ರಾಜಕೀಯ ಸುದ್ದಿ 

ತುಮಕೂರು ಮಹಾನಗರ ಪಾಲಿಕೆ ಚುಕ್ಕಾಣಿ ಹಿಡಿದ ಬಿಜೆಪಿ: ಹನ್ನೊಂದು ವರ್ಷಗಳಗಳ ಬಳಿಕ ಬಿಜೆಪಿಗೆ ಒಲಿದ ಮೇಯರ್ ಪಟ್ಟ.

Taluknewsmedia.com

ತುಮಕೂರು: ಸತತ 11 ವರ್ಷಗಳ ಬಳಿಕ ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಪಟ್ಟಕ್ಕೆ ಬಿಜೆಪಿ ಬೆಂಬಲಿತ
ಬಿ. ಜಿ. ಕೃಷ್ಣಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜೆಡಿಎಸ್ ಬೆಂಬಲಿತ ನಾಜಿಮಾ ಇಸ್ಮಾಯಿಲ್ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ತುಮಕೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮಿಸಲಿದ್ದಿದ್ದರಿಂದ ಪಾಲಿಕೆಯ 35 ಸದಸ್ಯರ ಪೈಕಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಏಕೈಕ ವ್ಯಕ್ತಿ ಕೃಷ್ಣಪ್ಪ ನವರಾಗಿದ್ದರಿಂದ ಸುಗಮವಾಗಿ ಮೇಯರ್ ಪಟ್ಟ ದಕ್ಕಿದೆ.
ಇನ್ನು ಉಪಮೇಯರ್ ಸ್ಥಾನಕ್ಕೆ ಪಾಲಿಕೆಯ 29ನೇ ವಾರ್ಡ್ ನ ನಾಜಿಮ ಇಸ್ಮಾಯಿಲ್ ಆಯ್ಕೆಯಾಗಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ತುಮಕೂರು ನಗರ ಶಾಸಕರಾದ ಬಿ.ಜ್ಯೋತಿ ಗಣೇಶ್ ಸತತ 11 ವರ್ಷಗಳ ಬಳಿಕ ಬಿಜೆಪಿ ಪಕ್ಷಕ್ಕೆ ಮೇಯರ್ ಪಟ್ಟ ದೊರೆತಿದೆ ಈ ವಿಚಾರ ನಮ್ಮೆಲ್ಲಾ ಬಿಜೆಪಿ ಮುಖಂಡರಿಗೆ ಬಿಜೆಪಿ ಕಾರ್ಯಕರ್ತರಿಗೆ ಸಂತಸ ತಂದಿದೆ ಎಂದು ತಿಳಿಸಿದರು.

ವರದಿ: ವರುಣ್ ಜಿ.ಜೆ.

Related posts

Leave a Comment