ಲಂಚ ಮುಕ್ತ ತುಮಕೂರನ್ನಾಗಿಸಲು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಪಣ: ಹಂದ್ರಾಳ್ ನಾಗಭೂಷಣ್
Taluknewsmedia.comತುಮಕೂರು: ಲಂಚ ಮುಕ್ತ ತುಮಕೂರನ್ನಾಗಿಸಲು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಪಣತೊಟ್ಟಿದೆ, ಸಾರ್ವಜನಿಕರಿಗೆ ಸರ್ಕಾರಿ ಕಛೇರಿಗಳಿಂದ ಸಮರ್ಪಕವಾಗಿ ಲಂಚ ಕೊಡದೆ ಸೇವೆ ಪಡೆಯುವ, ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಹೋರಾಟದ ಮೂಲಕ ಪರಿಹರಿಸುವ ಸಂಪ್ರದಾಯಕ್ಕೆ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಮುನ್ನುಡಿ ಬರೆಯುತ್ತಿದೆ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಜಿಲ್ಲಾಧ್ಯಕ್ಷರಾದ ಹಂದ್ರಾಳ್ ನಾಗಭೂಷಣ್ ಹೇಳಿದರು. ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ತುಮಕೂರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ವೇದಿಕೆ ಸದಸ್ಯರ ಸಭೆಯಲ್ಲಿ ಮಾತನಾಡಿದರು. ಬಹುತೇಕ ಸರ್ಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ, ಸಮಯಕ್ಕೆ ಸರಿಯಾಗಿ ಕೆಲಸಗಳು ಆಗುತ್ತಿಲ್ಲ. ಪದೇ ಪದೇ ಸಾರ್ವಜನಿಕರನ್ನು ಅಲೆದಾಡಿಸಲಾಗುತ್ತಿದೆ. ನೊಂದ ಜನ ನಮ್ಮ ವೇದಿಕೆಯ ಸಹಾಯವಾಣಿ 9739666909 ಸಂಪರ್ಕಿಸಿ , ನಮ್ಮ ವೇದಿಕೆ ನಿಮ್ಮ ಜೊತೆ ನಿಲ್ಲಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹಲವಾರು ಜನರು ವೇದಿಕೆಯ ಸದಸ್ಯತ್ವ ಪಡೆದುಕೊಂಡರು.ಕಾರ್ಯಕ್ರಮದಲ್ಲಿ ಜಿಲ್ಲಾ…
ಮುಂದೆ ಓದಿ..