ಸುದ್ದಿ 

ಫೆ.28 ಕ್ಕೆ ವೀರಭದ್ರ ಸ್ವಾಮಿಯ ಜಾತ್ರಾ ಮಹೋತ್ಸವ ಮತ್ತು ಅಗ್ನಿಕುಂಡ…

Taluknewsmedia.com

ತುಮಕೂರು: ನಗರದ ಮೇಳೆಕೋಟೆ ರಸ್ತೆಯಲ್ಲಿ ಬರುವ ಶ್ರೀ ವೀರಭದ್ರಸ್ವಾಮಿ ಟ್ರಸ್ಟ್ ನ ವತಿಯಿಂದ ಫೆಬ್ರವರಿ 28 ರಿಂದ ಮಾರ್ಚ್ 2ರವರೆಗೆ 25ನೇ ವರ್ಷದ ವೀರಭದ್ರ ಸ್ವಾಮಿಯ ಅಗ್ನಿಕುಂಡ,ಆರತಿ, ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮ ಜರುಗಲಿದೆ.

ಫೆ. 28ರಂದು ಬೆಳಗ್ಗೆ 10 ಗಂಟೆಗೆ ಸ್ವಾಮಿಗೆ ರುದ್ರಾಭಿಷೇಕ, ಧ್ವಜಾರೋಹಣ ಮತ್ತು ಮಹಾಮಂಗಳಾರತಿ, 11ಗಂಟೆಗೆ ವೈಭವೋಪೂರಿತ ಕನ್ನಡ ರಾಜ್ಯೋತ್ಸವ ಹಾಗೂ ಪ್ರಸಾದ ವಿನಿಯೋಗ, ಮಾರ್ಚ್ 1 ರಂದು ಬೆಳಗ್ಗೆ 6 ಗಂಟೆಗೆ ರುದ್ರಾಭಿಷೇಕ ನಂತರ ರುದ್ರಯಾಗ, 11ಗಂಟೆಗೆ ಪೂರ್ಣಾಹುತಿ, ಅಷ್ಟೋತ್ತರ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಂತರ ಸಂಜೆ 5.30ಕ್ಕೆ ಗಂಗಾಪೂಜೆ, ಸಂಜೆ 7 ಗಂಟೆಗೆ ಶಂಕರ್ ಮೆಲೋಡಿಸ್ ಅವರಿಂದ ಆರ್ಕೆಸ್ಟ್ರಾ ಕಾರ್ಯಕ್ರಮ, ರಾತ್ರಿ 10:30 ಅಗ್ನಿಕುಂಡ ತದನಂತರ ಪ್ರಸಾದ ವಿನಿಯೋಗ ಕಾರ್ಯಕ್ರಮ, ಮಾರ್ಚ್ 02 ರಂದು ಬೆಳಗ್ಗೆ 3.30 ಗಂಟೆಗೆ ಸ್ವಾಮಿಯ ಪ್ರಕಾರೋತ್ಸವ, ಬಲಿಪೂಜೆ. 5.30 ರಿಂದ 6.30 ಕ್ಕೆ ಅಗ್ನಿ ಕೊಂಡೋತ್ಸವ ನಂತರ ಮಹಾಮಂಗಳಾರತಿ ಕಾರ್ಯಕ್ರಮ ಜರುಗಲಿದೆ.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ತುಮಕೂರು ನಗರ ಶಾಸಕರಾದ ಬಿ.ಜ್ಯೋತಿ ಗಣೇಶ್, ತುಮಕೂರು ಮಹಾನಗರ ಪಾಲಿಕೆ ಮೇಯರ್ ಫರೀದಾ ಬೇಗಂ, ಸಬ್ ಇನ್ಸ್ಪೆಕ್ಟರ್ ನವೀನ್, ಸಿ.ಪಿ.ಐ.ಮುನಿರಾಜು, ಲೆಕ್ಕ ಪರಿಶೋಧಕರಾದ ಸುರೇಶ್, ಪಾಲಿಕೆ ಸದಸ್ಯರಾದ ಮನುಕುಮಾರ್ ಮತ್ತಿತರರು ಆಗಮಿಸಲಿದ್ದಾರೆ.

Related posts

Leave a Comment