ಸುದ್ದಿ 

ಬೈಕ್ ಸವಾರನನ್ನು ಬೆದರಿಸಿ ಬೈಕ್ ಕಸಿದು ಕಳ್ಳ ಪರಾರಿ…

Taluknewsmedia.com

Taluknewsmedia.comತುಮಕೂರು: ಮಧು ಎಂಬುವವರು ತಮ್ಮ ಫ್ಯಾಶನ್ ಪ್ರೊ ಹೀರೋ ಹೋಂಡಾ ವಾಹನದಲ್ಲಿ ಶಿರಾ ಗೇಟ್ ಬಳಿ ಹೋಗುವ ಸಂದರ್ಭದಲ್ಲಿ ದುಷ್ಕರ್ಮಿಗಳು ಅವರನ್ನು ಹೆದರಿಸಿ ಬೈಕ್ ಮತ್ತು ಹಣ ಕಸಿದು ಪರಾರಿಯಾಗಿರುವ ಘಟನೆ ತುಮಕೂರಿನ ಕೋಡಿ ಬಸವಣ್ಣ ಸರ್ಕಲ್ನ ಕೆರೆ ಏರಿಯ ಮುಂಭಾಗ ನಡೆದಿದೆ. ಮಧು ಎಂಬುವವರು ಸಂಜೆ ನಾಲ್ಕು ಗಂಟೆ ಸಮಯದಲ್ಲಿ ತಮ್ಮ ವಾಹನದಲ್ಲಿ ಕೋಡಿ ಸರ್ಕಲ್ ಬಳಿ ಇರುವ ಕೊಡಿ ಬಸವಣ್ಣ ದೇವಸ್ಥಾನದಿಂದ ಶಿರಾಗೇಟ್ ಕಡೆ ಹೋಗುವ ಕೆರೆ ಏರಿಯ ಮುಂಭಾಗ ಇರುವ ರಸ್ತೆಯಲ್ಲಿ ಹೋಗುತ್ತಿರುವಾಗ ಮಹಿಳೆಯೊಬ್ಬರು ಶಿರಾಗೇಟ್ ಗೆ ಡ್ರಾಪ್ ಕೇಳಿದ್ದು, ಮಹಿಳೆಯನ್ನು ಹತ್ತಿಸಿಕೊಂಡು ಬೈಕ್ ಚಲಿಸುವಸ್ಟರಲ್ಲಿ ಒಬ್ಬ ವ್ಯಕ್ತಿ ಹಿಂದಿನಿಂದ ಬಂದು ಮಧು ಅವರನ್ನು ಹೆದರಿಸಿ ಅವರ ಬಳಿ ಇದ್ದ 1800 ರೂಪಾಯಿ ಹಾಗೂ ಬೈಕ್ ಕೀ ಕಸಿದು ಡ್ರಾಪ್ ಕೇಳಿದ ಮಹಿಳೆ ಮತ್ತು ಆ ವ್ಯಕ್ತಿ ಇಬ್ಬರು ಅದೇ ಬೈಕಿನಲ್ಲಿ ಪರಾರಿಯಾಗಿದ್ದಾರೆ.…

ಮುಂದೆ ಓದಿ..
ಸುದ್ದಿ 

ಮಹಿಳೆಯ ಚಿನ್ನದ ಸರ ಕಸಿದು ಕಳ್ಳ ಪರಾರಿ…

Taluknewsmedia.com

Taluknewsmedia.comತುಮಕೂರು: ಶಬಾನಾ ತಬಸುಮ ಎಂಬ ಮಹಿಳೆ ತನ್ನ ಸ್ಕೂಟಿಯನ್ನು ನಿಲ್ಲಿಸುಸುತ್ತಿರುವಾಗಮೋಟಾರ್ ಬೈಕ್ ನಲ್ಲಿ ಬಂದ ವ್ಯಕ್ತಿ ಅವರು ಭುಜಕ್ಕೆ ಹಾಕಿಕೊಂಡಿದ್ದ ವ್ಯಾನಿಟಿ ಬ್ಯಾಗನ್ನು ಎಗರಿಸಿರುವ ಘಟನೆ ತುಮಕೂರು ನಗರದ ಎಚ್ಎಂಎಸ್ ಕಾಂಪ್ಲೆಕ್ಸ್ ಬಳಿ ನಡೆದಿದೆ. ಶಬಾನಾ ತಬಸುಮ ಎಂಬ ಮಹಿಳೆ ರಾತ್ರಿ 8.30 ರ ಸಮಯದಲ್ಲಿ ಎಚ್ಎಂಎಸ್ ಕಾಂಪ್ಲೆಕ್ಸ್ ನಲ್ಲಿರುವ ಹಾಸಿಗೆ ಅಂಗಡಿಗೆ ಹೋಗಲು ಬಂದಿದ್ದು ಅಂಗಡಿಯ ಮುಂಭಾಗ ಬೈಕನ್ನು ನಿಲ್ಲಿಸುವ ಸಂದರ್ಭದಲ್ಲಿ ಎದುರುಗಡೆಯಿಂದ ಬಂದ ದುಷ್ಕರ್ಮಿ ಅವರು ಬುಜಕ್ಕೆ ಹಾಕಿಕೊಂಡಿದ್ದ ವ್ಯಾನಿಟಿಬ್ಯಾಗನ್ನು ಕಸಿದು ಪರಾರಿಯಾಗಿದ್ದಾನೆ.ವ್ಯಾನಿಟಿ ಬ್ಯಾಗಿನಲ್ಲಿ 34 ಸಾವಿರ ಬೆಲೆಬಾಳುವ ಒಪ್ಪೋ ಮೊಬೈಲ್, 2 ಎಟಿಎಂ ಕಾರ್ಡ್ ಗಳು ಹಾಗೆಯೇ ಎರಡು ಸಾವಿರ ನಗದು ಇತ್ತೆಂದು ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ಪೊಲೀಸರು ಕಳ್ಳನಿಗಾಗಿ ಬಲೆ ಬೀಸಿದ್ದಾರೆ. ವರದಿ: ವರುಣ್ ಜಿ.ಜೆ, ತುಮಕೂರು ನಗರ

ಮುಂದೆ ಓದಿ..
ವಿಶೇಷ 

ಸುದ್ದಿಯ ಮೂಲಗಳು,……

Taluknewsmedia.com

Taluknewsmedia.comಸುದ್ದಿಯ ಮೂಲಗಳು,…… ಜನರನ್ನು ರಂಜಿಸಲು ಆ ಮೂಲಗಳ ಮೂಲಕವೇ ವಂಚಿಸುತ್ತಿರುವ ಮಾಧ್ಯಮಗಳು,ಜನರ ಚಿಂತನಾ ಶೈಲಿಯ ಮೇಲೆ ದುಷ್ಪರಿಣಾಮ ಬೀರುತ್ತಿರುವ ಕೆಟ್ಟ ಸುದ್ದಿಗಳ ಪ್ರಾಮುಖ್ಯತೆ……. ನಿನ್ನೆ ನಡೆದ ಒಂದು ಘಟನೆಯನ್ನು ಇದಕ್ಕೆ ಉದಾಹರಣೆ ನೀಡುತ್ತಿದ್ದೇನೆ. ಎಂದಿನಂತೆ ನಿನ್ನೆ ಬೆಳಗಿನ ದಿನ ಪತ್ರಿಕೆಯನ್ನು ಸುಮಾರು 6/30 ರಲ್ಲಿ ಓದಿದೆ. ಕೊಲೆ ಆರೋಪದಲ್ಲಿ ಸಿಬಿಐ ಬಂಧನದ ಭೀತಿ ಎದುರಿಸುತ್ತಿರುವ ಮಾಜಿ ಸಚಿವ ಕಾಂಗ್ರೆಸ್ ನ ವಿನಯ್ ಕುಲಕರ್ಣಿ, ಮೈಸೂರು ಭಾಗದ ಒಬ್ಬ ಪ್ರಭಾವಿ ವ್ಯಕ್ತಿಯ ಮೂಲಕ ದೆಹಲಿಯಲ್ಲಿ ಬೀಡು ಬಿಟ್ಟು ಬಿಜೆಪಿ ಸೇರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಬೆಳಗಿನ 9 ಗಂಟೆಯ ಸಮಯದಲ್ಲಿ ಒಂದು ಖಾಸಗಿ ಟಿವಿ ವಾಹಿನಿ ಇಡೀ ರಾಜ್ಯವೇ ಆಶ್ಚರ್ಯ ಪಡುವ ಬಹುದೊಡ್ಡ ಬ್ರೇಕಿಂಗ್ ಸುದ್ದಿ ನಮ್ಮ ಚಾನಲ್ ನೀಡುತ್ತಿದೆ. ಯಾರೂ ಊಹಿಸದ ಬೆಳವಣಿಗೆ ಎಂದು ಸ್ವಲ್ಪ ಸಮಯ ಸಂಗೀತದ ‌ಬಿಲ್ಡಪ್ ಕೊಟ್ಟು ಕೊನೆಗೆ ಪತ್ರಿಕೆಯಲ್ಲಿ…

ಮುಂದೆ ಓದಿ..