ಸುದ್ದಿ 

ಮಹಿಳೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಸಂಬಂಧ ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ತಿಗಳ ಸಮುದಾಯದ ವತಿಯಿಂದ ಬೃಹತ್ ಪ್ರತಿಭಟನೆ.

Taluknewsmedia.com

Taluknewsmedia.comತುಮಕೂರು: ಜಿಲ್ಲೆಯ ಗ್ರಾಮಾಂತರ ತಾಲೂಕಿನ ಚಿಕ್ಕ ಹಳ್ಳಿ ಗ್ರಾಮದ ಮಹಿಳೆಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪರಾಧಿಗಳನ್ನು ಕೂಡಲೇ ಬಂಧಿಸಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕು ಹಾಗೆಯೇ ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡುವಂತೆ ಒತ್ತಾಯಿಸಿ ತಿಗಳ ಸಮುದಾಯದ ಮುಖ್ಯಸ್ಥರು ಪಾಲಿಕೆ ಮೇಯರ್ ಉಪಮೇಯರ್ ಅಗ್ನಿವಂಶ ಕ್ಷತ್ರಿಯ ತಿಗಳ ಯೂತ್ ಫೋರ್ಸ್ ಸೇರಿದಂತೆ ಜಾತ್ಯತೀತವಾಗಿ ಎಲ್ಲಾ ಸಂಘಟನೆಗಳ ಮುಖಂಡರು ಸೇರಿ ಬೃಹತ್ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನಾ ಮೆರವಣಿಗೆ ಬಿ.ಜಿ.ಎಸ್ (ಟೌನ್ ಹಾಲ್) ವೃತ್ತದ ಬಳಿ ಪ್ರತಿಭಟನಾಕಾರರು ಸಮಾವೇಶಗೊಂಡು ಮಹಿಳೆಯ ಅತ್ಯಾಚಾರಗೈದು ಕೊಲೆ ಮಾಡಿರುವ ಅಪರಾಧಿಗಳನ್ನು ಕೂಡಲೇ ಬಂಧಿಸಿ ಅವರನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿದರು. ಅಪರಾಧಿಯ ಪ್ರತಿಕೃತಿ ಹಿಡಿದು ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಅಪರಾಧಿಗಳನ್ನು ಬಂಧಿಸಿ ಅವರಿಗೆ ಉಗ್ರ ಶಿಕ್ಷೆಯಾಗಬೇಕೆಂದು, ನೊಂದಿರುವ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಬೇಕೆಂದು ಮನವಿ ಪತ್ರ…

ಮುಂದೆ ಓದಿ..
ಕ್ರೈಂ ಸುದ್ದಿ 

ದನ ಮೇಯಿಸಲು ತೆರಳಿದ್ದ ಮಹಿಳೆಯ ಅತ್ಯಾಚಾರಗೈದು ಕೊಲೆ.

Taluknewsmedia.com

Taluknewsmedia.comತುಮಕೂರು: ಗ್ರಾಮಾಂತರ ತಾಲೂಕಿನ ಹಿರೇಹಳ್ಳಿ ಸಮೀಪದ ಚಿಕ್ಕಹಳ್ಳಿ ಗ್ರಾಮದಲ್ಲಿ ದನ ಮೇಯಿಸಲೆಂದು ತೆರಳಿದ್ದ ಮಹಿಳೆಯನ್ನು ಅತ್ಯಾಚಾರಗೈದು ಭೀಕರವಾಗಿ ಹತ್ಯೆ ಮಾಡಲಾಗಿದೆ. ಮೃತ ದುರ್ದೈವಿ ಚಿಕ್ಕಹಳ್ಳಿ ಗ್ರಾಮದ ಜಯಲಕ್ಷ್ಮಿ ಎಂದು ಗುರುತಿಸಲಾಗಿದೆ.ಎಂದಿನಂತೆ ಮೃತ ಮಹಿಳೆ ಮನೆಯಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಛೋಟಾ ಸಾಬರ ಬೆಟ್ಟದ ಬುಡದಲ್ಲಿ ದನ ಮೇಯಿಸಲು ತೆರಳಿದಾಗ ದುಷ್ಕರ್ಮಿಗಳು ಮಹಿಳೆಯನ್ನು ಅಪಹರಿಸಿ ಅತ್ಯಾಚಾರಗೈದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೃತ ಮಹಿಳೆಯ ಪತಿ ಶಿವಕುಮಾರ್ ಸಂಜೆ 5 ಗಂಟೆಗೆಲ್ಲ ಮನೆಗೆ ಮರಳುತ್ತಿದ್ದ ಪತ್ನಿ ಬಾರದೇ ಇರುವುದನ್ನು ಕಂಡು ಸ್ಥಳೀಯರೊಂದಿಗೆ ದನ ಮೇಯಿಸುವ ಜಾಗಕ್ಕೆ ತೆರಳಿ ಹುಡುಕಾಟ ಮಾಡಿದಾಗ ಜಯಲಕ್ಷ್ಮಿ ಅವರ ಒಡೆದ ಬಳೆಯ ಚೂರುಗಳು ಕಾಣಿಸಿವೆ, ಹಾಗೆಯೇ ಮುಂದೆ ಹುಡುಕಲಾಗಿ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ನಿ ಶವ ಕಂಡು ಶಿವಕುಮಾರ್ ಬೆಚ್ಚಿಬಿದ್ದಿದ್ದಾರೆ. ನಂತರ ಈ ಕೃತ್ಯಕ್ಕೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದಾರೆ.…

ಮುಂದೆ ಓದಿ..
ಸುದ್ದಿ 

ರಾಜ್ಯಾದ್ಯಂತ ಶಾಲಾ ಕಾಲೇಜುಗಳ ಭೌತಿಕ ತರಗತಿಗಳು ಪುನರಾರಂಭವಾಗಿತ್ತಿರುವ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವ ಡಾ. ಕೆ. ಸುಧಾಕರ್

Taluknewsmedia.com

Taluknewsmedia.comಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ಇಂದಿನಿಂದ  ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಲ್ಲಿ ಭೌತಿಕ ತರಗತಿಗಳು ಪುನರಾರಂಭವಾಗಿತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರದ ವಾಪಸಂದ್ರದಲ್ಲಿರುವ ಸರ್ಕಾರಿ ಪ್ರೌಢ ಶಾಲೆಗೆ ಸಚಿವ ಡಾ.ಕೆ.ಸುಧಾಕರ್ ಬೇಟಿ ನೀಡಿ ಸುರಕ್ಷತಾ ಕ್ರಮಗಳ  ಕುರಿತಾಗಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿನಿಯರು ಸಚಿವರಿಗೆ  ರಾಖಿಯನ್ನು ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದು  ವಿಶೇಷವಾಗಿತ್ತು. ಕಳೆದ ಒಂದೂವರೆ ವರ್ಷದಿಂದ ಆನ್ಲೈನ್ ಮೂಲಕ ಕಲಿಕೆ ಮುಂದುವರೆಸುತ್ತಿರುವ ಮಕ್ಕಳ ಮಾನಸಿಕ ಆರೋಗ್ಯ, ವ್ಯಕ್ತಿತ್ವ ವಿಕಸನ ಹಾಗು ಭವಿಷ್ಯವನ್ನು ಪರಿಗಣಿಸಿ, ತಜ್ಞರ ಸಲಹೆ ಪಡೆದು ಎಲ್ಲಾ ಮುಂಜಾಗ್ರತೆಗಳೊಂದಿಗೆ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಪೋಷಕರು ನಿರಾತಂಕವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆಂದು ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಮುಂದೆ ಓದಿ..
ಸುದ್ದಿ 

ಮನುಷ್ಯನ ಜೀವನವನ್ನು ರೂಪಿಸುವುದು ಪರಿವಾರ, ಪರಿಸ್ಥಿತಿ ಹಾಗೂ ಪರಿಸರ :ಡಾ. ಎಸ್. ರಮೇಶ್

Taluknewsmedia.com

Taluknewsmedia.comತುಮಕೂರು: ನಗರದ ವಿನಾಯಕ ನಗರದಲ್ಲಿರುವ ಶ್ರೀ ಅಗ್ನಿಬನ್ನಿರಾಯ ಸ್ವಾಮಿ ಪತ್ತಿನ ಸಹಕಾರ ಸಂಘ ನಿಯಮಿತ ಕಚೇರಿಯ ಕಟ್ಟಡದಲ್ಲಿಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರಿಯ ತಿಗಳ ಯೂತ್ ಪೋರ್ಸ್ ಸಂಘಟನೆ ವತಿಯಿಂದ 75 ನೇ ಸ್ವಾತಂತ್ರೋತ್ಸವ ಸಂಭ್ರಮಾಚರಣೆ ಹಾಗೂ ಸಂಘಟನೆಯ ನೂತನ ಕಾರ್ಯಾಲಯವನ್ನು ಉದ್ಘಾಟಿಸಲಾಯಿತು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಡಾ. ಎಸ್. ರಮೇಶ್ ಅವರು ಮಾತನಾಡಿ ಮನುಷ್ಯನ ಜೀವನ ರೂಪಿಸುವುದು ಪರಿವಾರ, ಪರಿಸ್ಥಿತಿ, ಪರಿಸರ ಇವು ಎಷ್ಟರಮಟ್ಟಿಗೆ ಒಬ್ಬ ವ್ಯಕ್ತಿಯ ಮೇಲೆ ಪರಿಣಾಮ ಬೀರುತ್ತವೆ ಎಂದರೆ ಅವರು ಮುಂದೆ ಏನು ಆಗುತ್ತಾರೆ ಎಂಬುದನ್ನು ಈಗಲೇ ನಿರ್ಧರಿಸಬಹುದಾಗಿದೆ ಎಂದು ಹೇಳಿದರು.ಇತ್ತೀಚಿನ ಯುವಕರಲ್ಲಿ ನಾನು ಎಂಬ ಅಹಂ ಮೂಡಿದೆ, ಹಿರಿಯರಿಗಿಂತ ನಾವೇನು ಕಡಿಮೆ ಎಂಬ ಭಾವನೆ ಅವರಲ್ಲಿದೆ ಆದರೆ ಹಿರಿಯರ ಮಾತನ್ನು ಅನುಸರಿಸುವ ಮೂಲಕ ಇಡೀ ಸಮಾಜವನ್ನು ದೇಶವನ್ನು ಉತ್ತುಂಗದ ಮಟ್ಟಕ್ಕೆ ಕೊಂಡೊಯ್ಯಬಹುದು ಅಸಾಮರ್ಥ್ಯ ಹಿರಿಯರಲ್ಲಿದೆ…

ಮುಂದೆ ಓದಿ..
ಸುದ್ದಿ 

ಅಂಗವಿಕಲ ಕಲ್ಯಾಣ ಇಲಾಖೆಯ ವತಿಯಿಂದ 2019-20 ನೇ ಸಾಲಿನಲ್ಲಿ ವಿಶೇಷ ಚೇತನರಿಗೆ ಮಂಜೂರಾದ ಎಂಟು ತ್ರಿಚಕ್ರ ವಾಹನಗಳನ್ನು ಶಾಸಕ ಶಿವಶಂಕರರೆಡ್ಡಿ ವಿತರಿಸಿದರು

Taluknewsmedia.com

Taluknewsmedia.com ಗೌರಿಬಿದನೂರು: ನಗರದ ತಾಲ್ಲೂಕು ಪಂಚಾಯತಿ ಕಛೇರಿ ಆವರಣದಲ್ಲಿ ವಿಶೇಷ ಚೇತನ ರಿಗೆ  ಮಂಜೂರಾದ ಎಂಟು ತ್ರಿಚಕ್ರ ವಾಹನಗಳನ್ನು   ವಿತರಣೆ ಮಾಡಲಾಯಿತು. ವಿಶೇಷ ಚೇತನರ ಮಾನಸಿಕ ಮತ್ತು ಸಾಮಾಜಿಕ ಭದ್ರತೆಯ ದೃಷ್ಟಿಯಿಂದ ಅಂಗವಿಕಲ ಕಲ್ಯಾಣ ಇಲಾಖೆಯ ವತಿಯಿಂದ 2019-20 ನೇ ಸಾಲಿನಲ್ಲಿ   ವಿಶೇಷ ಚೇತನರಿಗೆ  ಮಂಜೂರಾದ ಎಂಟು ತ್ರಿಚಕ್ರ ವಾಹನಗಳನ್ನು  ಶಾಸಕ ಶಿವಶಂಕರರೆಡ್ಡಿ ವಿತರಿಸಿದರು.

ಮುಂದೆ ಓದಿ..
ಸುದ್ದಿ 

ಉತ್ತಮ ಭವಿಷ್ಯ ರೂಪಿಸುವುದಕ್ಕೆ ಉತ್ತಮ ಮಾರ್ಗದರ್ಶನ ನೀಡಿದರೆ ಅದು ಬೇರೆ ಎಲ್ಲದಕ್ಕಿಂತ ಪುಣ್ಯದ ಕೆಲಸವಾಗುತ್ತದೆ: ಡಾ.ವಿ.ಟಿ. ಶಿವಣ್ಣ

Taluknewsmedia.com

Taluknewsmedia.com ತುಮಕೂರು: ಮನುಷ್ಯ ಚಿಂತಿಸುವುದು ಭವಿಷ್ಯವನ್ನು ನೆನೆದು ಅಲ್ಲ, ಭವಿಷ್ಯದ ಮೇಲೆ ನಿಯಂತ್ರಣ ಸಾಧಿಸುವ, ಬಯಸುವ ನಮ್ಮ ಮನಸ್ಥಿತಿಯಿಂದ. ಇದು ಬಹಳಷ್ಟು ಜನರ ಜೀವನದಲ್ಲಿ ಸತ್ಯ ಎಂದು ನಾನು ಭಾವಿಸುತ್ತೇನೆ ಎಂದು ಡಾ. ಅಂಬೇಡ್ಕರ್ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ವಿ.ಟಿ. ಶಿವಣ್ಣ ತಿಳಿಸಿದರು. ನಗರದ ಹನುಮಂತಪುರದಲ್ಲಿರುವ ಕೊಲ್ಲಾಪುರದಮ್ಮ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರಿಯ ತಿಗಳ ಯೂತ್  ಫೋರ್ಸ್ ಸಂಘಟನೆ  ವತಿಯಿಂದ ಎಸ್.ಎಸ್.ಎಲ್.ಸಿ  ನಂತರ ಮುಂದೇನು..? ಎಂಬ ಮಾರ್ಗದರ್ಶಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿಡಾ. ಅಂಬೇಡ್ಕರ್ ಶಿಕ್ಷಣ  ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ  ಡಾ. ಶಿವಣ್ಣ ವಿ ಟಿ ಅವರು  ಮಾತನಾಡಿ  ಮನುಷ್ಯ ಚಿಂತಿಸುವುದು ಭವಿಷ್ಯವನ್ನು ನೆನೆದು ಅಲ್ಲ, ಭವಿಷ್ಯದ ಮೇಲೆ ನಿಯಂತ್ರಣ ಸಾಧಿಸುವ, ಬಯಸುವ ನಮ್ಮ ಮನಸ್ಥಿತಿಯಿಂದ. ಇದು ಬಹಳಷ್ಟು ಜನರ ಜೀವನದಲ್ಲಿ ಸತ್ಯ ಎಂದು ನಾನು ಭಾವಿಸುತ್ತೇನೆ ಎಂದರು.ಪ್ರತಿಯೊಬ್ಬರ ಜೀವನದಲ್ಲೂ ಕಾಡುವಂತಹ ಒಂದು…

ಮುಂದೆ ಓದಿ..
ಸುದ್ದಿ 

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ “ಎಸ್.ಎಸ್.ಎಲ್.ಸಿ. ನಂತರ ಮುಂದೇನು”? ಎಂಬ ಕಾರ್ಯಗಾರವನ್ನು ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರಿಯ ಯೂತ್ ಫೋರ್ಸ್ ಹಮ್ಮಿಕೊಂಡಿದ್ದು,ತಜ್ಞ ಸಂಪನ್ಮೂಲ ವ್ಯಕ್ತಿಗಳು ಕಾರ್ಯಗಾರವನ್ನು ನಡೆಸಿಕೊಡಲಿದ್ದಾರೆ

Taluknewsmedia.com

Taluknewsmedia.com ತುಮಕೂರು: ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರಿಯ ಯೂತ್ ಫೋರ್ಸ್ ವತಿಯಿಂದ ಎಸೆಸೆಲ್ಸಿ ನಂತರ ಮುಂದೇನು? ಎಂಬ  ಕಾರ್ಯಗಾರವನ್ನು   ದಿನಾಂಕ: 8/8/2021 ರಂದು ಸಮಯ 10 ಗಂಟೆಗೆ   ತುಮಕೂರು ನಗರದ ಹನುಮಂತಪುರದಲ್ಲಿರುವ  ಕೊಲ್ಲಾಪುರದಮ್ಮ ಸಮುದಾಯ  ಭವನದಲ್ಲಿ ಕಾರ್ಯಗಾರ    ಹಮ್ಮಿಕೊಂಡಿದ್ದು, ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳಲ್ಲಿ  ಮೂಡಿರುವ  ಗೊಂದಲ, ಅನುಮಾನಗಳಿಗೆ ಪರಿಹಾರ ನೀಡಲಿದ್ದಾರೆ. “100 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು,ಮೊದಲು ನೊಂದಾಯಿಸಿಕೊಂಡವರಿಗೆ ಆದ್ಯತೆ ನೀಡಲಾಗಿದೆ.” ಹೆಚ್ಚಿನ ಮಾಹಿತಿಗಾಗಿ:ಮಧುಸೂದನ್ ಗೂಳೇಹರವಿ: 7353832660ಡಾ. ಗೋವಿಂದು  ಕೆ ಹುಲಿಕಲ್: 9740177585 ಪ್ರವೇಶ ಉಚಿತವಾಗಿದ್ದು, ಎಲ್ಲರೂ ಮಾಸ್ಕ್ ಹಾಗೂ  ದೈಹಿಕ ಅಂತರ ಕಾಪಾಡುವುದು ಕಡ್ಡಾಯವಾಗಿದೆ.

ಮುಂದೆ ಓದಿ..
ಸುದ್ದಿ 

ಕೊರೋನದಿಂದ ಮೃತಪಟ್ಟವರ ಕುಟುಂಬಗಳಿಗೆ ಶ್ರೀ ಸಾಯಿ ಕೃಷ್ಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ 1 ಲಕ್ಷ ರೂಪಾಯಿಗಳ ಸಹಾಯಧನದ ಚೆಕ್ ಗಳನ್ನು ಸಚಿವ ಡಾ.ಕೆ. ಸುಧಾಕರ್ ವಿತರಿಸಿದರು

Taluknewsmedia.com

Taluknewsmedia.com ಚಿಕ್ಕಬಳ್ಳಾಪುರ: ವಿಧಾನಸಭಾ ಕ್ಷೇತ್ರದಲ್ಲಿ ಕೊರೋನ ಮಹಾಮಾರಿಯಿಂದ ಮೃತಪಟ್ಟವರ ಕುಟುಂಬಗಳಿಗೆ ಶ್ರೀ ಸಾಯಿ ಕೃಷ್ಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ 1 ಲಕ್ಷ ರೂಪಾಯಿಗಳ ಸಹಾಯಧನದ ಚೆಕ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಚಿವ ಡಾ.ಕೆ. ಸುಧಾಕರ್ ಮಾತನಾಡಿ ಕೊರೋನ ಮಹಾಮಾರಿಯ ಹಾವಳಿಯಿಂದ ಅನೇಕ ತಂದೆ-ತಾಯಿಗಳನ್ನು, ಮನೆಯ ಪೋಷಕರನ್ನು ಕಳೆದುಕೊಂಡ ಅನೇಕ ಕುಟುಂಬಗಳ ಪರಿಸ್ಥಿತಿ ಇಂದು ಆತಂತ್ರವಾಗಿದೆ.ಕೊರೊನಾ ಬಿಕ್ಕಟ್ಟಿನ ನಡುವೆ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಈ ಒಂದು ಲಕ್ಷ ರೂಪಾಯಿಗಳ ಸಹಾಯಧನ ನೀಡುವುದರ ಮೂಲಕ ಅನಾಥರಾಗಿರುವ ಮಕ್ಕಳ ವಿದ್ಯಾಭ್ಯಾಸ ಮುಂದುವರೆಸಲು ಮತ್ತು ಅವರ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಸಣ್ಣ ಆಸರೆಯಾಗಲಿ, ಅವರ ಬದುಕು ಕೊರೊನಾ ಕಗ್ಗತ್ತಿಲಿನಿಂದ ಹೊರಬರಲು ಈ ನೆರವು ಒಂದು ಪುಟ್ಟ ದೀವಿಗೆಯಾಗಲಿ ಎನ್ನುವುದೇ ಆಶಯ ಎಂದು ತಿಳಿಸಿದರು.

ಮುಂದೆ ಓದಿ..
ಸುದ್ದಿ 

ಕೊರೋನ ಮುಕ್ತ ಗ್ರಾಮಾಂತರ ಮಾಡಲು ಪಣತೊಟ್ಟ ಶಾಸಕ ಡಿ.ಸಿ. ಗೌರಿಶಂಕರ್.

Taluknewsmedia.com

Taluknewsmedia.com ತುಮಕೂರು: ಕೋರನ ಮೂರನೆ ಅಲೆ ಆರಂಭವಾಗುತ್ತಿದೆ ಇದರ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ತುಮಕೂರು ಗ್ರಾಮಾಂತರ ಶಾಸಕರಾದ ಡಿ.ಸಿ. ಗೌರಿಶಂಕರ್ ಬಳ್ಳಗೆರೆಯ ತಮ್ಮ ನಿವಾಸದಲ್ಲಿ ಉಚಿತವಾಗಿ 10 ಸಾವಿರ ಕೋವಿಡ್ ಶೀಲ್ಡ್ ವ್ಯಾಕ್ಸಿನೇಷನ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಲಸಿಕೆ ಪಡೆದುಕೊಂಡರು, ಸುಮಾರು 7 ರಿಂದ 8 ಸಾವಿರ ಜನಗಳಿಗೆ ವಿವಿಧ ಬಗೆಯ ಊಟದ ವ್ಯವಸ್ಥೆಯನ್ನು ಸ್ವತಃ ಶಾಸಕರೇ ಕಲ್ಪಿಸಿ, ಸುಮಾರು ಒಂದು ಎಕರೆಯಲ್ಲಿ ಶಾಮಿಯಾನ ಹಾಕಿಸಿ ವ್ಯಾಕ್ಸೀನ್ ತೆಗೆದುಕೊಳ್ಳಲು ಬಂದಂತಹ ಎಲ್ಲರಿಗೂ ಕೂರಲು ಕುರ್ಚಿಯ ವ್ಯವಸ್ಥೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದ್ದರು.ಕ್ಷೇತ್ರದ ಜನರ ಆರೋಗ್ಯ ದೃಷ್ಟಿಯಿಂದ ಲಸಿಕೆ ಅಭಿಯಾನ ಕೈಗೊಂಡಿರುವ ಶಾಸಕರ ಕಾರ್ಯಕ್ಕೆ ಸಾರ್ವಜನಿಕರು ತುಂಬು ಹೃದಯದ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದೆ ಓದಿ..