ಕ್ರೈಂ ಸುದ್ದಿ ಸುದ್ದಿ 

ರೈಲ್ವೆ ಹಳಿಯ ಮೇಲೆ ವೃದ್ದೆಯ ಮೃತದೇಹ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಆನೇಕಲ್ : ರೈಲ್ವೆ ಹಳಿಯ ಮೇಲೆ ವೃದ್ಧೆಯ ಮೃತದೇಹ ಪತ್ತೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ತನಿಖೆಯ ವೇಳೆ ವೃದ್ಧೆಯನ್ನು ಕೊಲೆ ಮಾಡಿ ಮೃತ ದೇಹವನ್ನು ರೈಲ್ವೆ ಟ್ರಾಕ್ ಮೇಲೆ ಹಾಕಿರುವುದು ಬೆಳಕಿಗೆ ಬಂದಿದೆ. ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಬಾಲಚಂದ್ರನನ್ನು ಸದ್ಯ ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಇನ್ನು ಕೊಲೆ ಮಾಡಲು ಬಾಲಚಂದ್ರನಿಗೆ ಸಹಕರಿಸಿದ ಆರೋಪಿ ಲತಾ ಪರಾರಿಯಾಗಿದ್ದು, ಆಕೆಗಾಗಿ ಶೋಧಕಾರ್ಯ ನಡೆಯುತ್ತಿದೆ.ಮಂಡ್ಯದ ನಿಂಗಮ್ಮನನ್ನು ಬಾಲಚಂದ್ರ ಮತ್ತು ಲತಾ ಸೇರಿ ಕೊಲೆ ಮಾಡಿದ್ದಾರೆ. ನಿಂಗಮ್ಮ ಮತ್ತು ಇವರ ಸೊಸೆ ಲತಾನಡುವೆ ಹಣಕಾಸು ವ್ಯವಹಾರ ಇತ್ತು. ಇದೇ ವಿಚಾರವಾಗಿ ಜಗಳವಾಗಿದ್ದು, ಜಗಳವಾಡುವಾಗ ನಿಂಗಮ್ಮ ಕೆಳಗೆ ಬಿದ್ದಿದ್ದಾರೆ. ಬಳಿಕ ಬಾಲಚಂದ್ರ ಜತೆ ಸೇರಿ ರೈಲ್ವೆ ಟ್ರಾಕ್ ಗೆ ನಿಂಗಮ್ಮನನ್ನು ಹಾಕಿದ್ದು, ರೈಲು ಹರಿದು ನಿಂಗಮ್ಮನ ದೇಹ ಚಿದ್ರ ಚಿದ್ರವಾಗಿದೆ.ನಂತರ ರೈಲ್ವೆ ಟ್ರಾಕ್…

Read More
ಸುದ್ದಿ 

ಬಾಗೇಪಲ್ಲಿ ಹೊಲ, ಗದ್ದೆಗಳಿಗೆ ಉರುಳುವ ಕಲ್ಲು

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. . ಬಾಗೇಪಲ್ಲಿ: ತಾಲ್ಲೂಕಿನ ಮಾಡಪ್ಪಲ್ಲಿ ಗ್ರಾಮದ ಬಳಿ ಸರ್ಕಾರದ ಅನುಮತಿ ಪಡೆದು ಕಲ್ಲುಗಣಿಗಾರಿಕೆ ನಡೆಸುತ್ತಿರುವ ಪ್ರದೇಶಗಳಲ್ಲಿ ಜಿಲೆಟಿನ್ ಸ್ಫೋಟಕ ಸಿಡಿಸುತ್ತಿರುವುದರಿಂದ ಬೃಹತ್ ಕಲ್ಲುಗಳು ರೈತರು ಹೊಲ, ಗದ್ದೆಗಳಿಗೆ ಬೀಳುತ್ತಿವೆ. ಇದರಿಂದಾಗಿ ಜನ-ಜಾನುವಾರುಗಳಿಗೆ ತೊಂದರೆ ಆಗಿದೆ. ತಾಲ್ಲೂಕಿನ ಹೊನ್ನಂಪಲ್ಲಿ ಸಮೀಪದ ಮಾಡಪಲ್ಲಿ ಬೆಟ್ಟದಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಆದರೆ ಗಣಿಗಾರಿಕೆ ನಡೆಸಲು ಹಾಕಿದ ಷರತ್ತುಗಳನ್ನು ಸಮರ್ಪಕ ರೀತಿಯಲ್ಲಿ ಪಾಲನೆ ಮಾಡುತ್ತಿಲ್ಲ. ಗಣಿಗಾರಿಕೆ ನಡೆಸುವ ಬೆಟ್ಟದ ಸುತ್ತಲೂ ರೈತರ ಜಮೀನು, ಹೊಲ, ಗದ್ದೆಗಳು ಇವೆ. ನಿತ್ಯವೂ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಸ್ಪೋಟಿಸುವ ಸ್ಪೋಟಕಗಳಿಂದ ಬೃಹತ್ ಪ್ರಮಾಣದ ಕಲ್ಲುಬಂಡೆಗಳು ಅಡೆತಡೆ ಇಲ್ಲದೆ ನೇರವಾಗಿ ರೈತರ ಜಮೀನುಗಳಿಗೆ ನುಗ್ಗುತ್ತಿವೆ.ರೈತರು ಪ್ರಾಣಭೀತಿಯಲ್ಲೇ ಕೃಷಿ ಚಟುವಟಿಕೆ ನಡೆಸದಂತೆ ಆಗಿದೆ‌. ಹಾಗೂ ಜಮೀನುಗಳಲ್ಲಿನ ಬೆಳೆ ನಾಶವಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗಣಿಗಾರಿಕೆಗೆ ಅನುಮತಿ ನೀಡುವಾಗ ಪರಿಸರ ಮಾಲಿನ್ಯ, ರೈತರಿಗೆ…

Read More
ಸುದ್ದಿ 

ಬಾಗೇಪಲ್ಲಿ: ಯಂತ್ರಗಳಿಂದ ನರೇಗಾ ಕಾಮಗಾರಿ; ಆರೋಪ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. . ಬಾಗೇಪಲ್ಲಿ: ತಾಲ್ಲೂಕಿನ ಪಾಳ್ಯಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಯ್ಯಗಾರಪಲ್ಲಿ ಗ್ರಾಮದಲ್ಲಿ‌ ನರೇಗಾ ಯೋಜನೆಯಲ್ಲಿ ಕಾಲುವೆ ಕಾಮಗಾರಿಯನ್ನು ಜೆಸಿಬಿ ಯಂತ್ರಗಳಿಂದ ಮಾಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡರು ಆರೋಪಿಸಿದರು. ಲಾಕ್‌ಡೌನ್‌ನಿಂದ ಕೃಷಿ ಕೂಲಿಕಾರರಿಗೆ ಕೂಲಿ ಕೆಲಸ ಇಲ್ಲ. ಕೆಲಸ ನೀಡಿ ಕೂಲಿ ಹಣ ನೀಡಬೇಕಾದ ಪಾಳ್ಯಕೆರೆ ಗ್ರಾಮ ಪಂಚಾಯಿತಿ ಪಿಡಿಒ, ಡೇಟಾ ಆಪರೇಟರ್, ಬಿಲ್ ಕಲೆಕ್ಟರ್, ಗುತ್ತಿಗೆದಾರರು ಶಾಮೀಲಾಗಿ ರಾತ್ರೋರಾತ್ರಿ ಜೆಸಿಬಿ ಯಂತ್ರಗಳಿಂದ ಕಾಲುವೆ ಕೆಲಸ ಮಾಡಿಸಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ನರಸಿಂಹಪ್ಪ ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕಿನಲ್ಲಿ ನರೇಗಾ ಯೋಜನೆಯಡಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯಿತಿಯ ಸಿಇಒಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು ಕೂಲಿಕಾರರಿಂದ ಮಾಡಿಸಬೇಕಾದ ಕಾಮಗಾರಿಗಳನ್ನು ಜೆಸಿಬಿ ಯಂತ್ರಗಳ ಮೂಲಕ ನಡೆಸಲಾಗುತ್ತಿದೆ. ಕೂಲಿಕಾರರಿಗೆ ವರದಾನವಾಗಬೇಕಿದ್ದ ನರೇಗಾ ಯೋಜನೆಯು…

Read More
ವಿಶೇಷ ಸುದ್ದಿ 

ಬನ್ನೇರುಘಟ್ಟದಲ್ಲಿ ನೀರಾನೆಗೆ ಹುಟ್ಟುಹಬ್ಬ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಆನೇಕಲ್: ಮನೆಗಳಲ್ಲಿ ಮಕ್ಕಳಿಗೆ ಹುಟ್ಟುಹಬ್ಬ ಆಚರಿಸುವುದು ಸಾಮಾನ್ಯ. ಆದರೆ, ಪ್ರಾಣಿಗಳ ಹುಟ್ಟುಹಬ್ಬ ಅಪರೂಪ.ಈ ದಿಸೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನದ ಹಿಪ್ಪೋಪೊಟಮಸ್‌(ನೀರಾನೆ) ನಾಗ ಮತ್ತು ದಶ್ಯಾಳಿಗೆ ಜನಿಸಿದ ಮರಿಗೆ ಸನ್ನಿ ಎಂದು ನಾಮಕರಣ ಮಾಡಿ ಹುಟ್ಟುಹಬ್ಬ ಆಚರಿಸಿದ್ದು ವಿಶೇಷವಾಗಿದೆ.ಹುಟ್ಟುಹಬ್ಬದ ಪ್ರಯುಕ್ತ ಮರಿಯನ್ನು ದತ್ತು ತೆಗೆದುಕೊಂಡಿದ್ದ ನಿಖಿಲ್‌ ಗುಪ್ತಾ ಮತ್ತು ನೇಹ ಅಗರ್‌ವಾಲ್‌ ಅವರು ಹಿಪ್ಪೋಪೊಟಮಸ್‌ಗಳಿಗೆ ವಿಶೇಷ ಆಹಾರ ನೀಡಿ ಹುಟ್ಟುಹಬ್ಬದ ಸಂಭ್ರಮಕ್ಕೆ ಮೆರುಗು ನೀಡಿದರು.ಹಿಪ್ಪೋಪೊಟಮಸ್‌ ಪಾಲಕರಾದ ತಿಮ್ಮರಾಜು ಮತ್ತು ವೆಂಕಟೇಶ್‌ಗೆ ಪ್ರಶಂಸಾಪತ್ರ ನೀಡಿ ಗೌರವಿಸಲಾಯಿತು. ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್‌ಸಿಂಗ್ ಹಾಜರಿದ್ದರು.

Read More
ಸುದ್ದಿ 

ಮೋಕಾ ಫಾರೆಸ್ಟ್ ನಲ್ಲಿ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಮೋಕಾ ಗ್ರಾಮ ಬಳ್ಳಾರಿ ತಾಲೂಕು ಕಾದಿಟ್ಟ ಅರಣ್ಯದಲ್ಲಿ ಒಬ್ಬ ವ್ಯಕ್ತಿಯನ್ನು ಕೊಲೆ ಯನ್ನು ಮಾಡಿದ್ದಾರೆ ಅಲ್ಲಿರುವ ಸಾರ್ವಜನಿಕರು ಆ ವ್ಯಕ್ತಿಯನ್ನು ನೋಡಿದ ಕ್ಷಣವೇ ಗಾಬರಿಗೊಂಡು ಪಕ್ಕದಲ್ಲಿರುವ ಪೊಲೀಸ್ ಸ್ಟೇಷನ್ಗೆ ಕರೆ ನೀಡಿದರು ಆಗ ಪೊಲೀಸರು ಬಂದು ಅದರ ಬಗ್ಗೆ ಇಂಕ್ವರಿ ಮಾಡಿದರು ವ್ಯಕ್ತಿಯ ದೇಹದ ಮೇಲೆ ಅನೇಕ ಗಾಯಗಳಾಗಿದ್ದವು ಆ ವ್ಯಕ್ತಿಯ ಸಾವು ಹತ್ತಿ ಕ್ರೂರವಾಗಿ ಕೊಲ್ಲಿ ದ್ದಾರೆ ತಾಲೂಕು ನ್ಯೂಸ್ ಬಳ್ಳಾರಿ ನಮ್ಮ ಜೊತೆ ವಿಜಯಕುಮಾರ್ ಆರ್

Read More
ಸುದ್ದಿ 

ಸೋತದ್ದು ಯಡಿಯೂರಪ್ಪರಲ್ಲ, ಬಿಜೆಪಿ ಹೈಕಮಾಂಡ್ !: ರಾಜ್ಯದಲ್ಲಿ ಇನ್ನೇನಿದ್ದರೂ ಬಿಎಸ್ ವೈ 2 ಸರಕಾರ !!

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

Read More
ಸುದ್ದಿ 

ಸಂಕಷ್ಟಕ್ಕೆ ಸ್ಪಂದಿಸಿದ ಅಗ್ನಿವಂಶ ಕ್ಷತ್ರಿಯ ಸಮುದಾಯದ ಹಿರಿಯ ಮುಖಂಡರು

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ತುಮಕೂರು: ಪುಷ್ಪಲತಾ ಎಂಬುವವರು ಕೊರೋನಾ ಸಾಂಕ್ರಾಮಿಕ ಸೋಂಕಿನಿಂದಾಗಿ ಹಾಗೆಯೇ ಬ್ಲಾಕ್ ಫಂಗಸ್ ಸಮಸ್ಯೆ ಕಂಡುಬಂದಿತ್ತು. ಇವರ ಚಿಕಿತ್ಸೆಗಾಗಿ ಲಕ್ಷಾಂತರ ರೂ ಖರ್ಚು ಮಾಡಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರು. ಇಂತಹ  ಸಮಯದಲ್ಲಿ ಅಗ್ನಿವಂಶ ಕ್ಷತ್ರಿಯ ಸಮುದಾಯದ ಹಿರಿಯ ಮುಖಂಡರು  ಹಣ ಸಹಾಯ ಮಾಡುವ ಮೂಲಕ ಅವರ ಕುಟುಂಬಕ್ಕೆ ನೆರವಾಗಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ತಿಗಳರಪಾಳ್ಯದ ನಿವಾಸಿ ತಿಗಳ ಸಮುದಾಯದ  ಜಯರಾಮು ಅವರ ಪತ್ನಿ ಪುಷ್ಪಲತಾ ಎಂಬುವವರು ಕೊರೋನಾ ಸಾಂಕ್ರಾಮಿಕ ಸೋಂಕಿನಿಂದಾಗಿ ಹಾಗೆಯೇ ಬ್ಲಾಕ್ ಫಂಗಸ್ ಸಮಸ್ಯೆ ಕಂಡುಬಂದಿತ್ತು.ಇವರ ಚಿಕಿತ್ಸೆಗಾಗಿ ಲಕ್ಷಾಂತರ ರೂ ಖರ್ಚು ಮಾಡಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರು.ಇಂತಹ ಸಂದರ್ಭದಲ್ಲಿ ತುಮಕೂರಿನ ಅಗ್ನಿವಂಶ ಕ್ಷತ್ರಿಯ (ತಿಗಳ) ಸಮುದಾಯದ ಮುಖಂಡರಾದ  ಪ್ರೆಸ್ ರಾಜಣ್ಣ, ಟಿ.ಎಲ್. ಕುಂಭಣ್ಣ, ವಕೀಲರಾದ ನಾರಾಯಣಸ್ವಾಮಿ, ಆಂಜನೇಯರವರು, ಕುಣಿಗಲ್ ಕಟ್ಟೆ ಯಜಮಾನ್ರು ಹಾಗೂ ಮಂಜಣ್ಣನವರ ಸಮ್ಮಖದಲ್ಲಿ ಜಯರಾಮ್ ರವರಿಗೆ 50,000…

Read More
ವಿಡಿಯೋ ವಿಶೇಷ ಸುದ್ದಿ 

” ನಮ್ಮ ನಡೆ ಸರ್ಕಾರಿ ಶಾಲೆಯ ಕಡೆ “

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಆನೇಕಲ್ :- ರಾಜಲಾಂಛನ ಸಂಸ್ಥೆಯ ಸಂಸ್ಥಾಪಕರಾದ ಎಲ್.ವೈ.ರಾಜೇಶ್ ರವರ ನೇತೃತ್ವದಲ್ಲಿ ಮೂಡಿ ಬಂದಿರುವ ನಮ್ಮ ನಡೆ ಸರ್ಕಾರಿ ಶಾಲೆಯ ಕಡೆ ಈ ಒಂದು ಕಿರು ಚಿತ್ರವನ್ನು ಚಿತ್ರೀಕರಿಸಿ ಸಮಸ್ತ ನಾಡಿನ ಜನತೆಗೆ ಅರಿವು ಮೂಡಿಸುವುದರ ಜೊತೆಗೆ ನಮ್ಮ ನಡೆ ಸರ್ಕಾರಿ ಶಾಲೆಯ ಕಡೆ ಎಂಬುದನ್ನು ಪೋಷಕರಿಗೆ ತಿಳಿಸಿ ಹಾಗೂ ಸರ್ಕಾರಿ ಶಾಲೆಯಲ್ಲಿ ಸಿಗುವ ಸೌಲಭ್ಯಗಳನ್ನು ಜನರಿಗೆ ಹಾಗೂ ಮಕ್ಕಳಿಗೆ ಈ ಒಂದು ಕಿರುಚಿತ್ರದಿಂದ ತಿಳಿಸಿಕೊಟ್ಟಂತಹ ತೆಲಗರಹಳ್ಳಿ ಗಣೇಶ್ ರವರು ಮತ್ತು ರಾಜಲಾಂಛನ ಸಂಸ್ಥೆಯ ಎಲ್.ವೈ.ರಾಜೇಶ್ ರವರಿಗೂ ಹಾಗೂ ರಾಜಲಾಂಛನ ಸಂಸ್ಥೆಯ ನರಸಿಂಹ ಮೂರ್ತಿ ರವರು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ರಿಗೂ ಮತ್ತು ಸಂಸ್ಥೆಯ ಎಲ್ಲಾ ಗಣ್ಯ ವ್ಯಕ್ತಿಗಳಿಗೂ ತಾಲ್ಲೂಕ್ ನ್ಯೂಸ್ ನ ಪರವಾಗಿ ಹಾಗೂ ಸಮಸ್ತ ನಾಡಿನ ಜನತೆಯ ಪರವಾಗಿ ಅಭಿನಂದನೆಗಳು.

Read More

ಇಸಾಮುದ್ರ ಗ್ರಾಮದ ಶಶಿಕಲಾ ಉಪ್ಪಾರ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ತಹಶೀಲ್ದಾರ್ ಟಿ ಸುರೇಶ್ ಕುಮಾರ್ ರವರಿಗೆ ಮನವಿ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ಅಂಬೇಡ್ಕರ್ ಸ್ವಾಭಿಮಾನಿ ಸೇನೆಯಿಂದ ಮೊಳಕಾಲ್ಮೂರು ತಹಶೀಲ್ದಾರ್ ಟಿ ಸುರೇಶ್ ಕುಮಾರ್ ರವರಿಗೆ ಮನವಿದಿನಾಂಕ 23-07-2021 ರಂದು ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಬಳಿ ಇರುವ ಇಸಾಮುದ್ರ ಗ್ರಾಮದ ಶಶಿಕಲಾ ಉಪ್ಪಾರ ವಯಸ್ಸು ಕೇವಲ 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಈ ಕೂಡಲೇ ಬಂಧಿಸುವಂತೆ ಮನವಿ ಸಲ್ಲಿಸಿ ಮಾತನಾಡಿದ ತಾಲ್ಲೂಕು ಘಟಕ ಅಧ್ಯಕ್ಷರಾದ ಹೆಚ್ ಮಂಜುನಾಥ ರವರು ಬೇರೊಂದು ರಾಜ್ಯ, ಜಿಲ್ಲೆಯಲ್ಲಿ ನಡೆದ ಅತ್ಯಾಚಾರ ಘಟನೆಗಳು ಕೇಳಿದಾಗ ಮನಸ್ಸಿಗೆ ಎಷ್ಟೋ ನೋವಾಗಿದೆ ಆದರೆ ಈಗ ನಮ್ಮ ಜಿಲ್ಲೆಯಲ್ಲೇ ನಡೆದಿರುವ ಘಟನೆ ಮನಕಲಕುವಂತಿದೆ ಆದ್ದರಿಂದ ಅತ್ಯಾಚಾರಿಗಳಿಗೆ ತಕ್ಕ ಶಿಕ್ಷೆಯಾಗಿ ಶಶಿಕಲಾ ಕುಟುಂಬಕ್ಕೆ ನ್ಯಾಯಸಿಗಬೇಕಾದ ಕೆಲಸವಾಗಬೇಕಿದೆ ಇಷ್ಟೇಲ್ಲಾ ನಡೆದಿದ್ದರು ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಅರೋಪಿಯನ್ನು ಇದುವರೆಗೂ ಬಂಧಿಸಿರುವುದಿಲ್ಲ ತುಂಬಾ ಖಂಡನೀಯ ವಿಚಾರವಾಗಿದೆ. ಡಾ ಬಿ ಆರ್ ಅಂಬೇಡ್ಕರ್…

Read More