ರಾಜ್ಯದಲ್ಲಿ ಮತ್ತೊಂದು ಜಿಲೆಟಿನ್ ಸ್ಪೋಟ: ಸ್ಪೋಟದ ತೀವ್ರತೆಗೆ 6 ಜನ ಬಲಿ.

Taluknewsmedia.com

ಚಿಕ್ಕಬಳ್ಳಾಪುರ: ಇತ್ತೀಚೆಗೆ ಸಂಭವಿಸಿದ ಜಿಲೇಟಿನ್ ಸ್ಫೋಟಗಳು ಮಾಸುವ ಮುನ್ನವೇ ಅದೇ ರೀತಿಯ ಬಹುದೊಡ್ಡ ಜಿಲೇಟಿನ್ ಸ್ಪೋಟ ಜಿಲ್ಲೆಯ ಹಿರೇನಾಗವಲ್ಲಿ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದೆ.
ಸ್ಫೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಸ್ಫೋಟದ ತೀವ್ರತೆಗೆ ದೇಹಗಳು ಛಿದ್ರ ಛಿದ್ರವಾಗಿವೆ.
ಮೃತ  ವ್ಯಕ್ತಿಗಳನ್ನು  ವಾಚ್ ಮನ್ ಮಹೇಶ್, ಸ್ಥಳೀಯ ನಿವಾಸಿ ರಾಮ, ಕಂಪ್ಯೂಟರ್ ಆಪರೇಟರ್ ಗಳಾದ ಮುರುಳಿ, ಅಭಿ, ಗಂಗಾಧರ್ ಎಂದು ಗುರುತಿಸಲಾಗಿದೆ.
ಈ ಘಟನೆ ಸಂಭವಿಸಿದ ಜಾಗದಲ್ಲಿದ್ದ ಟಾಟಾ ಎಸಿ ಚಾಲಕ ರಿಯಾಜ್ ಎಂಬಾತನಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಆತನನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಜಿಲೆಟಿನ್  ಸ್ಫೋಟದ ಕುರಿತು ಮಾತನಾಡಿದ ಚಿಕ್ಕಬಳ್ಳಾಪುರ ಎಸ್ಪಿ ಮಿಥುನ್ ಕುಮಾರ್ ಶಿವಮೊಗ್ಗ ಸ್ಫೋಟದ ಬಳಿಕ ಎಲ್ಲ ರೀತಿಯ ಅಕ್ರಮ ಜಿಲೆಟಿನ್ ಗಳನ್ನು ಮುಚ್ಚಿ ಸಲಾಗಿತ್ತು ಆದರೆ ಇವರುಗಳು ಎಲ್ಲಿಂದ ಜಿಲೇಟಿನ್ ತಂದಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಘಟನೆ ನಡೆದ ಸ್ಥಳಕ್ಕೆ ಸಚಿವ ಸುಧಾಕರ್ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಭೇಟಿ ನೀಡಿದ್ದು ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.
ಈ  ಘಟನೆ  ಸಂಬಂಧವಾಗಿ ಗಂಗೋಜಿ ರಾವ್  ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ರಾಜ್ಯದಲ್ಲಿ ಮತ್ತೊಂದು ಜಿಲೇಟಿನ್ ಸ್ಪೋಟ 6 ಮಂದಿ ದುರ್ಮರಣ

Related posts

Leave a Comment