ಸುದ್ದಿ 

ಡಾ. ಬಿ. ಆರ್. ಅಂಬೇಡ್ಕರ್ ಅವರ ಜೀವನಶೈಲಿ ನಮಗೆಲ್ಲ ಆದರ್ಶ : ಪ್ರೊ. ವೈ. ಎಸ್. ಸಿದ್ದೇಗೌಡ

Taluknewsmedia.com

ತುಮಕೂರು: ಡಾ. ಬಿ. ಆರ್. ಅಂಬೇಡ್ಕರ್ ಅವರ ನಡೆ-ನುಡಿ ಅವರ ಜೀವನಶೈಲಿ ನಮಗೆಲ್ಲ ಆದರ್ಶ ಅದರಿಂದಾಗಿ ಅವರು ನೂರಾರು ವರ್ಷಗಳು ಬದುಕಿರುತ್ತಾರೆ. ಅವರ ಭಾಷಣಗಳು ಅವರ ಬರವಣಿಗೆ ಅವರು ಬಿಟ್ಟುಹೋಗಿರುವ ಛಾಯೆಯನ್ನು ಗಮನಿಸಿದಾಗ ನಮಗೆ ಅವರು ಪ್ರೇರಣೆಯಾಗಿ ನಿಲ್ಲುತ್ತಾರೆ ಎಂದು ತುಮಕೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ . (ಕ) ವೈ. ಎಸ್. ಸಿದ್ದೇಗೌಡ ತಿಳಿಸಿದರು.

ಅವರು ತುಮಕೂರು ವಿಶ್ವವಿದ್ಯಾನಿಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ವತಿಯಿಂದ ಡಾ. ಬಿ ಆರ್ ಅಂಬೇಡ್ಕರ್ ರವರ “೬೫ ನೇ ಮಹಾ ಪರಿನಿಬ್ಬಾಣ” ದಿನಾಚರಣೆ ಅಂಗವಾಗಿ ಡಾ. ಬಿ ಆರ್ ಅಂಬೇಡ್ಕರ್ ಅವರ ಚಿಂತನೆ ತಾತ್ವಿಕ ನೆಲೆಗಳು ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಬಾಸಾಹೇಬರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಪ್ರತಿಯೊಬ್ಬರು ನಡೆಯಬೇಕು. ಪ್ರತಿಯೊಬ್ಬ ವ್ಯಕ್ತಿಯು ತನ್ನ ಆತ್ಮಗೌರವದಿಂದ ಸಾರ್ಥಕ ಬದುಕನ್ನು ಬದುಕಬೇಕು ಇರುವ ಅವಕಾಶಗಳನ್ನು ಬಳಸಿ ಎಷ್ಟರಮಟ್ಟಿಗೆ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂಬುದನ್ನು ಅವರು ನಮಗೆ ತಿಳಿಸಿದ್ದಾರೆ ಎಂದರು. ನಾವೆಲ್ಲರೂ ಪ್ರತಿದಿನ ಪ್ರತಿಕ್ಷಣ ಬಾಬಾಸಾಹೇಬರನ್ನು ನೆನಪಿಸಿಕೊಳ್ಳಬೇಕು ಏಕೆಂದರೆ ಅವರು ಆತ್ಮಗೌರವವನ್ನು ಉಳಿಸಿ ಆತ್ಮಸ್ಥೈರ್ಯವನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು ಎಂಬುದನ್ನು ಅವರಿಂದ ಕಲಿಯಬೇಕು ಅವರ ಮೌಲ್ಯಗಳ ಆಚರಣೆ ನಮ್ಮ ನಿತ್ಯ ಕರ್ಮವಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಶ್ವವಿದ್ಯಾನಿಲಯ. ಧಾರವಾಡದ ತತ್ವಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ ರಮೇಶ್ ಅವರು ವರ್ಚುವಲ್ ಮೂಲಕ ಮಾತನಾಡಿ ಅಂಬೇಡ್ಕರ್ ಅವರು ಅಸಾಧಾರಣ ನ್ಯಾಯಾಧೀಶರು, ಸಮಾಜ ಸುಧಾರಕರು, ಮಾತ್ರವಲ್ಲದೆ ದಲಿತರ ಏಳಿಗೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ ಅವರಾಗಿದ್ದಾರೆ. ಜೀವನದುದ್ದಕ್ಕೂ ಅತ್ಯಂತ ಸರಳ ಜೀವನ ನಡೆಸಿರುವುದಕ್ಕೆ ಉದಾಹರಣೆ ಎಂದರೆ ನಮ್ಮ ಡಾ. ಬಿ ಆರ್ ಅಂಬೇಡ್ಕರ್ ಎಂದು ತಿಳಿಸಿದರು.
ಇದೇ ಸಂರ್ಭದಲ್ಲಿ ರಾಜ್ಯಶಾಸ್ತ್ರ ವಿಭಾಗದ ಪ್ರೊ. ಬಸವರಾಜು ಮಾತನಾಡಿ ಅಂಬೇಡ್ಕರ್ ಅವರು ಹೊಂದಿದ್ದ ಸಮಾನತೆ, ಸ್ವಾತಂತ್ರ‍್ಯ ,ಸಾಮರಸ್ಯ ಈ ಮೂರು ನಿಲುವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ತುಮಕೂರು ವಿ.ವಿ. ಪರೀಕ್ಷಾಂಗ ಕುಲಸಚಿವರಾದ ಪ್ರೊ ನಿರ್ಮಲ ರಾಜು, ರಾಜ್ಯಶಾಸ್ತ್ರ ವಿಭಾಗದ ಪ್ರೊ ಬಸವರಾಜು ಹಾಗೂ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರುಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ: ವರುಣ್ ಜಿ.ಜೆ.

Related posts

Leave a Comment