ಸುದ್ದಿ 

ಜಿಂಕೆ ಮೇಲೆ ನಾಯಿ ದಾಳಿ ನರಳಿ ನರಳಿ ಜೀವ ಬಿಟ್ಟ ಜಿಂಕೆ

Taluknewsmedia.com

ಚಿಕ್ಕಮಗಳೂರು : ಕಾಡಿನಿಂದ ನಾಡಿಗೆ ಬಂದ ಜಿಂಕೆ ಮೇಲೆ ನಾಯಿ ಹಿಂಡು ದಾಳಿ ನಡೆಸಿವೆ. ಸಾವು ಬದುಕಿನ ನಡುವೆ ಹೋರಾಟ ನಡೆಸಿ ಕೊನೆಗೆ ಜಿಂಕೆ ಕೊನೆಯುಸಿರು ಎಳೆದಿದೆ.
ಜಿಂಕೆ ಮೇಲೆ ದಾಳಿ ಮಾಡುವ ನಾಯಿಗಳ ಪೋಟೋ ಅಸ್ವಸ್ಥಗೊಂಡ ಜಿಂಕೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿಕ್ಕಿಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಉಗ್ಗೇಹಳ್ಳಿ ಗ್ರಾಮಕ್ಕೆ ಜಿಂಕೆಯೊಂದು ಬಂದಿತ್ತು. ಜಿಂಕೆ ನೋಡಿದ ನಾಯಿಗಳು ದಾಳಿ ಮಾಡಿವೆ.‌ ತೀವ್ರ ಅಸ್ವಸ್ಥಗೊಂಡ ಜಿಂಕೆ ನರಳಿ, ನರಳಿ ಜೀವ ಬಿಟ್ಟಿದೆ. ಸ್ಥಳೀಯ ಪ್ರಾಣಿ ಪ್ರಿಯರು ಕೊನೆ ಕ್ಷಣದಲ್ಲಿ ಪಶು ಆಸ್ಪತ್ರೆಗೆ ದಾಖಲಿಸಿದರೂ ಜಿಂಕೆಯ ಪ್ರಾಣ ಉಳಿಸಲು ಸಾಧ್ಯವಾಗಿಲಿಲ್ಲ, ಸಾವನಪ್ಪಿದ ಜಿಂಕೆಯನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

Related posts

Leave a Comment