ವಿಶೇಷ ಸುದ್ದಿ 

ಚಂದಾಪುರ ಘಟಕದ ರಾಜಲಾಂಛನ ಸಂಸ್ಥೆಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರನೆಯ ಅಂಗವಾಗಿ 2021 22ನೇ ಸಾಲಿನ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು.

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ಆನೇಕಲ್ :- ಜಗತ್ತಿನ ಸಮಸ್ತ ಕನ್ನಡಿಗರಿಗೆ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಹಾಗೂ ಮಕ್ಕಳ ದಿನಾಚರಣೆಯನ್ನು ಎಲ್ ವೈ ರಾಜೇಶ್ ಸರ್ ರವರು ದ್ವಜಾರೋಹಣ ಮಾಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಇವರು ನಮ್ಮೆಲ್ಲರ ತನು ಕನ್ನಡ, ಮನ ಕನ್ನಡ, ನುಡಿ ಕನ್ನಡವಾಗಲಿ ಉಸಿರಿನ ಪ್ರತಿ ಕಣಕಣದಲ್ಲೂ ಕನ್ನಡವಿರಲಿ. ನಮ್ಮ ಆಶಯವೇ ಇದಾಗಿರಲಿ ಎಂದು ಯುವ ಪೀಳಿಗೆಗೆ ಒಂದೊಳ್ಳೆ ಸಂದೇಶವನ್ನು ನೀಡಿದರು.

೧,೫೦೦ ವರ್ಷಗಳಿಗೂ ಹೆಚ್ಚು ಘನ ಇತಿಹಾಸವುಳ್ಳ ಕನ್ನಡ, ಶಾಸ್ತ್ರೀಯ ಸ್ಥಾನ ಅಲಂಕರಿಸಿದ ಅಭಿಜಾತ ಕನ್ನಡ, ಅಷ್ಟ ಜ್ಞಾನಪೀಠಗಳ ಮೇರುಗನ್ನಡ, ನಮ್ಮ ಬದುಕು-ಬಾಳ್ವೆಯ ತಾಯ್ಗನ್ನಡ. ಕನ್ನಡವೆಂದರೆ ಬರೀ ಭಾಷೆಯಲ್ಲ, ನಮ್ಮ ಪಾಲಿನ ದೇವಭಾಷೆ. ನಮ್ಮ ಮನಸು-ಕನಸುಗಳನ್ನು ಅರಳಿಸಿ ಭವಿಷ್ಯದ ರೆಕ್ಕೆಕೊಟ್ಟು ಹಾರಲು ಶಕ್ತಿ ತುಂಬುವ ಜೀವಭಾಷೆಯನ್ನಾಗಿ ಮಾಡಬೇಕು ಎಂದು ಕೋರ್ ಕಮಿಟಿಯ ಮಂಜುನಾಥ್ ನಂದಿ ರವರು ಮಾತನಾಡಿದರು.

ಕನ್ನಡಿಗರ ಮನೆ-ಮನದಲ್ಲೂ ಕನ್ನಡ ಬೆಳಗುತ್ತಿದೆ, ನಿಜ ಆದರೆ, ನಮ್ಮ ಕಣ್ಮಣಿಯಾಗಿದ್ದ ಅಕ್ಕರೆಯ ಅಪ್ಪು, ಅಣ್ಣಾವ್ರ ಮುದ್ದಿನ ಕುಡಿ ಪುನೀತ್‌ ರಾಜಕುಮಾರ್‌ ಅವರು ಕನ್ನಡ ಹಬ್ಬಕ್ಕೆ ಮುನ್ನ ನಮನ್ನಗಲಿದ್ದಾರೆ. ನಮ್ಮೊಳಗೆ ಕನ್ನಡ ದೀಪವನ್ನು ಬೆಳಗುತ್ತಲೇ ಕಳೆದುಹೋದ ಯುವರತ್ನನ ಆದರ್ಶಗಳಿಗೆ ಅಗ್ರಪೀಠ ಹಾಕಿ ನಮಿಸೋಣ. ಹಾಗೂ ಇವರಿಗೆ ಒಂದು ನಿಮಿಷಗಳ ಕಾಲ ಮೌನಚರಣೆ ಮಾಡುವ ಮೂಲಕ ಪುನೀತರಾಗೋಣ ಎಂದು ಚಂದಾಪುರ ಘಟಕದ ಉಪಾಧ್ಯಕ್ಷರಾದ ಶೇಖರ್ ರವರು ಹೇಳಿದರು.

ಭೂಮಂಡಲ ಇರುವಷ್ಟು ದಿನ ಕನ್ನಡವಿರುತ್ತದೆ ಎಲ್ಲರಿಗೂ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ಎಲ್ ವೈ ರಾಜೇಶ್ ರವರು ಕೋರಿದರು .

ಶಿಕ್ಷಣ ಅರೋಗ್ಯ ಯೋಗ ಮತ್ತು ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹೊಸಬೆಳಕು ಟ್ರಸ್ಟ್ ನ ರಾಮಕೃಷ್ಣ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದ್ಮ ರವರು, ಯೋಗಶಿಕ್ಷಕಿ ಸುಧಾ ಮತ್ತು ಶಿಕ್ಷಣ ಕ್ಷೇತ್ರದಿಂದ ಶಿವಣ್ಣ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ರಾಜಲಾಂಛನ ಸಂಸ್ಥೆಯ ಚಂದಾಪುರ ಘಟಕದ ಉಪಾಧ್ಯಕ್ಷ ಶೇಖರ್, ಪದಾಧಿಕಾರಿಗಳಾದ ಮಂಜುನಾಥ್ ನಂದಿ, ಮಹೇಶ್ ಊಗಿನಹಳ್ಳಿ, ಕೃಷ್ಣಂರಾಜು, ಲೋಕೇಶ್, ತೆಲಗರಹಳ್ಳಿ ಗಣೇಶ್, ಆನೇಕಲ್ ರವಿ, ನವೀನ್, ಸಂತೋಷ್ ಪಾಟೀಲ್, ಗಿರೀಶ್, ಎಸ್ ಕೆ ರಘುನಾಥ್, ಅಂಜಿನಪ್ಪ, ಬಸವರಾಜು, ಲಕ್ಷ್ಮಣ್, ಅಡವಪ್ಪ, ಭಾರತಿ ರವರು ಹಾಗೂ ಮತ್ತಿತರರು ಹಾಜರಿದ್ದರು.

Related posts

Leave a Comment