ನಿವೃತ್ತ ಯೋಧನಿಗೆ ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರಿಯ ಯೂತ್ ಫೋರ್ಸ್ ಹಾಗೂ ಅಗ್ನಿವಂಶ ಕ್ಷತ್ರಿಯ ಸಮಾಜದ ಹಿರಿಯರಿಂದ ಅಭಿನಂದನೆ.
Taluknewsmedia.comತುಮಕೂರು: ನಗರದ ಹನುಮಂತಪುರದಲ್ಲಿರುವ ಕೊಲ್ಲಾಪುರದಮ್ಮ ಸಮುದಾಯ ಭವನದಲ್ಲಿ 17 ವರ್ಷ ಭಾರತೀಯ ಸೇನೆಯಲ್ಲಿ ಸೇವೆಯನ್ನು ಮಾಡಿ ನಿವೃತ್ತಿ ಹೊಂದಿದ ಗುಬ್ಬಿ ತಾಲೂಕಿನ ಕಡೆ ಪಾಳ್ಯದ ಎಚ್. ಬಸವರಾಜು ಅವರಿಗೆ ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರಿಯ ಯೂತ್ ಫೋರ್ಸ್ ಹಾಗೂ ಅಗ್ನಿವಂಶ ಕ್ಷತ್ರಿಯ ಸಮಾಜದ ಹಿರಿಯರ ಸಮ್ಮುಖದಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ನಿವೃತ್ತ ಸೈನಿಕ ಬಸವರಾಜು ಅವರು ಮಾತನಾಡಿ ಹೆಚ್ಚಿನ ಯುವಕರು ದೇಶ ಸೇವೆ ಮಾಡಲು ಸೇನೆಗೆ ಸೇರಬೇಕೆಂದು ಕರೆ ನೀಡಿದರು. ಹಾಗೆಯೇ ತಮ್ಮ ವೃತ್ತಿಜೀವನದಲ್ಲಿ ಎದುರಾದ ಸವಾಲುಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ತಿಗಳ ಜನಾಂಗದ ಯಜಮಾನರು ಶ್ರೀ ಹನುಮಂತರಾಜು, ಕುಂಭಣ್ಣನವರು, ಶಿವಣ್ಣ, ಪ್ರೆಸ್ ರಾಜಣ್ಣ ಮತ್ತು ಅಗ್ನಿವಂಶ ಕ್ಷತ್ರಿಯ ಯೂತ್ ಫೋರ್ಸ್ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು. ವರದಿ ವರುಣ್ ಜಿ.ಜೆ
ಮುಂದೆ ಓದಿ..