ಸುದ್ದಿ 

ವಿವಿ ಪರೀಕ್ಷೆ ಮುಂದೂಡುವಂತೆ ಎಬಿವಿಪಿ ಪ್ರತಿಭಟನೆ…

Taluknewsmedia.com

ತುಮಕೂರು: ತುಮಕೂರು ವಿವಿ ಮುಂಭಾಗ ಎಬಿವಿಪಿ ನೇತೃತ್ವದಲ್ಲಿ ಸಮಾವೇಶಗೊಂಡಿದ್ದ ನೂರಾರು ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿದರು.

ತುಮಕೂರು ವಿಶ್ವವಿದ್ಯಾನಿಲಯ ಹೊರಡಿಸಿರುವ ಪರೀಕ್ಷಾ ವೇಳಾಪಟ್ಟಿಯಲ್ಲಿ ಪ್ರಥಮ ಹಾಗೂ ಮೂರನೇ ಸೆಮಿಸ್ಟರ್ ಪರೀಕ್ಷೆಗಳನ್ನು ತರಾತುರಿಯಲ್ಲಿ ಘೋಷಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಇನ್ನು ಸಹ ಪೂರ್ಣಪ್ರಮಾಣದಲ್ಲಿ ಪಠ್ಯ ಬೋಧನೆಯಾಗಿಲ್ಲ ಹಾಗೂ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಓದಿಕೊಳ್ಳಲು ಸಮಯ ನೀಡಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಎಬಿವಿಪಿ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ್ ಮಾತನಾಡಿ ಮಾರ್ಚ್ 18ರಿಂದ ಪರೀಕ್ಷೆ ನಡೆಸಲು ಆದೇಶ ಹೊರಡಿಸಿರುವುದು ವಿದ್ಯಾರ್ಥಿಗಳಿಗೆ ಗೊಂದಲ ಉಂಟುಮಾಡಿದೆ. ಆದ್ದರಿಂದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಏಪ್ರಿಲ್ ಒಂದರಿಂದ ಪರೀಕ್ಷೆ ನಡೆಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕಾರ್ಯಕರ್ತರಾದ ಲೋಹಿತ್, ಸಂತೋಷ್, ರಾಧಾಕೃಷ್ಣ, ಸಿದ್ದಾರ್ಥ್, ಪುನೀತ್, ಪೃಥ್ವಿರಾಜ್, ಮಧುರ, ಭೂಮಿಕಾ, ಭವ್ಯ, ಅರ್ಪಿತ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು.

Related posts

Leave a Comment