ಶಿಥಿಲಾವಸ್ಥೆ ತಲುಪಿರುವ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಎನ್. ಹೆಚ್. ಶಿವಶಂಕರ್ ರೆಡ್ಡಿ
Taluknewsmedia.comಗೌರಿಬಿದನೂರು: ತಾಲೂಕಿನ ಗುಲಗಿಂಜಲಹಳ್ಳಿ ಗ್ರಾಮದಲ್ಲಿ ಸುಮಾರು 13 ನೇ ಶತಮಾನದಲ್ಲಿ ನಿರ್ಮಾಣವಾಗಿದೆ ಎನ್ನಲಾಗುವ ಲಕ್ಷ್ಮೀ ಮತ್ತು ಈಶ್ವರನ ದೇವಾಲಯಕ್ಕೆ ಶಾಸಕ ಎನ್. ಹೆಚ್. ಶಿವಶಂಕರ್ ರೆಡ್ಡಿ ಭೇಟಿ ನೀಡಿ ಶಿಥಿಲಾವಸ್ಥೆಯಲ್ಲಿರುವ ದೇವಸ್ಥಾನವನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮೇಲ್ನೋಟಕ್ಕೆ ಈ ದೇವಾಲಯ ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿದ್ದು ಬಹುಶಃ ಚೋಳರ ಕಾಲದಲ್ಲಿ ನಿರ್ಮಾಣವಾಗಿರಬಹುದು ಎಂದು ನನ್ನ ಅಭಿಪ್ರಾಯವಾಗಿದೆ. ಸ್ಥಳದಲ್ಲಿ ಕೆಲ ಶಿಲಾ ಶಾಸನಗಳು ಲಭ್ಯವಾಗಿದ್ದು ತಜ್ಞರನ್ನು ಕರೆತಂದು ಶಾಸನಗಳನ್ನು ಪರಿಶೀಲಿಸಿದರೆ ಇದರ ಕುರಿತು ಸಂಪೂರ್ಣ ಮಾಹಿತಿ ದೊರೆಯಲಿದೆ , ತೀವ್ರತರವಾಗಿ ಶಿಥಿಲಾವಸ್ಥೆ ತಲುಪಿದ ದೇವಾಲಯವನ್ನು ಅತೀ ಶೀಘ್ರದಲ್ಲೇ ಪುನರ್ನಿರ್ಮಾಣ ಮಾಡಲಾಗುವುದು ಹಾಗೂ ನಿರ್ಮಾಣ ಮಾಡುವ ಸಮಯದಲ್ಲಿ ದೇವಾಲಯ ನಿರ್ಮಾಣ ಪೂರ್ವದಲ್ಲಿ ಯಾವ ವಾಸ್ತುಶೈಲಿಯನ್ನು ಬಳಸಲಾಗಿತ್ತೋ ಅದೆ ಮಾದರಿಯಲ್ಲಿ ದ್ರಾವಿಡ ಶೈಲಿಗೆ ಧಕ್ಕೆ ಬರದಂತೆ ಸರ್ವರ ಸಹಕಾರದಿಂದ ನಿರ್ಮಾಣ ಕಾರ್ಯಕ್ಕೆ ಮುಂದಾಗಲಿದ್ದೇನೆ ಎಂದು ತಿಳಿಸಿದರು.
ಮುಂದೆ ಓದಿ..