ಸುದ್ದಿ 

ಬೈಲಹೊಂಗಲ : ಉಡಿಕೇರಿಯಲ್ಲಿ ರಾಜ್ಯಮಟ್ಟದ ಮುಕ್ತ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಉಚಿತ ಕಾರ್ಯಾಗಾರ ಆಯೋಜನೆ.

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವ ಮತ್ತು ನಟ ಪುನೀತರಾಜಕುಮಾರವರ ಸ್ಮರಣಾರ್ಥ ಇಲ್ಲಿನ ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆಯಲ್ಲಿ ರಾಜ್ಯ ಮಟ್ಟದ ಮುಕ್ತ ಕ್ವಿಜ್ ಪರೀಕ್ಷೆ ಮತ್ತು ಉಚಿತ ಕಾರ್ಯಾಗಾರವನ್ನು ಭಾನುವಾರ ಆಯೋಜಿಸಲಾಗಿತ್ತು. ಬೆಳಗ್ಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸುಮಾರು 343 ಸ್ಪರ್ಧಾರ್ಥಿಗಳು ಪರೀಕ್ಷೆ ಬರೆದರು. ಬಳಿಕ ನಡೆದ ಕಾರ್ಯಾಗಾರದಲ್ಲಿ ಗಣಿತ ಮತ್ತು ಮಾನಸಿಕ ಸಾಮಥ್ರ್ಯ ಉಪನ್ಯಾಸಕ ಬಿ.ಎಸ್.ದೇಮನಗೌಡರ, ಪ್ರೌಢಶಾಲೆ ಮುಖ್ಯ ಶಿಕ್ಷಕ ಎಸ್.ಡಿ.ಪಾಟೀಲ ಮಾರ್ಗದರ್ಶನ ಮಾಡಿದರು. 

ನಂತರ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ವಿಜಯಪುರ ಜಿಲ್ಲೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಉಪನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇಂಚಲ ಗ್ರಾಮದವರಾದ ವೈ.ಎಸ್.ಮಾರಿಹಾಳ ಸರಕಾರದ ಉನ್ನತ ಹುದೆಗಳಲ್ಲಿ ಸೇವೆ ಸಲ್ಲಿಸುವ ಆಕಾಂಕ್ಷೆಯುಳ್ಳ ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಗುರಿ ಮತ್ತು ಅವಿರತ ಪರಿಶ್ರಮ ಪಡಬೇಕು. ಎಷ್ಟೇ ಸವಾಲು, ಕಷ್ಟಗಳು ಎದುರಾದರು ಎದೆಗುಂದದೆ ಸತತ ಪ್ರಯತ್ನ ಪಟ್ಟರೆ ಐಎಎಸ್, ಕೆಎಎಸ್ ಕನಸು ಸಾಕಾರಗೊಳ್ಳುತ್ತದೆ ಎಂದು ಹೇಳಿದರು. 

ರಾಮದುರ್ಗ ತಹಶೀಲದಾರರಾಗಿರುವ ಎಮ್.ಎನ್.ಹೆಗ್ಗನವರ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಉನ್ನತ ಹುದ್ದೆಯ ಉದ್ಯೋಗಾಕಾಂಕ್ಷಿಗಳಿಗೆ ಇಂಥ ರಚನಾತ್ಮಕ ಮತ್ತು ಜ್ಞಾನಾರ್ಜನೆ ನೀಡುವ ಕಾರ್ಯಕ್ರಮಗಳು ಇಂದಿನ ಅತೀ ಅವಶ್ಯಕತೆಯಾಗಿವೆ ಇದನ್ನು ಆಯೋಜಿಸಿರುವ ಉಡಿಕೇರಿ ಗ್ರಾಮಸ್ಥರ ಕಾರ್ಯ ಶ್ಲಾಘನೀಯ ಎಂದರು. ಶಿಕ್ಷಕ ಎಸ್.ಜಿ.ಗೂಳಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಢಶಾಲೆ ಅಧ್ಯಕ್ಷ ರಾಜು ಬೋಳಶೆಟ್ಟಿ ಅಧ್ಯಕ್ಷೀಯ ನುಡಿ ಹೇಳಿದರು. ಇದೇ ವೇಳೆ ನಿವೃತ್ತ ಶಿಕ್ಷಕರಾದ ಸಿ.ಸಿ.ತಿಪ್ಪನಗೌಡರ, ಎಸ್.ಬಿ.ಅಂಗಡಿ, ಎ.ಎಸ್.ಗಡಾದರನ್ನು ಸನ್ಮಾನಿಸಲಾಯಿತು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ವಿಜೇತರಾದವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಧಾರವಾಡ ಗುರುಕುಲ ಅಕಾಡೆಮಿ ನಿರ್ದೇಶಕ ಎನ್.ಎಮ್.ಪಾಟೀಲ, ಮಂಜುನಾಥ ಬೋಳಶೆಟ್ಟಿ, ರಾಜು ಭರಮಗೌಡರ ಉಪಸ್ಥಿತರಿದ್ದರು. ಶಿಕ್ಷಕರಾದ ಶಿವಾನಂದ ಉಳ್ಳಿಗೇರಿ, ಬಿ.ಎಸ್.ದೇಮನಗೌಡರ ನಿರೂಪಿಸಿದರು. ಸಿ.ಬಿ.ಮೇಟ್ಯಾಲ ಸ್ವಾಗತಿಸಿದರು. ಬಿ.ಆಯ್.ಕಿಲ್ಲೇದಾರ ಸನ್ಮಾನ ಮತ್ತು ರಮೇಶ ಅಬ್ಬಾರ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ಆನಂದ ಅಬ್ಬಾರ ಅತಿಥಿಗಳನ್ನು ಪರಿಚಯಿಸಿದರು. ವಿಠ್ಠಲ ಕುರಿ ವಂದಿಸಿದರು. ಗ್ರಾಮಸ್ಥರು ನೂರಾರು ಸ್ಪರ್ಧಾರ್ಥಿಗಳು ಪಾಲ್ಗೊಂಡಿದ್ದರು.


ವರದಿ : ಸಿದ್ದಪ್ಪ ಕಂಬಾರ ತಾಲೂಕ ನ್ಯೂಸ್ ಬೈಲಹೊಂಗಲ

Related posts

Leave a Comment