ಪರಿಸರ ಸ್ವಚ್ಛತೆಗೆ ಪೌರಕಾರ್ಮಿಕರ ಕೊಡುಗೆ ಅನನ್ಯ: ಅಜಾದ್ ಸ್ವಯಂ ಸೇವಾ ಫೌಂಡೇಶನ್
Taluknewsmedia.comಆನೇಕಲ್ : ನಗರದ ಸ್ವಚ್ಛತೆ ಕಾಪಾಡುವಲ್ಲಿ ಪೌರ ಕಾರ್ಮಿಕರ ಸೇವೆ ಅನನ್ಯ. ಅವರ ಅವಿರತ ಶ್ರಮದ ಸೇವೆಗೆ ಪ್ರೋತ್ಸಾಹ ನೀಡುವ ಮೂಲಕ ಅವರ ಕೆಲಸವನ್ನು ಶ್ಲಾಘಿಸಬೇಕು ಎಂದು ಅಜಾದ್ ಸ್ವಯಂ ಸೇವಾ ಫೌಂಡೇಶನ್ ಪದಾಧಿಕಾರಿಗಳಾದ ಆನೇಕಲ್ ರವಿ ರವರು ಅಭಿಪ್ರಾಯಪಟ್ಟರು. ಅಜಾದ್ ಸ್ವಯಂ ಸೇವಾ ಫೌಂಡೇಶನ್ ನ ವತಿಯಿಂದ ಜನವರಿ 26ರ ಬುಧವಾರ ಆನೇಕಲ್ ಪಟ್ಟಣದ ಶ್ರೀ ತಿಮ್ಮರಾಯಸ್ವಾಮಿ ಪ್ರೌಢಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 73ನೇ ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ಪೌರಕಾರ್ಮಿಕರಿಗೆ ಸನ್ಮಾನ ಮಾಡುವ ಮೂಲಕ ವಿಭಿನ್ನವಾಗಿ ಬುಧವಾರ ಆಚರಣೆ ಮಾಡಲಾಯಿತು. ನಿತ್ಯ ನಗರ ಸ್ವಚ್ಚವಾಗಿರಬೇಕೆಂದರೇ ಪೌರ ಕಾರ್ಮಿಕರ ಮನಸ್ಸು ಕೂಡ ಸಂತೋಷವಾಗಿರಬೇಕಾಗುತ್ತದೆ. ಅಂತಹ ವಾತಾವರಣ ಕಲ್ಪಿಸುವ ಜವಬ್ದಾರಿ ನಮಗೂ ಕೂಡ ಇದೆ. ಒಂದೊಮ್ಮೆ ಸ್ವಚ್ಚತೆಯೇ ನಡೆಯದಿದ್ದಲ್ಲಿ ನಗರ ಹೇಗಿರಬಹುದು ಎಂದು ಕಲ್ಪನೆಯೂ ಮಾಡಲು ಸಾಧ್ಯವಿಲ್ಲ ಎಂದು ಆನೇಕಲ್ ನರೇಶ್ ರವರು ಹೇಳಿದರು. ಸ್ವಚ್ಚತೆ ಇರುವ ಕಡೆ ದೇವರು ಇರುತ್ತಾನೆ.…
ಮುಂದೆ ಓದಿ..