ಆರೋಗ್ಯ ಸುದ್ದಿ 

50 ದಿನಗಳ ಕಾಲ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖಾ ಸಿಬ್ಬಂದಿಗೆ ರಜೆ ಇಲ್ಲ: ಡಾ.ಕೆ.ಸುಧಾಕರ್

Taluknewsmedia.com

Taluknewsmedia.com ಬೆಂಗಳೂರು: ಮತ್ತೆ ರಾಜ್ಯದಲ್ಲಿ  ಕೋರೋನ ಹೆಮ್ಮಾರಿಯ ಎರಡನೆಯ ಕಾರಣದಿಂದ ಮುಂದಿನ 50 ದಿನಗಳ ವರೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ರಜೆಯನ್ನು ಸರ್ಕಾರ ರದ್ದುಗೊಳಿಸಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಕೋವಿಡ್ ಎರಡನೇ ಅಲೆ ಆರಂಭವಾದ  ಹಿನ್ನೆಲೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಿಬ್ಬಂದಿ ಮಾತ್ರವಲ್ಲದೆ ನಾನು ಕೂಡ ರಜೆ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಈ ಒಂದು ನಿರ್ಧಾರ ಅನಿವಾರ್ಯವಾಗಿದೆ ಕೊರೋನಾ ವಿರುದ್ಧ ಹೊರಡಲೇಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದರು.

ಮುಂದೆ ಓದಿ..
ಆರೋಗ್ಯ 

108ನಲ್ಲಿ ಹೆಣ್ಣುಮಗು ಜನನ

Taluknewsmedia.com

Taluknewsmedia.comಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಯರದಮನಹಳ್ಳಿ ಗ್ರಾಮದ, ತುಂಬು ಗರ್ಭಿಣಿ ರಾಜಮ್ಮ ಎಂಬುವರು ಜ22ರಂದು ರಾತ್ರಿ11ಗಂಟೆ ಯಲ್ಲಿ.108ಅಂಬುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.ಸಂಡೂರು ತಾಲೂಕುಯರದಮ್ಮನಹಳ್ಳಿ ಗ್ರಾಮದಲ್ಲಿದ್ದ ಅವರಿಗೆ,ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಾಗ 108ಸಂಪರ್ಕಿಸಿದ್ದಾರೆ.ನೆರವಿಗೆ ಆಗಮಿಸಿದ ಚೋರನೂರು108 ಸಿಬ್ಬಂದಿ,ತುಂಬು ಗರ್ಭಿಣಿ ರಾಜಮ್ಮಳನ್ನು ಚೋರನೂರು ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವಾಗ.ಬೊಮ್ಮಘಟ್ಟ ಶ್ರೀಹುಲಿಕುಂಟೇಶ್ವರ ದೇವಸ್ಥಾನದ ಹತ್ತಿರ ಕೆರೆ ಏರಿಯ ಮೇಲೆ, 108ವಾಹನ ಚಲಿಸುವಾಗ ವಾಹನದಲ್ಲಿಯೇ ಸುಲಭ ಹೆರಿಗೆಯಾಗಿದೆ.ಈ ಸಂದರ್ಭದಲ್ಲಿ108ಸಿಬ್ಬಂದಿ ಇ.ಎಮ್.ಟಿ.ಹನುಮಂತಪ್ಪ ಹಾಗೂ ಚಾಲಕ ನಾಣ್ಯಾಪುರ ಪ್ರಭು,ಅವರು ಸಮಯ ಪ್ರಜ್ಞೆ ಮತ್ತು ಕರ್ಥವ್ಯ ನಿಷ್ಠೆ ಮೆರೆದಿದ್ದಾರೆ.ತಾಯಿ ರಾಜಮ್ಮ ಅವಳ ಹೆಣ್ಣುಮಗು ಕ್ಷೇಮವಿದ್ದು, ಅವರನ್ನು ಚೋರನೂರು ಅರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ.ರಾಜಮ್ಮಳ ಮನೆಯವರು 108ಸಿಬ್ಬಂದಿಯ ಕಾರ್ಯಕ್ಷಮತೆಗೆ,ಮೆಚ್ಚುಗೆ ವ್ಕ್ತಪಡಿಸಿದ್ದಾರೆ ಹಾಗೂ ಕೃತಜ್ಞತೆ ಅರ್ಪಿಸಿದ್ದಾರೆ. ಸಂಘ ಸಂಸ್ಥಗಳ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು 108ಸಿಬ್ಬಂದಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮುಂದೆ ಓದಿ..
ಆರೋಗ್ಯ 

ರಾಜ್ಯಕ್ಕೆ ಮೊದಲ ಹಂತದಲ್ಲಿ 7.95 ಲಕ್ಷ ವೈಲ್ ಗಳು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

Taluknewsmedia.com

Taluknewsmedia.comಬೆಂಗಳೂರು, ಜನವರಿ 12, ಮಂಗಳವಾರ :ರಾಜ್ಯಕ್ಕೆ ಮೊದಲ ಹಂತದಲ್ಲಿ ಕೊರೊನಾ ಲಸಿಕೆಯ 7.95 ಲಕ್ಷ ವೈಲ್ ಗಳು ಬರಲಿವೆ. ಇದನ್ನು ಆನಂದರಾವ್ ವೃತ್ತದಲ್ಲಿರುವ ಸಂಗ್ರಹಾಗಾರದಲ್ಲಿ ಶೇಖರಣೆ ಮಾಡಿ ಇಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಡ್ರಗ್ಸ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ ಕೋವಿಶೀಲ್ಡ್ ಲಸಿಕೆಗೆ ಈಗಾಗಲೇ ಪರವಾನಗಿ ನೀಡಿದೆ. ಕೇಂದ್ರ ಸರ್ಕಾರ 1.1 ಕೋಟಿ ಡೋಸ್ ಲಸಿಕೆ ಖರೀದಿ ಮಾಡಿದೆ. ಒಂದು ಡೋಸ್ ಗೆ 210 ರೂ. ನಿಗದಿ ಮಾಡಿದ್ದು, ಬೇರೆ ಯಾವ ದೇಶವೂ ಇಷ್ಟು ಕಡಿಮೆ ದರ ನಿಗದಿ ಮಾಡಿಲ್ಲ. ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಲಸಿಕೆ ಖರೀದಿಸಲಾಗಿದೆ. ಲಸಿಕೆ ಖರೀದಿಗೆ ಒಟ್ಟು 231 ಕೋಟಿ ರೂ. ಖರ್ಚು ಮಾಡಲಾಗಿದೆ. ರಾಜ್ಯಕ್ಕೆ ಮೊದಲ ಹಂತದಲ್ಲಿ 7.95 ಲಕ್ಷ ಕೋವಿಶೀಲ್ಡ್ ಲಸಿಕೆಯ ವೈಲ್ ಪೂರೈಕೆಯಾಗಲಿದೆ ಎಂದರು. ಪ್ರತಿ…

ಮುಂದೆ ಓದಿ..