ಕ್ರೈಂ ಸುದ್ದಿ 

ಬೈಲಹೊಂಗಲ : ನ.9 ರಂದು ಚಿಕ್ಕಪ್ಪನಿಂದಲೇ ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು ಮಲ್ಲಮ್ಮನ ಬೆಳವಡಿಯಲ್ಲಿ ಘಟನೆ.

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ಬೈಲಹೊಂಗಲ ತಾಲೂಕಿನಲ್ಲಿ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ನ.9 ರಂದು ಕ್ಷುಲ್ಲಕ ಕಾರಣಕ್ಕಾಗಿ ಚಿಕ್ಕಪ್ಪ ಹಾಗೂ ಮಗನ ನಡೆದ ಜಗಳದಲ್ಲಿ ಚಿಕ್ಕಪ್ಪನಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ವ್ಯಕ್ತಿ ನ.15 ರಂದು ಮೃತನಾಗಿದ್ದಾನೆ. ಯಶವಂತ ಬಂಡಿವಡ್ಡರ (35) ಹಲ್ಲೆಗೊಳಗಾಗಿ ಮೃತಪಟ್ಟ ವ್ಯಕ್ತಿ ಎನ್ನಲಾಗಿದೆ.
ಕಳೆದ ನ.9 ರಂದು ರಾತ್ರಿ ಇಬ್ಬರು ಕುಡಿದ ಅಮಲಿನಲ್ಲಿದ್ದಾಗ ಮಲಗುವ ಜಾಗಕ್ಕಾಗಿ ಇಬ್ಬರ ನಡುವೆ ದೊಡ್ಡ ಗಲಾಟೆ ನಡೆದು ವಿಕೋಪಕ್ಕೆ ತಿರುಗಿ ಯಶವಂತನ ಮೇಲೆ ಇತನ ಚಿಕ್ಕಪ್ಪ ಹನಮಂತ ಬಂಡಿವಡ್ಡರ (47) ತೀವೃ ಹಲ್ಲೆ ಮಾಡಿದ್ದರಿಂದ ಹುಬ್ಬಳ್ಳಿಯ ಕೀಮ್ಸ್‍ಗೆ ದಾಖಲಿಸಲಾಗಿತ್ತು ಆದರೆ ಅಲ್ಲಿ ವೈದ್ಯರು ತಲೆಗೆ ಗಂಭೀರ ಗಾಯವಾಗಿದ್ದು ಆಪರೇಶನ್ ಮಾಡಬೇಕಾಗುವುದು ಎಂದಿದ್ದಾರೆ. ಇದಕ್ಕೆ ಯಶವಂತ ವಿರೋಧ ವ್ಯಕ್ತಿಪಡಿಸಿ ವೈದ್ಯರೊಂದಿಗೆ ವಾಗ್ವಾದ ನಡೆಸಿದ್ದರಿಂದ ವೈದ್ಯರು ಆಸ್ಪತ್ರೆಯಿಂದ ಕಳಿಸಿದ್ದಾರೆ. ಹಳಿಯಾಳ ತಾಲೂಕಿನ ಗ್ರಾಮದಲ್ಲಿದ್ದ ತನ್ನ ತಂಗಿಯ ಮನೆಗೆ ಹೋಗಿದ್ದಾನೆ. ತಲೆ ಮತ್ತು ಮುಖಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದ್ದರಿಂದ ತೀವೃ ರಕ್ತಸ್ರಾವವಾಗುತ್ತಿದ್ದ ಕಾರಣ ಮತ್ತೆ ಯರಗಟ್ಟಿ ಮತ್ತು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾನೆ ಎಂದು ಸ್ಥಳಿಯರಾದ ಲಕ್ಷಣ ಸಾಲಳ್ಳಿ ತಿಳಿಸಿದ್ದಾರೆ. ದೊಡವಾಡ ಠಾಣೆ ಪಿಎಸ್‍ಐ ಗಜಾನನ ನಾಯಕ ಆರೋಪಿ ಹನಮಂತ ಬಂಡಿವಡ್ಡರನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ವರದಿ : ಸಿದ್ದಪ್ಪ ಕಂಬಾರ ತಾಲೂಕ ನ್ಯೂಸ್ ಬೈಲಹೊಂಗಲ.

Related posts

Leave a Comment