ಊರ್ಡಿಗೆರೆ ಸಮೀಪ ಬಸ್ ಅಪಘಾತ: ಓರ್ವ ದುರ್ಮರಣ

ಗೋಲ್ಡನ್ ಸೀಮ್ಸ್ ಫ್ಯಾಕ್ಟರಿಗೆ ಸೇರಿದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾಗಿದ್ದು ಓರ್ವ ಸಾವನ್ನಪ್ಪಿರುವ ಘಟನೆ ಮಂಗಳವಾರ ಸಂಜೆ ತುಮಕೂರು ತಾಲೂಕು ಊರ್ಡಿಗೆರೆ ಬಳಿಯ ವದೇಕಲ್ಲು ಹಾಗೂ ಪೆಮ್ಮನಹಳ್ಳಿ ಗ್ರಾಮದ ಬಳಿ ನಡೆದಿದೆ. ಈ ಅಪಘಾತದಲ್ಲಿ ಗಾರ್ಮೆಂಟ್ಸ್ ನೌಕರನೊಬ್ಬ ಸಾವನಪ್ಪಿದ್ದಾನೆ.
ಗೋಲ್ಡನ್ ಸೀಮ್ಸ್ ಫ್ಯಾಕ್ಟರಿಗೆ ಸೇರಿದ ಖಾಸಗಿ ಬಸ್ಸಿನಲ್ಲಿ ೩೫ ಕ್ಕೂ ಹೆಚ್ಚು ಮಂದಿ ಪ್ರಾಯಾಣಿಸುತ್ತಿದ್ದರು. ಚಾಲಕನ ಅತಿವೇಗ ಅಪಘಾತಕ್ಕೆ ಕಾರಣವಾಗಿದೆ ಎಂದು ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ತಿಳಿಸಿದ್ದಾರೆ.
ಈ ಬಸ್ಸಿನಲ್ಲಿ ಪ್ರತಿನಿತ್ಯ ತುಮಕೂರು ತಾಲೂಕಿನ ಪೆಮ್ಮನಹಳ್ಳಿ ಗ್ರಾಮದಿಂದ ಮಾಕಳಿ ಹಾಗೂ ಹೊಸ ಕೋಟೆ ಭಾಗಕ್ಕೆ ನೌಕರರು ಪ್ರಯಾಣಿಸುತ್ತಿದ್ದರು. ಆದರೆ ಮಂಗಳವಾರ ಸಂಜೆ ಪೆಮ್ಮನಹಳಿ ಬಳಿ ಚಾಲಕನ ಅತಿ ವೇಗದಿಂದ ನಿಯಂತ್ರಣಕ್ಕೆ ಸಿಗದೆ ಅಪಘಾತ ಸಂಭವಿಸಿದೆ. ಘಟನೆ ನಡೆದ ಕೂಡಲೇ ಗಾಯಳುಗಳನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಬಸ್ನಲ್ಲಿ ಪ್ರಯಾಣಿಸುತ್ತಿದ್ದ ೮ ಮಂದಿಗೆ ತೀವ್ರ ಪೆಟ್ಟಾಗಿದ್ದು ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.