ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರಿಯ ತಿಗಳ ಯೂತ್ ಫೋರ್ಸ್ ಸಂಘಟನೆ ವತಿಯಿಂದ 2022 ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ
ತುಮಕೂರು: ನಗರದ ಹನುಮಂತಪುರದ ಪೇಟೆ ಕೊಲ್ಲಾಪುರದಮ್ಮ ಭವನದಲ್ಲಿ ಕರ್ನಾಟಕ ರಾಜ್ಯ ಅಗ್ನಿವಂಶ ಕ್ಷತ್ರಿಯ ತಿಗಳ ಯೂತ್ ಫೋರ್ಸ್ ಸಂಘಟನೆ ವತಿಯಿಂದ ಇಂದು ಸಂಘಟನೆಯ 2022 ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮತ್ತು ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನೇಮಕವಾಗಿರುವ ಸಮುದಾಯದ ಶ್ರೀ ಲಕ್ಷ್ಮೀಶ್ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಮುದಾಯದ ಹಿರಿಯ ಮುಖಂಡರು ಅಗ್ನಿಬನ್ನಿರಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಶ್ರೀ ಟಿ ಎಲ್ ಕುಂಭಯ್ಯ, ಉಪಾಧ್ಯಕ್ಷರು ಶ್ರೀ ಪ್ರೆಸ್ ರಾಜಣ್ಣ, ಶ್ರೀ ಕುಂಬಿನರಸಯ್ಯ, ಯು|| ಶ್ರೀ ಗಂಗಹನುಮಯ್ಯ, ತುಮಕೂರು ಮಹಾನಗರ ಪಾಲಿಕೆ ಸದಸ್ಯರು ಶ್ರೀ ಎ ಶ್ರೀನಿವಾಸ್ , ಯುವ ಮುಖಂಡ ಪ್ರಸನ್ನ, ಸಂಗೀತ್ ಶ್ರೀನಿವಾಸ್,ಅನಂತರಾಜು , ಅಮೋಘ್ ಸೇರಿದಂತೆ ಸಮಾಜದ ಮುಖಂಡರು ಮತ್ತು ಅಗ್ನಿವಂಶ ಕ್ಷತ್ರಿಯ ತಿಗಳ ಯೂತ್ ಫೋರ್ಸ್ ಸಂಘಟನೆಯ ಅಧ್ಯಕ್ಷ ಮಾರುತಿ ಕೆ ಆರ್ ಕಾರ್ಯದರ್ಶಿ ಮಂಜುನಾಥ್ ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಿದ್ದರು.