Taluknewsmedia.comತುಮಕೂರು: ಎನ್ಇಪಿ-2020 ಹಠಾತ್ ಹೇರಿಕೆಯ ವಿರುದ್ಧವಾಗಿ ಬಿ. ಎಸ್. ಎನ್. ಎಲ್ ಕಚೇರಿ ಮುಂಭಾಗ AIDSO ಸಂಘಟನೆಯು ಪ್ರತಿಭಟನೆ ನಡೆಸಿತು. ಈ ಸಂದರ್ಭದಲ್ಲಿ ಹೋರಾಟವನ್ನು ಉದ್ದೇಶಿಸಿ ಮಾತನಾಡಿದ AIDSO ಸಂಘಟನೆಯ ತುಮಕೂರು ಜಿಲ್ಲಾ ಅಧ್ಯಕ್ಷರಾದ ಅಶ್ವಿನಿ ಅವರು ಈ ಶೈಕ್ಷಣಿಕ ವರ್ಷದಿಂದ ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಅನುಷ್ಠಾನಗೊಳಸಿದೆ. ರಾಜ್ಯದ ಶಿಕ್ಷಣ ತಜ್ಞರು, ಉಪನ್ಯಾಸಕರು, ಶಿಕ್ಷಕರು ಹಾಗು ವಿದ್ಯಾರ್ಥಿಗಳ ವ್ಯಾಪಕ ವಿರೋಧದ ನಡುವೆಯೂ, ರಾಜ್ಯ ಸರ್ಕಾರ ಅಪ್ರಜಾತಾಂತ್ರಿಕವಾಗಿ ಮತ್ತು ಅತ್ಯಂತ ತರಾತುರಿಯಲ್ಲಿ ಎನ್ಇಪಿ-2020 ಅನ್ನು ಜಾರಿಗೊಳಿಸಿದೆ. ಜನತೆಯ, ಶಿಕ್ಷಕ ವರ್ಗದ ಮತ್ತು ವಿದ್ಯಾರ್ಥಿಗಳ ವ್ಯಾಪಕ ವಿರೋಧಕ್ಕೆ ಕಾರಣಗಳೇನು? ಆತುರದ ಹೇರಿಕೆಯು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕ ತರಲಿದೆ.ನಾಲ್ಕು ವರ್ಷದ ಪದವಿ ಕೋರ್ಸಿನಲ್ಲಿ ಉಂಟಾಗಿರುವ ಗೊಂದಲಗಳು ಇದಕ್ಕೆ ಸಾಕ್ಷಿಯಾಗಿದೆ ಎಂದರು. ಈಗಾಗಲೆ ಪ್ರಥಮ ಡಿಗ್ರಿ, ಪ್ರಸ್ತುತ ಶೈಕ್ಷಣಿಕ ವರ್ಷದಿಂದ ನಾಲ್ಕು ವರ್ಷದ ಪದವಿ ಕೋರ್ಸ್ ತರಗತಿಗಳು ಆರಂಭವಾಗಿ, ಇನ್ನೇನು…
ಮುಂದೆ ಓದಿ..