ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದ ತಿಗಳ ಜನಾಂಗದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಅಭಿನಂದನಾ ಸಮಾರಂಭ ಅದ್ದೂರಿಯಾಗಿ ನೆರವೇರಿತು….
Taluknewsmedia.comತುಮಕೂರು: ನಗರದ ಹನುಮಂತಪುರದ ಶ್ರೀ ಪೇಟೆ ಕೊಲ್ಲಾಪುರದಮ್ಮ ಸಮುದಾಯ ಭವನದಲ್ಲಿ ಕರ್ನಾಟಕ ಅಗ್ನಿಬನ್ನಿರಾಯ ತಿಗಳ ಮಹಾಸಭಾ ವತಿಯಿಂದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜೇಯತರಾದ ತಿಗಳ ಜನಾಂಗದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಅಭಿನಂದನಾ ಸಮಾರಂಭ ನೆರವೇರಿತು.ಇದೇ ಕಾರ್ಯಕ್ರಮದಲ್ಲಿ “ಕರ್ನಾಟಕ ರಾಜ್ಯ ಅಗ್ನಿ ಬನ್ನಿರಾಯ ಕ್ಷತ್ರಿಯ ತಿಗಳ ಯೂತ್ ಫೋರ್ಸ್” ಸಂಘಟನೆಯ ಉದ್ಘಾಟನೆ ಮತ್ತು ಪದಾಧಿಕಾರಿಗಳ ನೇಮಕ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಅಗ್ನಿಬನ್ನಿರಾಯ ತಿಗಳ ಮಹಾಸಭಾ ಅಧ್ಯಕ್ಷರಾದ ಎಮ್.ಆಂಜನೇಯ, ಕುಂಬಯ್ಯ, ತುಮಕೂರು ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ್,ಕ್ಯಾತ್ಸಂದ್ರ ಯಜಮಾನರು, ಕೋಟೆ ಯಜಮಾನರು, ಪೇಟೆ ಯಜಮಾನರು, ಕುಣಿಗಲ್ ಕಟ್ಟೆ ಯಜಮಾನರು, ಮಾಜಿ ಮೇಯರ್ ಶ್ರೀಮತಿ ಲಲಿತ ರವೀಶ್ (ಜಾಂಗೀರ್) ಪ್ರೆಸ್ ರಾಜಣ್ಣ ಟಿ ಎನ್ ಶಿವಣ್ಣ, ರವೀಶ್ (ಜಾಂಗೀರ್), ಟಿ.ಹೆಚ್.ಜಯರಾಮ್, ಆಣೆಕಾರರು, ಹಾಗೂ ತಿಗಳ ಜನಾಂಗದ ಬಾಂಧವರು ಉಪಸ್ಥಿತರಿದ್ದರು.
ಮುಂದೆ ಓದಿ..