ ಭಕ್ತರು… ದೂರದಲ್ಲಿಯೇ ನಿಂತು ಮಹಾ ರಥೋತ್ಸವ ದೃಶ್ಯ ಕಣ್ತುಂಬಿಕೊಳ್ಳುತ್ತಿರುವ ಭಕ್ತ ಸಾಗರ… ರಥೋತ್ಸವದ ನಂತರವೂ ಗವಿಮಠದ ಕಡೆ ಸಾಗರೋಪಾದಿಯಾಗಿ ಹರಿದು ಬಂದ ಭಕ್ತ ಗಣ….ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯ ಮಹಾರಥೋತ್ಸವದಲ್ಲಿ ಕಂಡು ಬಂದ ದೃಶ್ಯಗಳಿವು.ಪ್ರತಿವರ್ಷ ಪಡುವಣ ದಿಕ್ಕಿನಲ್ಲಿ ಸೂರ್ಯ ಮುಳುಗುವ ವೇಳೆಗೆ ರಥೋತ್ಸವಕ್ಕೆ ಚಾಲನೆ ದೊರೆಯುತ್ತಿತ್ತು. ಆದ್ರೆ, ಕೋವಿಡ್19 ಹಿನ್ನೆಲೆಯಲ್ಲಿ ಈ ಬಾರಿ ಬದಲಾದ ಸಮಯ ಎಂದರೆ ಸೂರ್ಯದೇವ ಮೂಡಣ ದಿಕ್ಕಿನಲ್ಲಿ ಉದಯಿಸುವ ಬೆಳಗ್ಗೆ 8-45ಕ್ಕೆ ರಥೋತ್ಸವಕ್ಕೆ ಚಾಲನೆ ದೊರೆಯಿತು.…

Read More
ಆಧ್ಯಾತ್ಮ 

ಹುಳಿಯಾರಿನ ಶತಾಯುಷಿ ಲಕ್ಷಮ್ಮ ನಿಧನ.

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಹುಳಿಯಾರಿನ ಕೇಶವಾಪುರದ ವಾಸಿ ದಿ. ದೂಡ್ಡಯ್ಯನವರ ಧಮ್೯ಪತ್ನಿ ಶ್ರೀ ಮತಿ ಲಕ್ಷಮ್ಮ ನವರು ಈ ದಿನ ಸಂಜೆ 7 ಗಂಟೆಗೆ ದೈವಾದೀನರಾಗಿದ್ದಾರೆ.. ಇವರಿಗೆ 105 ವಷ೯ ವಯಸ್ಸಾಗಿರುತ್ತದೆ ಮಕ್ಕಳು ಮತ್ತು ಮೊಮ್ಮಕ್ಕಳೂ ಹಾಗೂ ಅಪಾರ ಬಂದು ಮಿತ್ರರನ್ನು ಆಗಲಿದ್ದಾರೆ.. ಇವರಿಗೆ ಅಂತ್ಯಸಂಸ್ಕಾರವು ನಾಳೆ ಬೆಳಿಗ್ಗೆ ಕೇಶವಾಪುರದ ತೋಟದಲ್ಲಿ ನೆರವೇರಿಸಲಾಗುವುದು..

Read More
ಆಧ್ಯಾತ್ಮ 

ಒಳಪಂಗಡಗಳು ಒಗ್ಗೂಡಲಿ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಆನೇಕಲ್: ವೀರಶೈವ ಲಿಂಗಾಯತ ಸಮುದಾಯದಲ್ಲಿನ ಒಳಪಂಗಡಗಳು ಒಂದಾಗಬೇಕು. ಪರಸ್ಪರ ಸಾಮರಸ್ಯ ದಿಂದ ಸಮಾಜ ಕಟ್ಟುವ ಕಾರ್ಯದಲ್ಲಿ ಭಾಗಿಗಳಾಗಬೇಕು ಎಂದು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್‌.ಪರಮಶಿವಯ್ಯ ಅವರು ತಿಳಿಸಿದರು.ಅವರು ತಾಲ್ಲೂಕಿನ ಚಂದಾಪುರದಲ್ಲಿ ವೀರಶೈವ ಲಿಂಗಾಯತ ಮಹಾಸಭಾದ ಆನೇಕಲ್‌ ಘಟಕದ ವತಿಯಿಂದ ಭಾನುವಾರ ಆಯೋಜಿಸಿದ್ದ ಧರ್ಮಜಾಗೃತಿ ಸಮಾವೇಶ ಮತ್ತು ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವೀರಶೈವ ಲಿಂಗಾಯತ ಸಮುದಾಯದಲ್ಲಿ ಸುಮಾರು 102ಕ್ಕೂ ಹೆಚ್ಚು ಒಳಪಂಗಡಗಳಿವೆ. ಈ ಪಂಗಡಗಳ ನಡುವೆ ವೈವಾಹಿಕ ಸಂಬಂಧ ಬೆಳೆಸಬೇಕು. ಈ ಮೂಲಕ ಪರಸ್ಪರ ಒಗ್ಗೂಡಬೇಕು. ವೀರಶೈವ ಲಿಂಗಾಯತ ನಡುವೆ ಯಾವುದೇ ಬೇಧವಿಲ್ಲ. ಎರಡು ಸಹ ಒಂದೇ. ಹಾಗಾಗಿ ಸಮಾಜದ ಎಲ್ಲರೂ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿನ ಬಡವರ ಕಲ್ಯಾಣ ಕಾರ್ಯಕ್ರಮಗಳಿಗೆ ನೆರವಾಗಬೇಕು. ಸಮುದಾಯದಲ್ಲಿನ ಯಾವೊಬ್ಬ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತವಾಗಬಾರದು.ಆಯಾ ಭಾಗದಲ್ಲಿನ ಸಂಘ ಸಂಸ್ಥೆಗಳು ನೆರವಾಗುವ ಮೂಲಕ ಶಿಕ್ಷಣ ನೀಡಲು…

Read More
ಆಧ್ಯಾತ್ಮ 

ಚುಂಚನಕಟ್ಟೆ ಕೋದಂಡರಾಮ ದೇವಸ್ಥಾನ ಬಗ್ಗೆ ಒಂದಿಷ್ಟು ಮಾಹಿತಿ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಕರುನಾಡಿನ ಚುಂಚನಕಟ್ಟೆಯ ಕೋದಂಡರಾಮನ ನೋಡಿ, ಅಘನಾಶ ಎಂದು ಹಾಡಿ ಬೇಡಿ. ರಘುಕುಲ ಭೂಷಣನಾದ ಶ್ರೀರಾಮಚಂದ್ರನು ಸಾಕ್ಷಾತ್ ಪೂರ್ಣಬ್ರಹ್ಮ ಪರಮಾತ್ಮನಾಗಿದ್ದಾನೆ. ಅವನು ಧರ್ಮ ರಕ್ಷಣೆಗಾಗಿ ಹಾಗೂ ಲೋಕಗಳ ಉದ್ಧಾರಕ್ಕಾಗಿಯೇ ಅವತರಿಸಿದ್ದನು. ಜನಮಾನಸದಲ್ಲಿ ಅಚ್ಚಳಿಯದ ಪ್ರಭಾವವನ್ನು ಬೀರಿದ ಮರ್ಯಾದಾ ಪುರುಷೋತ್ತಮ ಶ್ರೀ ರಾಮ. ಕರುನಾಡಿನ ನೆಲಕ್ಕೂ ಶ್ರೀರಾಮಚಂದ್ರನಿಗೂ ಒಂದು ಅವಿನಾಭಾವ ಸಂಬಂಧವಿದೆ. ವನವಾಸದ ಸಮಯದಲ್ಲಿ ಕರ್ನಾಟಕದ ಹಲವು ಭಾಗಗಳಿಗೆ ಭೇಟಿ ನೀಡಿದ್ದಾನೆಂಬ ನಂಬಿಕೆ ನಮ್ಮಲ್ಲಿದ್ದು, ಆ ತಾಣಗಳು ಇಂದು ರಾಮನ ಭಕ್ತಿ ಕೇಂದ್ರಗಳಾಗಿವೆ, ಪ್ರವಾಸೀ ಧಾಮಗಳಾಗಿವೆ. ರಾಜ್ಯಗಳಲ್ಲಿರುವ ರಾಮ ತಾಣಗಳತ್ತ ಒಂದು ಕಿರುನೋಟ ಹರಿಸಿದರೆ, ದಕ್ಷಿಣ ಭಾರತದ ಕಾಶಿ ಎನಿಸಿರುವ ಹಂಪಿ, ಹನುಮನ ಕಿಷ್ಕಿಂದೆ, ಬೆಳಗಾವಿಯ ಜಿಲ್ಲೆಯ ರಾಮತೀರ್ಥ, ಚುಂಚನಕಟ್ಟೆಯ ಕೋದಂಡರಾಮ, ಕಲಬುರಗಿಯ ನರೋಣಾ, ಮಂಗಳೂರಿನ ಸೀತಾ ಬಾವಿ ಹೀಗೆ ಹತ್ತು ಹಲವಾರು ತಾಣಗಳಿವೆ. ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನಲ್ಲಿ ಇರುವ ಚುಂಚನಕಟ್ಟೆಯ ಕೋದಂಡರಾಮ…

Read More