ಅಖಿಲ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಸಂಸ್ಥಾಪಕರಾದ ಪ್ರೊಫೆಸರ್ ಸಿಎಸ್ ನಿಲುಗಲ್ ನಿಧನ.
Taluknewsmedia.comಅಖಿಲ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಸಂಸ್ಥಾಪಕರಾದ ಪ್ರೊಫೆಸರ್ ಸಿಎಸ್ ನಿಲುಗಲ್ ಅವರು ಬೆಂಗಳೂರಿನ ವಿಜಯನಗರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ ಎಂದು ತಿಳಿಸಲು ವಿಷಾದವೆನಿಸುತ್ತದೆ. ಮೃತರು ಎಸ್ ಆರ್ ಎನ್ ಅಭಿಮಾನಿ ಬಳಗದ ಮುಖಂಡರಾದ ಮಹಾಂತೇಶ ಹಳ್ಳೂರ ಅವರ ದೊಡ್ಡಪ್ಪನವರು.ಮೃತರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಪಂಚಮಸಾಲಿ ಸಮುದಾಯವನ್ನು ಸಂಘಟಿಸಿ ನಾಡಿನಾದ್ಯಂತ ಹೆಸರುವಾಸಿಯಾಗಿದ್ದರು.ಅವರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಆ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ.ಹಿರಿಯ ಚೇತನಕ್ಕೆ ಭಾವಪೂರ್ಣ ಗೌರವದ ನಮನಗಳು.ಎಸ್ ಆರ್ ನವಲಿಹಿರೇಮಠ ಸಂಸ್ಥಾಪಕ ಅಧ್ಯಕ್ಷರು, ಎಸ್ ಆರ್ ಎನ್ ಈ ಫೌಂಡೇಶನ್ ಇಳಕಲ್ ಹುನಗುಂದ.
ಮುಂದೆ ಓದಿ..