ಸುದ್ದಿ 

ಅದ್ದೂರಿಯಾಗಿ ಜರುಗಿದ ಶ್ರೀ ಅಗ್ನಿ ಬನ್ನಿರಾಯ ಸ್ವಾಮಿ ಜಯಂತೋತ್ಸವ.

Taluknewsmedia.com

Taluknewsmedia.comತುಮಕೂರು: ನಗರದ ಹನುಮಂತಪುರ ದಲ್ಲಿರುವ ಶ್ರೀ ಕೊಲ್ಲಾಪುರದಮ್ಮ ದೇವಿ ಸಭಾಂಗಣದಲ್ಲಿ ಭಾನುವಾರದಂದು ಹಮ್ಮಿಕೊಂಡಿದ್ದ ಶ್ರೀ ಅಗ್ನಿ ಬನ್ನಿರಾಯ ಸ್ವಾಮಿ ಜಯಂತೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಜಯಂತೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸದ ಜಿ ಎಸ್ ಬಸವರಾಜು ತಿಗಳ ಸಮುದಾಯವು ತಾವು ಕಷ್ಟಪಟ್ಟು ಬೆಳೆಬೆಳೆದ ಮಾರುಕಟ್ಟೆಯಲ್ಲಿ ತಮ್ಮ ಬೆಳೆಯನ್ನು ಮಾರಾಟ ಮಾಡಿ ಮುಂದೆ ಬರುತ್ತಿದೆ. ಹಾಗೆಯೇ ತಿಗಳ ಸಮುದಾಯವು ರಾಜಕೀಯವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಸ್ಥಾನಮಾನ ಪಡೆಯಬೇಕಾದರೆ ಶಿಕ್ಷಣದಿಂದ ಮಾತ್ರ ಅದು ಸಾಧ್ಯವಾಗುತ್ತದೆ ಎಂದರು.ಈಗಾಗಲೇ ತುಮಕೂರು ನಗರದ ಸುತ್ತಮುತ್ತಲಿನ ಕೆರೆಗಳನ್ನು ಸ್ವಚ್ಛಗೊಳಿಸಿ ನೀರು ತುಂಬಿಸುವ ಯೋಜನೆ ರೂಪಿಸಲಾಗಿದೆ ಈ ಮೂಲಕವಾಗಿ ಅಂತರ್ಜಲ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಇರುವ ಎಲ್ಲಾ ಕೆರೆಗಳನ್ನು ತುಂಬಿಸಿದರೆ ನಗರಕ್ಕೆ ಮುಂದಿನ ದಿನಗಳಲ್ಲಿ 24/7 ನೀರು ಒದಗಿಸುವುದು ಎಂದು ತಿಳಿಸಿದರು. ಜಯಂತೋತ್ಸವದಲ್ಲಿ ತುಮಕೂರು ನಗರ ಶಾಸಕ ಜಿಬಿ ಜ್ಯೋತಿ ಗಣೇಶ್ ಮಾತನಾಡಿ ತುಮಕೂರಿನ ಗಾರ್ಡನ್ ರಸ್ತೆಗೆ ಶ್ರೀ ಅಗ್ನಿ…

ಮುಂದೆ ಓದಿ..
ಸುದ್ದಿ 

ನಿಡುವಳಲು ಕೋಡಿಪಾಳ್ಯ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಶ್ರೀ ಅಗ್ನಿ ಬನ್ನಿ ರಾಯ ಸ್ವಾಮಿ ಜಯಂತೋತ್ಸವ.

Taluknewsmedia.com

Taluknewsmedia.comತುಮಕೂರು: ತಾಲೂಕಿನ ಹೆಬ್ಬೂರು ಹೋಬಳಿ ನಿಡುವಳಲು ಕೋಡಿಪಾಳ್ಯ ಗ್ರಾಮದಲ್ಲಿ ಅಗ್ನಿವಂಶ ಕ್ಷತ್ರಿಯರ ಮೂಲಪುರುಷ ಶ್ರೀ ಅಗ್ನಿ ಬನ್ನಿರಾಯ ಸ್ವಾಮಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮದ ಯಜಮಾನರಾದ ಶ್ರೀ ಭೀಮಯ್ಯ ನವರ ನೇತೃತ್ವದಲ್ಲಿ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು. ವರದಿ: ತುಮಕೂರು ತಾಲೂಕು ನ್ಯೂಸ್ ವರದಿಗಾರರು

ಮುಂದೆ ಓದಿ..
ಸುದ್ದಿ 

ಮಾರ್ಚ್ 28 ಕ್ಕೆ ರಾಜ್ಯಾದ್ಯಂತ ಶ್ರೀ ಅಗ್ನಿಬನ್ನಿರಾಯ ಸ್ವಾಮಿ ಜಯಂತಿ.

Taluknewsmedia.com

Taluknewsmedia.comತುಮಕೂರು: ಅಗ್ನಿವಂಶ ಕ್ಷತ್ರಿಯ ತಿಗಳ ಸಮುದಾಯವು ಮಾರ್ಚ್ 28 ರಂದು ರಾಜ್ಯಾದ್ಯಂತ ಶ್ರೀ ಅಗ್ನಿಬನ್ನಿರಾಯ ಸ್ವಾಮಿ ಜಯಂತಿಯನ್ನು ಆಚರಿಸಲು ನಿರ್ಧರಿಸಿದೆ. ತಿಗಳ ಸಮುದಾಯವು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಸರ್ಕಾರದಿಂದ ಸೌಲಭ್ಯಗಳನ್ನು ಪಡೆಯಲು ಮತ್ತು ತಮ್ಮ ಹಕ್ಕುಗಳನ್ನು ಸಾಧಿಸುವ ಸಲುವಾಗಿ ಹಲವಾರು ವರ್ಷಗಳಿಂದ ಅಹವಾಲುಗಳನ್ನು ನೀಡುತ್ತಾ ಬರುತ್ತಿದ್ದು,ಅಗ್ನಿವಂಶ ಕ್ಷತ್ರಿಯ ತಿಗಳರನ್ನು ಗುರುತಿಸಿ ಅವರಿಗೆ ಸೂಕ್ತ ಸ್ಥಾನಮಾನಗಳನ್ನು ರಾಜಕೀಯ ಪಕ್ಷಗಳು, ಸರ್ಕಾರಗಳು ನೀಡಬೇಕು ಎಂಬ ಉದ್ದೇಶದಿಂದ, ಸಮುದಾಯವನ್ನು ಒಟ್ಟುಗೂಡಿಸುವ ಸಲುವಾಗಿ ಅಗ್ನಿವಂಶ ಕ್ಷತ್ರಿಯ ತಿಗಳ ಸಮುದಾಯದ ಮೂಲ ಪುರುಷರಾದ ಅಗ್ನಿ ಬನ್ನಿರಾಯ ಜಯಂತೋತ್ಸವವನ್ನು ಸಮುದಾಯದ ಹಿರಿಯ ಮುಖಂಡರು, ಯಜಮಾನರುಗಳು, ಆಣೆಕಾರರು, ಮುದ್ರೆಯವರು ಮತ್ತು ಯುವಕರು ಮಾರ್ಚ್ 28 ರಂದು ದಿನಾಂಕ ನಿಗದಿ ಮಾಡಿ ಇಡೀ ರಾಜ್ಯಾಧ್ಯಂತ ಸಮುದಾಯದ ಜನರಿರುವ ಹಳ್ಳಿಗಳಲ್ಲಿ ಅಗ್ನಿ ಬನ್ನಿರಾಯ ಸ್ವಾಮಿಯವರ ಪೋಟೊಗಳನ್ನು ನೀಡುವ ಮೂಲಕ ಜಯಂತಿ ಆಚರಣೆ ಮಾಡಲು ಕರೆ ನೀಡಿದ್ದಾರೆ. ಜಯಂತಿಯ ಕುರಿತು ಕರ್ನಾಟಕ…

ಮುಂದೆ ಓದಿ..
ಕ್ರೈಂ ಸುದ್ದಿ 

ಇಬ್ಬರು ಗಾಂಜಾ ಮಾರಾಟಗಾರರ ಬಂಧನ. ಬಂಧಿತರಿಂದ 12 ಕೆಜಿ ಗಾಂಜಾ ವಶ…

Taluknewsmedia.com

Taluknewsmedia.comತುಮಕೂರು: ಜಿಲ್ಲೆಯ ಪೊಲೀಸರಿಂದ ಇಬ್ಬರು ಗಾಂಜಾ ಮಾರಾಟಗಾರರ ಬಂಧನ. ನಗರದ ಯಲ್ಲಾಪುರದ ರಾಮಾಂಜಿ ಎಂಬಾತ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದು ಆತನ ಬಳಿಯಿದ್ದ ಒಂದು ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ನಂತರ ಈತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ದೇವಮ್ಮ ಎಂಬ ಮಹಿಳೆ ಈ ವ್ಯಕ್ತಿಯಿಂದ ಗಾಂಜಾವನ್ನು ಚಿಲ್ಲರೆಯಾಗಿ ಮಾರಾಟ ಮಾಡಿಸುತ್ತಿದ್ದದ್ದು ತಿಳಿದುಬಂದು ಪೊಲೀಸರು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮುದ್ದಿನಪಲ್ಲಿ ಗ್ರಾಮದ ದೇವಮ್ಮನನ್ನು ಬಂಧಿಸಿದ್ದು ಸ್ಥಳದಲ್ಲಿ 11ಕೆಜಿ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿದ್ದಾರೆ. ಈ ದೇವಮ್ಮ ಎಂಬಾಕೆ ಆಂಧ್ರಪ್ರದೇಶದ ವಿಶಾಖಪಟ್ಟಣದ ಬಳಿ ನ್ಯೂನಿ ಎಂಬಲ್ಲಿಂದ ಗಾಂಜಾವನ್ನು ತಂದು ನಂತರ ಚಿನ್ನ ರಾಮಾಂಜಿ ಮೂಲಕವಾಗಿ ಮಾರಾಟ ಮಾಡುತ್ತಿದ್ದಳು ಎಂಬುದಾಗಿ ತನಿಖೆಯಿಂದ ತಿಳಿದುಬಂದಿದೆ.ಈ ಪ್ರಕರಣದಲ್ಲಿ ಬಂಧಿಸಲಾಗಿರುವ ರಾಮಾಂಜಿ ಎಂಬಾತ 2020ರಲ್ಲಿ ಕೊರ ಪೊಲೀಸ್ ಠಾಣೆಯಲ್ಲಿ ಗಾಂಜಾ ಕೇಸ್ ನಲ್ಲಿ ಅರೆಸ್ಟ್ ಮಾಡಲಾಗಿತ್ತು ನಂತರ ಬೇಲ್ ಪಡೆದು ಹೊರ ಬಂದಿದ್ದು ಮತ್ತೆ…

ಮುಂದೆ ಓದಿ..
ಸುದ್ದಿ 

ಬಿಜೆಪಿ ಕೋರ್ ಕಮಿಟಿ ಪುನರ್ ರಚನೆ

Taluknewsmedia.com

Taluknewsmedia.comಬೆಂಗಳೂರು: ರಾಜ್ಯದ ಬಿಜೆಪಿ ಕೋರ್ ಕಮಿಟಿಯನ್ನು ಪುನಾರಚಿಸಲಾಗಿದೆ. ಈ ಕೋರ್ ಕಮಿಟಿ ಸದಸ್ಯರನ್ನಾಗಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ  ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಡಿ.ವಿ.ಸದಾನಂದಗೌಡ, ಉಪ ಮುಖ್ಯಮಂತ್ರಿಗಳಾದ ಡಾ. ಸಿ. ಎನ್. ಅಶ್ವಥ್ ನಾರಾಯಣ್, ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ ಮತ್ತು ಸಚಿವರಾದ ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ, ಶ್ರೀರಾಮುಲು, ಆರ್ ಅಶೋಕ್, ಹಿರಿಯ  ಬಿಜೆಪಿ ಉಪಾಧ್ಯಕ್ಷ ನಿರ್ಮಲ ಕುಮಾರ್ ಸುರಾನ ಹಾಗೂ ಸಂಘಟನಾ ಕಾರ್ಯದರ್ಶಿ ಬಿಪಿ ಅರುಣ್ ಕುಮಾರ್ ಅವರಿಗೆ ಕೋರ್ ಕಮಿಟಿಯಲ್ಲಿ ಅವಕಾಶ ನೀಡಲಾಗಿದೆ. ಈ ಕಮಿಟಿಯಲ್ಲಿ ವಿಶೇಷ ಆಹ್ವಾನಿತರನ್ನಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಬಡ್ತಿ ಪಡೆದಿರುವ ಸಿ.ಟಿ.ರವಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಡಿ.ಕೆ.ಅರುಣಾ ಅವರನ್ನು ನೇಮಕ ಮಾಡಲಾಗಿದೆ.

ಮುಂದೆ ಓದಿ..
ಸುದ್ದಿ 

ಮಣ್ಣು ಅಗೆಯುವ ವೇಳೆ ವಿಗ್ರಹ ಪ್ರತ್ಯಕ್ಷ

Taluknewsmedia.com

Taluknewsmedia.comಹಾಸನ:(ಬೆಲುಹೂರ) ಹಳೇ ಬೇಲೂರು ಅಗ್ರಹಾರದಲ್ಲಿ ಮಣ್ಣನ್ನು ಅಗೆಯುವ ಸಂದರ್ಭದಲ್ಲಿ ಮೂರ್ತಿ ದೊರಕಿದೆ. ಈ ಒಂದು ಮೂರ್ತಿ  ನೋಡಲು ಬಹು ಸುಂದರವಾಗಿದ್ದು  ವಿಗ್ರಹ ಕದಂಬ ರಾಜವಂಶದ ದುದ್ದರಸನ ಪತ್ನಿ ಮೇಚಲಾದೇವಿ ಎನ್ನುವ ಮಹಿಳೆ (ಬೆಲುಹೂರ) ಹಳೇ ಬೇಲೂರ ಅಗ್ರಹಾರದಲ್ಲಿ ವಾಸುದೇವಮೂರ್ತಿಯ ವಿಗ್ರಹ ಪ್ರತಿಷ್ಠಾಪನೆ ಮಾಡಿಸಿದ್ದ ಬಗ್ಗೆ ಶಾಸನವಿದೆ ಎಂದು ತಜ್ಞರು ತಿಳಿಸಿದ್ದಾರೆ.ಈ ವಿಗ್ರಹದ ಕುರಿತಾಗಿ ಇನ್ನೂ ಅನ್ವೇಷಣಾತ್ಮಕ ಸಂಶೋಧನೆ ನಡೆಯುತ್ತಿವೆ.

ಮುಂದೆ ಓದಿ..
ರಾಜಕೀಯ ಸುದ್ದಿ 

ಜನತಾದರ್ಶನ ನಡೆಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್.

Taluknewsmedia.com

Taluknewsmedia.comತುಮಕೂರು: ಗ್ರಾಮಾಂತರ ಶಾಸಕರಾದ ಡಿ.ಸಿ.ಗೌರಿಶಂಕರ್ ಬೆಳ್ಳಾವಿಯಲ್ಲಿ ಇಂದು ನಡೆಸಿದ ಜನತಾ ದರ್ಶನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಜನತಾ ದರ್ಶನ ಕಾರ್ಯಕ್ರಮದಲ್ಲಿ ಜನರ ವೈಯಕ್ತಿಕ ಸಮಸ್ಯೆ ಹಾಗೂ ಅನಾರೋಗ್ಯಕ್ಕೆ ತುತ್ತಾದ ವ್ಯಕ್ತಿಗಳ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಸ್ಪಂದಿಸಿದ ಶಾಸಕರು ಸುಮಾರು 3ಲಕ್ಷ ಧನಸಹಾಯ ಮಾಡಿದ್ದಾರೆ.ಇದೇ ಕಾರ್ಯಕ್ರಮದಲ್ಲಿ ಸುಮಾರು 1500 ಅರ್ಜಿಗಳು ಬಂದಿದ್ದು ಅದರಲ್ಲಿ ಸುಮಾರು 600 ಅರ್ಜಿಗಳನ್ನು ಶಾಸಕರು ಸ್ಥಳದಲ್ಲಿಯೇ ವಿಲೇವಾರಿ ಮಾಡಿದರು.ಹಾಗೆಯೇ ಸುಮಾರು 200 ಕ್ಕೂ ಹೆಚ್ಚು ಜನರಿಗೆ ಸ್ಥಳದಲ್ಲಿಯೇ ಸಂಧ್ಯಾ ಸುರಕ್ಷಾ ವೃದ್ಧಾಪ್ಯ ವೇತನದ ಮಂಜೂರಾತಿ ಪತ್ರಗಳನ್ನು ವಿತರಣೆ ಮಾಡಿ ನಂತರ ಅರ್ಹ ಫಲಾನುಭವಿಗಳಿಗೆ ಕೃಷಿ ಉಪಕರಣಗಳನ್ನು ವಿತರಣೆ ಮಾಡಿದರು. ಜನತಾದರ್ಶನ ಕಾರ್ಯಕ್ರಮದ ಇನ್ನುಳಿದ ಅರ್ಜಿಗಳನ್ನು ಒಂದು ತಿಂಗಳೊಳಗೆ ಬಗೆಹರಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ಜನತಾದರ್ಶನ ಕಾರ್ಯಕ್ರಮಕ್ಕೆ ಅಗಮಿಸಿದ್ದ ಸುಮಾರು 2 ಸಾವಿರಕ್ಕೂ ಹೆಚ್ಚು ಜನರಿಗೆ ಶಾಸಕರು ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದರು.

ಮುಂದೆ ಓದಿ..
ಸುದ್ದಿ 

ಇಂದು ನಗರದಲ್ಲಿ ಯಕ್ಷಗಾನ ತಾಳಮದ್ದಳೆ

Taluknewsmedia.com

Taluknewsmedia.comತುಮಕೂರು: ನಗರದ ಯಕ್ಷ ದೀವಿಗೆ ಹಾಗೂ  ಶ್ರೀ ವಾಸವಿ ಸಂಘದ ವತಿಯಿಂದ ” ಶ್ರೀರಾಮನಿರ್ಣಯ” ಎಂಬ ಯಕ್ಷಗಾನ ತಾಳಮದ್ದಳೆಯನ್ನು ಮಾರ್ಚ್ 21 ಭಾನುವಾರ ಸಂಜೆ 5.30ಕ್ಕೆ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಗರದ ವಿದ್ಯಾಶಂಕರ್ ಲರ್ನಿಂಗ್ ಸೆಂಟರ್  ಮುಖ್ಯಸ್ಥ ಹಾಗೆಯೇ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದಶ್ರೀ ಜಿ.ವಿ.ವಿದ್ಯಾಶಂಕರ್ ಹಾಗೂ ಕಸ್ತೂರ್ಬಾ ಆಸ್ಪತ್ರೆಯ ನಿರ್ದೇಶಕರಾದ ಡಾ.ದುರ್ಗದಾಸ್ ಅಸ್ರಣ್ಣ ಕಾರ್ಯಕ್ರಮದ  ಮುಖ್ಯ  ಅತಿಥಿಗಳಾಗಿ ಆಗಮಿಸಲಿದ್ದಾರೆ. ತಾಳಮದ್ದಳೆಯ ಹಿಮ್ಮೇಳನದ ಭಾಗವತರಾಗಿ ಕೊಳಗಿ ಕೇಶವ ಹೆಗಡೆ, ಮದ್ದಳೆ ವಾದಕರಾಗಿ ಎ.ಪಿ.ಘಾಟಕ್ ಹಾಗೂ ಅರ್ಥದಾರಿಗಳಾಗಿ ವಿದ್ವಾನ್ ಉಮಾಕಾಂತ ಭಟ್ ಕೆರೇಕೈ, ಉಜಿರೆ ಅಶೋಕ್ ಭಟ್, ಶಶಾಂಕ್ ಅರ್ನಾಡಿ, ಆರತಿ ಪಟ್ರಮೆ, ಸಿಬಂತಿ ಪದ್ಮನಾಭ ಭಾಗವಹಿಸಲಿದ್ದಾರೆ.

ಮುಂದೆ ಓದಿ..
ಸುದ್ದಿ 

ಪರೀಕ್ಷೆ- ಪೇ- ಚರ್ಚಾ ಕಾರ್ಯಕ್ರಮಕ್ಕೆ ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳು ಆಯ್ಕೆ.

Taluknewsmedia.com

Taluknewsmedia.comಬೆಂಗಳೂರು: ಪ್ರತಿಭೆ ಎಂಬುದು ಎಲ್ಲಿದ್ದರೂ ಅರಳುತ್ತದೆ ಎಂಬುದಕ್ಕೆ ಈ ಇಬ್ಬರೂ  ವಿದ್ಯಾರ್ಥಿಗಳೇ ಸಾಕ್ಷಿ. ಪ್ರಧಾನಮಂತ್ರಿಯವರು ಪ್ರತಿವರ್ಷ ನಡೆಸುವ ಪರೀಕ್ಷೆ-ಪೇ-ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲು ನಮ್ಮ ರಾಜ್ಯದ  ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.ಹೊಸಕೋಟೆ ತಾಲೂಕಿನ ತಾವರೆಕೆರೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಮನೋಜ್ ಹಾಗೂ ಉಡುಪಿ ತಾಲೂಕಿನ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸರ್ಕಾರಿ ಪ್ರೌಢಶಾಲೆ, ಆರ್ಡಿ, ವಿದ್ಯಾರ್ಥಿನಿ ಅನುಷಾ ಅವರು  ಪರೀಕ್ಷೆ- ಪೇ-ಚರ್ಚಾ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿ ಮನೋಜ್  ಬಡ ಕುಟುಂಬಕ್ಕೆ ಸೇರಿದ್ದು ಅವರ ತಂದೆ ಹೂವು ಮಾರುವ ವ್ಯಾಪಾರ ಮಾಡುತ್ತಾರೆ.ಅದೇ ರೀತಿ ವಿದ್ಯಾರ್ಥಿನಿ ಅನುಷಾ ಸಹ ಒಂದು ಬಡ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿನಿ ಅವರ ತಂದೆ ಗಾರೆ ಕೆಲಸ ಮಾಡುತ್ತಾರೆ. ಈ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆ- ಪೇ- ಚರ್ಚಾ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದು ಪ್ರಾಥಮಿಕ ಮತ್ತು ಪ್ರೌಢಶಾಲಾ  ಸಚಿವರಾದ ಎಸ್.ಸುರೇಶ್ ಕುಮಾರ್ ಅವರಿಗೆ ತಿಳಿದುವಿದ್ಯಾರ್ಥಿನಿ ಅನುಷಾಅನುಷಾ ಅವರಿಗೆ ಕರೆ ಮಾಡಿ  ಮಾತನಾಡಿ ಅಭಿನಂದಿಸಿದ್ದಾರೆ. ಅದೇ…

ಮುಂದೆ ಓದಿ..
ಆರೋಗ್ಯ ಸುದ್ದಿ 

50 ದಿನಗಳ ಕಾಲ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖಾ ಸಿಬ್ಬಂದಿಗೆ ರಜೆ ಇಲ್ಲ: ಡಾ.ಕೆ.ಸುಧಾಕರ್

Taluknewsmedia.com

Taluknewsmedia.com ಬೆಂಗಳೂರು: ಮತ್ತೆ ರಾಜ್ಯದಲ್ಲಿ  ಕೋರೋನ ಹೆಮ್ಮಾರಿಯ ಎರಡನೆಯ ಕಾರಣದಿಂದ ಮುಂದಿನ 50 ದಿನಗಳ ವರೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ರಜೆಯನ್ನು ಸರ್ಕಾರ ರದ್ದುಗೊಳಿಸಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಕೋವಿಡ್ ಎರಡನೇ ಅಲೆ ಆರಂಭವಾದ  ಹಿನ್ನೆಲೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಿಬ್ಬಂದಿ ಮಾತ್ರವಲ್ಲದೆ ನಾನು ಕೂಡ ರಜೆ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಈ ಒಂದು ನಿರ್ಧಾರ ಅನಿವಾರ್ಯವಾಗಿದೆ ಕೊರೋನಾ ವಿರುದ್ಧ ಹೊರಡಲೇಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದರು.

ಮುಂದೆ ಓದಿ..