ಸುದ್ದಿ 

ಬೆಂಗಳೂರು ದುರಂತ: ಗೀಸರ್‌ ಗ್ಯಾಸ್‌ ಸೋರಿಕೆಯಿಂದ ತಾಯಿ–ಮಗುವಿನ ದುರ್ಮರಣ

Taluknewsmedia.com

ಬೆಂಗಳೂರು ದುರಂತ: ಗೀಸರ್‌ ಗ್ಯಾಸ್‌ ಸೋರಿಕೆಯಿಂದ ತಾಯಿ–ಮಗುವಿನ ದುರ್ಮರಣ

ಬೆಂಗಳೂರಿನ ಗೋವಿಂದರಾಜನಗರದ ಪಂಚಶೀಲ ನಗರದಲ್ಲಿ ಗೀಸರ್‌ನಿಂದ ಗ್ಯಾಸ್‌ ಸೋರಿಕೆಯಾಗಿದ್ದು, ತಾಯಿ ಹಾಗೂ ಮಗುವಿನ ಪ್ರಾಣ ಕಳೆದುಕೊಂಡ ದಾರುಣ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿದ್ದ ಗ್ಯಾಸ್‌ ಲೀಕ್‌ ಮಧ್ಯಾಹ್ನ ಸ್ನಾನಕ್ಕೆ ಹೋದಾಗ ಚಾಂದಿನಿ (26) ಮತ್ತು ನಾಲ್ಕು ವರ್ಷದ ಯುವಿ ಅಸ್ವಸ್ಥರಾಗಿದ್ದರು.

ಅಸ್ವಸ್ಥರಾಗಿ ಬಿದ್ದಿದ್ದ ತಾಯಿ–ಮಗುವನ್ನು ಸ್ಥಳೀಯರು ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆಗೆ ಸ್ಪಂದಿಸದೇ ಇಬ್ಬರೂ ಅಂತಿಮ ನಿಶ್ವಾಸ ಬಿಟ್ಟಿದ್ದಾರೆ. ಕಾರ್ಪೆಂಟರ್‌ ಉದ್ಯೋಗ ಮಾಡುತ್ತಿದ್ದ ಚಾಂದಿನಿಯ ಪತಿ ಕಿರಣ್ ಕೆಲಸದಲ್ಲಿದ್ದ ವೇಳೆ ಈ ಘಟನೆ ನಡೆದಿದೆ.

ಘಟನೆ ಕುರಿತು ತಿಳಿಯುತ್ತಿದ್ದಂತೆಯೇ ಗೋವಿಂದರಾಜನಗರ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ತಾಯಿ ಮತ್ತು ಮಗುವಿನ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರುವುದಾಗಿ ತಿಳಿದು ಬಂದಿದೆ.

Related posts