ಸುದ್ದಿ 

ಭಾಷೆಯ ಮೂಲ ಉದ್ದೇಶ ಸಂವಹನವಾಗಿದೆ: ಪ್ರೊ. ತಮಿಳ್ ಸೆಲ್ವಂ

Taluknewsmedia.com

ತುಮಕೂರು: ಇಂದಿನ ದಿನಗಳಲ್ಲಿ ಇಂಗ್ಲೀಷ್ ಬಲ್ಲವನಾಗಿದ್ದರೆ ಮಾತ್ರ ಬೆಲೆ ಎಂಬoತಾಗಿದೆ. ಆದರೆ ಭಾಷೆ ಎಂಬುದು ಕೇವಲ ಸಂವಹನ ಮಾಧ್ಯಮವಾಗಿದ್ದು, ಭಾಷೆಯ ಮೂಲ ಉದ್ದೇಶವೇ ಸಂವಹನವಾಗಿದೆ ಎಂದು ಚೆನೈ ಮದ್ರಾಸ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ತಮಿಳ್ ಸೆಲ್ವಂ ಅಭಿಪ್ರಾಯ ಪಟ್ಟರು.

ತುಮಕೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಪೀಠ ಹಾಗೂ ಕನ್ನಡ ವಿಭಾಗ, ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕನ್ನಡ ಕಾವ್ಯ: ತ್ಯಾಗ ಭೋಗ ಸಮನ್ವಯ ದೃಷ್ಟಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾತನಾಡಿ ಭಾಷಾವಾರು ಪ್ರಾಂತ್ಯಗಳನ್ನು ರೂಪಿಸುವಲ್ಲಿ ಕನ್ನಡಿಗರ ಹೋರಾಟ ಅತಿದೊಡ್ಡದು. ಇಡೀ ವಿಶ್ವದಲ್ಲಿ ಭಾಷೆಯ ಕುರಿತಾಗಿ ದಿನಾಚರಣೆಯನ್ನು ಉತ್ಸವದ ರೀತಿಯಲ್ಲಿ ಆಚರಿಸುವ ಏಕೈಕ ಭಾಷೆ ಕನ್ನಡ. 5 ಭಾಷೆಗಳು ಮಾತ್ರ ದ್ರಾವಿಡಭಾಷೆಗಳಲ್ಲ. ಇವುಗಳನ್ನು ಹೊರತುಪಡಿಸಿ ತುಳು, ಲಂಬಾಣಿ, ಹಾಗಯೇ ಆದಿವಾಸಿಭಾಷೆಗಳು ಸಹ ದ್ರಾವಿಡ ಭಾಷೆಗಳಿವೆ. ಕನ್ನಡ ಭಾಷೆ 2000 ವರ್ಷಗಳ ಸಾಹಿತ್ಯ ಶ್ರೀಮಂತಿಕೆಯನ್ನು ಹೊಂದಿದೆ ಎಂಬುದು ಅಧಿಕೃತ ದಾಖಲೆಗಳ ಮೂಲಕ ಸಾಬೀತಾಗುತ್ತದೆ. ಆದರೆ ಅದಕ್ಕೂ ಮುಂಚಿನಿಂದಲೂ ಕನ್ನಡವನ್ನು ಆಡುಭಾಷೆಯಾಗಿ ಬಳಸಲಾಗುತ್ತಿತ್ತು ಆದರೆ ಕೇವಲ ವ್ಯವಹಾರಿಕ ಹಾಗೆ ದಾಖಲೆಯಉದ್ದೇಶದಿಂದ ಆಡು ಭಾಷೆಗೆ ಲಿಖಿತ ರೂಪ ನೀಡಲಾಗಿದೆ ಎಂದರು. ಕನ್ನಡ ಭಾಷೆ ಕುರಿತಾದ ದಾಖಲೆ ಕರ್ನಾಟಕದಲ್ಲಿ ಮಾತ್ರವಲ್ಲ ದೂರದ ಈಜಿಪ್ಟ್ ದೇಶದಲ್ಲಿ ನಿರ್ಮಿಸಲಾದ ಗೋಡೆಗಳ ಮೇಲೆಯೂ ಕನ್ನಡದ ಅಕ್ಷರಗಳನ್ನು ನಾವುಕಾಣಬಹುದಾಗಿದೆ. ಈ ಮೂಲಕವಾಗಿ ಕನ್ನಡ ಭಾಷೆಯು ಗತವೈಭವವನ್ನು ತಿಳಿಯಬಹುದು. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆಯಲು ಕನ್ನಡ ಭಾಷೆ ಸೇರಿದಂತೆ ತಮಿಳು ತೆಲುಗು ಮಲಯಾಳಂ ಭಾಷೆಗಳಲ್ಲಿ ಕನ್ನಡದ ಕುರಿತಾದ ಅನೇಕ ಉಲ್ಲೇಖಗಳ ಮೂಲಕವಾಗಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತಿದೆ ಎಂದು ತಿಳಿಸಿದರು.

ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ನಿರ್ಮಲ್ ರಾಜು ಮಾತನಾಡಿ ವಿದ್ಯಾರ್ಥಿಗಳೇ ಮುಂದೆಬಂದು ಕನ್ನಡ ದಿನಾಚರಣೆಯನ್ನು ಆಚರಿಸುತ್ತಿರುವುದು ನಿಜಕ್ಕೂ ವಿದ್ಯಾರ್ಥಿಗಳಲ್ಲಿ ಕನ್ನಡದ ಕುರಿತ ಪ್ರೀತಿ ಹೆಚ್ಚುತ್ತಿರುವುದನ್ನು ಕಾಣಬಹುದು ಎಂದರು.

ಕಾರ್ಯಕ್ರಮದಲ್ಲಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಶೇಟ್ ಪ್ರಕಾಶ್ ಎಮ್, ಕುವೆಂಪು ಅಧ್ಯಯನ ಪೀಠ ಸಂಯೋಜಕರಾದ ಡಾ. ಗೀತಾ ವಸಂತ, ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

Leave a Comment