ಸುದ್ದಿ 

ಆನೇಕಲ್ ನ ಮುಖ್ಯರಸ್ತೆಗಳ ದುರಸ್ಥಿ ಮಾಡದಿದ್ದರೆ ಜನರ ಜೀವಕ್ಕೆ ಹಾನಿ ಗ್ಯಾರಂಟಿ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ಆನೇಕಲ್ (Nov.17) : ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕಿನಲ್ಲಿ ಈಗಾ ಗುಂಡಿಗಳ ದರ್ಬಾರು, ಯಾವ ಸಮಯದಲ್ಲಿ ಯಾವ ವಾಹನ ಸವಾರ ಬಿದ್ದು ಸಾವು ಸಂಭವಿಸುತ್ತದೆಯೋ ಗೊತ್ತಿಲ್ಲಾ. ಆನೇಕಲ್ ನಿಂದ ಹೊಸೂರು, ಹಾಗೂ ಆನೇಕಲ್ ನಿಂದ ಚಂದಾಪುರ ದವರೆಗೆ ರಸ್ತೆಗಳು ಸಂಪೂರ್ಣ ಹಾಳಾದರು ಕೂಡಾ ಜನಪ್ರತಿನಿಧಿಗಳು ಮೌನಕ್ಕೆ ಜಾರಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತದ್ದಾರೆ. ಕೇವಲ ಹೆಸರಿಗಷ್ಟೆ ಜನಪ್ರಿಯ ಶಾಸಕರು ಸಚಿವರು ಅಂತಾ ಕರೇಸಿಕೊಳ್ಳುವ ಜನ ಪ್ರತಿನಿಧಿಗಳು ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸದಿದ್ದರೆ ಹೇಗೆ ಎಂಬ ಪ್ರಶ್ನೆ ಎದುರಾಗುತಿದೆ.

ಈ ರಸ್ತೆಯಲ್ಲಿ ಬಂದರೆ ತಗ್ಗು ಗುಂಡಿಗಳನ್ನು ತಪ್ಪಿಸಿ ಸವಾರಿ ಮಾಡಬೇಕಾಗಿದೆ. ಒಂದು ವೇಳೆ ಎಚ್ಚರ ತಪ್ಪಿದರೆ ಯಮನ ಜೊತೆ ಸವಾರಿ ಮಾಡುವುದೆ ಸರಿ, ಜೊತೆಗೆ ಕಿರಿದಾದ ರಸ್ತೆಗಳ ಮದ್ಯ ಮೋನಕಾಲೂದ್ದ ತಗ್ಗು ಗುಂಡಿಗಳಲ್ಲಿ ಜೀವ ಕೈಯಲ್ಲಿ ಹಿಡಿದು ಸವಾರಿ ಸಂಚಾರ ಮಾಡಬೇಕು.

ಆನೇಕಲ್ ತಾಲೂಕಿನ ಕ್ಷೇತ್ರದಲ್ಲಿ ಪ್ರಭಾವಿ ಸಚಿವರಿದ್ದರು ಕೂಡಾ ಯಾವ ಪ್ರಯೋಜನವೂ ಇಲ್ಲ ಎಂದು ಜನರು ಆಕ್ರೋಶ ವ್ಯಕ್ತ ಪಡಿಸಿದರು.

ಇಲ್ಲೊಂದು ರಸ್ತೆ ವರ್ಷಕ್ಕೆ ಮೂರರಿಂದ ನಾಲ್ಕು ಬಾರಿ ದುರಸ್ತಿಯಾಗುತ್ತಲೇ ಇದೆ. ದುರಸ್ತಿಯಾಗಿ ತಿಂಗಳು ತುಂಬುವಷ್ಟರಲ್ಲಿ ಮತ್ತೆ ಯಥಾಸ್ಥಿತಿಯಂತೆ ಮಂಡಿಯುದ್ದ ಗುಂಡಿಗಳು ಮೂಡುತ್ತವೆ. ಸಂಚಾರ ದುಸ್ಥಿತಿ.

ಆನೇಕಲ್ ನ ಪ್ರಮುಖ ಮುಖ್ಯರಸ್ತೆಗಳಲ್ಲಿ ಒಂದಾಗಿರುವ ಮತ್ತು ಅತಿ ಹೆಚ್ಚು ವಾಹನ ಸಂಚಾರವಿರುವ ಆನೇಕಲ್ -ಚಂದಾಪುರ ಹಾಗೂ ಆನೇಕಲ್ – ಹೊಸೂರು ರಸ್ತೆಯ ಅವ್ಯವಸ್ಥೆ, ಅಧ್ವಾನಗಳ ಆಗರವಾಗಿದೆ. ಅದರ ಕಥೆವ್ಯಥೆ ಇಲ್ಲಿದೆ.

ಆನೇಕಲ್ – ಚಂದಾಪುರ, ಆನೇಕಲ್ – ಹೊಸೂರು ರಸ್ತೆ ಸುಮಾರು 15ಕಿ.ಮೀ. ಉದ್ದವಿದೆ. ಇತ್ತೀಚಿಗಷ್ಟೇ ಅಭಿವೃದ್ಧಿಪಡಿಸಿರುವ ರಸ್ತೆಯಲ್ಲಿ ಎಲ್ಲಿ ನೋಡಿದರೂ ಹಳ್ಳ-ಗುಂಡಿಗಳೇ ಕಾಣುತ್ತವೆ. ಭಾರಿ ಮತ್ತು ಲಘು ವಾಹನಗಳಗಲಿ, ಸೈಕಲ್ ಹಾಗೂ ದ್ವಿಚಕ್ರ ವಾಹನಗಳ ಸಂಚಾರವೂ ಸುಗಮವಲ್ಲ.ಈ ರಸ್ತೆಯಲ್ಲಿ ಹಳ್ಳ , ಗುಂಡಿಗಳು ಮತ್ತು ಉಬ್ಬುಗಳನ್ನು ದಾಟಿ ಸಾಗಲು ಚಾಲಕರು ವಾಹನಗಳನ್ನು ಸರ್ಕಸ್ ರೀತಿಯಲ್ಲಿ ಅತ್ತಿತ್ತ ಎಳೆದಾಡಿಕೊಂಡೇ ಹೋಗುತ್ತಾರೆ.

ಆನೇಕಲ್ – ಚಂದಾಪುರ, ಆನೇಕಲ್ – ಹೊಸೂರು ನಡುವಣ ಸಂಚಾರಕ್ಕೆ ಕಮ್ಮಿಯೆಂದರೂ ಒಂದು ಕಾಲು ಗಂಟೆ ಬೇಕೇಬೇಕು. ಇತ್ತ ಚಂದಾಪುರಕ್ಕೆ ಅಥವಾ ಹೊಸೂರು ಗೆ ಸಮೀಪಿಸುವಾಗ ರಸ್ತೆ ಚಿಂದಿ ಚಿತ್ರಾನ್ನವಾಗಿದೆ. ಇಲ್ಲಿ ವಾಹನಗಳು ಸಾಗುವಾಗ ಚಾಲಕ ಮತ್ತು ಪ್ರಯಾಣಿಕರಿಗೆ ನರಕ ಸದೃಶವಾಗುತ್ತಿದೆ. ಅವರೆಲ್ಲರೂ ಅಧಿಕಾರಿ ಗಳು ಮತ್ತು ಜನಪ್ರತಿನಿಧಿಗಳಿಗೆ ವಾಹನ ಸವಾರರು ಶಾಪ ಹಾಕುತ್ತಿದ್ದಾರೆ.

ಕಣ್ಣಿಗೆ ಕಾಣದ ಸಮಸ್ಯೆ:

ಆನೇಕಲ್ ಮತ್ತು ಹೊಸೂರು ಮುಖ್ಯ ರಸ್ತೆಯ ನಡುವೆ ೨.೫ ಕಿ.ಮೀ. ರಸ್ತೆಯು ತೀರಾ ಹದೆಗೆಟ್ಟಿದೆ. ಘಟಾನುಘಟಿ ರಾಜಕಾರಣಿಗಳು, ಅಧಿಕಾರಿಗಳು ದಿನ ನಿತ್ಯ ಈ ರಸ್ತೆಯಲ್ಲೇ ಸಂಚರಿಸುತ್ತಿದ್ದರೂ ಸಮಸ್ಯೆ ಕಣ್ಣಿಗೆ ಕಂಡಿಲ್ಲ. ರಸ್ತೆಯನ್ನು ದೀರ್ಘ ಬಾಳಿಕೆ ಬರುವಂತೆ ಅಭಿವೃದ್ಧಿ ಪಡಿಸಬಹುದು.

ಈ ಬಗ್ಗೆ ಅಧಿಕಾರಿಗಳಾಗಲೀ ಜನ ಪ್ರತಿನಿಧಿಗಳಾಗಲೀ ಕಾಳಜಿ ವಹಿಸಿಯೇ ಇಲ್ಲ. ಗುಂಡಿ ಬಿದ್ದು ಸಂಚಾರಕ್ಕೆ ಅಡ್ಡಿಯಾದ ಒಂದಿಷ್ಟು ಮಣ್ಣು ಸುರಿದು, ದುರಸ್ತಿ ಹೆಸರಿನಲ್ಲಿ ಗುತ್ತಿಗೆದಾರರು ಮತ್ತು ತಮ್ಮ ಕಿಸೆ ತುಂಬಿಸಿಕೊಳ್ಳುವುದಷ್ಟೇ ಇಲ್ಲಿ ಆಗುತ್ತಿರುವ ಕೆಲಸ. ರಸ್ತೆಯ ಹಳ್ಳ, ಗುಂಡಿಗಳಿಗೆ ಮಣ್ಣು ತುಂಬಿ ಕೆಲವೇ ದಿನಗಳಾಗಿದೆ. 3-4 ದಿನಗಳಿಂದ ವಾಹನ ಸಂಚಾರಕ್ಕೆ ತೀರಾ ಅಡ್ಡಿಯುಂಟಾಗಿದೆ.

ಚಾಲಕರು ಮತ್ತು ಪ್ರಯಾಣಿಕರ ಪಾಡು ಹೇಳ ತೀರದಾಗಿದೆ.ಸಮಸ್ಯೆಯ ಪರಿಹಾರಕ್ಕೆ ಕಾಳಜಿ ತೋರದ ಜನಪ್ರತಿನಿಧಿಗಳು ರಾಜಕಾರಣದಲ್ಲಿ ನಿರತರಾಗಿದ್ದಾರೆ. ಈ ರಸ್ತೆಯಿಂದ ಜನರು ಪರಿತಪಿಸುತ್ತಿದ್ದಾರೆ.

Related posts

Leave a Comment