ಸುದ್ದಿ 

ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸಿದ್ದಲಿಂಗಪ್ಪ ಆಯ್ಕೆ

ನಿಮ್ಮ ತಾಲ್ಲೂಕು ಸ್ನೇಹಿತರಿಗೆ ಕಳುಹಿಸಿ.. .


ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾಗಿ ಸಿದ್ದಲಿಂಗಪ್ಪ ಆಯ್ಕೆಯಾಗಿದ್ದಾರೆ. ತುಮಕೂರು ಜಿಲ್ಲಾಕ್ನನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆದಿದ್ದು ಚುನಾವಣೆಯ ಮತ ಎಣಿಕೆಯಲ್ಲಿ 1613 ಮತಗಳನ್ನು ಕೆ ಎಸ್ ಸಿದ್ದಲಿಂಗಪ್ಪ ಪಡೆದು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪಾವಗಡ ಕುಣಿಗಲ್ ಮತ್ತು ಚಿಕ್ಕನಾಯಕ ಹಳ್ಳಿ ಗುಬ್ಬಿ ಕೊರಟಗೆರೆ, ಮಧುಗಿರಿ ತಾಲ್ಲೂಕುಗಳಲ್ಲಿ ಸಿದ್ದಲಿಂಗಪ್ಪ ಅಧಿಕ ಮತ ಪಡೆದಿದ್ದಾರೆ ಹೀಗಾಗಿ ಪ್ರತಿಸ್ಪರ್ಧಿ ಶೈಲಾ ನಾಗರಾಜ್ 1344 ಮತಪಡೆದರೆ ಅವರಿಗಿಂತ ಸಿದ್ದಲಿಂಗಪ್ಪ 700 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾದ್ಯಕ್ಷ ಸ್ಥಾನಕ್ಕೆ ಮತದನ ನಡೆದಿದ್ದು ತುಮಕೂರು ಜಿಲ್ಲೆಯಲ್ಲಿ 4978 ಮತಗಳು ಚಲಾವಣೆಯಲ್ಲಿ ಗೊಂಡಿದ್ದು ಶೇಖಡಾ 46 ಷ್ಟು ಮತದಾನ ದಾಖಲಾಗಿದೆ.
ತುಮಕೂರು ತಾಲ್ಲೂಕಿನಲ್ಲಿ 1811 ಮಂದಿ ಮತದಾನ ಮಡಿದರೆ, ತಿಪಟೂರು 537, ಮಧುಗಿರಿ 431, ನಿಟ್ಟೂರಿನಲ್ಲಿ 365, ಚಿಕ್ಕನಾಯಕನಹಳ್ಳಿ 200, ಪಾವಗಡ 289, ಗುಬ್ಬಿ 480,ಶಿರಾದಲ್ಲಿ 625 ಮಂದಿ ತುರುವೇಕೆರೆಯಲ್ಲಿ 549,ಕುಣಿಗಳ್ 551, ಹುಲಿಯೂರುದುರ್ಗ 140 ಮತದಾನ ನಡೆದಿತ್ತು.

Related posts

Leave a Comment