ಸುದ್ದಿ 

ಜಲ್ಲಿಕ್ರಶರ್ ಗಣಿಗಾರಿಕೆಗೆ ನೀಡಿರುವ ಮಂಜೂರಾತಿಯನ್ನು ರದ್ದುಗೊಳಿಸುವಂತೆ ರೈತರ ಆಗ್ರಹ

Taluknewsmedia.com

ತುಮಕೂರು: ತಾಲ್ಲೂಕಿನ ಕೋರ ಹೋಬಳಿ ಅಹೋಬಲ ಅಗ್ರಹಾರದ ಮಜರೆ ಓಬಳ ದೇವರ ಗುಡ್ಡದ ಸರ್ವೆ ನಂಬರ್ 172 ರಲ್ಲಿ ಸರ್ಕಾರವು ಪ್ರಾರಂಭಿಸಲು ಹೊರಟಿರುವ ಜಲ್ಲಿಕಲ್ಲಿನ ಕ್ರಷರ್ ಗಣಿಗಾರಿಕೆಯನ್ನು ಶಾಶ್ವತವಾಗಿ ರದ್ದುಪಡಿಸುವಂತೆ ಆ ಪ್ರದೇಶದ ಸುತ್ತಮುತ್ತಲಿನ ರೈತರು ತಮ್ಮ ಆಗ್ರಹ ವ್ಯಕ್ತಪಡಿಸಿದ್ದಾರೆ.
ಕ್ರಷರ್ ಗಣಿಗಾರಿಕೆ ಅನುಮತಿ ನೀಡಲಾದ ಪ್ರದೇಶದ ವ್ಯಾಪ್ತಿಯಲ್ಲಿ ಸುಮಾರು 7ರಿಂದ 8 ಗ್ರಾಮಗಳಿದ್ದು, ಗಣಿಗಾರಿಕೆಗೆ ಅನುಮತಿ ನೀಡಲಾಗಿರುವ ವಿಚಾರ ಅಲ್ಲಿನ ಜನರ ನೆಮ್ಮದಿ ಕೆಡಿಸಿದೆ.ಈ ಸಂದರ್ಭದಲ್ಲಿ ಗ್ರಾಮದ ರೈತ ಪುಟ್ಟ ಸಿದ್ದಯ್ಯ ಮಾತನಾಡಿ ಸರ್ಕಾರವು ಜಲ್ಲಿಕ್ರಶರ್ ಗಣಿಗಾರಿಕೆಗಾಗಿ ನೀಡಿರುವ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕು ಅವರಿಗೆ ಅನುಮತಿ ನೀಡಿರುವ ಜಾಗದ ಹತ್ತಿರದಲ್ಲಿಯೇ ಎತ್ತಿನಹೊಳೆ ಯೋಜನೆ ಪವರ್ ಗ್ರಿಡ್ ಗಳಿದ್ದು ಅವುಗಳಿಗೆ ಗಣಿಗಾರಿಕೆಯಿಂದ ತುಂಬಾ ತೊಂದರೆ ಉಂಟಾಗುತ್ತದೆ. ಹತ್ತಿರದಲ್ಲಿಯೇ ಶಾಲೆಯಿದ್ದು ಅಲ್ಲಿ ಓದುತ್ತಿರುವ ಮಕ್ಕಳ ವಿದ್ಯಾಭ್ಯಾಸಕ್ಕೂ ಅಡಚಣೆ ಉಂಟಾಗುತ್ತದೆ. ಜೊತೆಗೆ ಅಲ್ಲಿ ಸುತ್ತಮುತ್ತಲು ಸುಮಾರು 2000 ಜನಸಂಖ್ಯೆ ಇರುವ ಹಳ್ಳಿ ಇದ್ದು ಗಣಿಗಾರಿಕೆಯಿಂದ ಜನರ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಹಾಗೆ ಅಲ್ಲಿ ಅನೇಕ ಚಿರತೆ ಕರಡಿ ಅಂತಹ ಕಾಡು ಪ್ರಾಣಿಗಳು ವಾಸವಿದ್ದು ಇದು ಅವುಗಳ ಜೀವಕ್ಕೂ ಸಹ ಹಾನಿ ಉಂಟಾಗುತ್ತದೆ. ಗಣಿಗಾರಿಕೆಯ ಸುತ್ತಮುತ್ತಲೂ ಕೃಷಿ ಭೂಮಿ ಇಂದ ಕೂಡಿದ್ದು ವ್ಯವಸಾಯವನ್ನೇ ಅವಲಂಬಿಸಿರುವ ರೈತರಿಗೆ ಕೂಡ ಇದು ದೊಡ್ಡಮಟ್ಟದಲ್ಲಿ ಹಾನಿ ಉಂಟುಮಾಡುತ್ತದೆ. ಆದ್ದರಿಂದಾಗಿ ಸರ್ಕಾರ ಈ ಕೂಡಲೇ ಜಲ್ಲಿಕ್ರಶರ್ ಗಣಿಗಾರಿಕೆಗಾಗಿ ನೀಡಿರುವ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಈಗಾಗಲೇ ಈ ಕುರಿತಾಗಿ ತುಮಕೂರು ಸಂಸದರಾದ ಜಿ.ಎಸ್. ಬಸವರಾಜು ಹಾಗೂ ತುಮಕೂರು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ್ದು, ಆದಷ್ಟು ಶೀಘ್ರವಾಗಿ ಆದೇಶವನ್ನು ಹಿಂಪಡೆಯುವ ಭರವಸೆ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗುರುಸಿದ್ದಯ್ಯ, ಶೋಭಾ ಮುತ್ತುರಾಜ್, ಸದಾನಂದಯ್ಯ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Comment