ಸಿನೆಮಾ ಸುದ್ದಿ 

ನಟ ರಮೇಶ್ ಅರವಿಂದ್ ನಟನೆಯ ‘100’ ಸಿನಿಮಾ ವೀಕ್ಷಿಸಿದ ಗೃಹಸಚಿವ ಅರಗ ಜ್ಞಾನೆಂದ್ರ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .

ಬೆಂಗಳೂರು: ಸೈಬರ್ ಅಪರಾಧದ  ಕುರಿತ ಕಥಾ ಹಂದರವುಳ್ಳ,  ನಟ ಶ್ರೀ ರಮೇಶ್ ಅರವಿಂದ್ ನಟನೆಯ ‘100’ ಚಲನಚಿತ್ರವನ್ನು ಗೃಹಸಚಿವರಾದ ಅರಗ ಜ್ಞಾನೆಂದ್ರ ವೀಕ್ಷಿಸಿ ಚಿತ್ರತಂಡವನ್ನು  ಅಭಿನಂದಿಸಿದ್ದಾರೆ.

ಚಿತ್ರ ವೀಕ್ಷಿಸಿ ಮಾತನಾಡಿದ ಅವರು  ಯುವಜನಾಂಗದ ಮೇಲೆ ಅಂತರ್ಜಾಲದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದು ಪರಿಣಾಮಕಾರಿಯಾದ ಚಿತ್ರವಾಗಿದೆ. ಇದಕ್ಕಾಗಿ ನಟ ಶ್ರೀ ರಮೇಶ್ ಅರವಿಂದ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ರಾಜ್ಯದ ಪ್ರತಿಯೊಬ್ಬರೂ ಈ ಚಿತ್ರವನ್ನು ವೀಕ್ಷಿಸಬೇಕು. ನಮ್ಮ ಪೊಲೀಸ್ ಸಿಬ್ಬಂದಿ ಕೂಡ ಈ ಚಿತ್ರ ವೀಕ್ಷಿಸಬೇಕು ಎಂದು ಕೋರುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಟ ರಮೇಶ್ ಅರವಿಂದ್ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Comment