ಬಳ್ಳಾರಿ ನಗರಾಭಿವೃದ್ಧಿ: ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಬೈರತಿ ಸುರೇಶ್ ತಿಂಗಳ ಗಡುವು, ಕಲುಷಿತ ನೀರಿಗೆ ಕಟ್ಟುನಿಟ್ಟು ಕ್ರಮ
ಬಳ್ಳಾರಿ ನಗರಾಭಿವೃದ್ಧಿ: ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಬೈರತಿ ಸುರೇಶ್ ತಿಂಗಳ ಗಡುವು, ಕಲುಷಿತ ನೀರಿಗೆ ಕಟ್ಟುನಿಟ್ಟು ಕ್ರಮ
ಬಳ್ಳಾರಿ: ಗಣಿನಾಡಿನ ಬಳ್ಳಾರಿ ನಗರದಲ್ಲಿ ಪಾರ್ಕ್‌ಗಳು, ರಸ್ತೆಗಳು ಮತ್ತು ಸರ್ಕಾರಿ ಜಾಗಗಳ ಮೇಲೆ ನಡೆಯುತ್ತಿರುವ ಅಕ್ರಮ ಒತ್ತುವರಿಗಳು ಸಾರ್ವಜನಿಕರಿಗೆ ಅನೇಕ ತೊಂದರೆಗಳನ್ನು ಸೃಷ್ಟಿಸುತ್ತಿವೆ. ಈ ಹಿನ್ನೆಲೆಯಲ್ಲಿ, ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಬೈರತಿ ಸುರೇಶ್ ಅಧಿಕಾರಿಗಳಿಗೆ ಕಠಿಣ ಸೂಚನೆ ನೀಡಿ, ಒಂದು ತಿಂಗಳೊಳಗಾಗಿ ಎಲ್ಲ ರೀತಿಯ ಸರ್ಕಾರಿ ಜಾಗದ ಒತ್ತುವರಿಗಳನ್ನು ತೆರವುಗೊಳಿಸುವಂತೆ ಆದೇಶಿಸಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ನಗರಾಭಿವೃದ್ಧಿ ಪ್ರಗತಿ ವಿಮರ್ಶಾ ಸಭೆಯ ನಂತರ ಸಚಿವರು ಮಾಧ್ಯಮಗಳೊಂದಿಗೆ ಮಾತನಾಡಿದರು. ನಗರದ ವಿವಿಧ ಭಾಗಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿರುವ ಅಕ್ರಮ ನಿರ್ಮಾಣಗಳು ಮತ್ತು ಜಾಗವ್ಯಾಪನೆ ಪ್ರಕರಣಗಳನ್ನು ತ್ವರಿತವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸರ್ಕಾರಿ ಜಾಗ ಒತ್ತುವರಿ ತೆರವಿಗೆ ತಿಂಗಳ ಗಡುವು
ಕಲುಷಿತ ನೀರು ಪೂರೈಸಿದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ತೆರಿಗೆ ವಸೂಲಾತಿ ಹೆಚ್ಚಿಸಲು ಅಧಿಕಾರಿಗಳಿಗೆ ಖಡಕ್ ಸೂಚನೆ
ಉದ್ಯಾನಗಳು ಹಾಗೂ ಕೆರೆಗಳ ಪುನಶ್ಚೇತನಕ್ಕೆ ಆದೇಶ
ವಾರ್ಡ್ ಮಟ್ಟದಲ್ಲಿ ಅಧಿಕಾರಿಗಳ ನೇರ ಭೇಟಿ ಕಡ್ಡಾಯ ಸರ್ಕಾರಿ ಜಾಗ ರಕ್ಷಣೆಗೆ ಕಠಿಣ ನಿರ್ದೇಶನ..
ಸರ್ಕಾರಿ ಆಸ್ತಿಯನ್ನು ಭೂಮಾಫಿಯಾಗಳಿಂದ ಮುಕ್ತಗೊಳಿಸಲು ನ್ಯಾಯಾಲಯಗಳಲ್ಲಿ ಬಲವಾದ ವಾದ ಮಂಡನೆ ಅಗತ್ಯವಿರುವುದರಿಂದ, ಅನುಭವಜ್ಞ ವಕೀಲರನ್ನು ನಿಯೋಜಿಸುವಂತೆ ಬೈರತಿ ಸುರೇಶ್ ಸಲಹೆ ನೀಡಿದರು. ಕಲುಷಿತ ನೀರಿನ ಪೂರೈಕೆ ಕಂಡುಬಂದರೆ ಕಠಿಣ ಕ್ರಮ ನಾಗರಿಕರಿಗೆ ಪರಿಶುದ್ಧ ಕುಡಿಯುವ ನೀರು ಪೂರೈಕೆಯಾಗುವುದು ಸರ್ಕಾರದ ಆದ್ಯತೆ ಎಂದು ಸಚಿವರು ಸ್ಪಷ್ಟಪಡಿಸಿದ್ದು, ಕಲುಷಿತ ನೀರು ಪೂರೈಸುವ ಘಟನೆ ನಡೆದರೆ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ಕ್ರಮ ಜರುಗಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ವಾಣಿಜ್ಯ ಕಟ್ಟಡಗಳು ಮತ್ತು ತೆರಿಗೆ ಬಾಕಿದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು, ವಾಣಿಜ್ಯ ಕಟ್ಟಡಗಳಿಂದ ತೆರಿಗೆ ಸಂಗ್ರಹಣೆ ಕಟ್ಟುನಿಟ್ಟಾಗಿ ಮಾಡಬೇಕು
ಬಾಕಿದಾರರ ವಿರುದ್ಧ ದಂಡಾತ್ಮಕ ಕ್ರಮ ಕೈಗೊಳ್ಳಬೇಕು
ಪರವಾನಗಿ ಮತ್ತು ಅನುಮತಿಗಳನ್ನು ವೇಗವಾಗಿ ನೀಡಬೇಕು ಎಂದು ಸೂಚಿಸಲಾಯಿತು. ಅಮೃತ್ 2.0 ಯೋಜನೆಯಡಿ ಬಳ್ಳಾರಿ ನಗರದ ಉದ್ಯಾನಗಳು, ಕೆರೆಗಳು ಮತ್ತು ಸಾರ್ವಜನಿಕ ಸ್ಥಳಗಳ ಸುಧಾರಣೆಗೆ ಕ್ರಮ ಕೈಗೊಳ್ಳಲು ಸಚಿವರು ಸೂಚನೆ ನೀಡಿದರು.
ಇ-ಖಾತಾ ಯೋಜನೆಯನ್ನು ಇನ್ನಷ್ಟು ವ್ಯಾಪಕವಾಗಿ ಜನರಿಗೆ ತಲುಪಿಸುವ ಅಗತ್ಯವಿದೆ ಎಂದರು.
ಪ್ರತಿ ಅಧಿಕಾರಿಯೂ ತಮ್ಮ ವ್ಯಾಪ್ತಿಯ ವಾರ್ಡ್‌ಗಳಿಗೆ ಭೇಟಿ ನೀಡಿ, ಜನರ ದೂರುಗಳನ್ನು ಆಲಿಸಿ
ಸ್ಥಳದಲ್ಲೇ ಪರಿಹಾರ ಹುಡುಕುವಂತೆ ಸಚಿವರು ಸ್ಪಷ್ಟ ಸೂಚನೆ ನೀಡಿದರು. ವಾರ್ಡ್‌ಭೇಟಿ ವಿವರಗಳನ್ನು ಹಂಚಿಕೊಳ್ಳಲು ಆಯುಕ್ತರೊಂದಿಗೆ ವಾಟ್ಸಪ್ ಗ್ರೂಪ್ ನಿರ್ಮಿಸಲು ಸೂಚಿಸಲಾಯಿತು.

