ಸುದ್ದಿ 

ಎನ್. ಸಿ.ಸಿ ಶಿಬಿರಕ್ಕೆ ಆಗಮಿಸಿ ದೀಪಾವಳಿ ಹಬ್ಬವನ್ನು ಆಚರಿಸಿದ ತುಮಕೂರು ನಗರ ಶಾಸಕ ಜಿ.ಬಿ ಜ್ಯೋತಿ ಗಣೇಶ್.

Taluknewsmedia.com

Taluknewsmedia.comತುಮಕೂರು: ಶಿವಕುಮಾರ ಸ್ವಾಮೀಜಿ ವೃತ್ತದ ಬಳಿಯಿರುವ ಎನ್.ಸಿ.ಸಿ ಶಿಬಿರಕ್ಕೆ, ತುಮಕೂರು ನಗರದ ಶಾಸಕರಾದ ಜಿ.ಬಿ ಜ್ಯೋತಿ ಗಣೇಶ್ ರವರು ಆಗಮಿಸಿ ಸೇನೆಯ ಸೈನಿಕರೊಂದಿಗೆ ದೀಪಾವಳಿ ಹಬ್ಬವನ್ನು ಸಡಗರದಿಂದ ಆಚರಿಸಿದರು. ವರದಿ: ವರುಣ್ ಜಿ.ಜೆ ತುಮಕೂರು ನಗರ

ಮುಂದೆ ಓದಿ..
ರಾಜಕೀಯ ಸುದ್ದಿ 

ಬಿಜೆಪಿ ಕಾರ್ಯಕರ್ತರಿಂದ ವಿಧಾನಪರಿಷತ್ತಿಗೆ ಆಯ್ಕೆಯಾದ ಎಂ.ಚಿದಾನಂದ ರವರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಲಾಯಿತು.

Taluknewsmedia.com

Taluknewsmedia.comತುಮಕೂರು : ನೂತನವಾಗಿ ಆಗ್ನೇಯ ವಿಧಾನ ಪರಿಷತ್ತಿಗೆ ಆಯ್ಕೆಯಾದ ಎಂ.ಚಿದಾನಂದ ಹಾಗೂ ತುಮಕೂರು ನಗರದ ಜನಪ್ರಿಯ ಶಾಸಕರಾದ ಜಿ.ಬಿ ಜ್ಯೋತಿ ಗಣೇಶ್ ರವರನ್ನು ಹನುಮಂತಪುರದ ಬಿಜೆಪಿ ಕಾರ್ಯಕರ್ತರಾದ ರಕ್ಷಿತ್ ಅವರ ಮನೆಯಲ್ಲಿ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ವರದಿ : ವರುಣ್ ಜಿ.ಜೆ ತುಮಕೂರು ನಗರ

ಮುಂದೆ ಓದಿ..
ಸುದ್ದಿ 

ಬೆಂಕಿಗಾಹುತಿಯಾದ ಸೆಂಚುರಿ ಹೋಂಡಾ ಶೋರೂಮ್….

Taluknewsmedia.com

Taluknewsmedia.comತುಮಕೂರು: ಸೆಂಚುರಿ ಹೋಂಡಾ ಶೋರೂಮ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿರುವ ಘಟನೆ ತುಮಕೂರಿನ ಬಿ ಹೆಚ್ ರಸ್ತೆಯಲ್ಲಿನ ಕೃಷಿ ಇಲಾಖೆ ಕಚೇರಿ ಮುಂಭಾಗ ಸಂಭವಿಸಿದೆ. ಸೆಂಚುರಿ ಹೋಂಡಾ ಶೋರೂಮ್ ನಲ್ಲಿ ರಾತ್ರಿ ಸುಮಾರು 12.30ರ ಸಮಯದಲ್ಲಿ ಶೋರೂಮ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದ್ದು, ನಂತರ 1.30ರ ಸುಮಾರಿಗೆ ಅಗ್ನಿಶಾಮಕ ಸಿಬ್ಬಂದಿಯ 4 ವಾಹನಗಳು ಸ್ಥಳಕ್ಕೆ ದೌಡಾಯಿಸಿ ಸತತ ನಾಲ್ಕು ಗಂಟೆಗಳ ಕಾಲ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಶೋರೂಮ್ ನಲ್ಲಿದ್ದ ಅಂದಾಜು 65 ಬೈಕ್ ಗಳು ಬೆಂಕಿಗಾಹುತಿಯಾಗಿದ್ದು,ಇನ್ನು ಅನೇಕ ವಸ್ತುಗಳು ಬೆಂಕಿಗಾಹುತಿಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.! ವರದಿ: ವರುಣ್ ಜಿ.ಜೆ ತುಮಕೂರು ನಗರ

ಮುಂದೆ ಓದಿ..