Taluknewsmedia.comತುಮಕೂರು: ನಗರದ ಹನುಮಂತಪುರದ 20ನೇ ವಾರ್ಡಿನ ಪೌರಕಾರ್ಮಿಕರಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ತುಮಕೂರು ನಗರದ ಎಂಎಲ್ಎ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ ಪೌರಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಕೆಲಸ ನಿರ್ವಹಿಸುತ್ತಿದ್ದಾರೆ ದೇವರು ಅವರಿಗೆಲ್ಲಾ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ತಿಳಿಸಿದರು. ಸಾರ್ವಜನಿಕರು ಭಯ ಪಡದೆ ಕೊರೋನ ವನ್ನು ಎದುರಿಸಬೇಕು, ಸುಖಾಸುಮ್ಮನೆ ಮನೆಯಿಂದ ಹೊರ ಬರದೆ ಮನೆಯಲ್ಲಿಯೇ ಇದ್ದು ಸರ್ಕಾರದೊಂದಿಗೆ ಸಹಕರಿಸಬೇಕು ಎಂದರು. ಇಂದು ಬಹಳಷ್ಟು ಜನರ ಮದುವೆಗಳಲ್ಲಿ ಭಾಗವಹಿಸುತ್ತಿದ್ದು ಪ್ರಸ್ತುತ ಸನ್ನಿವೇಶಗಳನ್ನು ಅರ್ಥಮಾಡಿಕೊಂಡು ಮನೆಯಲ್ಲಿಯೇ ಸುರಕ್ಷಿತವಾಗಿರಬೇಕೆಂದು ಮನವಿ ಮಾಡಿದರು.ಸಂಘ-ಸಂಸ್ಥೆಗಳ ಮುಖಂಡರುಗಳು ತಮ್ಮ ತಮ್ಮ ಏರಿಯಾದಲ್ಲಿರುವ ನಿರ್ಗತಿಕರಿಗೆ ಬಡಜನರಿಗೆ ಸಹಾಯ ಮಾಡುವಂತೆ ಕೋರಿಕೊಂಡರು.ಆಹಾರಧಾನ್ಯಗಳ ಕಿಟ್ ವ್ಯವಸ್ಥೆ ಮಾಡಿದ್ದ ರಕ್ಷಿತ್ ಮತ್ತು ಜಗದೀಶ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ರವೀಶ್ (ಜಾಂಗೀರ್), ಪಾಲಿಕೆ ಸದಸ್ಯರಾದ ಶ್ರೀನಿವಾಸ್ ನರಸಿಂಹಮೂರ್ತಿ, ಮುಖಂಡರುಗಳಾದ ಗಂಗಾಧರ್, ವೈ.ಟಿ.ರಾಜೇಂದ್ರ, ಪ್ರದೀಪ್ ಮುಂತಾದವರು ಇದ್ದರು.…
ಮುಂದೆ ಓದಿ..