ಸುದ್ದಿ 

ಬಿಜೆಪಿಗೆ ಬೆಂಬಲಿಸಿದ ಮತದಾರ ಬಾಂಧವರಿಗೆ ಧನ್ಯವಾದಗಳು : ರಾಮಸಿಂಗ ಕನ್ನೊಳ್ಳಿ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. . ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಭಾಜಪ ಯುವ ಮುಖಂಡ ರಾಮಸಿಂಗ ಕನ್ನೊಳ್ಳಿ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಧಾನಿ ಶ್ರೀ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಶ್ರೀ ಬಿ.ಎಸ್.ಯಡಿಯೂರಪ್ಪನವರ ಜನಪರ ಆಡಳಿತಕ್ಕೆ ಹಾಗೂ ಜನಪರ ಕಾರ್ಯಗಳಿಗೆ ಗ್ರಾಮೀಣ ಭಾಗದ ಜನರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಬಿಜೆಪಿಗೆ ಅಭೂತಪೂರ್ವವಾಗಿ ಬೆಂಬಲಿಸಿದ ಮತದಾರ ಬಾಂಧವರಿಗೆ ಧನ್ಯವಾದಗಳನ್ನು ತಿಳಿಸಿದರು. ವರದಿ : ಮಹಾಂತೇಶ ಹೂಗಾರಇಂಡಿ ತಾಲೂಕ್ ನ್ಯೂಸ್9483070707

Read More
ಸುದ್ದಿ 

ಕುರುಬರ ಎಸ್ಟಿ ಹೋರಾಟ ಮಹಿಳಾ ಘಟಕದ ಸಹ ಕಾರ್ಯದರ್ಶಿಯಾಗಿ ಸರಿತಾ ಜವರಪ್ಪ ನೇಮಕ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಕೆ.ಆರ್ ನಗರ : ಕುರುಬರಿಗೆ ಎಸ್ಟಿ ಮೀಸಲಾತಿ ಬೇಕು ಎಂದು ರಾಜ್ಯಾದ್ಯಂತ ಹೋರಾಟ ಹೆಚ್ಚಾಗುತ್ತಿರುವ ಹಿನ್ನೆಯಲ್ಲೆಯಲ್ಲಿ ಕುರುಬ ಎಸ್ಟಿ ಮೀಸಲಾತಿ ಮಹಿಳಾ ಘಟಕದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಎಸ್ಟಿ ಹೋರಾಟ ಸಮಿತಿ ಘಕಟಕ ರಾಜ್ಯಾಧ್ಯಕ್ಷರಾದ ಶ್ರೀಮತಿ ಜೀವೇಶ್ವರಿಯವರು ಕೆ.ಆರ್ ನಗರದ ಶ್ರೀಮತಿ ಸರಿತಾ ಜವರಪ್ಪ ಅವರನ್ನು ಮಹಿಳಾ ಘಟಕದ ಸಹ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

Read More
ಸುದ್ದಿ 

ಗ್ರಾಮ ಪಂಚಾಯಿತಿ ಚುನಾವಣೆ ಯಲ್ಲಿ ಅವಿರೋಧವಾಗಿ ಆಯ್ಕೆಯಾದ ನಾಗಮ್ಮ ಮತ್ತು ಕೋಟೆ ಕಿಟ್ಟಿ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಹೊಸೂರು : ಹಳೆಯೂರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ದಿಡ್ಡಹಳ್ಳಿ ಮತಕ್ಷೇತದಿಂದ  ಸಾಮಾನ್ಯ ಅಭ್ಯರ್ಥಿಯಾಗಿ ( ಕೋಟೆ ಕಿಟ್ಟಿ ) ಕೃಷ್ಣ ಅವರು ಹಾಗೂ ಮಹಿಳಾ ಅ ಅಭ್ಯರ್ಥಿಯಾಗಿ ಶ್ರೀಮತಿ ನಾಗಮ್ಮ ಕೃಷ್ಣೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ತಮ್ಮನ್ನು ಆಯ್ಕೆಮಾಡಿದ ದಿಡ್ಡಹಳ್ಳಿ ಗ್ರಾಮಸ್ಥರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

Read More
ಸುದ್ದಿ 

ಗ್ರಾಮ ಪಂಚಾಯಿತಿ ಚುನಾವಣೆ ಯಲ್ಲಿ ಅವಿರೋಧವಾಗಿ ಆಯ್ಕೆಯಾದ ನಾಗಮ್ಮ ಮತ್ತು ಕೋಟೆ ಕಿಟ್ಟಿ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಹೊಸೂರು : ಹಳೆಯೂರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ದಿಡ್ಡಹಳ್ಳಿ ಮತಕ್ಷೇತದಿಂದ  ಸಾಮಾನ್ಯ ಅಭ್ಯರ್ಥಿಯಾಗಿ ( ಕೋಟೆ ಕಿಟ್ಟಿ ) ಕೃಷ್ಣ ಅವರು ಹಾಗೂ ಮಹಿಳಾ ಅ ಅಭ್ಯರ್ಥಿಯಾಗಿ ಶ್ರೀಮತಿ ನಾಗಮ್ಮ ಕೃಷ್ಣೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ತಮ್ಮನ್ನು ಆಯ್ಕೆಮಾಡಿದ ದಿಡ್ಡಹಳ್ಳಿ ಗ್ರಾಮಸ್ಥರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

Read More
ಸುದ್ದಿ 

ಮೈಸೂರು , ಮಂಡ್ಯ, ಚಾಮರಾಜನಗರ ಭಾಗದಲ್ಲಿ ತುಂತುರು ಮಳೆ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಮೈಸೂರು: ಜಿಲ್ಲೆ ಸೇರಿದಂತೆ ಮಂಡ್ಯ, ಚಾಮರಾಜನಗರ ಸೇರಿದಂತೆ ವಿವಿಧೆಡೆ ತುಂತುರು ಮಳೆಯಾಗಿದೆ. ಬೆಳ್ಳಂಬೆಳಗ್ಗೆ ಎದ್ದೇಳುತ್ತಿದ್ದಂತೆಯೇ ಜನರಿಗೆ ಮಳೆಯ ದರ್ಶನವಾಗಿದ್ದು, ಇಂದು ರಾತ್ರಿ ತೆರೆದ ಪ್ರದೇಶಗಳಲ್ಲಿ ಹೊಸ ವರ್ಷದ ಸಂಭ್ರಮಾಚಾರಣೆಗೆ ಅಡ್ಡಿಯಾಗಲಿದೆಯೇ ಕಾದು ನೋಡಬೇಕು. ಹವಾಮಾನ ಇಲಾಖೆಯು ಹೊಸ ವರ್ಷದ ಹಿಂದಿನ ದಿನ ಅಥವಾ ನಂತರದ ಎರಡು ಮೂರು ದಿನಗಳಲ್ಲಿ ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಿತ್ತು. ಚಾಮರಾಜನಗರ: ನಗರದಲ್ಲಿ ಗುರುವಾರ ಮುಂಜಾನೆ ಅರ್ಧಗಂಟೆಗೆ ಹೆಚ್ಚು ಕಾಲ ತುಂತುರು ಮಳೆ ಸುರಿಯಿತು. ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ತುಂತುರು ಮಳೆಯ ನಡುವೆ ವಿದ್ಯಾರ್ಥಿಗಳು ಕಾಲೇಜುಗಳಿಗೆ ತೆರಳಿದರೆ, ನೌಕರರು ಹಾಗೂ ಕಾರ್ಮಿಕರು ಕೆಲಸಕ್ಕೆ ತೆರಳಿದರು.

Read More

ಸರ್ವಾಧ್ಯಕ್ಷರಾಗಿ ಪರಮಪೂಜನೀಯ ವಚನಶ್ರೀ ಮಾತಾಜಿಯವರು ಆಯ್ಕೆ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. . ಇಂಡಿ : ಜನವರಿ 9 ರಂದು ಅಥರ್ಗಾ ಗ್ರಾಮದಲ್ಲಿ ನಡೆಯಲಿರುವ ಅಖಿಲ ಭಾರತದ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಇಂಡಿ ಇವರ ಸಹಯೋಗದಲ್ಲಿ ಇಂಡಿ ತಾಲೂಕು ಮಟ್ಟದ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಥರ್ಗಾ ಗ್ರಾಮದ ಪರಮಪೂಜನೀಯ ವಚನಶ್ರೀ ಮಾತಾಜಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಸರ್ವಾಧ್ಯಕ್ಷರಾಗಿ ಆಯ್ಕೆಯಾದ ವಚನಶ್ರೀ ಮಾತಾಜಿಯವರನ್ನು ಪರಿಷತ್ತು ಹಾಗೂ ಕದಳಿ ವೇದಿಕೆ ವತಿಯಿಂದ ಶಾಲು ಹೊದಿಸಿ, ಫಲ ಪುಷ್ಪ ತಾಂಬೂಲ ನೀಡಿ, ಗೌರವಪೂರ್ವಕವಾಗಿ ಸನ್ಮಾನಿಸಿ, ಆಮಂತ್ರಣ ನೀಡಲಾಯಿತು.ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷೆ ಗಂಗಾಬಾಯಿ ಗಲಗಲಿ, ಕೋಶಾಧ್ಯಕ್ಷೆ ಜಯಶ್ರೀ ಬಿರಾದಾರ, ಶಸಾಪ ಅಧ್ಯಕ್ಷ ಎಮ್.ಪಿ.ಭೈರಜಿ, ಕಜಾಪ ಅಧ್ಯಕ್ಷ ಆರ್.ವಿ.ಪಾಟೀಲ, ಯೋಗ ಗುರು ಬಿ.ಎಸ್.ಪಾಟೀಲ, ಗುಜರಿ ಹಾಗೂ ಎಸ್.ಕೆ .ಗೊಟ್ಯಾಳ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವರದಿ : ಮಹಾಂತೇಶ ಹೂಗಾರಇಂಡಿ ತಾಲೂಕ್…

Read More

ಕುವೆಂಪು ಶತಮಾನದ ಶ್ರೇಷ್ಠ ಕವಿ : ಪ್ರಾಂಶುಪಾಲ ಎಸ್.ಬಿ.ಜಾಧವ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಇಂಡಿ : ಇಂಡಿ ಪಟ್ಟಣದ ಎಸ್.ಎಸ್.ವಿ.ವಿ.ಸಂಘದ ಶ್ರೀ ಜಿ.ಆರ್.ಗಾಂಧಿ ಕಲಾ, ಶ್ರೀ ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಶ್ರೀ ಎಮ್.ಎಫ್. ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಸಹಯೋಗದೊಂದಿಗೆ 30/12/2020 ರಂದು ರಾಷ್ಟ್ರಕವಿ ಕುವೆಂಪುರವರ 116ನೇ ಜನ್ಮದಿನದನಿಮಿತ್ತ ‘ವಿಶ್ವ ಮಾನವ ದಿನಾಚರಣೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀಶೈಲರವರು ಮಾತನಾಡುತ್ತ ಕುವೆಂಪು ಕನ್ನಡ ಭಾಷೆಯ ದೈತ್ಯ ಕವಿ . ಆದ್ದರಿಂದ ಕರ್ನಾಟಕ ಸರ್ಕಾರ 2015ರಿಂದ ನಾಡಿನಾದ್ಯಂತ ‘ವಿಶ್ವ ಮಾನವ ದಿನಾಚರಣೆ’ ಆಚರಣೆ ಮಾಡುವುರ ಮೂಲಕ ಅವರಿಗೆ ಕನ್ನಡಿಗರು ಗೌರವವನ್ನು ಸಲ್ಲಿಸುತ್ತಿದ್ದಾರೆ. ಅವರು ಸಾಹಿತಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಹೀಗೆ ಮುಂತಾದ ಕ್ಷೇತ್ರಗಳಲ್ಲಿ ಆಧುನಿಕ ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮದೇ ಆದ ಮಹತ್ವದ ಕೈಂಕರ್ಯವನ್ನು ಮಾಡಿದ ಧೀಮಂತ ಕವಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ…

Read More
ಸುದ್ದಿ 

ಹೊಸ ವರ್ಷಾಚರಣೆಗೆ ಸಂಬಂಧಪಟ್ಟಂತೆ ಕೋವಿಡ್-19ರ ಮುಂಜಾಗ್ರತ ಕ್ರಮಗಳ ಕುರಿತು ಮಾತನಾಡಿದ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ.

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. . ತುಮಕೂರು:ಹೊಸ ವರ್ಷ ಆಚರಣೆಯ ಸಂಬಂಧ ಕೋವಿಡ್-19ರ ಮುಂಜಾಗ್ರತಾ ಕ್ರಮಗಳ ಬಗ್ಗೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ ತಿಳಿಸಿದ್ದಾರೆ. 31/ 12/ 2020 ಬೆಳಿಗ್ಗೆ 08.00ರಿಂದ02/01/2020ರ 8:00 ಗಂಟೆಯವರೆಗೆ ಬಸದಿ ಬೆಟ್ಟ, ನಾಮದ ಚಿಲುಮೆ ಮತ್ತು ದೇವರಾಯನದುರ್ಗ ಪ್ರದೇಶಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ವರದಿ: ವರುಣ್ ಜಿ.ಜೆ.

Read More
ರಾಜಕೀಯ 

ಶಾಂತಿಯುತ, ಬಿರುಸಿನ ಮತದಾನ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಆನೇಕಲ್: ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಎಲ್ಲೆಡೆ ಬಿರುಸಿ ನಿಂದ ನಡೆಯಿತು. ಸಣ್ಣಪುಟ್ಟ ಘಟನೆ ಹೊರತುಪಡಿಸಿ ತಾಲ್ಲೂಕಿನಾದ್ಯಂತ ಶಾಂತಿಯುತ ಮತದಾನ ನಡೆಯಿತು.ಭಾನುವಾರ ಬೆಳಿಗ್ಗೆ 7ಕ್ಕೆ ಪ್ರಾರಂಭವಾದ ಮತದಾನ 10ರ ವರೆಗೂ ಬಿರುಸಿನಿಂದ ನಡೆಯಿತು. ಮಧ್ಯಾಹ್ನ ಉದ್ದನೆ ಸಾಲು ಮತದಾನ ಕೇಂದ್ರದ ಬಳಿ ಕಂಡು ಬಂದಿತು.ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತಿಮ್ಮಸಂದ್ರ ಮತಗಟ್ಟೆಗೆ ಸೇರಬೇಕಾಗಿದ್ದ ಮತ ದಾರರ ಪಟ್ಟಿಯು ಬೇರೆ ಮತಗಟ್ಟೆಗೆ ಸೇರಿದೆ ಎಂದು ಆರೋಪಿಸಿ ಗ್ರಾಮಸ್ಥರು ಕೆಲ ಕಾಲ ಮತದಾನಕ್ಕೆ ತಡೆಯೊ ಡ್ಡಿದರು. ತಹಶೀಲ್ದಾರ್‌ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರೊಂದಿಗೆ ಚರ್ಚಿಸಿ ಚಿಕ್ಕತಿಮ್ಮಸಂದ್ರ ಮತಗಟ್ಟೆಗೆ ಸೇರ ಬೇಕಾದ ಮತದಾರರ ಪಟ್ಟಿ ಸೇರ್ಪಡೆಗೊಳಿಸಿದ್ದರಿಂದ ಮತದಾನ ಸುಗಮವಾಗಿ ನಡೆಯಿತು.ಯಮರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಗಳಚೌಡದೇನಹಳ್ಳಿಯಲ್ಲಿ ಮತಗಟ್ಟೆ 260ರಲ್ಲಿ ದಾಖಲಾಗ ಬೇಕಾದ 180 ಮಂದಿ ಮತದಾರರ ಯಾದಿಯು 259ರಲ್ಲಿ ಸೇರ್ಪಡೆಯಾಗಿತ್ತು. ಅಭ್ಯರ್ಥಿಗಳು 260ರಲ್ಲಿ ಮತ ಪ್ರಚಾರ…

Read More

ಅರಣ್ಯ ಇಲಾಖೆಯ ಸ್ವಂತ ಕಛೇರಿಯ ಕನಸು ನನಸು

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಇಂಡಿ. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಸಾಮಾಜಿಕ ವಲಯ ಅರಣ್ಯ ಅಧಿಕಾರಿಗಳ ಕಛೇರಿ ನಿರ್ಮಾಣಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ್ ಭೂಮಿ ಪೂಜೆ ನೆರೆವೆರಿಸಿ ಮಾತನಾಡಿದರು. ಭವಿಷ್ಯದ ಜಿಲ್ಲಾ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಇಂಡಿಯಲ್ಲಿ ಅರಣ್ಯ ಇಲಾಖೆಗೆ ಸ್ವಂತ ಕಛೇರಿ ಇಲ್ಲ, ಸಾಮಾಜಿಕ ವಲಯ ಅರಣ್ಯ ಅಧಿಕಾರಿಗಳ ಕಛೇರಿ ನಿರ್ಮಾಣಕ್ಕೆ ಅಂದಾಜು 35 ಲಕ್ಷ ರೂಪಾಯಿಗಳು ಬಿಡುಗಡೆಗೊಂಡಿದ್ದು, ಅರಣ್ಯ ಇಲಾಖೆಯ ನೂತನ ಕಟ್ಟಡಕ್ಕೆ ಶುಭಾರಂಭ ಮಾಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವರದಿ : ಮಹಾಂತೇಶ ಹೂಗಾರಇಂಡಿ ತಾಲೂಕ್ ನ್ಯೂಸ್9483070707

Read More