ಆಧ್ಯಾತ್ಮ ವಿಶೇಷ ಸುದ್ದಿ 

ಏಕಾದಶಿಗಳಲ್ಲೇ ವಿಶೇಷ ಈ ವೈಕುಂಠ ಏಕಾದಶಿ

Taluknewsmedia.com

ಆನೇಕಲ್, ಜ:13:- ‘ಸಂಕಟ ಬಂದಾಗ ವೆಂಕಟರಮಣ’ ಎನ್ನುವ ಗಾದೆ ಕನ್ನಡಬಲ್ಲವರಿಗೆ ಚಿರಪರಿಚಿತವಾಗಿಯೇ ಇದೆ. ಈ ಬಾರಿ ವೈಕುಂಠ ಏಕಾದಶಿ ಹೊಸ ವರ್ಷದ ಆರಂಭವೇ ಬಂದಿದೆ. ವರ್ಷವಿಡೀ ಸುಭೀಕ್ಷವಾಗಿರಲಿ, ಆರೋಗ್ಯ, ಐಶ್ವರ್ಯ ಎಲ್ಲವನ್ನೂ ಕೊಟ್ಟು ಕರುಣಿಸು ದೇವಾ ಎಂದು ಜನ ಬೇಡಿಕೊಳ್ಳುವುದು ವೈಕುಂಠ ಏಕಾದಶಿ ವಿಶೇಷ.

ವೈಕುಂಠ ಏಕಾದಶಿಯ ಪ್ರಯುಕ್ತ ಶ್ರೀ ಚನ್ನಕೇಶ್ವರ ಸ್ವಾಮಿಯ ವೈಕುಂಠ ವೈಭವವನ್ನು ಆನೇಕಲ್ ನಗರದ ತಾಲ್ಲೂಕ್ ಕಚೇರಿಯ ಹತ್ತಿರ ವಿರುವ ಶ್ರೀ ಚನ್ನಕೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯು ಸರಳವಾಗಿ ಆಚರಿಸಲಾಯಿತು.ಇಂದಿನ ಎಲ್ಲೆಡೆ ವೆಂಕಟೇಶ್ವರ ಹಾಗೂ ವಿವಿಧ ದೇವಾಲಯಗಳಲ್ಲಿ ಅದ್ದೂರಿ ಪೂಜೆ ಪುನಸ್ಕಾರಗಳನ್ನು ನಡೆಯುತ್ತಿರುವುದು.

ಆನೇಕಲ್ ಪಟ್ಟಣದ ಶ್ರೀ ಚನ್ನಕೇಶ್ವರ ದೇವಾಲಯದಲ್ಲಿ ಕೂಡ ನೋಡುಲು ರಂಗನಾಥ ಅವತಾರ ಮೂರ್ತಿಯನ್ನು ನಿರ್ಮಾಣ ಮಾಡುವ ಮೂಲಕ ದೇವಾಲಯದಲ್ಲಿ ಆಗಮಿಸುವಂತಹ ಭಕ್ತರಿಗೆ ಬೆಳಿಗ್ಗೆ ಯಿಂದ ಕೂಡ ಪೂಜಾ ಪುನಸ್ಕಾರಗಳ ಜೊತೆಗೆ ವಿಶೇಷವಾಗಿ ಈ ಒಂದು ರಂಗನಾಥ ಅವತಾರ ಮೂರ್ತಿಯನ್ನು ನೋಡುವಂತ ಅವಕಾಶವನ್ನು ಕಲ್ಪಿಸಿಕೊಟ್ಟಿರುವಂಥದ್ದು ದೇವಾಲಯದ ಆಡಳಿತ ಮಂಡಳಿಯ ವತಿಯಿಂದ ರಂಗನಾಥನ ಮೂರ್ತಿಯ ಮುಂದೆ ಗಣಪತಿ ಮೂರ್ತಿಗಳಿದೆ ಅವುಗಳನ್ನು ವಿಭಿನ್ನವಾಗಿ ಈ ಮೂರ್ತಿಗಳನ್ನು ನೋಡುವುದಕ್ಕೆ ದೇವಸ್ಥಾನದ ಆವರಣದಲ್ಲಿ ಭಕ್ತದಿಗಳಿಗೆ ಅವಕಾಶ ಕಲ್ಪಿಸಿಕೊಟ್ಟಿರುವಂಥದ್ದು.

ಇದು ಸಾವಿರಾರು ವರ್ಷಗಳ ಇತಿಹಾಸ ವಿರುವಂತಹ ಶ್ರೀ ಚೆನ್ನಕೇಶವ ದೇವಾಲಯ ಆನೇಕಲ್ ಪಟ್ಟಣದಲ್ಲಿ ಬೆಳಿಗ್ಗೆಯಿಂದಲೂ ಕೂಡ ದೇವಾಲಯದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಕೂಡ ನಡೆಯುತ್ತಿರುವಂಥದ್ದು ಜೊತೆಗೆ ಭಕ್ತದಿಗಳು ಸರದಿ ಸಾಲಲ್ಲಿ ಕೋವಿಡ್ ನಿಯಮವನ್ನು ಪಾಲಿಸುತ್ತ ಬಂದು ಶ್ರೀ ಚೆನ್ನಕೇಶ್ವರ ಸ್ವಾಮಿಯ ದರ್ಶನವನ್ನು ಪಡೆದು ಹೋಗುತಿರುವಂಥದ್ದು. ಹಾಗೂ ಇಲ್ಲಿನ ಅಮೃತ ಶೈಲಿಯ ಶ್ರೀ ಶಂಕರ ಚಾರ್ಯರು ಹಾಗೂ ಶ್ರೀ ಶಾರದ ದೇವಿಯ ವಿಗ್ರಹಗಳು ಐತಿಹಾಸಿಕ ಮಹತ್ವ ಪಡೆದಿದೆ

ವೈಕುಂಠ ಏಕಾದಶಿ ಎಂದರೇನು?

ಏಕಾದಶಿ ಶಬ್ದವು ಪಾಡ್ಯ, ಬಿದಿಗೆ, ತದಿಗೆ ಇತ್ಯಾದಿ ತಿಥಿಗಳ ಆದಿಯಾಗಿ ಬರುವ ಹನ್ನೊಂದನೇ ತಿಥಿ. ಏಕಾದಶಿಯ ಪ್ರತಿಯೊಂದು ಮಾಸದ ಶುಕ್ಲ ಹಾಗೂ ಕೃಷ್ಣ ಪಕ್ಷಗಳಲ್ಲಿ ಬರುವ ಪ್ರತ್ಯೇಕ ಪ್ರತ್ಯೇಕ ತಿಥಿಯಾಗಿದೆ. ಏಕಾದಶಿ ಎಂದರೆ ತಕ್ಷಣವೇ ನೆನಪಾಗುವುದು ಉಪವಾಸ. ಉಪವಾಸ ಆಚರಣೆಯೇ ಏಕಾದಶಿಯ ಒಂದು ಮುಖ್ಯ ಅಂಗ. ಏಕಾದಶಿ ಉಪವಾಸದ ಆಚರಣೆಯು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಹೆಚ್ಚಿನ ಪರಿಣಾಮಕಾರಿ.

ತಿಮ್ಮರಾಯ ಸ್ವಾಮಿ ದೇವಸ್ಥಾನದ ವೈಕುಂಠ ಏಕಾದಶಿ

ಏಕಾದಶಿ ಆಚರಣೆಯು ಹದಿನೈದು ದಿನಗಳಿಗೊಮ್ಮೆ ಆಹಾರ ಪಾನೀಯಗಳ ಸೇವನೆ ವರ್ಜ್ಯ. ಈ ದಿನದಂದು ಕೆಲವರು ಅನ್ನವನ್ನು ಮಾತ್ರ ತ್ಯಜಿಸಿ ಉಪವಾಸ ಆಚರಿಸಿದರೆ,ಮತ್ತೆ ಕೆಲವರು ಹನಿ ನೀರನ್ನೂ ಕುಡಿಯದೆ,ನಿರಾಹಾರ ವ್ರತವನ್ನು ಆಚರಿಸುತ್ತಾರೆ. ಇನ್ನೂ ಕೆಲವರು ಏಕಾದಶಿಯಂದು ಮೌನ ವ್ರತ ಸಹ ಆಚರಿಸುತ್ತಾರೆ. ವೈಕುಂಠದ ಬಾಗಿಲು ತೆಗೆಯುವ ಹಿನ್ನೆಲೆಯಲ್ಲಿ ಉಪವಾಸವಿದ್ದು ವೆಂಕಟೇಶ್ವರ/ಶ್ರೀನಿವಾಸ/ವಿಷ್ಣು ದೇವರ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಭಾವನೆಯೂ ಇದೆ.

ಮಾಸಕ್ಕೆ ಎರಡರಂತೆ ಪ್ರತಿ ಸಂವತ್ಸರವೂ ಒಟ್ಟಾರೆ 24 ಏಕಾದಶಿ ತಿಥಿಗಳಿಂದ ಕೂಡಿರುವುದಾದರೆ ಅದಕ್ಕೆ ಬದಲಾಗಿ ಮೂರು ವರ್ಷಕ್ಕೊಮ್ಮೆ ಬರುವ ಅಧಿಕ ಮಾಸದಿಂದಾಗಿ ಅಂಥ ಒಂದು ಸಂವತ್ಸರವು 26 ಏಕಾದಶಿ ತಿಥಿಗಳಿಂದ ಕೂಡಿರುತ್ತದೆ. ಪ್ರತಿಯೊಂದು ಏಕಾದಶಿಗೂ ಒಂದೊಂದು ಪುರಾಣೋಕ್ತ ಹೆಸರಿರುವುದಾಗಿದ್ದು ಒಂದಲ್ಲ ಒಂದು ವಿಧದಲ್ಲಿ ಅವು ಒಂದೊಂದು ಹೆಚ್ಚಿನ ಪುಣ್ಯಪ್ರದವಾಗಬಲ್ಲದಾಗಿದೆ. ಅವುಗಳ ಪೈಕಿ ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿಗೆ ಶಯನಿ ಅಂತಲೂ ಕರೆದಿರುವುದಾಗಿದೆ. ಅಷ್ಟೇ ಮುಖ್ಯವಾಗಿ ಅವುಗಳೆರಡೂ ಕ್ರಮವಾಗಿ ಪ್ರಥಮೇಕಾದಶಿ ಮತ್ತು ವೈಕುಂಠ ಏಕಾದಶಿ ಅಂತಲೂ ಸಾವಿರಾರು ವರ್ಷಗಳಿಂದ ಕರೆಯಲಾಗಿದ್ದು, ಅವುಗಳ ಹಿನ್ನೆಲೆಯಾಗಿ ಅನೇಕ ಮಹಿಮೆಗಳು ಇರುವುದಾಗಿದೆ.

ಶಯನೀ ಆ ದಿನ ಮಹಾವಿಷ್ಣುವು ನಿದ್ರಿಸಲು ತೆರಳುವನೆಂದೂ, ಮುಂದೆ ಕಾರ್ತೀಕ ಮಾಸದ ಶುಕ್ಲ ಪಕ್ಷದ ಏಕಾದಶಿ “ಪ್ರಬೋಧಿನೀ”ಯ ನಂತರ ಬರುವ ’ಉತ್ಥಾನ’ದ್ವಾದಶಿಯಂದು ಅವನು ನಿದ್ರೆ ಮುಗಿಸಿ ಎಚ್ಚರಗೊಳ್ಳುತಾನೆಂದು ಆಸ್ತಿಕರ ನಂಬಿಕೆ. ಈ ಎರಡೂ ಏಕಾದಶಿಗಳ. ನಡುವಿನ ನಾಲ್ಕು ತಿಂಗಳ ಅವಧಿಯನ್ನು ಚಾತುರ್ಮಾಸ್ಯ ಎನ್ನಲಾಗುತ್ತದೆ. ಇದಾದ ನಂತರ ಬರುವುದೇ ವೈಕುಂಠ ಏಕಾದಶಿ.

ವೈಕುಂಠ ಏಕಾದಶಿ ಬಗ್ಗೆ ಮತ್ತೂ ಒಂದು ಪೌರಾಣಿಕ ಹಿನ್ನೆಲೆ ಇದೆ. ಪೌರಾಣಿಕ ಕತೆಯೊಂದರ ಪ್ರಕಾರ ಗೋಕಲವೆಂಬ ನಗರದಲ್ಲಿ ವಾಸವಾಗಿದ್ದ ವೈಖಾನಸನೆಂಬ ರಾಜರ್ಷಿಗೆ ಮೃತಪಟ್ಟಿದ್ದ ತನ್ನ ತಂದೆ ನರಕವನ್ನು ಅನುಭವಿಸುತ್ತಿರುವುದು ದಿವ್ಯ ದೃಷ್ಟಿಗೆ ಗೋಚರವಾಗುತ್ತದೆ. ಖಿನ್ನನಾದ ರಾಜನು ಪಂಡಿತರ ಬಳಿ ತನ್ನ ತಂದೆಯ ಆತ್ಮವನ್ನು ನರಕದಿಂದ ಪಾರು ಮಾಡುವ ಬಗೆಯನ್ನು ಕೇಳುತ್ತಾನೆ. ಅದಕ್ಕೆ ಉತ್ತರವಾಗಿ ಅವರು ಅಂತಹ ನಿವಾರಣೆಯು ಕೇವಲ ಯಜ್ಞ ದಾನಗಳಿಂದ ಮಾತ್ರ ಆಗುವುದಲ್ಲ, ಜತೆಗೆ ಮಾರ್ಗಶಿರ್ಷ ಶುಕ್ಷ ಪಕ್ಷದ ಏಕಾದಶಿ ಆಚರಣೆಯ ಫಲವಾಗಿ ಅವನ ತಂದೆಯು ನರಕದಿಂದ ಪಾರಾಗುವನೆಂದರು.

ಅವನು ಹಾಗೆಯೇ ಏಕಾದಶಿ ವೃತಾಚರಣೆಯನ್ನು ಒಂದಾದರ ಮೇಲೊಂದರಂತೆ ಆಚರಿಸಿ ಕೊನೆಗೆ ಮಾರ್ಗಶೀರ್ಷ ಶುಕ್ಲ ಪಕ್ಷದ ವೈಕುಂಠ ಏಕಾದಶಿ ವೃತವನ್ನು ಆಚರಿಸಿ ಸೂಕ್ತ ದಾನಾದಿಗಳನ್ನು ಮಾಡುತ್ತಿದ್ದಂತೆ ಅವನ ತಂದೆಯ ದೇಹವು ನರಕದಿಂದ ಬಿಡಲ್ಪಟ್ಟು, ಮುಂದೆ ಬೇರೆ ದೇಹವು ಪ್ರಾಪ್ತವಾಗಿ ಸ್ವರ್ಗವನ್ನು ಸೇರಿದನು ಎಂದು ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿಯೇ ಈ ವಿಶೇಷ ದಿನ. ಈ ದಿನ ಉಪವಾಸವಿದ್ದು, ಭಗವಂತನು ವಿಶೇಷ ಸನ್ನಿಧಾನವಿರುವ ದೇವಸ್ಥಾನಗಳಿಗೆ ಹೋಗಿ ಭಕ್ತಿಯಿಂದ ದೇವರ ರೂಪವನ್ನು ಸಂದರ್ಶಿಸುವವರಿಗೆ ಮುಂದೆ ಮುಕ್ತಿ ಮತ್ತು ವೈಕುಂಠವನ್ನು ಪಡೆಯುತ್ತಾರೆ.ತಿರುಪತಿಯ ವೆಂಕಟರಮಣನಿಗೆ ಲಕ್ಷಾಂತರ ಜನ ಅಡ್ಡ ಬಿದ್ದರೆ, ಆನೇಕಲ್ ವೆಂಕಟರಮಣ ದೇವಾಲಯಗಳಿಗೂ ಭಕ್ತರ ಕೊರತೆಯಾಗಲ್ಲ. ಹಾಗೂ ತಿಮ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ದರ್ಶನ ಪಡೆಯಲು ಭಕ್ತರು ಮುಗಿಬೀಳುತ್ತಾರೆ.

ವೈಕುಂಠ ಏಕಾದಶಿ ಮಹತ್ವವೇನು?

ಶ್ರೀ ಚೆನ್ನಕೇಶ್ವರ ಸ್ವಾಮಿ ದೇವಸ್ಥಾನದ ವೈಕುಂಠ ಏಕಾದಶಿ

ಹಿಂದು ಸಂಪ್ರದಾಯದ ಪ್ರಕಾರ ಪ್ರತಿ ಏಕಾದಶಿಯಂದು ಉಪವಾಸ ಮಾಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ. ಅದರಂತೆ ವೈಕುಂಠ ಏಕಾದಶಿಗೆ ವಿಶೇಷ ಸ್ಥಾನ ಕಲ್ಪಿಸಲಾಗಿದೆ. ವೈಕುಂಠ ಏಕಾದಶಿಯ ದಿನ ವೈಕುಂಠದ (ಸ್ವರ್ಗದ ಅಥವಾ ವಿಷ್ಣುಲೋಕದ) ಬಾಗಿಲು ತೆರೆದಿರುತ್ತದೆ ಎಂದು ಪ್ರತೀತಿ ಇದೆ. ಅಂದು ವೆಂಕಟೇಶ್ವರ, ಶ್ರೀನಿವಾಸ ಹಾಗೂ ವಿಷ್ಣು ದೇವರ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ನಡೆದುಕೊಂಡು ಬಂದಿದೆ.

ವೈಕುಂಠ ಏಕಾದಶಿಯಂದು ಉಪವಾಸವಿದ್ದು, ವಿಷ್ಣು, ಶ್ರೀನಿವಾಸ ಅಥವಾ ವೆಂಕಟರಮಣ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರೆ ಹಿಂದಿನ ಘೋರ ಪಾಪಗಳು ನೀಗಿ ಮುಕ್ತಿ ದೊರೆಯುತ್ತದೆ ಎಂಬ ಪ್ರತೀತಿ ಹಿಂದುಗಳಲ್ಲಿದೆ. ಇನ್ನೊಂದು ಬಗೆಯಲ್ಲಿಯೂ ಈ ದಿನದ ವಿಶೇಷವನ್ನು ಹೇಳಲಾಗುತ್ತದೆ. ಅರ್ಜುನನಿಗೆ ಶ್ರೀ ಕೃಷ್ಣನು ಭಗವದ್ಗೀತೆ ಬೋಧಿಸಿದ್ದು ಇದೇ ದಿನ ಎಂಬ ನಂಬಿಕೆಯೂ ಬೇರೂರಿದೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ , ಓಮಿಕ್ರಾನ್ ಆರ್ಭಟ ಜೋರಾಗಿದ್ದು , ಎಲ್ಲರಲ್ಲೂ ಆತಂಕವನ್ನು ಹೆಚ್ಚಿಸಿದೆ. ಈ ಹಿನ್ನಲೆಯಲ್ಲಿ ಆನೇಕಲ್ ನ ಚೆನ್ನಕೇಶವ ಸ್ವಾಮಿ ದೇವಸ್ಥಾನದಲ್ಲಿ ಎಲ್ಲಾ ಮುಂಜಾಗ್ರತೆಯಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್ ಅನ್ನು ದೇವಸ್ಥಾನದ ಆಡಳಿತ ಮಂಡಳಿಯಿಂದ ವ್ಯವಸ್ಥೆ ಮಾಡಲಾಗಿದೆ.

Related posts

Leave a Comment